ಚಳ್ಳಕೆರೆ ಆ.30 ಮಹಿಳೆಯ ಬ್ಯಾಗ್ ನಲ್ಲಿ ಚಿನ್ನಾಬರಣ ಒಡವೆ ಕದ್ದು ಪರಾರಿಯಾದ ಘಟನೆ ನಡದಿದೆ.
ಹೌದು ಚಳ್ಳಕೆರೆ ನಗರದ ಸಾರಿಗೆ ಬಸ್ ನಿಲ್ದಾಣದಲ್ಲಿ ರಾಯದುರ್ಗದ ಟಿ.ಚೂಡಾಮಣಿ(49)ಎಂಬ ಮಹಿಳೆ ಚಳ್ಳಕೆರೆಯಿಂದ ರಾಯದುರ್ಗಕ್ಕೆ ಪ್ರಯಾಣಿಸಲು ಮಧ್ಯಾಹ್ನ 2.30 ರ ಸುಮಾರಿನಲ್ಲಿ ಬಸ್ ಹತ್ತುವಾಗ
ಜನಜಂಗುಳಿಯ ನಡುವೆ ಮಹಿಳೆ ವ್ಯಾನಿಟಿಬ್ಯಾಗ್‌ನ ಜೀಪ್ ಓಪನ್ ಆಗಿದ್ದನ್ನು ಕಂಡು ಗಾಬರಿಯಾಗಿದ್ಧಾಳೆ. ಕೂಡಲೇ ಕೂಗಿಕೊಂಡಾಗ ಸಾರ್ವಜನಿಕರು ಈಕೆಯ ನೆರವಿಗೆ ದಾವಿಸಿದ್ಧಾರೆ. ಕೂಡಲೇ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಲಾಗಿದೆ.
ವ್ಯಾನಿಟಿಬ್ಯಾಗ್ ನಲ್ಲಿ 90 ಸಾವಿರ ಮೌಲ್ಯದ ಬಂಗಾರದ ಬಳೆ, 60 ಸಾವಿರ ಮೌಲದ ಹರಳಿನ ಬಳೆ, ,25 ಸಾವಿರ ಮೌಲ್ಯದ ಉಂಗುರ, 15 ಸಾವಿರ ಮೌಲ್ಯದ ಕಿವಿಓಲೆ, 5 ಸಾವಿರ ಮೌಲ್ಯದ ರಿಂಗ್, 15 ಸಾವಿರ ಮೌಲ್ಯದ ಬಂಗಾರದ ಜುಮುಕಿ, 20 ಸಾವಿರ ಮೌಲ್ಯ ಗುಂಡಿನ ಸರ, 40 ಸಾವಿರ ಬ್ರಾಸ್‌ಲೇಟ್ ಸೇರಿದಂತೆ ಒಟ್ಟು 27ಲಕ್ಷದ ಬಂಗಾರದ ಆಭರಣ ಕಳ್ಳತನವಾಗಿದೆ. ಠಾಣಾಧಿಕಾರಿ ಶ್ರೀನಿವಾಸ್ ಪ್ರಕರಣ ದಾಖಲಿಸಿದ್ಧಾರೆ.
ಈ ಘಟನೆಯಿಂದ ಸಾರಿಗೆ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರಲ್ಲಿ ಆತಂಕದ ಮನೆ ಮಾಡಿದೆ.
ಜಿಪಂ ಸಿಇಒ ಸೋಮಶೇಖರ್ ಭೇಟಿ ನರೇಗಾ ಕಾಮಗಾರಿಪರಿಶೀಲನೆ.
ಚಳ್ಳಕೆರೆ ಸೆ.11. ಹೆಚ್ಚು ಕಾಮಗಾರಿಗಳನ್ನು ಅನುಷ್ಟಾನಗೊಳಿಸಿ ಗ್ರಾಮೀ ಣ ಭಾಗದ ಕೂಲಿಕಾರ್ಮಿಕರಿಗೆ ದುಡಿಯುವ ಕೈಗಳಿಗೆ ಕೆಲಸ ನೀಡುವಂತೆ...
0 Comments