ಚಳ್ಳಕೆರೆ ಜನಧ್ವನಿ ವಾರ್ತೆ ಅ.23. ನಮ್ಮ ನಾಡು ಅನ್ಯರ ಪಾಲಾಗದೆ ನಮಗೇ ಉಳಿಯಬೇಕೆಂಬ ಗುರಿ ಇಟ್ಟುಕೊಂಡು ಹೋರಾಟ ನಡೆಸಿದ ದಿಟ್ಟ ಮಹಿಳೆ ಕಿತ್ತೂರು ರಾಣಿ ಚೆನ್ನಮ್ಮ. ಬ್ರಿಟಿಷರಿಗೆ ಸಿಂಹಸ್ವಪ್ನವಾಗಿದ್ದ ಚೆನ್ನಮ್ಮನವರ ಬದುಕು, ಹೋರಾಟ ಅನನ್ಯ ಇವರ ಆದರ್ಶಗಳನ್ನುಎಲ್ಲರೂ ಮೈಗೂಡಿಸಿಕೊಳ್ಳುವಂತೆ ಶಾಸಕ ಟಿ.ರಘುಮೂರ್ತಿ ಕಿವಿಮಾತು ಹೇಳಿದರು.
ನಗರದ ತಾಲೂಕು ಕಚೇರಿ ಸಭಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣೆಸಮಿತಿ ಹಾಗೂ ವೀರಶೈವ ಸಂಘಟನೆಗಳಿಂದ ಆಯೋಜಿಸಿದ್ದ ಕಿತ್ತೂರು ರಾಣಿ ಚನ್ನಮ್ಮಜಯಂತಿ ಕಾರ್ಯಕ್ರಮದಲ್ಲಿ ಭಾವ ಚಿತ್ರಕ್ಕೆ ಪುಸ್ಪನಮನ ಸಲ್ಲಿಸಿ ಮಾತನಾಡಿದರು.
ಹೆಣ್ಣು ಮಕ್ಕಳು ಯಾವ ಕ್ಷೇತ್ರದಲ್ಲೂ ಕಡಿಮೆಯಿಲ್ಲ. ಅವರು ಮನಸ್ಸು ಮಾಡಿದರೆ ಏನು ಬೇಕಾದರೂ ಸಾಧನೆ ಮಾಡಬಹುದು. ಸ್ತ್ರೀಯರಿಗೆ ಅಂತಹದೊಂದು ಅಗಾಧ ಶಕ್ತಿ ಇದೆ. ಮಹಿಳೆಯರು ಉನ್ನತ ಸ್ಥಾನಗಳನ್ನು ಅಲಂಕರಿಸುವ ಮೂಲಕ ಪುರುಷರಿಗೆ ಸಮಾನವಾಗಿ ದಾಪುಗಾಲಿಡುತ್ತಿದ್ದಾರೆ. ಕಿತ್ತೂರು ರಾಣಿ ಚನ್ನಮ್ಮ ಮಹಿಳೆಯರಿಗೆ ಆದರ್ಶವಾಗಿದ್ದಾಳೆ ಪ್ರತಿ ಮನೆಯಲ್ಲೂ ಕಿತ್ತೂರು ರಾಣಿ ಚನ್ನಮ್ಮನಂತಹ ಮಹಿಳೆಯರು ಇರಬೇಕು ಎಂದು ತಿಳಿಸಿದರು.
ತಹಶೀಲ್ದಾರ್ ರೇಹಾನ್ ಪಾಷ ರಾಣೀ ಚನ್ನಮ್ಮ ನಡೆದು ಬಂದ ದಾರಿ ಹಾಗೂ ಇತಿಹಾಸದ ಬಗ್ಗೆ ಪ್ರಾಸ್ಥಾವಿಕ ನುಡಿಗಳನ್ನು ನುಡಿದರು.
ಸಮಾಜದ ಮುಖಂಡರಾದ ರುದ್ರಪ್ಪ, ಕಿತ್ತೂರು ರಾಣಿ ಸಂಘದ ಅಧ್ಯಕ್ಷ ಶಿವಕುಮಾರ್ ಮಾತನಾಡಿದರು.
ನಗರಸಭೆ ಸದಸ್ಯರಾದ ಮಲ್ಲಿಕಾರ್ಜುನ, ಬಿ.ಟಿ.ರಮೇಶ್ ಗೌಡ, ಸಮಾಜದ ಮುಖಂಡರಾದ ಜಗದೀಶ್,ಹೊಸಮನೆ ಸ್ವಾಮಿ,ಲೋಕೇಶ್,ಶ್ರೀನಿವಾಸ್, ವೀರಭದ್ರಯ್ಯ,

0 Comments