ಪೈಪ್ ಲೈನ್ ಕಾಮಗಾರಿಗೆ ಫಲವತ್ತಾದ ಭೂಮಿ ಬರಡು ಸಮತಟ್ಟಿಗಾಗಿ ರೈತ ಕಚೇರಿಗೆ ಅಲೆದಾಟ

by | 25/02/23 | ಜನಧ್ವನಿ

‌‌‌‌
ಚಳ್ಳಕೆರೆ ಜನಧ್ವನಿ ವಾರ್ತೆ ಫೆ.25 ಕುಡಿಯುವ ನೀರಿನ ಪೈಪ್ ಲೈನ್ ಕಾಮಗಾರಿಗೆ ರೈತನ ಫಲವತ್ತಾದ ಭೂಮಿಯನ್ನು ಕೃಷಿ ಚಟುವಟಿಕೆ ಮಾಡಲು ಬಾರದಂತೆ ಮಾಡಿರುವುದು ರೈತನನ್ನು ಸಂಕಷ್ಟಕ್ಕೆ ದೂಡುವಂತೆ ನಾಡಿದೆ. ಹೌದು ಇದು ಚಳ್ಳಕೆರೆ ತಾಲೂಕಿನ ಪರಶುರಾಂಪುರ ಹೋಬಳಿ ವ್ಯಾಪ್ತಿಯ ಪಿ.ಮಹದೇವಪುರ ಗ್ರಾಮದ ರಿ ಸಂ ಸರ್ವೆ ನಂ;125/3 ಜಿ.ವೀರಣ್ಣ s/o ಗಂಗಪ್ಪ ಇವರ ಫಲವತ್ತಾದ ಭೂಮಿಯಲ್ಲಿ ಭದ್ರಾಮೇಲ್ದಂಡೆಯೋಜನೆಯಡಿ ಪೈಪ್ ಲೈನ್ ಕಾಮಗಾರಿ ಮಾಡಲು ಸಂಬಂಧಪಟ್ಟ ಅಧಿಕಾರಿಗಳು ರೈತನಿಂದ ಯಾವುದೇ ಅಗ್ರಿಮೆಂಟ್ ಹಾಗೂ ಅನುಮತಿ ಪಡೆಯದೆ ಫಲವತ್ತಾದ ಭೂಮಿಯಲ್ಲಿ ಅವೈಜ್ಞಾನಿಕ ಪೈಪ್ ಲೈನ್ ಮಾಡಲಾಗಿದ್ದು. ಜಮೀನಿಲ್ಲಿ ರಾಶಿ ರಾಶಿ ಮಣ್ಣು. ಕಲ್ಲು ಮಣ್ಣು ರಾಶಿಬಿದ್ದಿರುವುದು ಪೈಪ್ ಲೈನ್ ನಂತರ ಭೂಮಿ ಸಮತಟ್ಟು ಮಾಡದೆ ಇರುವುದರಿಂದ ಕೈಷಿ ಚಟುವಟಿಕೆ ಹಾಗೂ ಬಿತ್ತನೆ ಮಾಡಲು ಬರದಂತಾಗಿದ್ದು ಭೂಮಿಯನ್ನು ಸಮತಟ್ಟು ಮಾಡಿಸಿಕೊಡುವಂತೆ ಸಂಬಂಧಪಟ್ಟ ಅಧಿಕಾರಿಗಳನ್ನು ಸಂಪರ್ಕಿಸಿ ಸಾಕಷ್ಟು ಬಾರಿ ಕಚೇರಿಗೆ ಅಲೆದಾಡಿದರೂ ಯಾವುದೇ ಪ್ರಯೋಜನವಾಗಿಲ್ಲ.
ರೈತ ಜಿ.ವೀರಣ್ಣ ಮಾತನಾಡಿ
ಭದ್ರಾ ಮೇಲ್ದಂಡೆ ಪೈಪ್ ಲೈನ್ ಕಾಮಗಾರಿಯನ್ನು ರೈತರಿಂದ ಅನುಮತಿಯಿಲ್ಲದೆ ಕಾಮಗಾರಿ ಮಾಡಿದ್ದಾರೆ.ಯೋಜನೆಯ ಕಾಮಗಾರಿ ಪೈಪ್ ಲೈನ್ ನನ್ನ ಜಮೀನಿನಲ್ಲಿ ಹಾಯ್ದು ಹೋಗಿದೆ ಕಾಮಗಾರಿಯ ಪೂರ್ವದಲ್ಲಿ ಇದುವರೆಗೂ ರೈತರಿಗೆ ಯಾವುದೇ ನೋಟೀಸ್ ಮತ್ತು ಅಗ್ರಿಮೆಂಟ್ ಮಾಡಿಕೊಳ್ಳದೆ ಕಾಮಗಾರಿಯನ್ನು ಮಾಡಿರುವುದು ಸರಿಯಲ್ಲ ಆದಾಗ್ಯೂ ಕಾಮಗಾರಿ ಪೂರ್ಣವಾದ ನಂತರ ರೈತರು ಕುಡಿಯುವ ನೀರಿನ ಯೋಜನೆ ಜಾರಿಗಾಗಿ ಎಂದು ಸುಮ್ಮನಾಗಿ ಮಾನವೀಯತೆಯ ದೃಷ್ಟಿಯಿಂದ ಸುಮ್ಮನಾಗಿದ್ದು ಸದರಿ ಕಾಮಗಾರಿಯ ಸ್ಥಳವನ್ನು ಸಮತಟ್ಟು ಮಾಡಿ ಕೊಡುವಂತೆ ಅಧಿಕಾರಿಗಳ ಬಳಿ ಮನವಿ ಮಾಡಿಕೊಂಡರೂವಯಾವುದೇ ಪ್ರಯೋಜನವಾಗಿಲ್ಲ ಕೊ
ಎಇ ಇ ಸನಾವುಲ್ಲ ವರನ್ನು ಕೇಳಿದರೆ ಹಾರಿಕೆಯ ಉತ್ತರ ನೀಡುತ್ತಾರೆ ಇತ್ತ ಪರಿಹಾರವೂ ಇಲ್ಲ ಇತ್ತ ಪೈಪ್ ಲೈನ್ ಕಾಮಗಾರಿಗೆ ಫಲವತ್ತಾದ ಭೂಮಿಯನ್ನು ಹಾಳುಮಾಡಿ ಹೋಗಿದ್ದಾರೆ ಕೂಡಲೆ ಹಾಳು ಮಾಡಿದ ಫಲವತ್ತಾದ ಭೂಮಿಯನ್ನು ಸಮತಟ್ಟು ಮಾಡಿಸುವಂತೆ ರೈತನ ಅಳಲು ಈಗಲಾದರೂ ಸಂಬಂಧಪಟ್ಟ ಅಧಿಕಾರಿಗಳು ರೈತನ ಭೂಮಿ ಸಮತಟ್ಟು ಮಾಡಿಸುವರೇ ಕಾದು ನೋಡ ಬೇಕಿದೆ.

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *