ಚಳ್ಳಕೆರೆ ನಗರದಲ್ಲಿ ವಾಹನ ದಟ್ಟಣೆ ದಿನೇ ದಿನೇ ಹೆಚ್ಚಾಗುತ್ತಿದೆ. ಜನ ಸಂಖ್ಯೆಯೂ ಅಧಿಕವಾಗಿದೆ. ರಸ್ತೆಗಳು ವಿಸ್ತಾರಗೊಂಡಿರುವುದು ಬಿದಿ ಬದಿ ವ್ಯಾಪಾರಿಗಳಿಗೆ ವರದಾನವಾಗಿದೆ. ಹೌದು ಇದು ಚಳ್ಳಕೆರೆ ನಗರದ ನೆಹರು ವೃತ್ತ. ಚಿತ್ರದುರ್ಗ.ಪಾವಗಡ. ಬೆಂಗಳೂರು. ಬಳ್ಳಾರಿ ಮಾರ್ಗದ ರಸ್ತೆಯ ಬದಿಯಲ್ಲಿ ಪಾದಾಚಾರಿ ರಸ್ತೆಗಳನ್ನು ಅಕ್ರಮಿಸಿಕೊಂಡು ವಾಹನಗಳ ದಟ್ಟಣೆಯಿಂದ ಟ್ರಾಪಿಕ್ ಕಿರಿಕಿರಿಯಾಗುವುದರಿಂದ ಪಾದಚಾರಿಗಳ ಹೆಸರಲ್ಲಿ ನಿರ್ಮಿಸಿದವರಸ್ತೆ ಜನರಿಗೆ ಮಾತ್ರ ಉಪಯೋಗವಿಲ್ಲ ಎಂಬಂತಾಗಿದೆ.
ವಾಹನಗಳ ದಟ್ಟಣೆ ನಿಯಂತ್ರಿಸಲು ಮುಖ್ಯ ರಸ್ತೆಗಳನ್ನು ವಿಸ್ತರಣೆ ಮಾಡಲಾಯಿತು. ಎರಡೂ ಬದಿಯಲ್ಲಿ ಚರಂಡಿ ನಿರ್ಮಿಸಿ ಅದರ ಮೇಲೆ ಪಾದಚಾರಿ ಮಾರ್ಗ ನಿರ್ಮಿಸಲಾಗಿದೆ. ರಸ್ತೆಯ ಬದಿ ವಾಹನಗಳನ್ನು ಪಾರ್ಕ್ ಮಾಡಲಾಗುತ್ತಿದೆ. ಕೆಲ ವ್ಯಾಪಾರಸ್ಥರು ಪಾದಚಾರಿ ಮಾರ್ಗವನ್ನು ಅತಿಕ್ರಮಣ ಮಾಡಿದ್ದಾರೆ. ಕೆಲವರು ಈ ಮಾರ್ಗದ ಮೇಲೆ ಮಾರಾಟ ಮಾಡುವ ವಸ್ತುಗಳನ್ನು ಇಡುತ್ತಾರೆ. ಬೀದಿ ಬದಿ ವ್ಯಾಪಾರಿಗಳು ಪಾದಚಾರಿ ಮಾರ್ಗದ ಮೇಲೆ ವ್ಯಾಪಾರ ಮಾಡುತ್ತಾರೆ. ಇದರಿಂದ ಪಾದಚಾರಿಗಳಿಗ ಓಡಾಡಲು ದಾರಿಯಿಲ್ಲದೆ ವಾಹಗಳ ದಟ್ಟಣೆಯ ನಡವಿಯೂ ವಿದ್ಯಾರ್ಥಿಗಳು. ಮಕ್ಕಳು, ವೃದ್ಧರು, ಮಹಿಳೆಯರು ಪಾದಾಚಾರು ರಸ್ತೆಗಳ ಅತಿಕ್ರಮಣದಿಂದ ಪರದಾಡುವಂತಾಗಿ ಪ್ರಾಣ ಭೀತಿಯಲ್ಲಿ ರಸ್ತೆಯ ಮೇಲೆ ನಡೆಯಬೇಕಾದ ಅನಿವಾರ್ಯತೆ ಎದುರಾಗಿದೆ. ಹಲವು ಬಾರಿ ಪಾದಚಾರಿಗಳಿಗೆ ವಾಹನಗಳು ಡಿಕ್ಕಿ ಹೊಡೆದ ಘಟನೆಗಳು ನಡೆದಿವೆ. ಪಾದಚಾರಿಗಳು ರಸ್ತೆಯ ಮೇಲೆ ನಡೆಯುವುದರಿಂದ ವಾಹನ ಸಂಚಾರಕ್ಕೂ ತೊಂದರೆಯಾಗಿದೆ.
ನೆಹರು ವೃತ್ತದಲ್ಲಿ ರಾಷ್ಟ್ರೀಯ ಹೆದ್ದಾರಿ ಹಾದು ಹೋಗಿರುವುದರಿಂದ ಬೆಂಗಳೂರು ಸೇರಿದಂತೆ ವಿವಿಧ ನಗರಗಳಿ ಪ್ರಾಯಾಣ ಮಾಡುವ ಬಸ್ ಗಳು ರಸ್ತೆ ಬದಿಯಲ್ಲಿ ನಿಲ್ಲುವುದರಿಂದ ವಾಹನಗಳ ದಟ್ಟಣೆ ಹೆಚ್ಚಾಗಿ ಸಂಚಾರ ನಿಯಮಗಳು ಉಲ್ಲಂಘನೆಯಾಗುತ್ತಿವೆ. ನೆಹರು ವೃತ್ತದ ಸಮೀಪ ಸುಮಾರು 200 ಮೀಟರ್ ದೂರದಲ್ಲಿ ರಸ್ತೆ ಬದಿಯಲ್ಲಿ ಯಾವುದೇ ಅಂಗಡಿಗಳು ಇರುವಂತಿಲ್ಲ ಎಂಬ ನಿಯವಿದೆ ಆದರೂ ಸಹ ಪಾದಚಾರಿಗಳಿಗೆಂದು ನಿರ್ಮಿಸಿದ ರಸ್ತೆಗಳನ್ನು ಒತ್ತುವರಿ ಮಾಡಿಕೊಂಡಿದ್ದರೂ ಯಾರೂ ತೆರವುಗೊಳಿಲು ಮುಂದಾಗುತ್ತಿಲ್ಲ ಎಂದು ಸಾರ್ವ ಜನಿಕರು ಆರೋಪಿಸಿದ್ದಾರೆ
ಪಾದಚಾರಿ ಮಾರ್ಗ ಅತಿಕ್ರಮ ವಿದ್ಯಾರ್ಥಿಗಳು .ವೃದ್ಧರು ರಸ್ತೆ ಮೇಲೆ ಸಂಚಾರ
ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ
0 Comments