ಚಳ್ಳಕೆರೆ ನ.20 ಅತಿ ವೃಷ್ಠಿ ಅನಾವೃಷ್ಠಿಗೆ ಸಲಿಕಿ ರೈತರು ಬಿತ್ತನೆ ಮಾಡಿದ ಬೆಳೆಗಳು ಒಣಗಿ ಹೋಗಿ ಸಂಕಷ್ಟಕ್ಕೆ ಸಿಲುಕಿದ್ದರೂ ಸರಕಾಗಳು ಮಾತ್ರ ಅನ್ನದಾತರ ನೆರವಿಗೆ ಬಾರದೆ ನಿರ್ಲಕ್ಕೆ ವಹಿಸುತ್ತಿದೆ ಎಂದು ಅಖಂಡ ಕರ್ನಾಟಕ ರಾಜ್ಯ ರೈತ ಸಂಘ ಸರಕಾ ರದಚ ವಿರುದ್ದ ಕಿಡಿ ಕಾರಿದ್ದಾರೆ.
ನಗರದ ಚಳ್ಳಕೆರೆ ಮ್ಮ ದೇವಸ್ಥಾನದಿಂದ ಮೆರವಣಿಗೆ ಮೂಲಕ ನೆಹರುತ್ತಕ್ಕೆ ಬಂದು ರಸ್ತೆ ತಡೆ ನಡೆಸಿ ಅಕ್ರೋಶ ಹೊರಹಾಕಿದ್ದಾರೆ.
ಕಳೆದ ಸಾಲಿನಲ್ಲಿ ರೈತರ ಬೆಳೆ ನಷ್ಟದ ಪರಿಹಾರದ ಹಣವನ್ನು ಬೇರೊಬ್ಬರ ಖಾತೆಗೆ ಹಾಕಿಕೊಂಡು ಗ್ರಾಮಲೆಕ್ಕಾಧಿಕಾರಿ ಅನ್ನದಾತರ ಪರಿಹಾರದ ಹಣಕ್ಕೆ ಕನ್ನ ಹಾಕಿದ್ದರೂ ಸಹ ತನಿಖೆ ನಡೆಸಿ ಕ್ರಮ ಕೈಗೊಂಡಿಲ್ಲ ಈ ಬಾರಿ ಮುಂಗಾರು ಮಳೆ ವೈಪಲ್ಯದಿಂದ ಬೆಳೆ ನಷ್ಟವಾಗಿರುವ ಬಗ್ಗೆ ಅಧಿಕಾರಿಗಳು ವರದಿ ನೀಡಿ ಬರ ಅಧ್ಯಯನ ತಂಡ ಬಂದು ವೀಕ್ಷಣೆ ಮಾಡಿ ಹೋದರೂ ಸಹ ಬೆಳೆ ವಿಮೆ. ಬೆಳೆ ಪರಿಹಾರದ ಹಣ ರೈತರ ಖಾತೆಗೆ ಹಾಕಲು ಸರಕಾರ ಮುಂದಾಗುತ್ತಿಲ್ಲ ದೇಶಕ್ಕೆ ಅನ್ನ ನೀಡುವ ರೈತರಿಗೆ ನೆರವಿಗೆ ಬಾರದೆ ಇರುವ ಸರಕಾರಗಳ ವಿರುದ್ದು ರೈತರು ಬೀದಿಗಿಳಿದು ಪ್ರತಿಭಟನೆ ಮಾಡುವಂತಾಗಿದೆ.
ಬರಗಾಲ ಎಂದು ಘೋಷಣೆ ಮಾಡಿದ್ದರೂ ಸಹ ಬ್ಯಾಂಕ್ ಅಧಿಕಾರಿಗಳು ದೌರ್ಜನ್ಯದಿಂದ ಸಾಲ ವಸೂಲಿ ಹಾಗೂ ರೈತರ ಖಾತೆ ಜಮೆ ಹಾಗುತ್ತಿರುವ ಸಾಮಾಜಿಕ ಪಿಂಚಿಣಿ, ಸೇರಿದಂತೆ ವಿವಿಧ ಸರಕಾರದಿಂದ ಬಂದ ಹಣವನ್ನು ಸಾಲಕ್ಕೆ ಜಮೆಮಾಡಿಕೊಳ್ಳಲಾಗುತ್ತಿದೆ. ಕೂಡಲ ತಹಶೀಲ್ದಾರ್ ಬ್ಯಾಂಕ್ ಅಧಿಕಾರಿಗಳ ಸಭೆ ಕರೆದು ಬರಗಾಲು ಮುಗಿಯುವ ತನಕ ಸಾಲ ವಸೂಲಾತಿ ಹಾಗೂ ರೈತರ ಕೃಷಿ ಚಟುವಟಿಕೆಗಳಿಗೆ ಬಳಲು ಪಡೆದ ಟ್ರಾಕ್ಟ್ಯರ್ ಮುಟ್ಟುಗೋಲು ಹಾಕಿಕೊಳ್ಳಬಾರದು ಎಂದು ಸೂಚನೆ ನೀಡುವಂತೆ ತಿಳಿಸಿದರು.

ಶಕ್ತಿಯೋಜನೆಯ ಎಫೆಕ್ಟ್ ನಿಂದಾಗ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಬಸ್ ಸೌಲಭ್ಯವಿಲ್ಲದೆ ಶಾಲಾ ಕಾಲೇಜುಗಳಿಗೆ ಹರಸಹಾಯ ಪಟ್ಟುಕೊಂಡು ಬರುವಂತಾಗಿದ್ದು ಸಕಾಲಕ್ಕೆ ಹಾಗೂ ಹೆಚ್ಚುವರಿ ಸಾರಿಗೆ ಬಸ್ ಬಿಡುವಂತೆ ಪ್ರತಿಭಟನೆ ಮಾಡುತ್ತಿದ್ದು ಕೂಡಲೆ ಗ್ರಾಮೀಣ ಪ್ರದೇಶಗಳಿಗೆ ಹೆಚ್ಚುವರಿ ಬಸ್ ಸೌಕರ್ಯ ಒದಿಗಿಸುವಂತೆ ಒತ್ತಾಯಿಸಿದರು.

ಕೂಡಲೆ ಜಾನುವಾರುಗಳಿಗೆ ಮೇವಿನ ಕೊರತೆನೀಗಿಸಲು ಗೋಶಾಲೆ, ಬರಪರಿಹಾರ, ಬೆಳೆವಿಮೆ, ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಸರಕಾರದ ವಿರುದ್ದ ಅಕ್ರೋಶ ವ್ಯಕ್ತಪಡಿಸಿದರು.
ರಸ್ತೆ ತಡೆ ಪ್ರತಿಭಟನೆಯಿಂದ ಬಳ್ಳಾರಿ, ಪಾವಗಡ, ಚಿತ್ರದುರ್ಗ, ಬೆಗಂಳೂರು ಮಾರ್ಗದಲ್ಲಿ ವಾಹನ ದಟ್ಟನೆ ವಾಹನಗಳ ಸಾಲು ನಿಂತಿದ್ದವು ಸುಮಾರು ಒಂದು ಗಂಟೆಗೆ ಅಧಿಕ ಸಮಯ ವಾಹನ ಸಂಚಾರಕ್ಕೆ ಬ್ರೇಕ್ ಬಿದ್ದಾಂತಾಗಿತ್ತು.
ಪ್ರತಿಭಟನೆಯಲ್ಲಿ ಸೋಮಗುದ್ದು ರಂಗಸ್ವಾಮಿ, ಚಿಕ್ಕಣ್ಣ, ಬಾಬಾಗೌಡ ಪಾಟೀಲ್, ಮಾತನಾಡಿದರು.
ನೆಹರು ವೃತ್ತದ ಪ್ರತಿಭಟನೆ ಸ್ಥಳಕ್ಕೆ ಕಂದಾಯ ಇಲಾಖೆ, ಶಾಸರ ಕಚೇರಿಯ ಅಪ್ತರು ಬಂದು ಮನವಿ ಸ್ವೀಕರಿಸಿದರು.
0 Comments