ನಾಯಕನಹಟ್ಟಿ:: ಸಂವಿಧಾನದ ಅಡಿಯಲ್ಲಿ ಮೂಲಭೂತ ಸೌಲಭ್ಯಗಳನ್ನು ಪಡೆದ ನಾವು ಸಂವಿಧಾನವನ್ನು ಗೌರವಿಸಬೇಕು ಎಂದು ಪಿಎಸ್ಐ ದೇವರಾಜ್ ಹೇಳಿದರು.
ಗುರುವಾರ ಪಟ್ಟಣದ ಪೊಲೀಸ್ ಠಾಣೆ ಆವರಣದಲ್ಲಿ 78ನೇ ಸ್ವಾತಂತ್ರೋತ್ಸವದ ಧ್ವಜಾರೋಹಣವನ್ನು ನೆರವೇರಿಸಿ ನಂತರ ಮಾತನಾಡಿದ ಅವರು ಬ್ರಿಟಿಷರ ದಾಸ್ಯತನದಿಂದ ಸುಮಾರು 190 ವರ್ಷಗಳ ಕಾಲ ಅವರ ಅಡಿಹಾಳು ಆಗಿ ಬದುಕುತ್ತಿದ್ದ ನಮ್ಮನ್ನು ಸ್ವತಂತ್ರ ಪಡಿಲಿಕ್ಕೆ ಸಾಕಷ್ಟು ಮಹನೀಯರು ದಾರ್ಶನಿಕರು ತಮ್ಮದೇ ಆದ ಕೊಡುಗೆ ತ್ಯಾಗ ಬಲಿದಾನವನ್ನು ಮಾಡಿ ಅಂತಿಮವಾಗಿ 1947 ಆಗಸ್ಟ್ 15 ರಂದು ಆಗಸ್ಟ್ 14ರ ಮಧ್ಯರಾತ್ರಿ 12 ಗಂಟೆಗೆ ಸ್ವತಂತ್ರವನ್ನು ಬ್ರಿಟಿಷರು ಕೊಟ್ಟು ಹೋಗುತ್ತಾರೆ ಜೊತೆಯಲ್ಲಿ ಮೂರ್ನಾಲ್ಕು ದೇಶಗಳಿಗೆ ಸ್ವಾತಂತ್ರ್ಯ ಲಭಿಸುತ್ತದೆ.
ಡಾ. ಬಿ .ಅರ್. ಅಂಬೇಡ್ಕರ್ ಅವರು ಒಂದು ಮಾತನ್ನು ಹೇಳುತ್ತಾರೆ ಇತಿಹಾಸ ತಿಳಿದವರು ಮಾತ್ರ ಇತಿಹಾಸವನ್ನು ಸೃಷ್ಟಿಸಲು ಸಾಧ್ಯ. ನಮ್ಮ ಭಾರತ ದೇಶ ವಿವಿಧತೆ ಮತ್ತು ಏಕತೆ ಕೂಡಿರುವಂತ ದೇಶ ಇಲ್ಲಿ ಪ್ರತಿಯೊಬ್ಬರೂ ಸಂವಿಧಾನದ ಮೌಲ್ಯಗಳನ್ನು ಅಳವಡಿಸಿಕೊಂಡು ಜಾತೀಯತೆ ಮನೋಭಾವ ಹೊಂದಿರುವ ನಮಗೆ ಸಂವಿಧಾನ ಮೂಲಭೂತ ಹಕ್ಕುಗಳನ್ನು ನಮಗೆ ದೊರೆತಿವೆ ಪ್ರತಿಯೊಬ್ಬರು ಸಂವಿಧಾನವನ್ನು ಗೌರವಿಸಬೇಕು ಎಂದರು.
ಇನ್ನೂ ಪಿಎಸ್ಐ ಕೆ. ಶಿವಕುಮಾರ್ ಮಾತನಾಡಿದರು ಭಾರತ ದೇಶಕ್ಕೆ ಅನೇಕ ಮಹನೀಯರ ತ್ಯಾಗ ಬಲಿದಾನಗಳ ಪರಿಶ್ರಮದಿಂದ ನಮಗೆ ಸ್ವಾತಂತ್ರ್ಯ ಸಿಕ್ಕಿದೆ ಪ್ರತಿಯೊಬ್ಬರೂ ಜಾತಿ ಭೇದ ತಾರತಮ್ಮ ಮಾಡಬಾರದು ಡಾ. ಬಿಆರ್ ಅಂಬೇಡ್ಕರ್ ರವರು ಇಡೀ ವಿಶ್ವವನ್ನೇ ಮೆಚ್ಚುವಂತ ಸಂವಿಧಾನವನ್ನು ನೀಡಿದ್ದಾರೆ ಸಂವಿಧಾನವನ್ನು ಗೌರವಿಸಿ ಸಂವಿಧಾನ ಮೂಲಭೂತ ಹಕ್ಕು, ಕರ್ತವ್ಯಗಳ ಜೊತೆಗೆ ತತ್ವ ಸಿದ್ಧಾಂತಗಳನ್ನು ರೂಡಿಸಿಕೊಳ್ಳಬೇಕು ಎಂದರು.
ಇದೇ ಸಂದರ್ಭದಲ್ಲಿ ಎಎಸ್ಐ ಆರ್. ತಿಪ್ಪೇಸ್ವಾಮಿ, ದಾದಾಪೀರ್, ಮಂಜುನಾಥ್, ಪೊಲೀಸ್ ಪೇದೆಗಳಾದ ರಮೇಶ್, ಭಾಷಾ, ರಾಮಾಂಜನಿ, ರುದ್ರಮುನಿ, ಅಣ್ಣಪ್ಪ ,ನಾರಾಯಣಿ, ಕುಮಾರ್ ,ಶಿವರಾಜ್, ಲೋಹಿತ್, ದೇವರಾಜ್ ,ಹನುಮಂತ, ಸುರೇಶ್ ,ವೀರೇಶ್, ಹಾಲೇಶ್, ಮಹಿಳಾಪೇದೆಗಳಾದ ಭಾಗ್ಯಮ್ಮ, ಮಂಜಮ್ಮ, ಗೃಹರಕ್ಷಕ ದಳದ ನಾಯಕನಹಟ್ಟಿ ಹೋಬಳಿ ಘಟಕ ಅಧಿಕಾರಿ ವೈ. ಬಿ ತಿಪ್ಪೇಸ್ವಾಮಿ, ಹಾಗೂ ಗೃಹರಕ್ಷಕ ದಳ ಸಿಬ್ಬಂದಿಗಳು ಕಚೇರಿ ಸಿಬ್ಬಂದಿ ಪಾಲಯ್ಯ ಇದ್ದರು
0 Comments