ನ್ಯೂಡೈಮಂಡ್ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘಕ್ಕೆ ಅಧ್ಯಕ್ಷರಾಗಿ ಎಚ್.ಬಿ.ಯೋಗಾನಂದ್ ಅವಿರೋಧಆಯ್ಕೆ

by | 06/11/23 | ಕ್ರೇಡೆ


ಹಿರಿಯೂರು :
ನಗರದ ಹೊರವಲಯದಲ್ಲಿರುವ ಎ.ಕೃಷ್ಣಮೂರ್ತಿಯವರ ತೋಟದಲ್ಲಿ ನ್ಯೂಡೈಮಂಡ್ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘದ ಸರ್ವ ಸದಸ್ಯರ ಸಭೆಯನ್ನು ನಡೆಸಲಾಯಿತು.
ಈ ಒಂದು ಸಭೆಯಲ್ಲಿ ನ್ಯೂಡೈಮಂಡ್ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘದ ಗೌರವಾಧ್ಯಕ್ಷರುಗಳಾಗಿ ಎಂ.ಎಸ್.ಬಾಲಕೃಷ್ಣ, ಹಾಗೂ ಶ್ರೀನಿವಾಸನಾಯಕ, ಅಧ್ಯಕ್ಷರಾಗಿ ಹೆಚ್.ಬಿ,ಯೋಗಾನಂದ ಇವರುಗಳನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಉಳಿದಂತೆ ಸಂಘದ ಉಪಾಧ್ಯಕ್ಷರುಗಳಾಗಿ ಹೆಚ್,ಪಿ.ಓಂಕಾರೇಶ್ವರ, ಆರ್.ಎಸ್,ಸುರೇಶ್, ಕಾಯ೯ದಶಿ೯ಯಾಗಿ ಟಿ.ಬಾಲಾಜಿ, ಸಹಕಾರ್ಯದರ್ಶಿಯಾಗಿ ರಂಗನಾಥ್, ಖಜಾಂಚಿಯಾಗಿ ರವಿ, ಸಂಘಟನಾ ಕಾರ್ಯದರ್ಶಿಗಳಾಗಿ ಪರಮೇಶ್, ರವಿ, ಸುರೇಶ್, ತಿಪ್ಪೇಸ್ವಾಮಿ, ಮಹಮದ್ ಭಾಷಾ, ಮಲ್ಲೇಶ್, ಜಗದೀಶ್ ಭಂಡಾರ, ಶ್ರೀನಿವಾಸ್, ಶಿವಪ್ರಸಾದ್, ಮಂಜುನಾಥ, ಇವರುಗಳನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ನ್ಯೂಡೈಮಂಡ್ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘಕ್ಕೆ ನೂತನವಾಗಿ ಆಯ್ಕೆಯಾದ ಎಲ್ಲಾ ಆಡಳಿತ ಮಂಡಳಿ ಪದಾಧಿಕಾರಿಗಳು ಸಂಘದ ಪ್ರತಿಜ್ಞಾ ವಿಧಿ ಸ್ವೀಕರಿಸುವ ಮೂಲಕ, ಸಂಘದ ಏಳಿಗೆಗೆ ಶ್ರಮಿಸುತ್ತೇವೆ ಎಂಬುದಾಗಿ ಘೋಷಿಸಿದರು. ಈ ಕಾರ್ಯಕ್ರಮದಲ್ಲಿ ಸಂಘದ ಸವ೯ಸದಸ್ಯರು ಹಾಜರಿದ್ದರು.

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *