ಚಳ್ಳಕೆರೆ ಜನಧ್ವನಿ ವಾರ್ತೆ ಅ.17:
ಬರ ಪರಿಹಾರ, ಬೆಳೆ ವಿಮೆ, ಬೆಂಬಲ ಬೆಲೆ ಯೋಜನೆ, ಬ್ಯಾಂಕ್ ಸಾಲ ಸೌಲಭ್ಯ ಹಾಗೂ ಸರಕಾರಿ ಯೋಜನೆಯಡಿ ಸೌಲಭ್ಯ ಪಡೆಯಲು ಫ್ರೂಟ್ಸ್ ತಂತ್ರಾಂಶದಲ್ಲಿ ನೋಂದಣಿ ಹೊಂದಿರುವುದು ಕಡ್ಡಾಯವಾಗಿದೆ ಎಂದು ತಹಶೀಲ್ದಾರ್ ರೇಹಾನ್ ಪಾಷ ಹೇಳಿದ್ದಾರೆ.
ಚಳ್ಳಕೆರೆ ತಾಲೂಕಿನಲ್ಲಿ ಒಟ್ಟು 120205 ಕೃಷಿ ಯೋಗ್ಯ ತಾಕುಗಳಿದ್ದು (ಸರ್ವೇ ನಂಬರ್/ಪೋಡುಗಳು) ಅವುಗಳಲ್ಲಿ ಈಗಾಗಲೇ 81189 ತಾಕುಗಳನ್ನು ಪ್ರುಟ್ಸ್ ತಂತ್ರಾಂಶದಲ್ಲಿ ರೈತರು ನೋಂದಣಿ ಮಾಡಿಕೊಂಡಿದ್ದಾರೆ. ಉಳಿದ 39016 ತಾಕುಗಳ ಜೋಡಣೆ ಬಾಕಿ ಇರುತ್ತದೆ. ಉಳಿದ ರೈತರು ಕೂಡಲೆ ಗ್ರಾಮ ಒನ್. ಕರ್ನಾಟಕ ಒನ್.ವಿವಿಧ ಸೇವಾ ಕೇಂದ್ರದಲ್ಲಿ ನೊಂದಣೆ ಮಾಡಿಸಿಕೊಳ್ಳಿ. ಈ ಬಾರಿ ಬೆಳೆ ಪರಿಹಾರಕ್ಕೆ ಅರ್ಜಿ ಸ್ವೀಕರಿಸುವುದಿಲ್ಲ. ಯಾವ ರೈತರು ಪ್ರೂಟ್ ಐಡಿ ಮಾಡಿಸಿಕೊಂಡಿರುತ್ತಾರೋ ಅವರ ಖಾತೆಗೆ ನೇರವಾಗಿ ಬೆಳೆ ಪರಿಹಾರ. ವಿಮೆ ಹಣ ಜಮವಾಗುತ್ತದೆ ಎಂದು ತಿಳಿಸಿದರು.

ತಾಲೂಕಿನಾದ್ಯಂತ ಫ್ರೂಟ್ಸ್ ನೋಂದಣಿ ಅಭಿಯಾನ ಹಮ್ಮಿಕೊಳ್ಳಲಾಗಿದ್ದು, ರೈತ ಭಾಂದವರು ತಮ್ಮ ಜಮೀನಿನ ಎಲ್ಲಾ ಪಹಣಿಗಳಿಗೆ ಆಧಾರ್ ಸಂಖ್ಯೆ ಮತ್ತು ಬ್ಯಾಂಕ್ ವಿವರಗಳನ್ನು ಈ ಕೂಡಲೇ ಜೋಡಣೆ ಮಾಡಲು ನಿಮ್ಮ ಗ್ರಾಮದ ಆಡಳಿತಾಧಿಕಾರಿಗಳು, ನಾಡ ಕಛೇರಿ, ರೈತ ಸಂಪರ್ಕ ಕೇಂದ್ರ, ರೇಷ್ಮೆ ಇಲಾಖೆ ಹಾಗೂ ತೋಟಗಾರಿಕೆ ಇಲಾಖೆಗೆ ಸಂಪರ್ಕಿಸುವಂತೆ ತಹಶೀಲ್ದಾರ್ ರೇಹಾನ್ ಪಾಷ ಹಾಗೂ ಸಹಾಯಕ ಕೃಷಿ ನಿರ್ದೇಶಕ ಡಾ.ಅಶೋಕ್ ಜಂಟಿಯಾಗಿ ತಿಳಿಸಿದ್ದಾರೆ.
0 Comments