ಪರಿಶಿಷ್ಟ ಜಾತಿ ಮತ್ತು ಪಂಗಡದ ಕುಟುಂಬ ನಿರ್ವಹಣೆಗೆ ಉಳುಮೆ ಮಾಡಿಕೊಂಡು ಜೀವನ ನಡೆಸಿಲು ಸರಕಾರ ಮಂಜುರಾತಿ ನೀಡಿದ ಭೂಮಿಯನ್ನು ಭೂಮಿ ತಂತ್ರಾಂಶದಲ್ಲಿ ಪ್ಲಾಗ್ ಮಾಡುತ್ತಿರುವ ತಹಶೀಲ್ದಾರ್ ರೇಹಾನ್ ಪಾಷ.

by | 17/10/23 | ಸುದ್ದಿ

ಚಳ್ಳಕೆರೆ ಅ17. ಪರಿಶಿಷ್ಟ ಜಾತಿ ಮತ್ತು ಪಂಗಡದ ಕುಟುಂಬ ನಿರ್ವಹಣೆಗೆ ಉಳುಮೆ ಮಾಡಿಕೊಂಡು ಜೀವನ ನಡೆಸಿಲು ಸರಕಾರ ಮಂಜುರಾತಿ ನೀಡಿದ ಭೂಮಿಯನ್ನು ಮಾರಾಟ ಹಾಗೂ ಕೊಂಡುಕೊಳ್ಳಲು ಅವಕಾಶವಿರುವುದಿಲ್ಲ ಎಂದು ತಹಶೀಲ್ದಾರ್ ರೇಹಾನ್ ಪಾಷ ಹೇಳಿದರು.

ನಗರದ ತಾಲೂಕು ಕಚೇರಿಯಲ್ಲಿ ಭೂಮಿ ಕೇಂದ್ರದಲ್ಲಿ ಎಸ್‌ಸಿ/ಎಸ್‌ಟಿ ರೈತರ ಒಡೆತನದ ಜಮೀನು ಗಳ. ಅಗತ್ಯ ದಾಖಲೆಗಳನ್ನು ಭೂಮಿ ತಂತ್ರಾಂಶದಲ್ಲಿ ಪ್ಲಾಗ್ ಮಾಡುವ ಪ್ರಕ್ರಿಯೆ ಚಾಲನೆ ನೀಡಿ ಮಾತನಾಡಿದರು. ತಾಲೂಕಿನಾದ್ಯಂತ ಪರಿಶಿಷ್ಟ ಜಾತಿ ಮತ್ತು ಪಂಗಡದ ಹಾಗೂ ಇತರೆ ಸಮುದಾಯಕ್ಜೆ ಸರಕಾರ ಮಂಜುರಾತಿ ನೀಡಿದ ಭೂಮಿಯ ಒಡೆತನ ಮಾಲಿಕರ ದಾಖಲೆಗಳನ್ನು ತಂತ್ರಾಂಶದಲ್ಲಿ ಅಳವಡಿಸುವುಸರಿಂದ ಅಂತಹ ಜಮೀನುಗಳನ್ನು ಮಾರಾಟ ಮಾಡಲು ಖರೀದಿಸಲು ಸಾಧ್ಯವಾಗುವುದಿಲ್ಲ ಸಾಮಾನ್ಯರಿಗೆ ಕೆಲವು ನಿಬಂಧನೆಗಳ ಅಡಿಯಲ್ಲಿ ರಿಯಾತಿ ನೀಡಿದರೆ ಎಸ್ಸಿ ಎಸ್ಟಿ ಸಮುದಾಯಗಳಿಗೆ ಮಂಜುರಾತಿ ನೀಡಿದ ಭೂಮಿಯನ್ನು ಮಾರಾಟಕ್ಕೆ ಸರ್ಕಾರ ನಿರ್ಬಂಧ ಹೇರಿ ಜಾರಿಗೆ ತಂದಿದೆ. ಆದ್ದರಿಂದ ಕಂದಾಯ ಇಲಾಖೆ ಭೂಮಿ ತಂತ್ರಾಂಶದಲ್ಲಿ ಎಂಟ್ರಿ ಮಾಡಲು ಅಯಾ ವ್ಯಾಪ್ತಿಯ ಗ್ರಾಮಲೆಕ್ಕಾಧಿಕಾರಿಗಳು ಮಂದಾಗಿದ್ದಾರೆ. ಹಂತ ಹಂತವಾಗಿ ಕಂದಯಾ ಇಲಾಖೆಯ ಎಲ್ಲಾ ದಾಖಲೆಗಳನ್ನು ಡಿಜಿಟಲ್‌ ಕರಣ ಮಾಡಲಾಗುದು. ಇದರಿಂದ ರೈತರ ಹಾಗೂ ಸಾರ್ವಜನಿಕರಿಗೆ ಸುಲಭವಾಗಿ ದಾಖಲೆಗಲೆಗಳು ಲಭ್ಯವಾಗುವ ಜತೆಗೆ ಕಡತ ಕಳೆದು ಹೋಗಿದೆ.ಶಿಥಿಲವಾಗಿದೆ ಎಂಬ ಆರೋಪಗಳಿಂದ ಮುಕ್ತರಾಗಲು ಸಾಧ್ಯವಾಗುತ್ತದೆ. ಸಾರ್ವಜನಿಕರು ದಾಖಲೆಗಲೆಗಳಿಗಾಗಿ ಅಲೆದಾಟ ತಪ್ಪುತ್ತದೆ ಎಂದು ತಿಳಿಸಿದರು.

.ಎಸ್‌ಸಿ/ಎಸ್‌ಟಿ ರೈತರ ಒಡೆತನದ ಜಮೀನು ಮಾರಾಟಕ್ಕೆ ಸರ್ಕಾರ ನಿರ್ಬಂಧ ಹೇರಿ ಜಾರಿಗೆ ತಂದ ಬೆನ್ನಲ್ಲೇ ಕಂದಾಯ ಇಲಾಖೆ ಭೂಮಿ ತಂತ್ರಾಂಶದಲ್ಲಿ ಎಂಟ್ರಿ ಮಾಡಲು ಮುಂದಾಗಿದೆ.
ಪರಿಶಿಷ್ಟ ಜಾತಿ ಮತ್ತು ಪಂಗಡದ ಸದಸ್ಯರಿಗೆ ಭೂಮಿ ಮಾಲೀಕತ್ವದ ಹಕ್ಕುಗಳನ್ನು ಉಳಿಸಿಕೊಳ್ಳಲು ಸಹಾಯ ಮಾಡುವ ಸಲುವಾಗಿ ರಾಜ್ಯ ಸರ್ಕಾರ ಈ ವರ್ಗಗಳಿಗೆ ಸೇರಿದ ರೈತರ ಮಾಲೀಕತ್ವದ ಜಮೀನು ಮಾರಾಟಕ್ಕೆ ನಿರ್ಬಂಧ ವಿಧಿಸಿದೆ ಎನ್ನಲಾಗಿದೆ.

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *