ಚಳ್ಳಕೆರೆ ಆ.2ನಾವು 21 ನೇ ಶತಮಾನದಲ್ಲಿ ವಾಸಿಸುತ್ತಿದ್ದರೂ ಮೌಡ್ಯ, ಕಂದಾಚಾರಗಳು ಸೇರಿದಂತೆ ವಿವಿಧ ಕಾರಣಗಳಿಂದಾಗಿ ಬಾಲ್ಯ ವಿವಾಹಗಳಿಗೆ ಕಡಿವಾಣ ಹಾಕಲು ಸಾಧ್ಯವಾಗುತ್ತಿಲ್ಲ. ಸರ್ಕಾರದ ನಿಗದಿತ ವಿವಾಹ ವಯಸ್ಸು ಉಲ್ಲಂಘಿಸಿ ಅಪ್ರಾಪ್ತರನ್ನು ವಿವಾಹ ಮಾಡುವ ಪದ್ದತಿ ಇಂದಿದೂ ಕದ್ದು ಮುಚ್ಚಿ ನಡೆಯುತ್ತಿವೆ. ಹೌದು ಇದು ನಾಯಕನಹಟ್ಟಿ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಬಲವಂತವಾಗಿ ವಿವಾಹವಾದ ಆರೋಪದ ಮೇಲೆ ವರ ಮತ್ತು ಎರಡೂ ಕಡೆಯ ಕುಟುಂಬದ ಸದಸ್ಯರ ವಿರುದ್ಧ ಬಾಲ್ಯ ವಿವಾಹ ನಿಷೇಧ ಕಾಯ್ದೆಯಡಿ ನಾಯಕನಹಟ್ಟಿ ಪೊಲೀಸ್ ಠಾಣೆಯಲ್ಲಿ ಶುಕ್ರವಾರ ಪ್ರಕರಣ ದಾಖಲಿಸಲಾಗಿದೆ.
ನಾಯಕನಹಟ್ಟಿ ಹೋಬಳಿಯ ಕುದಾಪುರ ಗ್ರಾಮದ ಬೋರೆದೇವರ ದೇವಾಲಯದಲ್ಲಿ ಹಿರಿಯೂರು ತಾಲ್ಲೂಕಿನ ಗ್ರಾಮವೊಂದರ ಯುವಕನು ಚಿತ್ರದುರ್ಗ ತಾಲ್ಲೂಕಿನ ಗ್ರಾಮವೊಂದರ ಬಾಲಕಿಯನ್ನು 2023ರ ಏಪ್ರಿಲ್ 23ರಂದು ವಿವಾಹವಾಗಿದ್ದನು.ಶಿಶು ಅಭಿವೃದ್ಧಿ ಯೋಜನಾಧಿಕಾರಿ ಅವರು ಈಚೆಗೆ ಕೈಗೊಂಡಿದ್ದ ಮನೆ ಮನೆ ಭೇಟಿ ವೇಳೆ ಘಟನೆಯು ಬೆಳಕಿಗೆ ಬಂದಿತ್ತು. ಈ ಕುರಿತು ಅವರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಜಿಲ್ಲಾ ಅಧಿಕಾರಿ ಅವರಿಗೆ ವರದಿ ನೀಡಿದ್ದರು.
ಅವರ ಆದೇಶದಂತೆ ಚಳ್ಳಕೆರೆಯ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ನಾಯಕನಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
0 Comments