ಪುಸ್ತಕ

ಬುದ್ಧನ ವಿಚಾರಧಾರೆಗಳನ್ನು ಇಂದಿನ ಯುವ ಪೀಳಿಗೆ ಅಳವಡಿಸಿಕೊಂಡರೆ ಸಮಾಜದಲ್ಲಿ ಸಹಬಾಳ್ವೆಯ ಜೀವನ ನಡೆಸಲು ಸಾಧ್ಯ ಡಾ. ಬಿ ರಾಜಶೇಖರಪ್ಪ 

ಚಳ್ಳಕೆರೆ: ಬುದ್ಧನು ದೊಡ್ಡದಾಗಿ ಉಪದೇಶವನ್ನು ಮಾಡದೆ ಸಣ್ಣ ಸಣ್ಣ ವಿಚಾರಗಳನ್ನು ಜನರಿಗೆ ಮನಮುಟ್ಟುವಂತೆ ತಿಳಿಸಿ ಸಮಾಜದಲ್ಲಿ ಶಾಂತಿ ಸಹ ಬಾಳ್ವೆಯ ಜೀವನ ನಡೆಸಲು ತನ್ನ ಬೋಧನೆಗಳ ಮೂಲಕ ಕರೆ ನೀಡಿದ ಮಾನವತವಾದಿ ಎಂದು ಹಿರಿಯ ಸಂಶೋಧಕ ಡಾ ಬಿ ರಾಜಶೇಖರಪ್ಪ ಅಭಿಪ್ರಾಯ ಪಟ್ಟರು. 

ತಾಲೂಕಿನ ತ್ಯಾಗರಾಜ ನಗರದಲ್ಲಿ ಹುಣ್ಣಿಮೆ ಪ್ರಕಾಶನ ಮತ್ತು ಪ್ರೀತಿ ಪುಸ್ತಕ ಪ್ರಕಾಶನ ಸಹಯೋಗದಲ್ಲಿ ಜಿ ವಿ ಆನಂದಮೂರ್ತಿರವರ ಬುದ್ಧನ ಕಥೆಗಳು ಎಂಬ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದ ಅವರು ಗೌತಮ ಬುದ್ಧನು ತನ್ನ ವಿಚಾರಧಾರೆಗಳಿಂದ ಸರ್ವಧರ್ಮದ ಪ್ರತಿನಿಧಿಯಾಗಿ ಹೊರಹೊಮ್ಮಿದ ವ್ಯಕ್ತಿಯಾಗಿದ್ದಾರೆ ಯಾವುದೇ ಜಾತಿ ಮತ ಧರ್ಮದ ಭೇದ ಭಾವ ಇರಬಾರದು ದ್ವೇಷ ಭಾವನೆಯಿಂದ ಏನನ್ನು ಸಾಧಿಸಲು ಸಾಧ್ಯವಿಲ್ಲ ಎಂಬುದನ್ನು ಸಾರಿದ್ದಾರೆ ಆನಂದ ಮೂರ್ತಿಯವರು ತಮ್ಮ ಕೃತಿಯಾದ ಬುದ್ಧನ ಕಥೆಗಳು ಪುಸ್ತಕದಲ್ಲಿ ಬುದ್ಧನು ಬೋಧಿಸಿದ ತತ್ವಗಳನ್ನು ನಾವೆಲ್ಲರೂ ತಿಳಿದುಕೊಂಡಿದ್ದರು ಸಹ ಓದುಗರಿಗೆ ಸರಳವಾಗಿ ಬುದ್ಧನ ವ್ಯಕ್ತಿತ್ವವನ್ನು ಪರಿಚಯಿಸಿದ್ದಾರೆ ಎಂದರು. 


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಿನಿಮಾ ಇತಿಹಾಸಕಾರ ಹಾಗೂ ಪತ್ರಕರ್ತ ದೊಡ್ಡ ಹುಲ್ಲೂರು ರುಕ್ಕೋಜಿ ಮಾತನಾಡಿ ಗಾಂಧಿ ಬುದ್ಧ ಅಂಬೇಡ್ಕರ್ ರವರು ತಮ್ಮ ಸರಳ ವ್ಯಕ್ತಿತ್ವದ ಮೂಲಕ ಸಮಾಜಕ್ಕೆ ಉತ್ತಮವಾದ ಸಂದೇಶವನ್ನು ಸಾರಿದ್ದಾರೆ ನಮ್ಮ ನಡವಳಿಕೆಗಳಿಂದ ಬೇರೆಯವರಿಗೆ ತೊಂದರೆ ಆಗದಂತೆ ನಡೆದುಕೊಂಡಾಗ ಮಾತ್ರ ವ್ಯಕ್ತಿಗೆ ಉತ್ತಮವಾದ ಗೌರವ ದೊರೆಯುತ್ತದೆ ಎಂದು ತಿಳಿಸಿದರು. 

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಖ್ಯಾತ ವಿಚಾರವಾದಿ ಮತ್ತು ಪರಿಸರ ಕಾರ್ಯಕರ್ತರಾದ ಡಾ. ಎಚ್ ಆರ್ ಸ್ವಾಮಿ ಮಾತನಾಡಿ ಗೌತಮ ಬುದ್ಧರು ಯಾವುದೇ ವಿಚಾರವನ್ನು ತಿಳಿಸುವ ಮುನ್ನ ಪರಿಶೀಲಿಸಿ, ಪರಾಮರ್ಶಿಸಿ ಅವಲೋಕಿಸಿ ಜನರಿಗೆ ಸರಳ ರೀತಿಯಲ್ಲಿ ತಿಳಿಸುತ್ತಿದ್ದರು ಇತ್ತೀಚಿನ ದಿನಗಳಲ್ಲಿ ಕೊಳ್ಳುಬಾಕ ಸಂಸ್ಕೃತಿ ಹೆಚ್ಚಾಗುತ್ತಿದ್ದು ಇದರಿಂದ ಸಮಾಜದ ಸ್ವಾಸ್ಥ್ಯ ಕದಡುತ್ತಿದೆ ಗೌತಮ ಬುದ್ಧರು ತಮ್ಮ ಶಾಂತಚಿತ್ತದಿಂದ ಸಮಸ್ಯೆಗಳನ್ನು ಬಗೆಹರಿಸಿದ ಕಥೆಗಳನ್ನು ನಾವು ಓದಿದ್ದೇವೆ ಒಬ್ಬ ವ್ಯಕ್ತಿ ತನಗೆ ಎದುರಾದ ಯಾವುದೇ ಕಷ್ಟಗಳನ್ನು ಹೇಗೆ ಪರಿಹರಿಸಿಕೊಳ್ಳಬೇಕು ಎಂಬುದನ್ನು ತಿಳಿಯಲು ಬುದ್ಧನ ವಿಚಾರಧಾರೆಗಳನ್ನು ತಿಳಿದಾಗ ಮಾತ್ರ ಆ ವ್ಯಕ್ತಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಾಧ್ಯ. 

ಇತ್ತೀಚಿನ ದಿನಗಳಲ್ಲಿ ಜೈಲಿಗೆ ಹೋಗಿ ಬಂದವರನ್ನು ಸಹ ಸನ್ಮಾನ ಮಾಡುತ್ತಿರುವುದನ್ನು ನೋಡಿದರೆ ಮುಂದಿನ ಪೀಳಿಗೆಗೆ ಯಾವ ರೀತಿಯ ಸಂದೇಶ ನೀಡುತ್ತಿದ್ದೇವೆ ಎಂಬುದು ಕಳವಳಕಾರಿಯಾದ ವಿಷಯವಾಗಿದೆ ಇಂದಿನ ಸಮಾಜದಲ್ಲಿ ಆದರ್ಶಗಳು ಮೌಲ್ಯಗಳು ಕುಸಿಯುತ್ತಿರುವುದರಿಂದ ನಮ್ಮಲ್ಲಿ ಮೊದಲು ಬುದ್ಧನ ಸಣ್ಣ ಸಣ್ಣ ವಿಚಾರಧಾರೆಗಳನ್ನು ಅಳವಡಿಸಿಕೊಳ್ಳುವ ಮೂಲಕ ಆದರ್ಶಪ್ರಾಯವಾದ ಬದುಕನ್ನು ಕಟ್ಟಿಕೊಳ್ಳಲು ಪ್ರಯತ್ನಿಸಬೇಕಿದೆ ಎಂದು ಕರೆ ನೀಡಿದರು. 

ಈ ಸಂದರ್ಭದಲ್ಲಿ ಲೇಖಕರಾದ ಜಿವಿ ಆನಂದಮೂರ್ತಿ ಕಾರ್ಯಕ್ರಮದ ಸಂಯೋಜಕರಾದ ಎನ್ಆರ್ ತಿಪ್ಪೇಸ್ವಾಮಿ ನಿಸರ್ಗ ಗೋವಿಂದರಾಜು ಸೇರಿದಂತೆ ಹಲವು ಸಾಹಿತ್ಯಾಸಕ್ತರು ಭಾಗವಹಿಸಿದ್ದರು.

ಜಿಲ್ಲಾ ಗ್ರಂಥಾಲಯ ಪ್ರಾಧಿಕಾರ ಆಯ-ವ್ಯಯ ಸಭೆ ಮಕ್ಕಳಲ್ಲಿ ಧನಾತ್ಮಕ ಚಿಂತನೆ ಬೆಳೆಸಲು ಪುಸ್ತಕ ಓದುವ ಹವ್ಯಾಸ ರೂಢಿಸಿ- ದಿವ್ಯಪ್ರಭು ಜಿ.ಆರ್.ಜೆ.

ಚಿತ್ರದುರ್ಗ
ಇಂದಿನ ಮಕ್ಕಳಲ್ಲಿ ಧನಾತ್ಮಕ ಚಿಂತನೆಗಳನ್ನು ಬೆಳೆಸಲು, ಅವರು ಪುಸ್ತಕಗಳನ್ನು ಓದುವಂತಹ ಹವ್ಯಾಸ ರೂಢಿಸುವುದು ಅಗತ್ಯವಾಗಿದೆ ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ. ಅವರು ಹೇಳಿದರು.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಶುಕ್ರವಾರ ಏರ್ಪಡಿಸಿದ ಜಿಲ್ಲಾ ಗ್ರಂಥಾಲಯ ಪ್ರಾಧಿಕಾರದ ಆಯ-ವ್ಯಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಕೆಎಮ್‍ಇಆರ್‍ಸಿ ಅನುದಾನದಲ್ಲಿ ಚಿತ್ರದುರ್ಗ ಜಿಲ್ಲಾ, ನಗರ ಗ್ರಂಥಾಲಯಗಳ ವಿಸ್ತರಣೆ ಹಾಗೂ ಮೂಲಭೂತ ಸೌಕರ್ಯಗಳ ಅನುಷ್ಠಾನಕ್ಕೆ 8. 22 ಕೋಟಿ ರೂ. ಗಳಿಗೆ ಗ್ರಂಥಾಲಯ ಇಲಾಖೆ ಪ್ರಸ್ತಾವನೆ ಸಿದ್ಧಪಡಿಸಿ ಸಲ್ಲಿಸಿದ್ದು, ಹೆಚ್ಚಿನ ಜನರು, ಮಕ್ಕಳು ಗ್ರಂಥಾಲಯಗಳಿಗೆ ಸ್ವಯಂ ಪ್ರೇರಿತವಾಗಿ ಬರುವಂತಾಗಬೇಕು, ಮಕ್ಕಳು ಗ್ರಂಥಾಲಯಗಳತ್ತ ಆಕರ್ಷಿತರಾಗಬೇಕು ಈ ದಿಸೆಯಲ್ಲಿ ಪ್ರಸ್ತಾವನೆಯಲ್ಲಿ ಬದಲಾವಣೆ ಅಗತ್ಯವಿದ್ದರೆ, ಮಾಡಿಕೊಡಲಾಗುವುದು ಎಂದು ಜಿಲ್ಲಾಧಿಕಾರಿಗಳು ಹೇಳಿದರು.
ಇಂದಿನ ಯುವಪೀಳಿಗೆ ಮೊಬೈಲ್ ಅನ್ನೇ ತಮ್ಮ ಲೋಕವಾಗಿಸಿಕೊಂಡು, ಓದುವ ಹಾಗೂ ಬರೆಯುವ ಹವ್ಯಾಸ ಮರೆಯುತ್ತಿದ್ದಾರೆ, ಇತ್ತೀಚೆಗೆ ಮೊಬೈಲ್‍ನಲ್ಲಿ ಮಾತನಾಡುವುದನ್ನೂ ಕೂಡ ಕಡಿಮೆಯಾಗಿಸಿ, ಇತರೆ ಚಟುವಟಿಕೆಗಳಿಗೆ ಮೊಬೈಲ್‍ಗಳ ಬಳಕೆ ಹೆಚ್ಚಾಗುತ್ತಿದೆ. ಇದರ ಜೊತೆಗೆ ಕುಟುಂಬ ಸಂಬಂಧಗಳನ್ನು ಕೂಡ ನಿರ್ಲಕ್ಷಿಸುತ್ತಿದ್ದಾರೆ. ಇದು ಮಕ್ಕಳಲ್ಲಿ ಧನಾತ್ಮಕತೆಗಿಂತಲೂ ನಕಾರಾತ್ಮಕ ಚಿಂತನೆಗಳಿಗೇ ಹೆಚ್ಚು ಅವಕಾಶವಾಗುತ್ತಿದೆ. ದೇಶದ ಆರೋಗ್ಯಪೂರ್ಣ ಭವಿಷ್ಯದ ದೃಷ್ಟಿಯಿಂದ ಇದು ಒಳ್ಳೆಯ ಬೆಳೆವಣಿಗೆಯಲ್ಲ. ಹೀಗಾಗಿ ಇಂತಹ ಯುವಪೀಳಿಗೆಯಲ್ಲಿ ಸಾಮಾಜಿಕ ಬದಲಾವಣೆ ಹಾಗೂ ಸೃಜನಾತ್ಮಕ ಹವ್ಯಾಸಗಳನ್ನು ಪುನರಾರಂಭಿಸಲು, ಅವರನ್ನು ಪುಸ್ತಕಗಳತ್ತ ಆಕರ್ಷಿಸಬೇಕಿದೆ. ಒಮ್ಮೆ ಮಕ್ಕಳು ಪುಸ್ತಕಗಳ ಓದಿನತ್ತ ಆಕರ್ಷಿತರಾದರೆ, ಅವರನ್ನು ತಡೆಯಲು ಸಾಧ್ಯವಿಲ್ಲ. ಊರಿನಲ್ಲಿ ಉತ್ತಮ ಗ್ರಂಥಾಲಯ ಇದ್ದ ಕಾರಣ, ಬಿಡುವಿನ ವೇಳೆ ಹೆಚ್ಚು ಕಾಲ ಗ್ರಂಥಾಲಯದಲ್ಲೇ ಕಾಲ ಕಳೆಯುತ್ತಿದ್ದೆ, ಹೆಚ್ಚು ಹೆಚ್ಚು ಪುಸ್ತಕಗಳನ್ನು ಓದಲು ಅವಕಾಶ ದೊರೆತಿದ್ದರಿಂದಲೇ ನಾನು ಐಎಎಸ್ ಉತ್ತೀರ್ಣರಾಗಿ, ಉನ್ನತ ಸ್ಥಾನಕ್ಕೆ ಬರಲು ಸಾಧ್ಯವಾಯಿತು ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ಅವರು ತಮ್ಮ ಓದಿನ ದಿನಗಳನ್ನು ನೆನಪಿಸಿಕೊಂಡರು.
ಈ ದಿಸೆಯಲ್ಲಿ ಗ್ರಂಥಾಲಯಗಳನ್ನು ಆಕರ್ಷಣೀಯವಾಗಿಸಿ, ಅವರನ್ನು ಪುಸ್ತಕಗಳು, ಪತ್ರಿಕೆಗಳ ಓದುವಿಕೆಗೆ ಪ್ರಚೋದನೆ ಹಾಗೂ ಪ್ರೇರಣೆ ನೀಡಬೇಕಿದೆ. ಗ್ರಂಥಾಲಯಗಳಲ್ಲಿ ಕೇವಲ ಪುಸ್ತಕ, ಪತ್ರಿಕೆಗಳನ್ನು ಇರಿಸಿ ಮಕ್ಕಳನ್ನು ಆಕರ್ಷಿಸಲು ಸಾಧ್ಯವಿಲ್ಲ. ಹೀಗಾಗಿ ಗ್ರಂಥಾಲಯಗಳಲ್ಲಿ ಕೇರಂ, ಚೆಸ್ ನಂತಹ ಸೃಜನಶೀಲ ಆಟಗಳ ಕಲಿಕೆಗೆ ಗೇಮ್ ಪಾರ್ಕ್, ಬಯಲಿನಲ್ಲಿಯೇ ತಮಗಿಷ್ಟವಾದ ಪುಸ್ತಕಗಳನ್ನು ಇಷ್ಟಪಟ್ಟು ಓದುವ ರೀತಿ ವಾತಾವರಣ ಸೃಷ್ಟಿಸಬೇಕಿದೆ. ಮಕ್ಕಳಲ್ಲಿ ಆಳ ಅಧ್ಯಯನದ ಸಂಸ್ಕøತಿಯನ್ನು ನಾವು ಬೆಳೆಸಬೇಕು, ಅಂತಹದೇ ವಾತಾವರಣವನ್ನು ಪಾಲಕರು ಮನೆಗಳಲ್ಲಿಯೂ ಸೃಷ್ಟಿಸಬೇಕು, ಅದನ್ನು ಬಿಟ್ಟು ಪಾಲಕರೇ ಟಿ.ವಿ., ಮೊಬೈಲ್‍ನಲ್ಲಿ ಸಕ್ರಿಯರಾದರೆ, ಮಕ್ಕಳು ಕೂಡ ಅದನ್ನೇ ಅನುಸರಿಸುತ್ತಾರೆ. ಶಾಲೆಗಳಲ್ಲಿ ಪ್ರತಿ ವಾರಕ್ಕೊಮ್ಮೆ ಒಂದು ಗಂಟೆ ಮಕ್ಕಳನ್ನು ಗ್ರಂಥಾಲಯಕ್ಕೆ ಕರೆದುಕೊಂಡು ಹೋಗಿ, ಅಲ್ಲಿನ ಪುಸ್ತಕಗಳ ಪರಿಚಯ ಮಾಡಿಸಿ, ಅವರನ್ನು ಓದಲು ಪ್ರೇರಣೆ ನೀಡುವಂತಾಗಬೇಕು. ಈ ಬಗ್ಗೆ ಸುತ್ತೋಲೆ ಹೊರಡಿಸಿ, ಶಿಕ್ಷಕರಿಗೆ ಸೂಚನೆ ನೀಡುವಂತೆ ಇದೇ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳು ಡಿಡಿಪಿಐ ರವಿಶಂಕರರೆಡ್ಡಿ ಅವರಿಗೆ ತಿಳಿಸಿದರು.
ಗ್ರಂಥಾಲಯ ಸೆಸ್ ಬಾಕಿ :
********ಮುಖ್ಯ ಗ್ರಂಥಾಲಯ ಅಧಿಕಾರಿ ತಿಪ್ಪೇಸ್ವಾಮಿ ಅವರು ಮಾತನಾಡಿ, ಜಿಲ್ಲೆಯ ವಿವಿಧ ನಗರಸಭೆ, ಪುರಸಭೆ, ಪಟ್ಟಣ ಪಂಚಾಯತಿಗಳಿಂದ 2022 ರ ಏಪ್ರಿಲ್‍ನಿಂದ 2023 ರ ಜನವರಿ ಅಂತ್ಯದವರೆಗೆ ಒಟ್ಟಾರೆ 47.60 ಲಕ್ಷ ರೂ. ಗ್ರಂಥಾಲಯ ಕರ ವಸೂಲಾತಿ ಆಗಿದೆ. ಈ ಪೈಕಿ ಹೊಸದುರ್ಗ ಪುರಸಭೆಯಿಂದ ಅತಿ ಹೆಚ್ಚು 6.66 ಲಕ್ಷ ರೂ. ಪಾವತಿಯಾಗಿದೆ. ನಾಯಕನಹಟ್ಟಿ ಪಟ್ಟಣ ಪಂಚಾಯತಿಯಿಂದ ಕೇವಲ 93405 ರೂ. ಮಾತ್ರ ಗ್ರಂಥಾಲಯ ಕರ ವಸೂಲಾತಿಯಾಗಿದೆ. ಉಳಿದಂತೆ 09 ಗ್ರಾಮ ಪಂಚಾಯತಿಗಳಿಂದ ಬಾಕಿ 2.09 ಲಕ್ಷ ರೂ. ಪಾವತಿಯಾಗಿದೆ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಗಳು, ಗ್ರಂಥಾಲಯ ಕರ ಪಾವತಿ ಮಾಡುವುದು ಬಾಕಿ ಇರುವಂತಹ ನಗರ, ಸ್ಥಳೀಯ ಸಂಸ್ಥೆಗಳಿಗೆ ನೋಟಿಸ್ ಜಾರಿ ಮಾಡಬೇಕು, ಹಾಗೂ ತ್ವರಿತವಾಗಿ ಪಾವತಿಸಲು ಸೂಚನೆ ನೀಡಬೇಕು ಎಂದು ಸೂಚನೆ ನೀಡಿದರು.
ಬಸ್‍ನಿಲ್ದಾಣಗಳಲ್ಲಿ ಗ್ರಂಥಾಲಯ :
*************ಜಿಲ್ಲೆಯಲ್ಲಿ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣಗಳು, ಸರ್ಕಾರಿ ಆಸ್ಪತ್ರೆಗಳು, ಜಿಲ್ಲಾಧಿಕಾರಿಗಳ ಕಚೇರಿ, ತಹಸಿಲ್ದಾರರ ಕಚೇರಿ ಸೇರಿದಂತೆ ಜನರು ಹೆಚ್ಚಾಗಿ ಸೇರುವಂತಹ ಸ್ಥಳಗಳು ಹಾಗೂ ತಮ್ಮ ಕಾರ್ಯಗಳಿಗಾಗಿ ಕೆಲ ಕಾಲ ಕಾಯುವಂತಹ ಸ್ಥಳಗಳನ್ನು ಗುರುತಿಸಿ, ಅಲ್ಲಿ ಒಂದಷ್ಟು ಪುಸ್ತಕಗಳು, ನಿಯತಕಾಲಿಕೆಗಳನ್ನು ಇರಿಸಲು ಸೂಕ್ತ ವ್ಯವಸ್ಥೆ ಮಾಡಬೇಕು, ಸಾರ್ವಜನಿಕರು ಕುಳಿತು ಅಥವಾ ನಿಂತು ಓದುವಂತಹ ವಾತಾವರಣ ಕಲ್ಪಿಸಬೇಕು. ಈ ಕಾರ್ಯದಿಂದ ಕೆಲವರಲ್ಲಾದರೂ ಪುಸ್ತಕ ಓದುವ ಹವ್ಯಾಸ ಬೆಳೆಯಲಿ ಎಂದು ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.
ವಿದ್ಯಾರ್ಥಿಗಳ ಅಭಿಪ್ರಾಯ ಪಡೆಯಿರಿ :
********** ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವ ಕುರಿತು ವಿವಿಧ ಬಗೆಯ ಪುಸ್ತಕಗಳನ್ನು ಗ್ರಂಥಾಲಯಗಳಿಗಾಗಿ ಖರೀದಿಸಲಾಗುತ್ತಿದೆ. ಐಎಎಸ್, ಐಪಿಎಸ್, ಕೆಎಎಸ್, ಬ್ಯಾಂಕಿಂಗ್, ಪೊಲೀಸ್, ರೈಲ್ವೆ ಮುಂತಾದ ಹುದ್ದೆಗಳಿಗೆ ಮಕ್ಕಳು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ತೆಗೆದುಕೊಳ್ಳುತ್ತಾರೆ. ಅವರಿಗೆ ಎಂತಹ ಪುಸ್ತಕಗಳು ಬೇಕಾಗುತ್ತದೆ ಎಂಬುದನ್ನು ಹಾಸ್ಟೆಲ್ ಮಕ್ಕಳು, ಉನ್ನತ ವ್ಯಾಸಂಗ ಮಾಡುವಂತಹ ಮಕ್ಕಳಿಂದ ಅಭಿಪ್ರಾಯ ಪಡೆಯಬೇಕು, ಸಾಧ್ಯವಾದಲ್ಲಿ ಕೋಚಿಂಗ್ ಸೆಂಟರ್‍ಗಳಿಗೆ ಭೇಟಿ ನೀಡಿ ಅಲ್ಲಿನ ವಿದ್ಯಾರ್ಥಿಗಳಿಂದಲೂ ಅಭಿಪ್ರಾಯ ಸಂಗ್ರಹಿಸಿ, ಹೆಚ್ಚು ಬೇಡಿಕೆ ಬರುವಂತಹ, ಹೆಚ್ಚು ಉಪಯುಕ್ತವೆನಿಸುವಂತಹ ಪುಸ್ತಕಗಳನ್ನು ಖರೀದಿಸಿ, ಗ್ರಂಥಾಲಯಗಳಲ್ಲಿ ಇರಿಸಿದರೆ, ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ. ಇದರಿಂದ ಜಿಲ್ಲೆಯ ಹೆಚ್ಚು ಹೆಚ್ಚು ಅಭ್ಯರ್ಥಿಗಳು ಐಎಎಸ್, ಐಪಿಎಸ್ ಮುಂತಾದ ಉನ್ನತ ಹುದ್ದೆಗಳಿಗೆ ಆಯ್ಕೆಯಾಗುವಂತಾಗಲಿ ಎಂದು ಜಿಲ್ಲಾಧಿಕಾರಿಗಳು ಹೇಳಿದರು.
ಸಭೆಯಲ್ಲಿ ಮುಖ್ಯ ಗ್ರಂಥಾಲಯಾಧಿಕಾರಿ ತಿಪ್ಪೇಸ್ವಾಮಿ, ಡಿಡಿಪಿಐ ರವಿಶಂಕರರೆಡ್ಡಿ, ಸೇರಿದಂತೆ ಜಿಲ್ಲಾ ಗ್ರಂಥಾಲಯ ಸಮಿತಿಯ ಸದಸ್ಯರುಗಳಾದ ಲೋಕೇಶ್, ಶೈಲಜಾ, ಕೆ. ರಂಗಪ್ಪ, ರೇವಣಸಿದ್ದಪ್ಪ, ತಿಪ್ಪೇಸ್ವಾಮಿ, ಲಿಂಗರಾಜು, ಸುರೇಶ್ ಉಗ್ರಾಣ, ನಾಗರತ್ನ, ಬಸವರಾಜ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

ಪ್ರಸ್ತುತ ಸಮಾಜಕ್ಕೆ ಕುಟುಂಬ ಪ್ರೀತಿ ಮತ್ತು ಮಾನವೀಯ ಬೆಸೆಯುವ ಸಾಹಿತ್ಯ ಅಗತ್ಯವಿದೆ ಎಂದು ಶಾಸಕ ಟಿ. ರಘುಮೂರ್ತಿ.

ಚಳ್ಳಕೆರೆ ;
ಪ್ರಸ್ತುತ ಸಮಾಜಕ್ಕೆ ಕುಟುಂಬ ಪ್ರೀತಿ ಮತ್ತು ಮಾನವೀಯ ಬೆಸೆಯುವ ಸಾಹಿತ್ಯ ಅಗತ್ಯವಿದೆ ಎಂದು ಶಾಸಕ ಟಿ. ರಘುಮೂರ್ತಿ ಹೇಳಿದರು.
ನಗರದ ರೋಟರಿ ಬಾಲ ಭವನದಲ್ಲಿ ಭಾನುವಾರ ತನುಶ್ರೀ ಸಾಹಿತ್ಯ ಸಾಂಸ್ಕೃತಿಕ ಕಲಾ ವೇದಿಕೆ ಹಮ್ಮಿಕೊಂಡಿದ್ದ ಸಾಹಿತ್ಯ ಸಂಭ್ರಮ ಕಾರ್ಯಕ್ರಮದಲ್ಲಿ ಕವಯತ್ರಿ ಕೆ.ಆರ್. ಅನಿತಾ ಅವರ ‘ನನ್ನೊಳಗಿನ ದನಿ’ ಶುಭವಿಷ್ಣು ಸಭಾಹಿತ ಅವರ ‘ಕಂಗಳ ಬೆಳದಿಂಗಳು’ ಬಸವರಾಜ್ ಪೂಜಾರ್ ಅವರ ‘ರೈತರ ನೋವಿನ ಹನಿಗಳು’ ಕೆ.ಬಿ. ರವಿಕುಮಾರ್ ಅವರ ‘ಒಡಲಾಳ ನುಡಿಯೊಡೆದು’ ಕವನ ಸಂಕಲನಗಳನ್ನು ಲೋಕಾರ್ಪಣೆ ಮಾಡಿ ಮಾತನಾಡಿದರು.
ಸಾಹಿತ್ಯ ರಚನೆಯಿಂದ ಸಾಮಾಜಿಕ ಬದಲಾವಣೆ ತರಲು ಸಾಧ್ಯ. ಸಾಮಾನ್ಯ ಜನರ ನೋವು ತನ್ನದೆನ್ನುವ ರೀತಿಯಲ್ಲಿ ಸಾಹಿತ್ಯ ಹುಟ್ಟಿಕೊಳ್ಳಬೇಕು. ಸಮಾಜದಲ್ಲಿನ ಅಸಮಾನತೆ ತೊಡೆದು ಹಾಕುವ ಮತ್ತು ಮನಶಾಂತಿಗೊಳಿಸುವ ಸೃಜನಶೀಲ ಸಾಹಿತ್ಯವನ್ನು ಸಮಾಜ ಉಳಿಸಿಕೊಳ್ಳುತ್ತದೆ ಎಂದು ಹೇಳಿದರು.
ಸಾಹಿತಿ ತಿಪ್ಪಣ್ಣ ಮರಿಕುಂಟೆ ಮಾತನಾಡಿ, ಸಮಾಜದಲ್ಲಿ ಎದುರಾಗುವ ನೋವು ದುಮ್ಮಾನಗಳಿಗೆ ಮನ ಕುಂದಬಾರದು. ತನ್ನಲ್ಲಿನ ಆತ್ಮಸ್ಥೆöÊರ್ಯವನ್ನು ಸಮಾಜಮುಖಿಯಾಗಿ ಬಲಗೊಳಿಸಿಕೊಂಡು ಸಾಧಕರಾಗಿ ಬೆಳೆಯಬೇಕು. ಸಾಹಿತ್ಯ ಅಭಿರುಚಿ ಲೋಕ ಮತ್ತು ಬದುಕನ್ನು ಪರಿಚಯಿಸುತ್ತದೆ. ಬದುಕಿನ ಗಂಭೀರ ಸಮಸ್ಯೆಗಳನ್ನು ಒಳಗಣ ್ಣನ ನೋಟದಲ್ಲಿ ಸಮದೂಗಿಸಿಕೊಳ್ಳುವ ಚಿಂತನೆ ರೂಢಿಸಿಕೊಳ್ಳಬೇಕು ಎಂದು ಯುವ ಬರಹಗಾರರಿಗೆ ಕಿವಿಮಾತು ಹೇಳಿದರು.
ತಹಸೀಲ್ದಾರ್ ಎನ್. ರಘುಮೂರ್ತಿ ಮಾತನಾಡಿ, ತಾಲೂಕಿನ ತಳುಕಿನ ಟಿ.ಎಸ್. ವೆಂಕಣ್ಣಯ್ಯ, ತರಾಸು, ಬೆಳಗೆರೆ ಮನೆತನದ ಜಾನಕಮ್ಮ, ಕೃಷ್ಣಶಾಸ್ತಿçಗಳು ಸಾಹಿತ್ಯ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಅವರ ನೆಲೆಯಲ್ಲಿ ಸಾಹಿತ್ಯ ಮತ್ತು ಸಾಂಸ್ಕೃತಿಕ ಶ್ರೀಮಂತಿಕೆಯ ವಾರಸುದಾರಿಕೆಯಾಗಿ ಬರಹಗಾರರ ಮನಸ್ಸುಗಳು ಬೆಳೆಯುತ್ತಿವೆ. ಸಮಾಜದಲ್ಲಿ ಸಾಹಿತ್ಯ ಕಾರ್ಯ ಚಟುವಟಿಕೆಗಳಿಗೆ ಅವಕಾಶ ಮತ್ತು ಪ್ರೋತ್ಸಾಹ ಇರುವುದಿಲ್ಲ. ಆದರೆ, ಬದುಕಿನ ಸಮಸ್ಯೆಗಳ ನಡುವೆ ತನ್ನನ್ನು ತಾನು ಸಾಹಿತ್ಯಾಭಿರುಚಿಯಲ್ಲಿ ತೊಡಗಿ, ಬರವಣ ಗೆಯ ಅಂತಃಸತ್ವದಿAದ ಸಮಾಜ ಗುರುತಿಸುವ ರೀತಿಯಲ್ಲಿ ಆದರ್ಶ ಸಾಧಕರಾಗಬೇಕು ಎಂದು ಹೇಳಿದರು.
ಸಮಾರಂಭದ ಅಧ್ಯಕ್ಷತೆ ಗಣಪತಿ ಗೋ ಚಲವಾದಿ ವಹಿಸಿಕೊಂಡಿದ್ದರು. ಕವಿ ಎಸ್.ರಾಜು ಸೂಲೇನಹಳ್ಳಿ, ಪತ್ರಕರ್ತರಾದ ಕೊಂಡ್ಲಹಳ್ಳಿ ಜಯಪ್ರಕಾಶ್, ರಾಮಾಂಜಿನೇಯ, ಶುಭವಿಷ್ಣು, ಡಾ.ಶಫೀವುಲ್ಲಾ, ಲೋಕೇಶ್ ಪಲ್ಲವಿ, ಶ್ರೀರಾಯುಲು, ಶಿವಮೂರ್ತಿ, ಚಿದಾನಂದ ಮೂರ್ತಿ, ಆರ್. ತಿಪ್ಪೇಸ್ವಾಮಿ, ರಂಗಸ್ವಾಮಿ ಮತ್ತಿತರರು ಇದ್ದರು.
ಪ್ರಶಸ್ತಿ: ಕಾರ್ಯಕ್ರಮದಲ್ಲಿ ಸಾಹಿತಿ ತಿಪ್ಪಣ್ಣ ಮರಿಕುಂಟೆ ಅವರಿಗೆ ತನುಶ್ರೀ ಜೀವ ಸಮ್ಮಾನ, ಎಂ.ಕೆ. ಶೇಖ್ ಸಾಧಕರತ್ನ, ಹಜರತ್ ಅಲಿ ಕಲಾರತ್ನ, ಅರ್ಚನಾ ಎನ್.ಪಾಟೀಲ್ ತ್ರಿವೇಣ ರತ್ನ ಪುರಸ್ಕಾರ, ಅನಂತ್ ಕುಣ ಗಲ್ ಅವರಿಗೆ ತನುಶ್ರೀ ಕಾವ್ಯರತ್ನ ನೀಡಿ ಗೌರವಿಸಲಾಯಿತು.

ಸಾಹಿತ್ಯ ಸಂಸ್ಕಾರ ಸಮಾಜದ ಬದುಕನ್ನು ಅರ್ಥೈಸಿಕೊಳ್ಳುವ ಮಹಾಶಕ್ತಿಯಾಗಿದೆ ಎಂದು ಹಿರಿಯ ಕತೆಗಾರ ತಿಪ್ಪಣ್ಣ ಮರಿಕುಂಟೆ ಹೇಳಿದರು.

ಚಳ್ಳಕೆರೆ ನವಂಬರ್12.
ಸಾಹಿತ್ಯ ಸಂಸ್ಕಾರ ಸಮಾಜದ ಬದುಕನ್ನು ಅರ್ಥೈಸಿಕೊಳ್ಳುವ ಮಹಾಶಕ್ತಿಯಾಗಿದೆ ಎಂದು ಹಿರಿಯ ಕತೆಗಾರ ತಿಪ್ಪಣ್ಣ ಮರಿಕುಂಟೆ ಹೇಳಿದರು.
ತಾಲೂಕಿನ ದೇವರಮರಿಕುಂಟೆ ಗ್ರಾಮದಲ್ಲಿ ಶನಿವಾರ ಗ್ರಾಮೀಣ ಸಾಹಿತ್ಯ ಪರಿಷತ್ತು ವತಿಯಿಂದ ಹಮ್ಮಿಕೊಂಡಿದ್ದ ನೆನಪು ಮಾಸಿಕ ಕಾರ್ಯಕ್ರಮ ಮತ್ತು ಕವಿ ಕರ‍್ಲಕುಂಟೆ ತಿಪ್ಪೇಸ್ವಾಮಿ ಅವರ ಭಾವರೂಪ ಕವನ ಸಂಕಲನ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ತಾಲೂಕಿನಲ್ಲಿ ಸಾಹಿತ್ಯ ಸಾಂಸ್ಕೃತಿಕ ನೆಲೆಗಟ್ಟಿನ ಪರಂಪರೆ ಇದೆ. ಬದುಕಿನೊಟ್ಟಿಗೆ ಇದನ್ನು ಉಳಿಸಿಕೊಳ್ಳುವ ಇಚ್ಚಾಸಕ್ತಿ ಜನಮಾಸದಲ್ಲಿ ಕಾಪಾಡಿಕೊಳ್ಳಬೇಕಿದೆ. ಬೆಳಗೆರೆ ಕೃಷ್ಣಶಾಸ್ತಿçಗಳು ಜಿ.ಎಸ್. ಶಿವರುದ್ರಪ್ಪ, ಆರಾಸೇ ಮಹನೀಯರು ಸೂಚಿತ ಗ್ರಾಮೀಣ ಸಾಹಿತ್ಯ ಪರಿಷತ್ತು ಹೆಸರಿನಡಿ ಸುಮಾರು 32 ವರ್ಷಗಳ ಕಾಲ ಸಾಹಿತ್ಯ ಕಾರ್ಯಕ್ರಮಗಳನ್ನು ನಡೆಸಲಾಗಿದೆ. ಇದರಿಂದ ಗ್ರಾಮೀಣ ಜನಜೀವನದ ಸೊಗಡು, ಜೀವನ ಶೈಲಿ ಮತ್ತು ಜನಪದರ ನೋವು-ದುಮ್ಮಾನವನ್ನು ಸಮಾಜಕ್ಕೆ ಪರಿಚಯಿಸುವ ಕೆಲಸವಾಗಿದೆ. ಪ್ರತಿಭಾವಂತ ಬರಹಗಾರರಿಗೆ ವೇದ, ಋಗ್ವೇದ, ರಾಮಾಯಣ, ಮಹಾಭಾರತ ಅಧ್ಯಯನ ಮಾಡಿಕೊಳ್ಳಲು ಪುಸ್ತಕಗಳ ಸಂಗ್ರಹ ಮಾಡಲಾಗಿದೆ. ಇದನ್ನು ಸದುಪಯೋಗ ಮಾಡಿಕೊಳ್ಳುವ ಮನಸ್ಸುಗಳ ಸಂಖ್ಯೆ ಬೆಳೆಯಬೇಕಿದೆ ಎಂದ ಅವರು, ಕರ‍್ಲಕುಂಟೆ ತಿಪ್ಪೇಸ್ವಾಮಿ ಅವರ ಕೆಲ ಕವಿತೆಗಳು ವಿದ್ಯಾರ್ಥಿಗಳಿಗೆ ಪಠ್ಯ ವಿಷಯವಾಗುವ ಅರ್ಹತೆ ಇವೆ ಎಂದು ಭವಿಷ್ಯ ನುಡಿದರು.
‘ಭಾವರೂಪ’ ಕವನ ಸಂಕಲನ ಬಿಡುಗಡೆ ಮಾಡಿ ಮಾತನಾಡಿದ ಬಿಇಒ ಕೆ.ಎಸ್. ಸುರೇಶ್, ಪ್ರಸ್ತುತ ವೈರಾಗ್ಯ ಸಮಾಜದಲ್ಲಿ ಆಡಂಬರ ಮತ್ತು ರಾಜಕೀಯ ಬಯಸುವ ಸಂಖ್ಯೆ ಕಾಣುತ್ತಿದ್ದೇವೆ. ಸಮಾಜವನ್ನು ಅರ್ಥೈಸುವ ಸಾಹಿತ್ಯ ಕೇಳುವ ಮತ್ತು ಪ್ರೋತ್ಸಾಹಿಸುವ ಇಚ್ಚಾಸಕ್ತಿ ಕಾಣುತ್ತಿಲ್ಲ. ನಗರ ಶೈಲಿಗೆ ಮಾರು ಹೋಗುತ್ತಿರುವು ಹಳ್ಳಿಗಳಲ್ಲೂ ಜೀವನದ ಸೊಗಡು, ಸಂಸ್ಕೃತಿ ಉಳಿದುಕೊಳ್ಳುತ್ತಿಲ್ಲ. ಇದರಿಂದ ಜೀವನದ ಸಾರ್ಥಕತೆ ಕಂಡುಕೊಳ್ಳಲಾಗದೆ, ಬೆಚ್ಚಿ ಬೀಳಿಸುವ ಘಟನೆಗಳ ಹಿಂದೆ ಹೋಗುತ್ತಿದ್ದೇವೆ. ಸಾಹಿತ್ಯ ರಚನೆಕಾರರು ಹಳ್ಳಿಯಾಗಲೀ, ದೇಶದ ಯಾವುದೇ ಭಾಗದಲ್ಲಿರಲಿ ಭಾವನೆ ಒಂದೇ ಇರುತ್ತದೆ. ಆದ್ದರಿಂದ ಸಾಹಿತ್ಯ ಜನಜೀವನದ ಅಂತಃಸತ್ವವಾಗಿರುತ್ತದೆ. ಸುಮಾರು ವರ್ಷಗಳಿಂದ ಸಾಹಿತ್ಯ ಅಭಿರುಚಿಯಲ್ಲಿರುವ ಕರ‍್ಲಕುಂಟೆ ತಿಪ್ಪೇಸ್ವಾಮಿ ಅವರ ಸಾಹಿತ್ಯ ರಚನೆ ಸಮಾಜಮುಖಿಯಾಗಿದೆ ಎಂದು ಹೇಳಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ತಹಸೀಲ್ದಾರ್ ಎನ್. ರಘುಮೂರ್ತಿ ಮಾತನಾಡಿ, ಸಾಹಿತ್ಯಕ್ಕೆ ಸಮಾಜವನ್ನು ಬೆಸೆಯುವ ಶಕ್ತಿ ಇದೆ. ಗ್ರಾಮೀಣ ಭಾಗದಲ್ಲಿ ನಿರಂತರ ಸಾಹಿತ್ಯ ಸೇವೆಯಲ್ಲಿ ತೊಡಗಿರುವ ತಿಪ್ಪಣ್ಣ ಮರಿಕುಂಟೆ ಅವರ ಸಾಹಿತ್ಯ ಬದುಕು ಸಮಾಜಕ್ಕೆ ಮಾದರಿಯಾಗಿದೆ. ಗಾಮದಲ್ಲಿ ಸುಸಜ್ಜಿತ ಡಿಜಿಟಲ್ ಗ್ರಂಥಾಲಯ ಸ್ಥಾಪನೆ ಮತ್ತು ಒಂದು ಸಾಹಿತ್ಯ ಕಾರ್ಯಕ್ರಮ ಆಯೋಜನೆ ಮಾಡುವ ಇಚ್ಚಾಸಕ್ತಿ ಇದೆ. ಸಾಹಿತ್ಯ ಕಾರ್ಯವನ್ನು ಪ್ರೋತ್ಸಾಹಿಸಿದಾಗ ಮಾತ್ರ ಸಮೃದ್ದ ಭಾಷಾಭಿಮಾನವನ್ನು ಕಟ್ಟಿ ಬೆಳೆಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಕಾರ್ಯಕ್ರಮವನ್ನು ಹಿರಿಯ ಪತ್ರಕರ್ತ ಕೆ.ಎಸ್. ರಾಘವೇಂದ್ರ ಉದ್ಘಾಟಿಸಿದರು.
ಕವಿ ಕರ‍್ಲಕುಂಟೆ ತಿಪ್ಪೇಸ್ವಾಮಿ, ವೀರಭದ್ರಪ್ಪ, ದೊಡ್ಡಯ್ಯ, ಪೂಜಾರಿ ಗೋವಿಂದಪ್ಪ, ಮಂಜುನಾಥ, ರಾಜಶೇಖರ, ಬಿ ಒ ಕೆ.ಎಸ್ ಸುರೇಶ್ ಮತ್ತಿತರರು ಇದ್ದರು.

ಹುಬ್ಬಳ್ಳಿಯ ಎಸ್‌ಡಿಪಿಐ ಮುಖಂಡನಿಗೆ ಶಾಕ್ ನೀಡಿದ ಎನ್‌ಐಎ : ಬೆಳ್ಳಂಬೆಳ್ಳಗೆ ಮನೆ ಮೇಲೆ ದಾಳಿ ನಡೆಸಿ ವಿಚಾರಣೆ.

ಹುಬ್ಬಳ್ಳಿನ.5. ರಾಜ್ಯದ ವಿವಿಧೆಡೆ ಬೆಳ್ಳಂಬೆಳಿಗ್ಗೆ ದಾಳಿ ನಡೆಸಿರುವ ರಾಷ್ಟ್ರೀಯ ತನಿಖಾ ದಳವು ಹುಬ್ಬಳ್ಳಿಯಲ್ಲೂ ದಾಳಿ‌ ನಡೆಸಿ, ಓರ್ವ ಎಸ್ ಡಿ ಪಿ ಐ ಮುಖಂಡನ ವಿಚಾರಣೆ ನಡೆಸಿ ಮನೆಯಲ್ಲಿ ಪರಿಶೀಲನೆ ಕೈಗೊಂಡಿದ್ದಾರೆ.

ಹಳೇ ಹುಬ್ಬಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ನೂರಾನಿ ಪ್ಲಾಟನ್ ಎಸ್‌ಡಿಪಿಐ ಮುಖಂಡ ಇಸ್ಮಾಯಿಲ್ ನಾಲಬಂದ್ ಮನೆ ಮೇಲೆ 10 ಜನ ಎನ್ ಐ ಎ ಅಧಿಕಾರಿಗಳ ತಂಡ ದಾಳಿ ನಡೆಸಿ ಹಲವು ಗಂಟೆಗಳ ಕಾಲ ಇಸ್ಮಾಯಿಲ್ ಹಾಗೂ ಅವರ ಕುಟುಂಬಸ್ಥರನ್ನು ವಿಚಾರಣೆ ನಡೆಸಿದ್ದಾರೆ.

ಸುಮಾರು ನಾಲ್ಕು ಗಂಟೆಗಳ ಕಾಲ ಎನ್ ಐ ಎ ಅಧಿಕಾರಿಗಳು ಇಸ್ಮಾಯಿಲ್ ಮನೆಯಲ್ಲಿ ವಿಚಾರಣೆಯ ಜೊತೆಗೆ ಪರಿಶೀಲನೆ ನಡೆಸಿದ್ದು, ಮನೆಯಲ್ಲಿದ್ದ ಹಲವರನ್ನು ವಿಚಾರಣೆ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.

ಇನ್ನೂ ದಾಳಿಯ ವೇಳೆ ಇಸ್ಮಾಯಿಲ್ ಕಿರಿಯ ಪುತ್ರ ಮನೆಯಲ್ಲಿ ಇರದ‌ ಕಾರಣ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ಅಧಿಕಾರಿಗಳು ಕುಟುಂಬಸ್ಥರಿಗೆ ತಿಳಿಸಿ ತೆರಳಿದ್ದಾರೆ ಎಂದು ತಿಳಿದು ಬಂದಿದೆ.

ಪುಸ್ತಕ ಕೊಂಡು ಓದಿ ಕವಿ. ಸಾಹಿತಿ. ಶಿಕ್ಷಕ ಪರಮೇಶ್ವರಪ್ಪ ಕುದುರಿ

ಚಳ್ಳಕೆರೆ ನ.2 ವೃತ್ತಿಯಲ್ಲಿ ಹಿಂದಿ ಭಾಷಾ ಶಿಕ್ಷಕರಾದರು ಕನ್ನಡದಲ್ಲೇ ಅನೇಕ ಕವನ .ಕಾಮೀಡಿಶೋ.ಪುಸ್ತಕಗಳನ್ನ ಬರೆದಿದ್ದು ಪನ್ನೀರು ಎಂಬ 6 ನೇ ಕೃತಿ ಹೊರತಂದಿದ್ದು ಓದುಗರು ಖರಿಸುವಂತೆ ಕವಿ. ಸಾಹಿತಿ. ಶಿಕ್ಷಕ ಪರಮೇಶ್ವರಪ್ಪಕದುರಿ ಮನಿ ಮಾಡಿಕೊಂಡಿದ್ದಾರೆ

You cannot copy content of this page