ಪರಶುರಾಂಪುರ ಗ್ರಾಮದಲ್ಲಿ ಸಡಗರ ಸಂಭ್ರಮದಿಂದ ಜರುಗಿದ ಶ್ರೀ ವಾಲ್ಮೀಕಿ ಜಯಂತಿ ಹಲವು ಗಣ್ಯರು ಬಾಗಿ

by | 15/11/22 | ಕರ್ನಾಟಕ, ಸುದ್ದಿ

ಚಳ್ಳಕೆರೆ(,ನ14) ಮಾನವೀಯ ಗುಣಗಳೊಂದಿಗೆ ಸ್ವಾರ್ಥ ರಹಿತವಾದ ಬದುಕನ್ನು ಹೇಗೆ ರೂಪಿಸಿಕೊಳ್ಳಬಹುದು ಎನ್ನುವುದನ್ನು ವಾಲ್ಮೀಕಿ ಮಹರ್ಷಿ ರಾಮಯಾಣ ಮಹಾಕಾವ್ಯದಲ್ಲಿ ಅದ್ಭುತವಾಗಿ ವಿಶ್ಲೇಷಣೆ ಮಾಡಿದ್ದಾರೆ ಎಂದು ಶಾಸಕ ಟಿ.ರಘುಮೂರ್ತಿ ಅಭಿಪ್ರಾಯ ಪಟ್ಟರು. ತಾಲೂಕಿನ‌ ಪರಶುರಾಂಪುರ ಗ್ರಾಮದಲ್ಲಿ ನಾಯಕ ಸಮುದಾಯದವತಿಯಿಂದ ಆಯೋಜಿಸಿದ್ದ ಶ್ರೀ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಮಹರ್ಷಿ ವಾಲ್ಮೀಕಿಯಂತಹ ವಿಶೇಷ ವ್ಯಕ್ತಿತ್ವದ ವ್ಯಕ್ತಿಯೊಬ್ಬರನ್ನು ನಾಡಿಗೆ ಪರಿಚಯಿಸಿದ್ದೇ ರಾಮಾಯಣ ಎನ್ನುವ ಮಹಾಕಾವ್ಯ. ಆದರ್ಶತೆ ಹಾಗೂ ತತ್ವ ಪಾಲನೆಯ ಅಂಶಗಳನ್ನು ವಿಶ್ವಕ್ಕೆ ಸಾರಿದ ಮಹರ್ಷಿ ವಾಲ್ಮೀಕಿ ಅವರು, ಸಮಾಜ ಸುಧಾರಕ, ತತ್ವಜ್ಞಾನಿ, ಚಿಂತಕ, ಶಿಕ್ಷಣ ತಜ್ಞ, ರಾಜನೀತಿ ತಜ್ಞರೂ ಆಗಿದ್ದರು. ಪ್ರಾಚೀನ ಭಾರತದ ಜೀವನಕ್ರಮ, ಸಂಸ್ಕೃತಿ ಹಾಗೂ ಬದುಕಿನ ಶೈಲಿಗಳನ್ನು ರಾಮಾಯಣದ ಒಳಗೆ ಸಾದರ ಪಡಿಸಿದ್ದಾರೆ. ಮನುಕುಲದ ಭವಿಷ್ಯದ ಉಳಿವಿನ ಪರವಾದ ಚಿಂತನೆಗಳನ್ನು ಹೊಂದಿದ್ದ ಬುದ್ದ, ಬಸವ, ಕನಕದಾಸ, ಪುರಂದರದಾಸ, ವಾಲ್ಮೀಕಿಯಂತಹ ಪುಣ್ಯ ಪುರುಷರ ನೆನಪುಗಳು ಕೇವಲ ಆಚರಣೆಗೆ ಸೀಮಿತವಾಗದೆ, ಸಮಗ್ರ ಸಮಾಜದ ವಿಚಾರಧಾರೆಗಳಾಗಿ ಪರಿವರ್ತಿತವಾಗಬೇಕು ಎಂದರು.
ಕೆ.ಟಿ.ಕುಮಾರಸ್ವಾಮಿ ಮಾತನಾಡಿ ಜಗತ್ತಿನಾದ್ಯಂತ ಅನೇಕ ಶ್ರೇಷ್ಠ ಮಹಾಕಾವ್ಯಗಳು ರಚನೆಯಾಗಿದೆ. ಆದರೆ ಭಾರತದ ರಾಮಾಯಣ ಹಾಗೂ ಮಹಾಭಾರತ ಮಹಾಕಾವ್ಯಗಳು ಸಾರ್ವಕಾಲಿಕ ಶ್ರೇಷ್ಠ ಮಹಾಕಾವ್ಯಗಳಾಗಿ ಇಂದಿಗೂ ಗುರುತಿಸಿಕೊಂಡಿದೆ. ಸಾಧಿಸುವ ಮನಸ್ಸಿದ್ದಲ್ಲಿ, ನಾವು ಏನನ್ನಾದರೂ ಸಾಧಿಸಬಹುದು ಎನ್ನುವುದಕ್ಕೆ ಬೇಡನಾಗಿದ್ದ ವಾಲ್ಮೀಕಿ ಮಹರ್ಷಿಯಾದ ಬದಲಾವಣೆಗಳೇ ಉತ್ತಮ ಉದಾಹರಣೆಯಾಗಿದೆ. ಮಹಾತ್ಮರ ಆಚರಣೆ ಅವರ ಬದುಕಿನ ಹೆಜ್ಜೆಗಳನ್ನು ನೆನಪಿಸಿಕೊಳ್ಳುವುದಕ್ಕೆ ಮಾತ್ರ ಸೀಮಿತವಾಗದೆ, ಅವರ ಆದರ್ಶತೆಗಳನ್ನು ಮೈಗೂಡಿಸಿಕೊಳ್ಳಲು ಪ್ರೇರಣೆಯಾದಾಗ ಮಾತ್ರ ಆಚರಣೆ ಹಾಗೂ ಪುಣ್ಯ ಸ್ಮರಣೆಗಳು ಅರ್ಥಪೂರ್ಣವಾಗುತ್ತದೆ ಎಂದು ಹೇಳಿದರು.
ಚುನಾವಣೆ ವರ್ಷ ಜಯಂತಿ. ಉತ್ಸವಗಳಿಗೆ ರಾಜಯೋಗ. ಚಳ್ಳಕೆರೆ ವಿಧಾನಭೆ ಚುನಾವಣೆ ಕಾವು ಜೋರಾಗಿದ್ದು ವಾಲ್ಮೀಕಿ ಜಯಂತಿ.ಕನ್ನಡ ರಾಜ್ಯೋತ್ಸವ. ಕಾರ್ತಿಕ. ಗೌರಮ್ಮ . ಸೇರಿದಂತೆ ವಿವಿಧ ಹಬ್ಬಗಳಿಗೆ ರಾಜಯೋಗ ಬಂದಂತಾಗಿದ್ದು ಕಾಂಗ್ರೇಸ್.ಜೆಡಿಎಸ್.ಬಿಜೆಪಿವಸೇರಿದಂತೆ ಚುನಾವಣೆ ಸ್ಫರ್ಧಿಸುವ ಆಕಾಂಕ್ಷಿಗಳು ಹಣ ಸಹಾಯ ಮಾಡುವ ಮೂಲಕ ಕಾರ್ಯಕ್ರಮದಕ್ಲಿ ಅಭಿಮಾನಿಗಳೊಂದಿಗೆ ಭಾಗವಹಿಸಿ ಮತದಾರರನ್ನು ಸೆಳೆಯಲು ಕಸರತ್ತು ಮಾಡುತ್ತಿದ್ದಾರೆ. ಪರಶುರಾಂಪುರ ಗ್ರಾಮದಲ್ಲಿ ನಡೆದ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಪಕ್ಷದ ಶಾಸಕ ಟಿ.ರಘುಮೂರ್ತಿ.ಜೆಡಿಎಸ್ ಪಕ್ಷದ ಎಂ.ರವೀಶ್.ಬಿಜೆಪಿ ಪಕ್ಷದ ಜಯಪಾಲಯ್ಯ. ರಾಮದಾಸ್.ಜಯರಾಂ.ಅನಿಲ್ ಕುಮಾರ್. ಪಕ್ಷೇತರ ಕೆ.ಟಿ.ಕುಮಾರಸ್ವಾಮಿ. ಜೆಡಿಎಸ್ ತಾಲೂಕು ಅಧ್ಯಕ್ಷ ಪಿ.ತಿಪ್ಪೇಸ್ವಾಮಿ. ತಹಶೀಲ್ದಾರ್ ಎನ್. .ರಘುಮೂರ್ತಿ .ಒಂದೇ ವೇಧಿಕೆಯಲ್ಲಿ ಸಾಕ್ಷಿಯಾಗಿದ್ದರು

ಪರಶುರಾಂಪುರ ಗ್ರಾಮದ ಗ್ರಾಪಂ ಅಧ್ಯಕ್ಷರು.ಸದಸ್ಯರು. ಮಾಜಿ ಜಿಪಂ.ತಾಪಂ ಸದಸ್ಯರು ಗ್ರಾಮಸ್ಥರು ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *