ಪರಿಶಿಷ್ಠ ಜಾತಿ ಪಂಗಡ ಮೀಸಲಾಗಿ ನ. 10 ರಂದು ಉಪ್ಪಾರ ಸಮುದಾಯದಿಂದ ಬೃಹತ್ ಪ್ರತಿಭಟನೆ

by | 07/11/22 | ಜನಧ್ವನಿ, ರಾಜಕೀಯ, ಸುದ್ದಿ

ಚಳ್ಳಕೆರೆ ನವಂಬರ್ 7 ಪರಿಶಿಷ್ಟ ಜಾತಿ ಪಂಗಡದ ಮೀಸಲಾತಿಗಾಗಿ ತಾಲ್ಲೂಕು ಉಪ್ಪಾರ ಯುವಕ ಸಂಘ , ತಾಲ್ಲೂಕು ಉಪ್ಪಾರ ನೌಕರರ ಸಂಘ , ತಾಲ್ಲೂಕು ಉಪ್ಪಾರ ಯುವಕ ಸಂಘ ಹಾಗೂ ಉಪ್ಪಾರ ಸಮುದಾಯದ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ನವಂಬರ್ 10 ಗುರುವಾರ ರಂದು ಬೆಳಗ್ಗೆ 11 ಗಂಟೆ ಪ್ರವಾಸಿ ಮಂದಿರದಿಮದ ಮೆರವಣಿಗೆ ಮೂಲಕ ತೆರಳಿ ನೆಹರು ವೃತ್ತದಲ್ಲಿ ಬೃಹತ್ ರಸ್ತೆ ತಡೆ ಪ್ರತಿಭಟನೆ ನಡೆಸಿ ನಂತರ ತಹಶೀಲ್ದಾರ್ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಲಾಗುವುದು ಉಪ್ಪಾರ ಸಮುದಾಯದವರು ಹೆಚ್ಚಿನಸಂಖ್ಯೆಯಲ್ಲಿ ಭಾಗವಹಿಸುವಂತೆ ತಾಲೂಕು ಉಪ್ಪಾರ ಸಂಘದ ಅಧ್ಯಕ್ಷ ಹನುಮಂತಪ್ಪ ಮನವಿ ಮಾಡಿಕೊಂಡಿದ್ದಾರೆ.
ಪಜೈ ಭಗೀರಥಾಯ ನಮಃ –
ನಮ್ಮ ಉಪ್ಪಾರ ಸಮಾಜವು ಕರ್ನಾಟಕ ರಾಜ್ಯದಲ್ಲಿ ಸರಿಸುಮಾರು 50 ಲಕ್ಷಕ್ಕೂ ಅಧಿಕ ಜನ ಸಂಖ್ಯೆಯನ್ನು ಹೊಂದಿದ್ದು ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಆರ್ಥಿಕವಾಗಿ, ರಾಜಕೀಯವಾಗಿ ಹಾಗೂ ಔದ್ಯೋಗಿಕವಾಗಿ ಶೋಷಿತವಾದ ಅತೀ ಹಿಂದುಳಿದ ಸಮಾಜವೆಂಬುದು ತಮ್ಮೆಲ್ಲರಿಗೂ ತಿಳಿದಿದೆ. ನ್ಯಾ. ವೆಂಕಟಸ್ವಾಮಿ ಆಯೋಗ, ನ್ಯಾ. ಚನ್ನಪ್ಪರೆಡ್ಡಿ ಆಯೋಗ ಹಾಗೂ ನ್ಯಾ. ಹಾವನೂರು ಆಯೋಗಗಳು ಉಪ್ಪಾರ ಸಮಾಜವು ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡಕ್ಕಿAತಲೂ ಹೆಚ್ಚು ಶೋಚನೀಯ ಸ್ಥಿತಿಯಲ್ಲಿರುವುದಾಗಿ ವರದಿಯಲ್ಲಿ ತಿಳಿಸಿವೆ. ಈ ಸಮಾಜವನ್ನು ಸುಮಾರು ದಶಕಗಳಿಂದ ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಪೂಜ್ಯ ಗುರುಗಳು ಹಾಗೂ ಸಮಾಜದ ಹಿರಿಯ ಮುಖಂಡರು ಹಲವಾರು ಬೃಹತ್ ಸಮಾವೇಶಗಳನ್ನು ಏರ್ಪಡಿಸಿ ಸರ್ಕಾರಕ್ಕೆ ಮನವಿ ಸಲ್ಲಿಸುತ್ತಾ ಬಂದಿದ್ದಾರೆ. ಆದರೆ ಇಲ್ಲಿಯವರೆಗೂ ಯಾವುದೇ ಪ್ರಯೋಜನವಾಗಿರುವುದಿಲ್ಲ.
ಎಲ್ಲಾ ರಾಜಕೀಯ ಪಕ್ಷಗಳು ಹಾಗೂ ಸರ್ಕಾರಗಳು ನಮ್ಮ ಮನವಿಯನ್ನು ಕಡೆಗಣಿಸುತ್ತಾ ಬಂದಿವೆ. ಆದ್ದರಿಂದ ಪೂಜ್ಯ ಗುರುಗಳು ಹಾಗೂ ಸಮಾಜದ ಹಿರಿಯರ ಆದೇಶದ ಮೇರೆಗೆ ತಾಲ್ಲೂಕು, ಜಿಲ್ಲಾ ಮತ್ತು ರಾಜ್ಯ ಮಟ್ಟದಲ್ಲಿ ಪ್ರತಿಭಟನೆಯ ಹೋರಾಟವನ್ನು ನಡೆಸಲು ತೀರ್ಮಾನಿಸಿರುವುದರಿಂದ ನಮ್ಮ ಚಳ್ಳಕೆರೆ ತಾಲ್ಲೂಕಿನಲ್ಲಿ ಪೂಜ್ಯ
ಗುರುಗಳು ಡಾ. ಪುರುಷೋತ್ತಮಾನಂದಪುರಿ ಸ್ವಾಮೀಜಿಗಳ ಸಾರತ್ಯದಲ್ಲಿ ದಿನಾಂಕ : 10-11-2022 ರಂದು ಬೆಳಿಗ್ಗೆ 11 ಗಂಟೆಗೆ ಚಳ್ಳಕೆರೆ ನಗರದ ಪ್ರವಾಸಿ ಮಂದಿರದ ಬಳಿ ಸೇರಿ ಅಲ್ಲಿಂದ ಮೆರವಣಿಗೆ ಮೂಲಕ ನೆಹರು ವೃತ್ತದಲ್ಲಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ. ಆದ್ದರಿಂದ ತಾವುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಪ್ರತಿಭಟನೆಯನ್ನು ಯಶಸ್ವಿಗೊಳಿಸುವಂತೆ ಮಮವಿ ಮಾಡಿಕೊಂಡಿದ್ದಾರೆ.

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *