ಮೊಳಕಾಲ್ಮುರು:-ರಾಯಾಪುರ ಗ್ರಾಮ ಸಮೀಪದ ಹೊಲವೊಂದರಲ್ಲಿ ಅಪರೂಪದ ಬೃಹತ್ ಗಾತ್ರದ ನೈಸರ್ಗಿಕ ಅಣಬೆ ಪತ್ತೆಯಾಗಿದೆ.
ಅಪರೂಪದಲ್ಲಿ ಅಪರೂಪ ಎನ್ನಬಹುದಾದ ತಿನ್ನಲು ಯೋಗ್ಯವಾಗಿರುವ ಈ ಅಣಬೆಯು ಸುಮಾರು ಒಂದು ಅಡಿ ಎತ್ತರ ಒಂದು ಅಡಿ ಅಗಲ ಇದ್ದು ಸುಮಾರು ಐದು ಕೆಜಿ ತೂಕದ ಅಣಬೆ ಇದಾಗಿದೆ.
ಕಾಡು ಜಾತಿಗೆ ಸೇರಿರುವ ಈ ಅಣಬೆಯು ಇತ್ತೀಚೆಗೆ ಸುರಿದ ಮಳೆಯಿಂದಾಗಿ ಬೆಳೆದು ದೊಡ್ಡದಾಗಿರುವ ಈ ಅಣಬೆಯು ಹೊಲದಲ್ಲಿ ಬಿಳಿ ಛತ್ರಿಯಂತೆ ಕಂಡುಬಂದಿದೆ.
ಭಾನುವಾರದಂದು ಅಣಬೆ ಶಿಖಾರಿಗೆಂದು ಹೊರಟು ಕಾಡು ಮೇಡು ಅಲೆಯುತ್ತಿದ್ದ ಪ್ರಕಾಶ್ ಎಂಬುವರಿಗೆ ಈ ಅಪರೂಪದ ಅಣಬೆಯು ಹೊಲವೊಂದರಲ್ಲಿ ಪತ್ತೆಯಾಗಿದೆ. ಮಳೆ ಬೀಳುವ ಸಂದರ್ಭದಲ್ಲಿ ಫಲವತ್ತಾದ ಭೂಮಿಯಲ್ಲಿ ಅಣಬೆಗಳು ಹುಟ್ಟಿಕೊಳ್ಳುವುದು ಸಹಜ,ಆದ್ರೆ ಈ ದೊಡ್ಡ ಪ್ರಮಾಣದ ಅಣಬೆ ಸಿಕ್ಕಿರುವುದು ಇದೆ ಮೊದಲು ಎನ್ನುತ್ತಾರೆ ಪ್ರಕಾಶ್.
0 Comments