ಚಳ್ಳಕೆರೆ ಜನಧ್ವನಿ ವಾರ್ತೆ ನ.2 ಹೊಸ ಸರಕಾರ ಬಂದಿದೆ ಎನೋ ಅಭಿವೃದ್ಧಿ ಮಾಡಿತ್ತದೆ ಉಚಿತ ಗ್ಯಾರೆಂಟಿಗಳನ್ನು ಘೋಷಣೆ ಮಾಡಿದೆ ಅಂದುಕೊಂಡಿವಿ ಗ್ಯಾರೆಂಟಿಗಳೇ ನಮಗೆ ಮುಳುವಾಗಿದೆ ಎಂದು ಚಳ್ಳಕೆರೆ ನ್ಯಾಯ ಬೆಲೆ ಅಂಗಡಿಗಳ ಸಂಘದ ಅಧ್ಯಕ್ಷ ಬಪ್ಪಣ್ಣ ಅಕ್ರೋಷ ವ್ಯಕ್ತಪಡಿಸಿದ್ದಾರೆ. ಜನಧ್ವನಿ ಮೀಡಿಯಾ ದೊಂದಿಗೆ ಮಾತನಾಡಿ ಕೇಂದ್ರ ಸರಕಾರ ಅಕ್ಕಿ.ರಾಗಿ ನೀಡುತ್ತಿದೆ ರಾಜ್ಯ ಸರಕಾರ ಹಣ ಡಿಬಿಟಿ ಮೂಲಕ ಹಣ ಹಾಕುತ್ತಿದೆ ಬಹಳ ಪಡಿತರ ಚೀಟಿದಾರರ ಖಾತೆಗೆ ಹಣ ಬರುತ್ತಿಲ್ಲ .ಹಣ ನಿಉಡುವ ಬದಲು ನ್ಯಾಯಬೆಲೆ ಅಂಗಡಿಗಲ ಮೂಲಕವೇ ಸಕ್ಕರೆ ಅಥವಾ ಬೇರೆ ಏನಾದರೂ ನೀಡಬಹುದಿತ್ತು ಇದರಿಂದ ನ್ಯಾಯ ಬೆಲೆ ಅಂಗಡಿ ಮಾಲಿಕರು ಬೀದಿಗೆ ಬೀಳುವಂತಾಗಿದೆ ಇದನ್ನು ಖಂಡಿಸಿ ಗುರುವಾರ ತಾಲೂಕು ಕಚೇರಿಗೆ ಮನವಿ ಸಲ್ಲಿಸಕಾಗುವುದು. ಬೆಂಗಳೂರಿನ ಪ್ರೀಡಂ ಪಾರ್ಕ್ ನಲ್ಲಿ ನ.7 ರ ಮಂಗಳವಾರ ರಾಜ್ಯದ ಎಲ್ಲಾ ನ್ಯಾಯಬೆಲೆ ಅಂಗಡಿ ಮಾಲಿಕರು ಅನಿರ್ದಿಷ್ಟ ಕಾಲ ನಮ್ಮ ಬೇಡಿಕೆಗಳ ಈಡೇರಿಕೆಗಾಗಿ ಪ್ರತಿ ಭಟನೆ ಮಾಡಲಾಗುವುದು ಎಂದು ತಿಳಿಸಿದ್ದಾರೆ. *
ಪಡಿತರ ವಿಳಂಬ*

ಹೀಗಾಗಿ ಪಡಿತರ ಚೀಟಿದಾರರಿಗೆ ಪ್ರಸಕ್ತ ತಿಂಗಳಿನಲ್ಲಿ ಪಡಿತರ ಪಡೆಯಲು ವಿಳಂಬವಾಗುವ ಸಾಧ್ಯತೆ ಇದೆ.ನವೆಂಬರ್ 7ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ನ್ಯಾಯಬೆಲೆ ಅಂಗಡಿ ಮಾಲೀಕರು ಬೃಹತ್ ಪ್ರತಿಭಟನೆ ಕೈಗೊಂಡಿದ್ದಾರೆ.
ನ್ಯಾಯಬೆಲೆ ಅಂಗಡಿ ಮಾಲೀಕರ ಸಮಸ್ಯೆ ಬಗೆಹರಿಸುವಂತೆ ಒತ್ತಾಯಿಸಿ ಆಹಾರ ಇಲಾಖೆ ಸಚಿವರು, ಅಧಿಕಾರಿಗಳೊಂದಿಗೆ ಮೂರ್ನಾಲ್ಕು ಬಾರಿ ಸಭೆ ನಡೆಸಿದ್ದರೂ ಸಮಸ್ಯೆಯನ್ನು ಬಗೆಹರಿಸಿಲ್ಲ. ಮುಖ್ಯಮಂತ್ರಿಗಳು ಮಧ್ಯಪ್ರವೇಶಿಸಿ ಸಮಸ್ಯೆ ಬಗೆಹರಿಸಬೇಕು ಎಂದು ಸಂಘದ ಅಧ್ಯಕ್ಷ ಟಿ. ಕೃಷ್ಣಪ್ಪ ಒತ್ತಾಯಿಸಿದ್ದಾರೆ.
ಪಡಿತರ ಚೀಟಿದಾರರಿಗೆ ಅಕ್ಕಿ ಬದಲು ಹಣ ನೀಡುವುದರಿಂದ ನ್ಯಾಯಬೆಲೆ ಅಂಗಡಿ ಮಾಲೀಕರಿಗೆ ಕಮಿಷನ್ ಸಿಗುತ್ತಿಲ್ಲ. ಹೀಗಾಗಿ ಎಲ್ಲರಿಗೂ 10 ಕೆಜಿ ಅಕ್ಕಿಯನ್ನೇ ವಿತರಿಸಲು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
0 Comments