ಚಳ್ಳಕೆರೆ: ಪ್ರತಿಯೊಂದು ಸಮಸ್ಯೆಗಳಿಗೆ ಶಿಕ್ಷಣದಿಂದ ಪರಿಹಾರ ನೀಡಲು ಸಾಧ್ಯವಿದೆ ಎಂದು ಜಿಲ್ಲಾ ಉಸ್ತುವರಿ ಸಚಿವ ಡಿ ಸುಧಾಕರ್ ಹೇಳಿದರು.
ನಗರದ ಹೊರವಲಯ ದಿ.ದೇವರಾಜ್ ಅರಸ್ ನೂತನ ಭವನ ಉದ್ಘಾಟಿಸಿ ಮಾತನಾಡಿದರು.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ. ಹಾಗೂ ವಿದ್ಯಾರ್ಥಿಗಳ ವಸತಿ ನಿಲಯ ಒಂದೇ ಸಂಕೀರ್ಷದಲ್ಲಿ ನಿರ್ಮಿಸಿರುವುದು ಶ್ಲಾಘನೀಯ. ಇಲಾಖೆಯಿಂದ ದೊರೆಯುವ ಸೌಲತ್ತುಗಳನ್ನು ವಿದ್ಯಾರ್ಥಿಗಳಿಗೆ ಹಾಗೂ ಹಿಂದುಳಿದ ವರ್ಗದ ಅರ್ಹ ಫಲಾನುಭವಿಗಳಿಗೆ ತಲುಪಿಸುವ ಕೆಲಸ ಹಾಗಬೇಕು .ಫಲಿತಾಂಶ ಶೇ100 ರಷ್ಟು ಬರುವಂತೆ ಗುಣಮಟ್ಟದ ಶಿಕ್ಷಣ ಕೊಡಬೇಕೆಂದು ತಿಳಿದಿದರು.
ಶಾಸಕ ಟಿ.ರಘುಮೂರ್ತಿ ಮಾತನಾಡಿ ನಾಲ್ಕು ಎಕರೆ ಭೂಮಿಯಯಲ್ಲಿ ಶಿಥಿಲವಾದ ಹಳೆಯ ಕಟ್ಟಡಗಳಿದ್ದವು ಅವುಗಳನ್ನು ತೆರವುಗೊಳಿಸಿ ಸುಸಜ್ಜಿತ ಬೃಹತ್ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳ ವಸತಿ ನಿಲಯ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ.ದೇವರಾಜ್ ಅರಸ್ ಭವನ ನಿರ್ಮಿಸಲಾಗಿದೆ.
ಡಿ ದೇವರಾಜ ಅರಸುರವರು ದೀನ ದಲಿತರಿಗೆ ಅತ್ಯಂತ ಕೆಳ ವರ್ಗದ ಜನರಿಗೆ ಸಾಮಾಜಿಕ ನ್ಯಾಯವನ್ನು ಒದಗಿಸಿ ಬಸವ ಬುದ್ಧ ಅಂಬೇಡ್ಕರ್ ಅವರ ಆದರ್ಶಗಳನ್ನು ಅನುಸರಿಸಿಕೊಂಡು ಮುಖ್ಯಮಂತ್ರಿಯಾಗಿ ಅಧಿಕಾರವನ್ನು ಜನರ ಪರವಾಗಿ ನಿರ್ವಹಿಸಿ ಹಿಂದುಳಿದ ವರ್ಗಗಳ ಜನರ ಮನಸ್ಸಿನಲ್ಲಿ ಚಿರಸ್ಥಾಯಿಯಾಗಿ ಉಳಿದಿದ್ದಾರೆ .
ರಾಜಕಾರಣವನ್ನು ಎಲ್ಲರೂ ಮಾಡುತ್ತಾರೆ ಆದರೆ ರಾಜ್ಯದ ಒಬ್ಬ ಮುಖ್ಯಮಂತ್ರಿಯಾಗಿ ಬಡ ಹಾಗೂ ಹಿಂದುಳಿದ ವರ್ಗಗಳ ಜನರ ಮನದಲ್ಲಿ ಉಳಿಯುವಂತಹ ಗೃಹಜ್ಯೋತಿ.ಭೂಮಿ ಹಕ್ಕು ಸಾಮೀಜಿಕ ಭದ್ರತಾ ಪಿಂಚಿಣಿ. ಕೃಷಿ ಬ್ಯಾಂಕ್. ರೈತರ ಸಾಲ ಮನ್ನ ಯೋಜನೆ ಸೇರಿದಂತೆ ಹಲವು ಜನಪರ ಕಾರ್ಯಕ್ರಮಗಳನ್ನು ರೂಪಿಸಿದಂತಹ ಧೀಮಂತ ರಾಜಕಾರಣಿಗಳಲ್ಲಿ ದೇವರಾಜ ಅರಸುರವರು ಮೊದಲಿಗರಾಗುತ್ತಾರೆ ಎಂದು ತಿಳಿಸಿದರು.
ಉಳುವವನೆ ಭೂಮಿಯ ಒಡೆಯ ವೃದ್ಧಾಪ್ಯ ವೇತನ ವಿಧವಾ ವೇತನ ಜೀತ ಪದ್ಧತಿ ನಿರ್ಮೂಲನೆ ಮಾಡಿದರು ಇಂದಿನ ರಾಜಕಾರಣಿಗಳು ದೇವರಾಜ್ ಅರಸುರವರ ಆಡಳಿತದ ವೈಖರಿಗಳನ್ನು ಮೈಗೂಡಿಸಿಕೊಂಡು ತಮ್ಮ ಕರ್ತವ್ಯಗಳನ್ನು ನಿರ್ವಹಿಸಬೇಕಿದೆ ಇಂದಿನ ಸರ್ಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ದೇವರಾಜ ಅರಸುರವರ ಸಿದ್ಧಾಂತಗಳನ್ನು ಪಾಲಿಸುತ್ತಿರುವುದರಿಂದ ಜನಪರ ಕಾರ್ಯಕ್ರಮಗಳನ್ನು ನೀಡಿ ಮಹಿಳೆಯರ ಬಡವರ ಹಾಗೂ ಹಿಂದುಳಿದ ವರ್ಗಗಳ ಶೋಷಿತ ಸಮುದಾಯಗಳ ಮುಖ್ಯಮಂತ್ರಿ ಯಾಗಿ ಹೊರಹಮ್ಮಿದ್ದಾರೆ ಎಂದು ತಿಳಿಸಿದರು.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ಎಸ್ ರಮೇಶ್ ಡಿ ಪ್ರಸ್ತಾವುಕ ನುಡಿದರು. ಉಪನ್ಯಾಸಕ ಗುರುರಾಜ್ ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ನಗರಸಭೆ ಸದ್ಯರಾದ ರಾಘವೇಂದ್ರ ವೀರಭದ್ರಪ್ಪ. ಭದ್ರಿ.ನೇತಾಜಿ ಪ್ರಸನ್ನ.ಬಡಗಿ ಪಾಪಣ್ಣ.ಅನ್ವರ್ .ತಾಪಂ ಇ ಒ ಶಶಿಧರ, ಡಿವೈಎಸ್ ಪಿ ರಾಜಣ್ಣ, ನಗರಸಭೆ ಪೌರಾಯುಕ್ತರಾದ ಜಗ್ಗರೆಡ್ಡಿ, ಇತರರಿದ್ದರು.
ಚಳ್ಳಕೆರೆ ನರದ ತಾಲೂಕು ಕಚೇರಿ ಸಭಾಂಗಣದಲ್ಲಿರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿವತಿಯಿಂದ ಆಯೋಜಿಸಿದ್ದ ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತೋತ್ಸವ . ನುಲಿಯ ಚಂದಯ್ಯ ಹಾಗೂ ದಿ.ದೇವರಾಜ್ ಅರಸ್ ಜಯಂತೋತ್ಸವ ಕಾರ್ಯಕ್ರಮದಲ್ಲಿಶಾಸಕ ಟಿ.ರಘುಮೂರ್ತಿ. ಸಮುದಾಯದ ಮುಖಂಡರು. ಜನಪ್ರತಿನಿಧಿಗಳು
ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.
0 Comments