ಹಿರಿಯೂರು :
ತಾಲೂಕಿನಾದ್ಯಂತ ಸರ್ಕಾರಿ ಗೋಮಾಳದಲ್ಲಿ ಹಾಗೂ ದಲಿತರ ಜಮೀನು ಮತ್ತು ಉಳುವಳ್ಳಿ ಫೀಡರ್ ಚಾನೆಲ್ ನಿರ್ಮಿಸಿರುವ ಚಾನೆಲ್ ಮಣ್ಣನ್ನು ಕಾನೂನುಬಾಹಿರವಾಗಿ ಪಿಎಂಸಿ ಕಂಪನಿ ಗುತ್ತಿಗೆದಾರರು ಎಂದು ಹೇಳಿಕೊಂಡು ಪ್ರತಿದಿನ ಕೋಟ್ಯಾಂತರ ಬೆಲೆ ಬಾಳುವ ಫಲವತ್ತಾದ ಮಣ್ಣನ್ನು ಸಾಗಿಸುತ್ತಿರುವುದು ಖಂಡನೀಯ ಎಂಬುದಾಗಿ ರೈತಸಂಘದ ಜಿಲ್ಲಾ ಕಾರ್ಯಾಧ್ಯಕ್ಷರಾದ ಕೆ.ಸಿ.ಹೊರಕೇರಪ್ಪ ಆರೋಪಿಸಿದರು.
ನಗರದ ತಾಲ್ಲೂಕು ಕಚೇರಿ ಮುಂಭಾಗದಲ್ಲಿ ತಾಲ್ಲೂಕು ರೈತ ಸಂಘದ ವತಿಯಿಂದ ತಾಲೂಕಿನಾದ್ಯಂತ ಅತ್ಯಂತ ಕಾನೂನುಬಾಹಿರವಾಗಿ ಪಿ.ಎನ್.ಸಿ ಕಂಪನಿಗೆ ಮಣ್ಣು ಸಾಗಿಸುತ್ತಿರುವುದನ್ನು ನಿಲ್ಲಿಸುವಂತೆ ಒತ್ತಾಯಿಸಿ ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನಾ ಕಾರ್ಯಕ್ರಮದಲ್ಲಿ ತಾಲ್ಲೂಕು ತಹಶೀಲ್ದಾರರ ಮುಖಾಂತರ ಸರ್ಕಾರಕ್ಕೆ ಮನವಿಪತ್ರ ಸಲ್ಲಿಸಿ, ಅವರು ಮಾತನಾಡಿದರು.
ತಾಲೂಕು ಆಡಳಿತ ಕಂಡು ಕಾಣದಂತೆ ಅವರ ಕುಮ್ಮಕ್ಕಿನಿಂದ ಮಣ್ಣು ಮಾಫಿಯಾ ನಡೆಯುತ್ತಿದ್ದು ಇದನ್ನು ತಡೆಗಟ್ಟುವಲ್ಲಿ ತಾಲೂಕು ಆಡಳಿತ ವಿಫಲವಾಗಿದೆ ಇದುವರೆಗೂ ದಲಿತ ಸಾಗುವಳಿ ಜಮೀನಿನಲ್ಲಿ ಉಪಗುತ್ತಿಗೆದಾರ ಮುಖಾಂತರ ರೈತರ ಜಮೀನಿನಲ್ಲಿ 8 ರಿಂದ ಹತ್ತು ಅಡಿ ಫಲವತ್ತಾದ ಮಣ್ಣನ್ನು ಪಿಎನ್.ಸಿ ರಸ್ತೆ ಕಾಮಗಾರಿಗೆ ಬಳಸಿದ್ದಾರೆ ಎಂದರಲ್ಲದೆ,
ತಾಲ್ಲೂಕು ರೈತಸಂಘದ ಅಧ್ಯಕ್ಷರಾದ ಕೆ.ಟಿ.ತಿಪ್ಪೇಸ್ವಾಮಿ ಮಾತನಾಡಿ, ರೈತರಿಗೆ ಹಣ ನೀಡಿದೆ ಇದುವರೆಗೂ ಮಣ್ಣು ಮಾಫಿಯಾ ಮಾಡುವವರು ರಂಗೇನಹಳ್ಳಿ ಉಡುವಳ್ಳಿ, ಗೌಡನಹಳ್ಳಿ, ಯಲ್ಲದಕೆರೆ ಗ್ರಾಮ ಪಂಚಾಯತಿಯನ್ನು ಮುಂತಾದ ಕಡೆ ಮಣ್ಣು ತೆಗೆದು ರಾಯಲ್ಟಿ ನೀಡದೆ ವಂಚನೆ ಮಾಡಿರುತ್ತಾರೆ ಎಂಬುದಾಗಿ ದೂರಿದರಲ್ಲದೆ,
ತಾಲೂಕು ಕಚೇರಿ ಸುತ್ತಮುತ್ತಲು ಲೇಔಟ್ ಗಳಿಗೆ ಸಾವಿರಾರು ಲೋಡ್ ಮಣ್ಣು ಸಾಗಿಸುತ್ತಿರುವುದನ್ನು ತಿಳಿಸಿದರು ಸಹ ತಾಲೂಕು ಆಡಳಿತ ಮತ್ತು ಭೂವಿಜ್ಞಾನ ಇಲಾಖೆ ನಿರ್ಲಕ್ಷಿಸಿದೆ, ಈ ನಿಟ್ಟಿನಲ್ಲಿ ತಾಲೂಕಿನಲ್ಲಿ ಪಿ.ಎನ್.ಸಿ ಕಂಪನಿ ಹಾಗೂ ಉಪಗುತ್ತಿಗೆದಾರರ ತಾಲ್ಲೂಕು ಆಡಳಿತ ಹಾಗೂ ಜಿಲ್ಲಾಡಳಿತ ವಿರುದ್ಧ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ ಎಂದರು.
ತಾಲೂಕು ರೈತ ಸಂಘದ ಅಧ್ಯಕ್ಷರಾದ ಬ್ಯಾಡರಹಳ್ಳಿಶಿವಕುಮಾರ್ ಮಾತನಾಡಿ, ತಾಲೂಕಿನ ಖನಿಜ ಸಂಪತ್ತನ್ನು ಉಳಿಸುವ ಸಲುವಾಗಿ ಹಾಗೂ ನೊಂದ ರೈತರ ಪರವಾಗಿ ಭಾರತೀಯ ದಲಿತ ಸಂಘರ್ಷ ಸಮಿತಿ ಸಂಘಟನೆ ಹಾಗೂ ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆ, ಕರ್ನಾಟಕ ದಲಿತ ಸಂಘರ್ಷ ಸಮಿತಿ ಹಾಗೂ ತಾಲ್ಲೂಕು ಜನಪರ ಹೋರಾಟಗಾರರೊಂದಿಗೆ ಸೇರಿಕೊಂಡು ಅನಿರ್ಧಿಷ್ಟಾವಧಿ ಧರಣಿ ಸತ್ಯಾಗ್ರಹ ಕೈಗೊಳ್ಳಲಾಗಿದೆ ಎಂದರಲ್ಲದೆ,
ಈ ಕೂಡಲೇ ಮಣ್ಣು ಮಾಫಿಯಾ ತಡೆಗಟ್ಟಲು ಸೂಕ್ತಕ್ರಮ ಕೈಗೊಳ್ಳುವಲ್ಲಿ ತಾಲ್ಲೂಕು ಆಡಳಿತ ಹಾಗೂ ಭೂವಿಜ್ಞಾನ ಇಲಾಖೆ ವಿಫಲವಾದಲ್ಲಿ, ತಾಲ್ಲೂಕಿನ ಜನಪರ ಸಂಘಟನೆಗಳೊಂದಿಗೆ ಹಾಗೂ ನೊಂದ ರೈತರೊಂದಿಗೆ ಒಗ್ಗಟ್ಟಾಗಿ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು ಎಂಬುದಾಗಿ ಅವರು ಎಚ್ಚರಿಕೆ ನೀಡಿದರು.
ಈ ಪ್ರತಿಭಟನೆಯಲ್ಲಿ ರೈತ ಸಂಘದ ಜಿಲ್ಲಾ ಕಾರ್ಯಾಧ್ಯಕ್ಷರಾದ ಕೆ.ಸಿ.ಹೊರಕೇರಪ್ಪ, ಭಾರತೀಯ ದಲಿತ ಸಂಘರ್ಷ ಸಮಿತಿ ರಾಜ್ಯ ಕಾರ್ಯಧ್ಯಕ್ಷರಾದ ಕೆ.ತಿಮ್ಮರಾಜು, ಯುವ ಘಟಕದ ಅಧ್ಯಕ್ಷರಾದಸ ಚೇತನ್ ಯಳನಾಡು, ತಾಲೂಕು ರೈತ ಸಂಘದ ಅಧ್ಯಕ್ಷರಾದ ಬ್ಯಾಡರಹಳ್ಳಿಶಿವಕುಮಾರ್, ಕರ್ನಾಟಕ ರಾಜ್ಯ ರೈತಸಂಘದ ತಾಲ್ಲೂಕು ಅಧ್ಯಕ್ಷರಾದ ಕೆ.ಟಿ.ತಿಪ್ಪೇಸ್ವಾಮಿ, ಎಂ.ಶಶಿಕಲಾ, ದಾಸಪ್ಪ, ಆನಂದಪ್ಪ, ಈರಣ್ಣ ಹೆಚ್.ಎನ್.ಕೇಶವಮೂರ್ತಿ, ಸೌಜನ್ಯ ಹಾಗೂ ಸೇರಿದಂತೆ ಅನೇಕ ರೀತಿಯ ಮುಖಂಡರು ಉಪಸ್ಥಿತರಿದ್ದರು.
ಪಿಎಂಸಿಕಂಪನಿ ಗುತ್ತಿಗೆದಾರರು ಪ್ರತಿದಿನ ಕೋಟ್ಯಾಂತರ ಬೆಲೆ ಬಾಳುವ ಫಲವತ್ತಾದ ಮಣ್ಣನ್ನು ಸಾಗಿಸುತ್ತಿರುವುದು ಖಂಡನೀಯ :ರೈತಸಂಘದ ಕಾರ್ಯಾಧ್ಯಕ್ಷ ಹೊರಕೇರಪ್ಪ
ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ
0 Comments