ಚಿತ್ರದುರ್ಗ ಅ.19:
ಎನ್‍ಎಸ್‍ವಿ ಒಂದು ಸೂಕ್ತ ಸರಳ ವಿಧಾನ. ಚಿಕಿತ್ಸಾ ವಿಧಾನಕ್ಕೆ ಕೇವಲ ಐದರಿಂದ ಹತ್ತು ನಿಮಿಷಗಳು ಮಾತ್ರ ಸಾಕು. ಚಿಕಿತ್ಸೆಯಾದ 20 ನಿಮಿಷಗಳ ಬಳಿಕ ಮನೆಗೆ ಹೋಗಬಹುದು. ಎಂದು ಆಡಳಿತ ವೈದ್ಯಾಧಿಕಾರಿ ಡಾ.ಆರ್.ಮಂಜುನಾಥ್ ಹೇಳಿದರು.
ಚಿತ್ರದುರ್ಗ ತಾಲೂಕಿನ ಚಿಕ್ಕಗೊಂಡನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಾರ್ವಜನಿಕರು, ಅರ್ಹ ದಂಪತಿಗಳಿಗೆ ಮತ್ತು ಸಿಬ್ಬಂದಿ ವರ್ಗದವರಿಗೆ ಪುರುಷ ಸಂತಾನ ನಿರೋಧ ಶಸ್ತ್ರ ಚಿಕಿತ್ಸೆ ಕುರಿತು ಬುಧವಾರ ಆಯೋಜಿಸಿದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನೋ ಸ್ಕಾಲ್ ಪೆಲ್ ವ್ಯಾಸಕ್ಟಮಿ ಒಂದು ಸೂಕ್ತ ಸರಳ ವಿಧಾನವಾಗಿದ್ದು, ಈ ಸಣ್ಣ ಶಸ್ತ್ರ ಚಿಕಿತ್ಸೆಯ ನಂತರ ಪುರುಷರಲ್ಲಿ ಲೈಂಗಿಕ ಸಾಮಥ್ರ್ಯ ಕಡಿಮೆಯಾಗುವುದಿಲ್ಲ. ದೈಹಿಕ ನಿಶ್ಯಕ್ತಿ ಉಂಟಾಗುವುದಿಲ್ಲ. ಮಕ್ಕಳು ಸಾಕೆಂದು ನಿರ್ಧರಿಸಿದ ದಂಪತಿಗಳು ಹೆಣ್ಣು ಮಕ್ಕಳಿಗೆ ಕುಟುಂಬ ಕಲ್ಯಾಣ ಶಸ್ತ್ರ ಚಿಕಿತ್ಸೆ ಮಾಡಿಸುವುದಕ್ಕಿಂತ ಪುರುಷರು ಈ ಸರಳ ವಿಧಾನ ಅನುಸರಿಸುವುದು ಸೂಕ್ತ ಎಂದರು. ಹೆಣ್ಣು ಮಕ್ಕಳಿಗಾದರೆ ಶಸ್ತ್ರ ಚಿಕಿತ್ಸೆಯ ನಂತರ ಅವರಿಗೆ ಹಾರೈಕೆ ಮಾಡಲು ಹಲವು ದಿನಗಳು ಬೇಕಾಗುತ್ತz. ಆದರೆ ಪುರುಷರು ಶಸ್ತ್ರಚಿಕಿತ್ಸೆಯ ನಂತರ ದೈನಂದಿನ ಕಾರ್ಯ ಚಟುವಟಿಕೆಗಳನ್ನು ಅಂದೆ ಪ್ರಾರಂಭಿಸಬಹುದು ಎಂದರು.
ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್. ಮಂಜುನಾಥ್ ಮಾತನಾಡಿ, ಒಬ್ಬ ತಾಯಿ 9 ತಿಂಗಳು ತನ್ನ ಗರ್ಭದಲ್ಲಿ ಮಗುವನ್ನ ಹೊತ್ತು, ಹೆರಿಗೆಯ ಸಮಯದಲ್ಲಿ ಹೆಚ್ಚು ನೋವನ್ನು ಅನುಭವಿಸುತ್ತಾಳೆ. ಎರಡು ವರ್ಷದ ತನಕ ಮಗುವಿಗೆ ಎದೆ ಹಾಲು ಉಣಿಸುವುದರ ಜೊತೆಗೆ ಮಗುವಿನ ಲಾಲನೆ ಪಾಲನೆ ಜವಾಬ್ದಾರಿಯಿಂದ ನಿಭಾಯಿಸುತ್ತಾ ಎಲ್ಲಾ ಕಷ್ಟವನ್ನು ಅವಳೇ ಅನುಭವಿಸುತ್ತಾಳೆ. ಆದರೆ ಪುರುಷರು ಕುಟುಂಬ ಕಲ್ಯಾಣ ಈ ಸಣ್ಣ ಶಸ್ತ್ರ ಚಿಕಿತ್ಸೆಯನ್ನು ತಾವುಗಳು ಮಾಡಿಸಿಕೊಳ್ಳುವುದರ ಮುಖಾಂತರ ತನ್ನ ಸತಿಗೆ ಸಹಭಾಗಿತ್ವದೊಂದಿಗೆ ನೆರವಾಗುವುದು ಒಳಿತು ಎಂದರು.
ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಬಿ. ಮೂಗಪ್ಪ ಮಾತನಾಡಿ, ಪುರುಷ ಸಂತಾನ ನಿರೋಧ ಶಸ್ತ್ರ ಚಿಕಿತ್ಸೆ ಒಂದು ಶಾಶ್ವತ ವಿಧಾನವಾದರೂ ಇದನ್ನು ಪುನರ್ ಬದಲಾಯಿಸಲು ಸಾಧ್ಯ. ನುರಿತ ಶಸ್ತ್ರ ಚಿಕಿತ್ಸಾ ತಜ್ಞ ವೈದ್ಯರು ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಯಲ್ಲಿ ಲಭ್ಯವಿರುವುದರಿಂದ ಯಾವುದೇ ಆತಂಕ ಪಡದೆ, ಹೆಣ್ಣು ಮಕ್ಕಳಲ್ಲಿ ಹೃದಯದ ತೊಂದರೆ, ಗರ್ಭಕೋಶದ ತೊಂದರೆ, ರಕ್ತ ಹೀನತೆ, ಅವಳಿ ಮಕ್ಕಳ ಜನನ, ಬಹು ಮಕ್ಕಳ ಜನನ, ಯಾವುದೇ ಸಾಂಕ್ರಾಮಿಕ ರೋಗಕ್ಕೆ ಒಳಗಾದವರು, ಅವರ ಕುಟುಂಬದಲ್ಲಿ ಮಕ್ಕಳು ಬೇಡವೆಂದು ನಿರ್ಧರಿಸಿದಾಗ ಇಂತಹ ತಾಯಂದಿರುಗಳು ಕುಟುಂಬ ಕಲ್ಯಾಣ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡು ಇನ್ನೂ ಹೆಚ್ಚು ನೋವನ್ನು ಉಂಟು ಮಾಡಿಕೊಳ್ಳುವುದಕ್ಕಿಂತ, ತಮ್ಮ ಪತಿಯವರಿಗೆ ಮನವೊಲಿಸಿ ಪುರುಷ ಸಂತಾನ ನಿರೋಧ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡು ಸಂತಸದ ಜೀವನ ನಡೆಸಬಹುದು ಎಂದರು.
ಪ್ರತಿ ಸೋಮವಾರ ಮತ್ತು ಶುಕ್ರವಾರ ಜಿಲ್ಲಾ ಆಸ್ಪತ್ರೆಯಲ್ಲಿ ಈ ಶಸ್ತ್ರ ಚಿಕಿತ್ಸೆಯನ್ನು ಯಾವುದೇ ವೆಚ್ಚವಿಲ್ಲದೆ ಉಚಿತವಾಗಿ ಮಾಡಲಾಗುವುದು. ಶಸ್ತ್ರಚಿಕಿತ್ಸೆಗೆ ಒಳಗಾದ ಫಲಾನುಭವಿಗೆ ಸರ್ಕಾರದಿಂದ ಪೆÇ್ರೀತ್ಸಾಹ ಧನ ರೂ.1100 ರೂಗಳನ್ನು ಅವರ ಬ್ಯಾಂಕ್ ಖಾತೆಗೆ ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ಸಮೀಪದ ಸರ್ಕಾರಿ ಆಸ್ಪತ್ರೆ ವೈದ್ಯರು, ಪ್ರಾಥಮಿಕ ಆರೋಗ್ಯ ಸುರಕ್ಷತಾಧಿಕಾರಿಗಳು, ಆರೋಗ್ಯ ನಿರೀಕ್ಷಣಾಧಿಕಾರಿಗಳು ಅಥವಾ ಆಶಾ ಕಾರ್ಯಕರ್ತೆಯರನ್ನು ಭೇಟಿ ಮಾಡಬಹುದು ಎಂದರು.
ಈ ಸಂದರ್ಭದಲ್ಲಿ ಹಿರಿಯ ಪ್ರಾಥಮಿಕ ಆರೋಗ್ಯ ಸುರಕ್ಷತಾಧಿಕಾರಿ ಸುಧಾ, ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ಶಂಕರ್ ನಾಯ್ಕ. ಪ್ರವೀಣ್ ಕುಮಾರ್, ಆಶಾ ಕಾರ್ಯಕರ್ತೆಯರು ಹಾಗೂ ಸಾರ್ವಜನಿಕ ಫಲಾನುಭವಿಗಳು ಹಾಜರಿದ್ದರು.
ಪುರುಷ ಸಂತಾನ ನಿರೋಧ ಶಸ್ತ್ರ ಚಿಕಿತ್ಸೆಯಿಂದ ಪುರುಷತ್ವಕ್ಕೆ ಹಾನಿ ಇಲ್ಲ -ಡಾ.ಆರ್.ಮಂಜುನಾಥ್
ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ
0 Comments