ಜನಧ್ವನಿವಾರ್ತೆ ಚಳ್ಳಕೆರೆ ಅ 20 ಸಭೆಗೆ ಬಾರದ ಪಿಡಿಒ ಹಾಗೂ ಇಂಜಿಯರ್‌ಗಳಿಗೆ ನೋಟಿಸ್ ಜಾರಿ ಮಾಡುವಂತೆ ತಾಪಂ ಇಒ ಜಿ.ಕೆ.ಹೊನ್ನಯ್ಯ ತಾಕೀತು ಮಾಡಿದರು.
ನಗರದ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಪಿಡಿಒ , ಕಂಪ್ಯೂಟರ್ ಆಪರೇಟರ್ ಹಾಗೂ ಇಂಜಿನಿಯರ್‌ಗಳಿಗೆ ಆಯೋಜಿಸಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಪಿಡಿಒಗಳ ವಿರುದ್ದ ಗರಂ ಆದರು.
ಕಚೇರಿಗಳಿಗೆ ಹೋಗದೆ ಜನರ ಸಂಪರ್ಕಕ್ಕೂ ಸಿಗದೆ ಕೆಲಸ ಮಾಡದೆ ಜನರನ್ನು ಅಲೆದಾಡಿಸುತ್ತಿರುವ ದೂರುಗಳು ಕೇಳಿ ಬರುತ್ತಿವೆ, ಇಂದು ಪ್ರಗತಿ ಪರಿಶೀಲನಾ ಸಭೆ ಮಾಹಿತಿ ಇದ್ದರೂ ಪ್ರಗತಿ ವರದಿಯನ್ನು ತರದೆ ಕೈಬೀಸಿಕೊಂಡು ಬಂದಿದ್ದೀರಿ. ವರದಿ ನೀಡಿದರೆ ತಾಳೆಯಾಗುತ್ತಿಲ್ಲ ನುಣಿಕೊಳ್ಳಲು ತಪ್ಪು ಮಾಹಿತಿಯನ್ನು ನೀಡದೆ ನಿಖರವಾದ ಮಾಹಿತಿ ನೀಡ ಬೇಕು. ಕೆಲ ಪಿಡಿಒಗಳಿಂದ ಪಿಡಿಗಳಿಗೆ ಕೆಟ್ಟ ಹೆಸರು ಬರುತ್ತದೆ ಕಚೇರಿಯಲ್ಲಿ ಕೂತು ಸರಕಾರದಿಂದ ಬಂದ ಅನುದಾನದಿಂದ ಗ್ರಾಮೀಣ ಜನರಿಗೆ ಅರ್ಹ ಫಲಾನುಭವಿವಿಗಳಿಗೆ ತಲುಪಿಸುವ ಕೆಲಸ ಹಾಗಬೇಕು.
ನರೇಗಾ ಯೋಜನೆಯಡಿಯಲ್ಲಿ ಕ್ರಿಯಾಯೋಜನೆ ಮಾಡಿಕೊಂಡು ಪುಸ್ತಕದಲ್ಲಿಟ್ಟುಕೊಂಡರೆ ಸಾಲದು. ದುಡಿಯುವ ಕೈಗಳಿಗೆ ಕೆಲಸ ನೀಡುವ ಮೂಲಕ ಮಾನವ ದಿನಗಳನ್ನು ಹೆಚ್ಚಿಸಿ ಕಾರ್ಮಿಕರನ್ನು ಗುಳೆ ಹೋಗುವುದನ್ನು ತಪ್ಪಿಸ ಬೇಕು.
ನರೇಗಾ ಕ್ರಿಯಾ ಯೋಜನೆ, ನರೇಗಾ ಜಾಬ್ ಕಾರ್ಡ್ಗಳಿಗೆ ಆಧಾರ್ ಸೀಡ್, 15 ನೇ ಹಣಕಾಸು ಕ್ರಿಯಾಯೋಜನೆ,ವಿಶ್ವಕರ್ಮ ಯೋಜನೆ,ಕೂಲಿನ ಮನೆ, ವಸತಿ ಯೋಜನೆ, ಬಿಕ್ಷಕರ ಕರ ಪಾವತಿ, ಡಿಸಿಬಿ ಸಂಗ್ರಹ, ಇ-ಹಾಜರಾತಿ, ವ್ಯಾಲೆಟ್ ರೀಚಾರ್ಜ್, ಸೇರಿಂದ ವಿವಿಧ ಯೋಜನೆಗಳನ್ನು ನಿವಗಧಿತ ಸಮಯದೊಳಗೆ ಪೂರ್ಣಗೊಳಿಸುವಂತೆ ಸೂಚನೆ ನೀಡಿದರು.
ಬುಡ್ನಹಟ್ಟಿ ಗ್ರಾಪಂ ಪಿಡಿಒ ಮಲ್ಲೇಶಪ್ಪ ಸಭೆಗೆ ಗೈರು ಯಾರ ಅನುಮ ಪಡೆದು ಹೋಗಿದ್ದಾರೆ ಸಭೆಯ ಮಾಹಿತಿ ಇದ್ದರೂ ಪ್ರಗತಿ ಪರಿಶೀಲನೆಗೆ ಗೈರು ಹಾಜರಿಯಾಗಿರುವ ಬಗ್ಗೆ ನೋಟಿಸ್ ನೀಡುವಂತೆ ತಿಳಿಸುವಂತೆ ಗರಂ ಆದರು.
ಇಂನಿಯರ್‌ಗಳು ಸಭೆಗೆ ಗೈರು ಹಾಜರಿಯಾಗಿರುವುದನ್ನು ಕಂಡು ತಾಲೂಕು ತಾಂತ್ರಿಕ ಆಧಿಕಾರಿ ಇಂಜಿನಯರ್‌ಗಳನ್ನು ಕಂಟೋಲ್ ಇಟ್ಟುಕೊಳ್ಳಲು ಆಗದೆ ಏನು ಕರ್ತವ್ಯ ನಿರ್ವಹಿಸುತ್ತೀರಿ ಎಂದು ಗರಂ ಆದರು.
ದೊಡ್ಡ ಉಳ್ಳಾರ್ತಿ ಪಿಡಿಒ ಯೋಗೇಶ್ ಮಾಹಿತಿ ಸಭೆಗೆ ಮಾಹಿತಿ ತರದೆ ಬಂದಿದ್ದಕ್ಕೆ ಪ್ರಗತಿ ಪರಿಶೀಲಾ ಸಭೆಗೆ ಮಾಹಿತಿ ತರದೆ ಕೈಬಿಸಿ ಕೊಂಡು ಬರುವುದು ಎಷ್ಟು ಸರಿ ಇನ್ನು ದೊಡ್ಡ ಉಳ್ಳಾರ್ತಿ ಕರ್ತವ್ಯ ಆದೇಶ ಪತ್ರಿ ತೆಗೆದುಕೊಂಡು ಹೋಗಿಲ್ಲ ಗೋಪನಹಳ್ಳಿ ಗ್ರಾಪಂ ಕರ್ತವ್ಯ ಮಾಡುತ್ತಿದ್ದು ಈಗ ದೊಡ್ಡ ಉಳ್ಳಾರ್ತಿ ಬೇರೆ. ಈಗಾಗಲೆ ಗೋಪನಹಳ್ಳಿ ಗ್ರಾಪಂ ಕಚೇರಿಯಲ್ಲೂ ಕರ್ತವ್ಯ ನಿರ್ವಹಿಸದೆ ಮೊಬಲ್ ಸುಚ್ಚಾಪ್ ಮಾಡಿಕೊಂಡಾಗ ನನಗೆ ಕರೆ ಮಾಡುತ್ತಾರೆ ನಮಗೆ ಉತ್ತರ ನೀಡಿ ಸಾಕಾಗುತ್ತದೆಸರಿಯಾಗಿ ಕರ್ತವ್ಯ ನಿರ್ವಹಿಸಿದರೆ ಯಾವುದೇ ಸಮಸ್ಯ ಬರುವುದಿಲ್ಲ ಕಚೇರಿಯಿಂದ ಹಾಕಿದ ಮಾಹಿತಿಯನ್ನು ನೋಡಿ ಅದನ್ನು ಪೂರ್ಣಗೊಳಿಸಲು ಆಗದೆ ಇದ್ದರೆ ಏನು ಮಾಡುತ್ತಿರೀ ಎಂದು ಗರಂ ಆದರು.
ನಿಗಧಿತ ಅವಧಿಯೊಳಗೆ ಎಲ್ಲಾ ಯೋಜನೆಗಳ ಮಾಹಿತಿಯನ್ನು ಪೂರ್ಣಗೊಳಿಸ ಬೇಕು ಮತ್ತೆ ಇಂತಹ ಘಟನೆಗಳು ಮರುಕಳಿಸಿದರೆ ಸುಮ್ಮನಿರಲು ಸಾಧ್ಯವಿಲ್ಲ ಒಬ್ಬರಿಬ್ಬರು ಮಾಡಿದ ತಪ್ಪಿಗೆ ಎಲ್ಲರಿಗೆ ಕೆಟ್ಟ ಹೆಸರು ಮುಂದಿನ ಸಭೆಗೆ ಸಂಪೂರ್ಣ ಮಾಹಿತಿಯೊಂದಿಗೆ ಬರಬೇಕು ಎಂದು ತಿಳಿಸಿದರು.
ಸಭೆಯಲ್ಲಿ ನರೇಗಾ ಸಹಾಯಕ ನಿರ್ಧೇಶಕ ಸಂತೋಷ್.ಪಿಆರ್ ಡಿ ಸಹಾಯಕ ನಿರ್ಧೇಶಕ ಸಂಪತ್ ಇತರರಿದ್ದರು.
0 Comments