ನಾಯಕನಹಟ್ಟಿ::ಆಗಸ್ಟ್.7. ನಾಯಕನಹಟ್ಟಿ ಪಟ್ಟಣದ ಏಳನೇ ವಾರ್ಡಿನ ಅಂಗನವಾಡಿ ಎಫ್. ಕೇಂದ್ರದಲ್ಲಿ ಸಾಂಕ್ರಮಿಕ ರೋಗದ ವಿರುದ್ಧ ಹೋರಾಡಲು ತಾಯಿಯ ಎದೆ ಹಾಲು ಸಹಕಾರಿ ಎಂದು ಚಳ್ಳಕೆರೆ ತಾಲೂಕು ಆಶಾ ಮೇಲ್ವಿಚಾರಕರಾದ ಎಲ್. ರಶ್ಮಿ ಹೇಳಿದ್ದಾರೆ.
ಬುಧವಾರ ಪಟ್ಟಣದ ಅಂಗನವಾಡಿ .ಎಫ್. ಕೇಂದ್ರದಲ್ಲಿ ವಿಶ್ವ ಸ್ತನ್ಯ ಪಾನ ಸಪ್ತಹ ಕಾರ್ಯಕ್ರಮವನ್ನು ಜ್ಯೋತಿ ಬೆಳಗುವ ಮುಖಾಂತರ ಉದ್ಘಾಟಿಸಿ ಮಾತನಾಡಿದರು ಮಗು ಜನಿಸಿದ ಒಂದು ಗಂಟೆಯೂ ಒಳಗಾಗಿ ಎದೆ ಹಾಲು ಉಣಿಸಿದಲ್ಲಿ ಶಿಶು ಮರಣದ ಪ್ರಮಾಣವನ್ನು ಶೇ.20ರಷ್ಟು ತಗ್ಗಿಸಬಹುದು ತಾಯಿ ಮತ್ತು ಮಗುವಿನ ಮಧ್ಯದ ಬಾಂಧವ್ಯ ಬಲಗೊಳ್ಳಲು ಸಹಕಾರಿಯಾಗಲಿದೆ ಗರ್ಭಿಣಿ ಬಾಣಂತಿಯರಿಗೆ ಮಾಹಿತಿಯನ್ನು ನೀಡಿದರು.
ಇದೇ ವೇಳೆ ನಲಗೇತನಹಟ್ಟಿ ಪ್ರಾಥಮಿಕ ಆರೋಗ್ಯ ಕೇಂದ್ರದ ಹಿರಿಯ ಸುರಕ್ಷಣಾಧಿಕಾರಿ ಸುಕನ್ಯಾ ಮಾತನಾಡಿದರು ತಮ್ಮ ಮಗುವಿಗೆ ಕನಿಷ್ಠ ಒಂದು ವರ್ಷಕ್ಕೂ ಹೆಚ್ಚು ಕಾಲ ಸ್ತನ್ಯಪಾನ ಮಾಡಿಸುವ ತಾಯಂದಿರು ಸ್ತನ್ಯ ಕ್ಯಾನ್ಸರ್ ನಂತಹ ಮಾರಕ ರೋಗಗಳಿಗೆ ತುತ್ತಾಗುವುದಿಲ್ಲ ಅದಕ್ಕೆಂದೆ ಸ್ತನ್ಯಪಾನಕ್ಕೆ ಹೆಚ್ಚಿನ ಒತ್ತು ನೀಡುವಂತೆ ಪ್ರತಿ ತಾಯಿಗೂ ಸಲಹೆಯನ್ನ ನೀಡಿದರು.
ಇನ್ನೂ ಇದೇ ವೇಳೆ ಗರ್ಭಿಣಿಯರಿಗೆ ಸೀಮಂತ ಕಾರ್ಯ ಮಾಡಲಾಯಿತು.
ಇದೇ ಸಂದರ್ಭದಲ್ಲಿ ಆಶಾ ಸುಗುಮಕರಾದ ಆರ್ ಪಾರಿಜಾತ, ಆಶಾ ಕಾರ್ಯಕರ್ತೆರಾದ ಎಲ್ ದ್ರಾಕ್ಷಾಯಿಣಿ ,ಬಿ ಮಂಗಳಮ್ಮ, ಎಸ್ಎಂ ಪರಂ ಜ್ಯೋತಿ, ಅಂಗನವಾಡಿ ಸಹಾಯಕಿ ಕೌಸರ್ ಬಾನು, ಗರ್ಭಿಣಿ ಬಾಣಂತಿಯರು ಮಕ್ಕಳು ಇದ್ದರು.
0 Comments