ಪ್ರಾಕೃತಿಕ ವಿಪತ್ತು ನಿರ್ವಹಣೆ, ಬೆಂಕಿ ಅನಾಹುತ, ವೈಮಾನಿಕ ದಾಳಿ, ಸುನಾಮಿ, ಭೂಕಂಪ, ಸಂಕಷ್ಟದಲ್ಲಿ ತುರ್ತು ಸೇವೆ ಮಾಡುವ ಗೃಹರಕ್ಷಕ ದಳದ ಸಿಬ್ಬಂದಿಗೆ ಸ್ವಂತ ಕಟ್ಟಡ‌ ಭಾಗ್ಯ ಕರುಣಿಸುವರೇ..?

by | 01/01/23 | ಜನಧ್ವನಿ

ಚಳ್ಳಕೆರೆ ಜನಧ್ವನಿ ವಾರ್ತೆ ಜನವರಿ1. ಯಾವುದೇ ತುರ್ತು ಪರಿಸ್ಥಿತಿಯಿದ್ದರೂ ಅಲ್ಲಿ ಗೃಹ ರಕ್ಷಕದಳ ಹಾಜರಿಯಿರುವ ದಿಬ್ಬದಗಳಿಗೆ ಸ್ವಂತ ಕಟ್ಟಡವಿಲ್ಲದೆ ಪರದಾಡುವಂತಾಗಿದೆ. ಹೌದು ಇದು ಚಳ್ಳಕೆರೆ ನಗರದ ಗೃಹರಕ್ಷಕ ಇಲಾಖೆಯಲ್ಲಿ ಸುಮಾರು 56 ಜನರು ಗೃಹರಕ್ಷಕ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು. ಹೆಸರೇ ಹೇಳುವ ಗೃಹರಕ್ಷಕ ಸಿಬ್ಬಂದಿಗಳಿಗೆ ಸ್ವಂತ ಕಟ್ಟಡವಿಲ್ಲದೆ ಶಿಥಿಲವಾದ ಪೋಲಿಸ್ ಇಲಾಖೆಯ ವಸತಿ ಗೃಹದಲ್ಲಿದ್ದು ಈಗ ಪೋಲಿಸ್ ಇಲಾಖೆ ಶಿಥಿಲವಾದ ಕಟ್ಟಡ ತೆರವುಗೊಳಿಸಲಾಗುವುದು ನೀವು ಬೇರೆ ಕಡೆ ನೋಡಿಕೊಳ್ಳಿ ಎನ್ನುತ್ತಾರೆ ಈ ಹಿಂದೆ ಬ್ರೀಟೀಷರ ಕಾಲದ ಹಳೆ ತಾಲೂಕು ಕಚೇರಿವಕಟ್ಟಡದಲ್ಲಿ ನಮಗೆವಪ್ರತ್ಯೇಕವಾದ ಕೊಠಡಿ ನೀಡಿದ್ದರು. ಹೊಸ ಕಟ್ಟಡ ನಿರ್ಮಿಸಲು ತೆರವುಗೊಳಿಸಿದ ನಂತರ ಕ್ಷೇತ್ರಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ಕೊಠಡಿ ನಿಡ್ಡಿದ್ದರು. ಕಟ್ಟಡ ದುರಸ್ಥಿ ಹೆಸರಿನಲ್ಲಿ ತೆರವುಗೊಳಿಸಿದರು ನಂತರ ಪೋಲಿಸ್ ಇಲಾಖೆಯ ಶಿಥಿಲವಾದ ಕಟ್ಟಡ ನೀಡಿದ್ದರು ಹೊಡೆದು ಹೊಂದ ಮೇಲ್ಚಾವಣೆಯ ಹೆಂಚುಗಳನ್ನು ಹಾಕಿಕೊಂಡು ಶೌಚಾಯಲ ಬಾಗಿಲು ಸಣ್ಣ ಪುಟ್ಟ ಪುಟ್ಟ ದುರಸ್ಥಿ ಮಾಡಿಕೊಂಡು ಕರ್ತವ್ಯ ನಿರ್ಹಿಸುತ್ತಿದ್ದೆವೆ ಈಗ ಕಟ್ಟಡ ನೆಲಸಮ ಮಾಡಲಾಗುವುದು ಗೃಹಯಕ್ಷಕ ದಳದ ಕಚೇರಿಯನ್ನು ಖಾಲಿ ಮಾಡಿ ಎನ್ನುತ್ತಾರೆ. ‌‌‌‌ ಜಿಲ್ಲಾಧಿಕಾರಿ ಹಾಗೂ ಜಿಲ್ಲಾವರಿಷ್ಠಾಧಿಕಾರಿ ಕಚೇರಿಗೆ ಹಳೆ ತಾಲೂಕು ಕಚೇರಿ ಕಟ್ಟಡದಲ್ಲಿ ಕೊಠಡಿ ನೀಡುವಂತೆ ಮನವಿ ಮಾಡಲಾಗಿದೆ. ಹಳೆ ತಾಲೂಕು ಕಚೇರಿಯಲ್ಲಿ ಗೃಹರಕ್ಷಕ ದಳದ ಸಿಬ್ಇಬಂದಿ ಕೊಠಡಿ ನೀಡುವಂತೆ ಆದೇಶ ನೀಡಲಾಗಿದೆ ಆದರೆ ಇದುವರೆಗೂ ಕಟ್ಟಡ ನೀಡಿಲ್ಲ. ಪ್ರತಿ ಶುಕ್ರವಾರ ಬೆಳಗ್ಗೆ 6 ಗಂಟೆಗೆ ಪೆರೆಡ್ ಇರುತ್ತದೆ.ಗ್ರಾಮೀಣ ಪ್ರದೇಶದಿಂದ ಬೆಳಗಿನ ಜಾವ ಬರಲು ಸಾಧ್ಯವಾಗದೆ ಇರುವುದರಿಂದ ಕಚೇರಿಯಲ್ಲೇ ತಂಗಬೇಕು. ವಿವಿಧ ಇಲಾಖೆ. ತುರ್ತು ಸಂದರ್ಭದಲ್ಲಿ ಕರ್ತವ್ಯ ನಿರ್ವಹಿಸಿದಾಗ ವಿಶ್ರಾಂತಿ. ಸಮವಸ್ತ್ರ ಬದಲಾಯಿಸಲು ಕಟ್ಟಡದ ಅವಶ್ಯಕತೆ ಇದೆ ಪೋಲಿಸ್ ಇಲಾಖೆಯ ಅವಿಬಾಜ್ಯ ಅಂಗವಾದ ಗೃಹರಕ್ಷಣಾ ದಳದ ಸಿಬ್ಬಂದಿಗಳಿಗೆ ಸ್ವಂತ ಕಟ್ಟಡ ಹಾಗೂ ಭದ್ರತೆ ಇಲ್ಲದಂತಾಗಿದೆ. ತುರ್ತು ಪರಿಸ್ಥಿತಿಯಲ್ಲಿ ಗೃಹರಕ್ಷಕರ ಪಾತ್ರ ಮಹತ್ವದ್ದಾಗಿದೆ. ಆದರೆ, ಈಗ ಗೃಹರಕ್ಷಕ ದಳ ಸಿಬ್ಬಂದಿಗೆ ಕೆಲಸವಿಲ್ಲದೇ ಜೀವನ ಸಾಗಿಸುವುದು ಕಷ್ಟಕರವಾಗಿದ್ದು ದಾರಿ ಕಾಣದೇ ಕಂಗೆಟ್ಟಿದ್ದಾರೆ.
ಜನರ ಸಂಕಷ್ಟದಲ್ಲಿ ಅಥವಾ ಪೊಲೀಸ್ ಸಿಬ್ಬಂದಿ ಕಡಿಮೆ ಇದ್ದಾಗ ಇಲಾಕೆ ಜೊತೆಗೆ ಕೈ ಜೋಡಿಸಿ ಪ್ರವಾಸೋದ್ಯಮ ಇಲಾಖೆ ಸೇರಿದಂತೆ ಕೋವಿಡ್ ಸಂದರ್ಭದಲ್ಲೂ ಪ್ರಾಣದ ಹಂಗು ತೊರೆದು ವಾರಿಯರ್‌ಗಳಾಗಿ ಕೆಲಸ ಮಾಡಿದ್ದಾರೆ.
ಸರ್ಕಾರದ ಅಧೀನದಲ್ಲಿ ಗೃಹ ರಕ್ಷದ ದಳದ ಸಿಬ್ಬಂದಿ Jersey ಬದ್ಧ ಸೇವೆ ನೀಡುತ್ತಿದ್ದಾರೆ. ಪೊಲೀಸ್ ಇಲಾಖೆಗೆ ಪೂರಕವಾಗಿ ಕೆಲಸ ಮಾಡುವುದು, ಪ್ರಾಕೃತಿಕ ವಿಪತ್ತು ನಿರ್ವಹಣೆ, ಬೆಂಕಿ ಅನಾಹುತ, ವೈಮಾನಿಕ ದಾಳಿ, ಸುನಾಮಿ, ಭೂಕಂಪ, ಸಾಂಕ್ರಾಮಿಕ ರೋಗಗಳ ಸಂದರ್ಭದಲ್ಲಿ ಕೆಲಸಕ್ಕೆ ನಿಯೋಜಿಸಲಾಗುತ್ತಿತ್ತು.
ಸಂಕಷ್ಟದ ದಿನಗಳಲ್ಲಿ ತಮ್ಮ ಪ್ರಾಣದ ಹಂಗುನ್ನು ತೊರೆದು ಗೃಹರಕ್ಷಕರು ಹಗಲಿರುಳು ಕರ್ತವ್ಯ ನಿರ್ವಹಿಸಿದ್ದರೂ, ಸರ್ಕಾರ ತದ ನಂತರದ ದಿನಗಳಲ್ಲಿ ಗೃಹರಕ್ಷಕರನ್ನು ಪ್ರೋತ್ಸಾಹಿಸುವ ಬದಲಿಗೆ ಹಂತ ಹಂತವಾಗಿ ಇದ್ದ ಕರ್ತವ್ಯವನ್ನೂ ಕಡಿಮೆಗೊಳಿಸುತ್ತಾ, ಕೆಲಸದಿಂದ ವಂಚಿತರನ್ನಾಗಿಸಿದೆ. ಸರ್ಕಾರದ ಈ ಕ್ರಮ ವಿಷಾದನೀಯ ಸಂಗತಿಯಾಗಿದೆ ಗೃಹರಕ್ಷಕ ಸಿಬ್ಬಂದಿಗೆ ಉದ್ಯೋಗ ಭದ್ರತೆ ಹಾಗೂ ಸ್ವಂತ ಕಟ್ಟಡವಿಲ್ಲದೆ ಅಸಹಾಯಕ ರಾಗಿದ್ದಾರೆ ಕೂಡಲೆ ಸಂಬಂಧ ಪಟ್ಟ ಅಧಿಕಾರಿಗಳು ಗೃಹರಕ್ಷಕ ಸಿಬ್ಬಂದಿಗಳಿಗೆ ಸ್ವಂತ ಕಟ್ಟಡದ ಭಾಗ್ಯ ಕರುಣಿಸುವರೇ ಕಾದು ನೋಡ ಬೇಕಿದೆ.

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *