ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಸೂಚನೆ ಭದ್ರಾ ಮೇಲ್ದಂಡೆ, ನೇರ ರೈಲ್ವೆ ಯೋಜನೆ ಕಾಮಗಾರಿ ತ್ವರಿತವಾಗಿ ಪೂರ್ಣಗೊಳಿಸಿ

by | 01/07/24 | ಸುದ್ದಿ

ಚಿತ್ರದುರ್ಗ. ಜುಲೈ.01:
ಭದ್ರಾ ಮೇಲ್ದಂಡೆ ಯೋಜನೆ ಹಾಗೂ ದಾವಣಗೆರೆ-ತುಮಕೂರು ನೇರ ರೈಲ್ವೆ ಯೋಜನೆ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಅಗತ್ಯ ಕ್ರಮವಹಿಸಬೇಕು ಎಂದು ಯೋಜನೆ ಮತ್ತು ಸಾಂಖ್ಯಿಕ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಸೂಚನೆ ನೀಡಿದರು.
ಹಿರಿಯೂರು ನಗರಸಭೆ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಭದ್ರಾ ಮೇಲ್ದಂಡೆ ಯೋಜನೆ, ನೇರ ರೈಲ್ವೆ ಯೋಜನೆ ಹಾಗೂ ಕೆಐಡಿಬಿ ಇಲಾಖೆಗಳ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.
ಭದ್ರಾ ಮೇಲ್ದಂಡೆ ಯೋಜನೆ, ನೇರ ರೈಲ್ವೆ ಯೋಜನೆ, ಕೈಗಾರಿಕಾ ಕಾರಿಡಾರ್ ಯೋಜನೆಗಳನ್ನು ನಿಗಧಿತ ಸಮಯದೊಳಗೆ ಪೂರ್ಣಗೊಳಿಸಬೇಕು. ಚುನಾವಣಾ ನೀತಿ ಸಂಹಿತೆಯಿಂದಾಗಿ ಯೋಜನೆ ಕಾಮಗಾರಿಗಳು ಮಂದಗತಿಯಾಗಿದ್ದು, ಇದೀಗ ಯೋಜನೆಗಳ ಪೂರ್ಣಗೊಳಿಸಲು ವೇಗ ನೀಡಲಾಗುವುದು ಎಂದರು.
ಬೋರನಕಣಿವೆ ಜಲಾಶಯದ ವಿವರ ಪರಿಶೀಲಿಸಿ ಹೆಚ್ಚಿನ ನೀರಿನ ಅಲೋಕೇಶನ್ ತಂದು ಅಲ್ಲಿಂದ ಗಾಯಿತ್ರಿ ಜಲಾಶಯಕ್ಕೆ ತರಲು ಕ್ರಮವಹಿಸಲಾಗುವುದು. ಹೊಸಹಳ್ಳಿ ಬ್ಯಾರೇಜ್‍ನ ವಿದ್ಯುತ್ ಸಮಸ್ಯೆಯನ್ನು ಆ ಭಾಗದ ರೈತರೊಂದಿಗೆ ಚರ್ಚಿಸಿ ಶೀಘ್ರ ಬಗೆಹರಿಸಿ ಬಹುದೊಡ್ಡ ಈ ಯೋಜನೆಗಳನ್ನು ಆದಷ್ಟು ಶೀಘ್ರವಾಗಿ ಪೂರ್ಣಗೊಳಿಸಿ, ಸಾರ್ವಜನಿಕರ ಉಪಯೋಗಕ್ಕೆ ನೀಡಬೇಕಿದೆ ಎಂದರು.
ಕೆಐಡಿಬಿ ಅಧಿಕಾರಿ ಲಕ್ಷ್ಮೀಶ್ ಮಾತನಾಡಿ ಮೇಟಿಕುರ್ಕೆ ಕೈಗಾರಿಕಾ ಕಾರಿಡಾರ್ ಯೋಜನೆಯ 1156 ಎಕರೆ ಪ್ರದೇಶದಲ್ಲಿ 920 ಎಕರೆ ಪ್ರದೇಶದ ರೈತರಿಗೆ ಪರಿಹಾರ ನೀಡಲಾಗಿದೆ. ಇನ್ನೂ 336 ಎಕರೆಗೆ ಪರಿಹಾರ ಕೊಡಬೇಕು. ಇಲ್ಲಿಯವರೆಗೆ ರೂ.380 ಕೋಟಿ ಬಿಡುಗಡೆ ಮಾಡಿದೆ. ಅದರಲ್ಲಿ ರೂ.312 ಕೋಟಿ ಪರಿಹಾರ ನೀಡಲಾಗಿದೆ. ಮೇಟಿಕುರ್ಕೆ ಕರಿಯೋಬನಹಳ್ಳಿಯಲ್ಲಿ ಲೇಔಟ್ ಅನುಮೋದನೆ ಆಗಿದೆ. ನಾಲ್ಕರಲ್ಲಿ ಮೂರು ಪ್ಯಾಕೇಜ್ ವರ್ಕ್ ಅವಾರ್ಡ್ ಆಗಿದ್ದು ಕೆಲಸ ನಡೆಯುತ್ತಿದೆ. ಒಂದರಲ್ಲಿ ಕೆಲಸ ಶುರುವಾಗಬೇಕಿದೆ. 1156 ಎಕರೆ ಪ್ರದೇಶದಲ್ಲಿ 764 ಎಕರೆ ಕೈಗಾರಿಕಾ ಪ್ರದೇಶವಾಗಿದ್ದು, ಉಳಿದ ಪ್ರದೇಶದಲ್ಲಿ ಉದ್ಯಾನವನ, ಆಸ್ಪತ್ರೆ, ವಸತಿ ಗೃಹಗಳಿಗೆ ಮೀಸಲಿರಿಸಲಾಗಿದೆ ಎಂದರು.
ದಾವಣಗೆರೆ-ತುಮಕೂರು ನೇರ ರೈಲ್ವೆ ಯೋಜನೆಗೆ 1210 ಎಕರೆ ಬೇಕಾಗಿದ್ದು, ಹಿರಿಯೂರಿನಲ್ಲಿ 55 ಕಿಮೀ ಹಾದು ಹೋಗಲಿದೆ. ತಾಲ್ಲೂಕಿನಲ್ಲಿ 113 ಎಕರೆ ಭೂ ಸ್ವಾಧೀನ ಬಾಕಿಯಿದೆ. ಎರಡು ತಿಂಗಳಲ್ಲಿ 70 ಎಕರೆ ಭೂ ಸ್ವಾಧೀನಪಡಿಸಿಕೊಂಡು ಕೆಲಸ ಪ್ರಾರಂಭ ಮಾಡಲಾಗುವುದು ಎಂದು ವಿಶೇಷ ಭೂಸ್ವಾಧೀನಾಧಿಕಾರಿ ವಿವೇಕ್ ಸಭೆಗೆ ಮಾಹಿತಿ ನೀಡಿದರು.
ಭದ್ರಾ ಮೇಲ್ದಂಡೆ ಯೋಜನೆ ಮುಖ್ಯ ಎಂಜಿನಿಯರ್ ಎಸ್.ಎಚ್.ಲಮಾಣಿ ಮಾತನಾಡಿ, ಭದ್ರಾ ಮೇಲ್ದಂಡೆ ಯೋಜನೆಯಿಂದ ಅನುಮೋದನೆ ಆಗಿರುವ ಕೆರೆಗಳಿಗೆ ನೀರು ಬರಲಿದೆ ಎಂದು ಸಭೆಗೆ ಮಾಹಿತಿ ನೀಡಿದರು.
ಜವನಗೊಂಡನಹಳ್ಳಿ ಹಾಗೂ ಕರಿಯಾಲ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಹಳ್ಳಿಗಳಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದೆ. ನಮಗೆ ನೀರಿನ ಸಮಸ್ಯೆ ಬಗೆಹರಿಸಬೇಕು ಎಂದು ಕರಿಯಾಲ ಗ್ರಾಮ ಪಂಚಾಯಿತಿ ಅಧ್ಯಕ್ಷ ರಮೇಶ್ ಅವರು ಸಚಿವರಿಗೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.

Latest News >>

ಹೊಸ ನ್ಯಾಯಬೆಲೆ ಅಂಗಡಿಗೆ ಪಡಿತರ ಚೀಟಿದಾರರನ್ನು ವರ್ಗಾಯಿಸಿದಂತೆ ಗ್ರಾಮಸ್ಥರ ಆಗ್ರಹ 

ಚಳ್ಳಕೆರೆ: ತಾಲೂಕಿನ ಜಾಜೂರು ಗ್ರಾಮದಲ್ಲಿ ಪರಿಶಿಷ್ಟ ಜಾತಿ ಹಾಗೂ ಹಿಂದುಳಿದ ವರ್ಗಗಳು ವಾಸಿಸುವ ಕಾಲೋನಿಯ ಪಡಿತರ ಚೀಟಿದಾರರ ಅನುಮತಿ ಪಡೆಯದೆ...

ಪಹಣಿಗೆ ಆಧಾರ್ ಜೋಡಣಿ: ತಿಂಗಳಾಂತ್ಯಕ್ಕೆ ಪ್ರಗತಿ ಸಾಧಿಸುವಂತೆ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಸೂಚನೆ

ಚಳ್ಳಕೆರೆ ಜು.16 ಪಹಣಿಗೆ ಆಧಾರ್ ಜೋಡಣೆ ಕಾರ್ಯವನ್ನು ಪ್ರಥಮಾಧ್ಯತೆಯಾಗಿ ಪರಿಗಣಿಸಿ, ತಿಂಗಳಾಂತ್ಯಕ್ಕೆ ತಾಲ್ಲೂಕಿನಲ್ಲಿ ಪ್ರಗತಿ ಸಾಧಿಸಬೇಕು...

ನಗರದ ಪಾದಾಚಾರಿಗಳ ರಸ್ತೆ ಮೇಲಿರುವ ಪೆಟ್ಟಿಗೆ ಅಂಗಡಿಗಳನ್ನು ತೆರವುಗೊಳಿಸುವಂತೆ ಸಾರ್ವಜನಿಕರು ಜಿಲ್ಲಾಧಿಕಾರಿಗೆ ವೆಂಕಟೇಶ್ ಬಳಿ ದೂರು.

ಚಳ್ಳಕೆರೆ ಜು.16 ಪುಟ್ ಬಾತ್ ನಲ್ಲಿ ಅಕ್ರಮ ಪೆಟ್ಟಿಗೆ ಅಂಗಡಿಗಳಿಂದ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಕಿರಿಕಿರಿ ಉಂಟಾಗುತ್ತದೆ ಕೂಡಲೆ...

ಗೃಹ ಲಕ್ಷ್ಮೀ ಯೋಜನೆ: ಲಿಂಗತ್ವ ಅಲ್ಪಸಂಖ್ಯಾತರಿಂದ ಅರ್ಜಿ ಆಹ್ವಾನ

ಚಿತ್ರದುರ್ಗ ಜು.16: ರಾಜ್ಯ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯಾದ ಗೃಹಲಕ್ಷ್ಮೀ ಯೋಜನೆಯಡಿ ಲಿಂಗತ್ವ ಅಲ್ಪಸಂಖ್ಯಾತರು ಸಹ ಯೋಜನೆಯ ಸೌಲಭ್ಯ...

ಸಿದ್ದು ಬೆನ್ನಿಗೆ ಇದೆ ದಲಿತ ಶಕ್ತಿ ಟೀಕೆ, ಆರೋಪಗಳಿಗೆ ಎದೆಗುಂದದಿರಿ ಮಾಜಿ ಸಚಿವ ಎಚ್.ಆಂಜನೇಯ ಅಭಯ ಆಂಜನೇಯ ಅವರಿಗೆ ಬೆಳ್ಳಿಗಧೆ ನೀಡಿ ಗೌರವಿಸಿದ ದಲಿತ ಮುಖಂಡರು*

ಚಿತ್ರದುರ್ಗ: ಅಹಿಂದ ವರ್ಗದ ಕಣ್ಮಣಿ ಸಿದ್ದರಾಮಯ್ಯ ಐದು ವರ್ಷ ಮುಖ್ಯಮಂತ್ರಿಯಾಗಿ ನಿರ್ಭಯವಾಗಿ ಕಾರ್ಯನಿರ್ವಹಿಸಬೇಕು. ಈ ಕಾರ್ಯಕ್ಕೆ ಇಡೀ ದಲಿತ...

ಸಮಾಜದಲ್ಲಿನ ಅಂಕುಡೊಂಕುಗಳನ್ನು ತಿದ್ದುವಲ್ಲಿ ಹಾಗೂ ಜನರನ್ನ ಜಾಗೃತಗೊಳಿಸುವಲ್ಲಿ ಮಾಧ್ಯಮಗಳು ಪ್ರಮುಖಪಾತ್ರ ವಹಿಸುತ್ತವೆ:ರಾಜ್ಯಾಧ್ಯಕ್ಷರಾದ ಬಂಗ್ಲೆಮಲ್ಲಿಕಾರ್ಜುನ್

ಹಿರಿಯೂರು: ಸಮಾಜದ ಅಂಕುಡೊಂಕುಗಳನ್ನು ತಿದ್ದುವಲ್ಲಿ ಹಾಗೂ ಸಮಾಜದ ಜನರನ್ನು ಜಾಗೃತಗೊಳಿಸುವಲ್ಲಿ ಮಾಧ್ಯಮಗಳು ಪ್ರಮುಖ ಪಾತ್ರ...

ಮಹರ್ಷಿ ಭಗೀರಥ ಕಠಿಣ ತಪಸ್ಸು ಕೈಗೊಂಡು, ಪೂರ್ವಜರ ಶಾಪ ವಿಮೋಚನೆ ಮಾಡುವ ಮೂಲಕ ಇಡೀ ಮನುಕುಲ ಉಧ್ದಾರಕ್ಕಾಗಿ ಗಂಗೆಯನ್ನು ಧರೆಗೆ ತಂದು ಮನುಕುಲಕ್ಕೆ ಅನನ್ಯ ಸೇವೆ ಸಲ್ಲಿಸಿದ್ದಾರೆ ಎಂದು ಭಗೀರಥ ಗುರುಪೀಠದ ಜಗದ್ಗುರು ಶ್ರೀ ಶ್ರೀ ಡಾ ಪುರುಷೋತ್ತಮಾನಂದಪುರಿ ಮಹಾಸ್ವಾಮೀಜಿ

ಪರಶುರಾಮಪುರ ಮಹರ್ಷಿ ಭಗೀರಥ ಕಠಿಣ ತಪಸ್ಸು ಕೈಗೊಂಡು, ಪೂರ್ವಜರ ಶಾಪ ವಿಮೋಚನೆ ಮಾಡುವ ಮೂಲಕ ಇಡೀ ಮನುಕುಲ ಉಧ್ದಾರಕ್ಕಾಗಿ ಗಂಗೆಯನ್ನು ಧರೆಗೆ...

ಪೀರಲು ದೇವರು ದೇವಾಲಯದಲ್ಲಿ ಇಮಾಮ್ ಬಾಡ ಅಶುಖಾನ ಕಮಿಟಿ ವತಿಯಿಂದ ಮೊಹರಾಂ ಆಚರಣೆ

ಹಿರಿಯೂರು: ನಗರದ ಚಿಕ್ಕಪೇಟೆ ಬಳಿ ಇರುವ ಪೀರಲು ದೇವರುಗಳ ದೇವಾಲಯದಲ್ಲಿ ಇಮಾಮ್ ಬಾಡ ಅಶುಖಾನ ಕಮಿಟಿ ವತಿಯಿಂದ ಮೊಹರಾಂ ಆಚರಣೆ ನಡೆಯುತ್ತಿದ್ದು...

ತ್ಯಾಗ ಬಲಿದಾನ ನೆನೆಯುವ ಭಾವೈಕ್ಯತೆಯ ಹಬ್ಬವೇ ಮೊಹರಂ ಮೈಲನಹಳ್ಳಿ ದಿನೇಶ್ ಕುಮಾರ್

ತ್ಯಾಗ ಬಲಿದಾನ ನೆನೆಯುವ ಭಾವೈಕ್ಯತೆಯ ಹಬ್ಬವೇ ಮೊಹರಂ ಮೈಲನಹಳ್ಳಿ ದಿನೇಶ್ ಕುಮಾರ್ ಜಾನಪದ ಕುಣಿತ ಪ್ರಕಾರಗಳಲ್ಲಿ ಮೊಹರಂ ಕುಣಿತ ಕೂಡ ಒಂದು....

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *

You cannot copy content of this page