ಧಾರವಾಡ (ಕರ್ನಾಟಕ ವಾರ್ತೆ) ನ.08: ಅಂಚಟಗೇರಿ ಗ್ರಾಮದ ದೇವರಾಜ ನಗರದ ಹತ್ತಿರ ಇರುವ ಕುದರಿಯವರ ಹಿತ್ತಲದ ಗಿಡದ ಕೆಳಗೆ ನವೆಂಬರ್ 06 ರಂದು ಯಾರೋ ಮಹಿಳೆಯು ಗಂಡು ಶಿಶುವನ್ನು ಯಾರಿಗೂ ಗೊತ್ತಾಗದ ಹಾಗೆ ಬಿಟ್ಟು ಹೋಗಿದ್ದಾಳೆ. ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷರ ಮೌಖಿಕ ಆದೇಶದನ್ವಯ ಮಗುವನ್ನು ಅಮೂಲ್ಯ (ಜಿ) ಶಿಶುಗೃಹ ಸಂಸ್ಥೆಗೆ ತಾತ್ಕಾಲಿಕ ಪಾಲನೆ-ಪೋಷಣೆಗಾಗಿ ದಾಖಲಿಸಲಾಗಿದೆ. ಮಗುವಿನ ಪಾಲಕರು, ಪೋಷಕರ ಕುರಿತು ಯಾವುದೇ ಮಾಹಿತಿ ಲಭ್ಯವಾಗುತ್ತಿಲ್ಲ. ಮಗುವಿನ ಪಾಲಕರು, ಪೋಷಕರ ಕಾನೂನು ರೀತಿ ಹಕ್ಕುಳ್ಳವರು ಎಲ್ಲಿದ್ದರೂ 02 ತಿಂಗಳ ಅವಧಿ ಮುಗಿಯುವದರ ಒಳಗಾಗಿ ಅಮೂಲ್ಯ(ಜಿ) ಶಿಶುಗೃಹ ಹುಬ್ಬಳ್ಳಿ ಅಧೀಕ್ಷಕರನ್ನು ಅಥವಾ ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯನ್ನು ಸಂಪರ್ಕಿಸಬೇಕು, ಒಂದು ವೇಳೆ ಯಾರೂ ವಾರಸದಾರರು ಬಾರದ ಪಕ್ಷದಲ್ಲಿ ಕಾನೂನು ರೀತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
************
0 Comments