ಚಿತ್ರದುರ್ಗ ಆ.28:
ಸತ್ತ ನಂತರವೂ ನಿಮ್ಮ ಕಣ್ಣುಗಳು ಜೀವಂತವಾಗಿರಬೇಕು ಎನ್ನವುದಾದರೆ, ಇಂದೇ ನಿಮ್ಮ ಕಣ್ಣುಗಳನ್ನು ದಾನ ಮಾಡಿ ಅಂಧರ ಬಾಳಿಗೆ ಬೆಳಕಾಗಿ ಎಂದು ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಕೃಷ್ಣನಾಯ್ಕ್ ಹೇಳಿದರು.
ನಗರ ಪದ್ಮಾವತಿ ಕಾಲೇಜ್ ಆಫ್ ನರ್ಸಿಂಗ್ ಸೈನ್ಸ್ನಲ್ಲಿ ಗುರುವಾರ ಆರೋಗ್ಯ ಇಲಾಖೆ ವತಿಯಿಂದ ನರ್ಸಿಂಗ್ ಕಾಲೇಜು ವಿದ್ಯಾರ್ಥಿಗಳಿಗೆ 39ನೇ ನೇತ್ರದಾನ ಪಾಕ್ಷಿಕ ಮಾಹಿತಿ ಶಿಕ್ಷಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪ್ರತಿ ವರ್ಷದಂತೆ ಈ ವರ್ಷವೂ ಕೂಡ ನೇತ್ರದಾನ ಪಾಕ್ಷಿಕವು ಇದೇ ಆಗಸ್ಟ್ 25 ರಿಂದ ಆರಂಭವಾಗಿದ್ದು, ಸೆಪ್ಟೆಂಬರ್ 10ರ ತನಕ ನಡೆಯುತ್ತಿದೆ. ನೇತ್ರದಾನದ ಮಹತ್ವ ಜಾಗೃತಿಗಾಗಿ ವಿವಿಧ ಕಾಲೇಜುಗಳಲ್ಲಿ ಸಾರ್ವಜನಿಕ ಸಭೆಯಲ್ಲಿ ಮಾಹಿತಿ ನೀಡಿ ಸಾರ್ವಕನಿಕರು ನೇತ್ರದಾನದಲ್ಲಿ ಭಾಗವಹಿಸುವಂತೆ ಪ್ರೇರಣೆ ನೀಡಲಾಗುತ್ತದೆ ಎಂದು ಹೇಳಿದರು.
ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್.ಮಂಜುನಾಥ ಮಾತನಾಡಿ, ತಮ್ಮ ನೇತ್ರಗಳು ಸದಾ ಜೀವಂತವಾಗಿರಲಿ. ನೇತ್ರದಾನ ನಿಮ್ಮ ಕುಟುಂಬದ ಸಂಪ್ರದಾಯವಾಗಲಿ. ಒಬ್ಬ ವ್ಯಕ್ತಿ ದಾನ ಮಾಡಿದ ನೇತ್ರಗಳು ಇಬ್ಬರು ಕಾರ್ನಿಯಾ ಅಂಧರಿಗೆ ದೃಷ್ಟಿ ನೀಡುತ್ತದೆ. ಪ್ರತಿ ವರ್ಷ ಸರಾಸರಿ 5600 ನೇತ್ರದಾನಗಳಾಗುತ್ತಿವೆ. ಅಂದಾಜು 1.25 ಲಕ್ಷ ಜನರು ಕಾರ್ನಿಯಾ ಸಂಬAಧಿಸಿದ ಅಂಧತ್ವದಿAದ ಬಳಲುತ್ತಿದ್ದು, ದಾನಕ್ಕಾಗಿ ಕಾಯುತ್ತಿರಿತ್ತಾರೆ. ನೇತ್ರದಾನ ಅತ್ಯುತ್ತಮ ಸೇವೆಯಾಗಿದ್ದು, ರಾಜ್ಯದಲ್ಲಿ 32 ನೇತ್ರ ಬ್ಯಾಂಕ್‌ಗಳು ಸೇವೆ ಸಲ್ಲಿಸುತ್ತಿವೆ ಎಂದು ತಿಳಿಸಿದರು.
ಚಿತ್ರದುರ್ಗ ನಗರದಲ್ಲಿ ಬಸವೇಶ್ವರ ಪೂರ್ಣ ಜ್ಯೋತಿ ನೇತ್ರ ಬ್ಯಾಂಕ್ ಬಸವೇಶ್ವರ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿದೆ. ವಯಸ್ಸು, ಬಣ್ಣ, ಲಿಂಗ, ಜಾತಿ, ರಕ್ತದ ಗುಂಪು ಯಾವುದೇ ಬೇಧವಿಲ್ಲದೇ ಎಲ್ಲರೂ ನೇತ್ರದಾನ ಮಾಡಬಹುದು. ವ್ಯಕ್ತಿಯ ಮರಣ ನಂತರ 6 ಗಂಟೆಯ ಒಳಗೆ ನೇತ್ರಗಳನ್ನು ಸಂಗ್ರಹಿಸಲಾಗುವುದು. ನೇತ್ರ ಸಂಗ್ರಹಣೆಗೆ ಬೇಕಾಗುವ ಸಮಯ 20 ನಿಮಿಷಗಳು ಸಂಗ್ರಹಣೆಯ ನಂತರ ಮೃತರ ಮುಖ ವಿಕಾರವಾಗುವುದಿಲ್ಲ. “ಜೀವಸಾರ್ಥಕತೆ” ವೆಬ್ ಪೋರ್ಟಲ್ ಮೂಲಕವು ನೇತ್ರದಾನ, ಅಂಗಾAಗ ದಾನ ಮಾಡಬಹುದು. ವೆಬ್‌ಪೋರ್ಟಲ್ ಮೂಲಕ ಮನೆಯಲ್ಲಿಯೇ ಕುಳಿತು ದಾನ ಮಾಡಬಹುದು ಎಂದರು.
ಕಾರ್ಯಕ್ರಮದಲ್ಲಿ ಆರೋಗ್ಯ ನಿರೀಕ್ಷಣಾಧಿಕಾರಿ ಶ್ರೀನಿವಾಸ, ಕಾಲೇಜಿನ ಪ್ರಾಂಶುಪಾಲ ವೆಂಕಟೇಶ ರೆಡ್ಡಿ, ಉಪನ್ಯಾಸಕರಾದ ಗಂಗಾ, ತೇಜಸ್ವಿನಿ, ಜಬ್ಬಾರ್ ಇದ್ದರು.
ಜಿಪಂ ಸಿಇಒ ಸೋಮಶೇಖರ್ ಭೇಟಿ ನರೇಗಾ ಕಾಮಗಾರಿಪರಿಶೀಲನೆ.
ಚಳ್ಳಕೆರೆ ಸೆ.11. ಹೆಚ್ಚು ಕಾಮಗಾರಿಗಳನ್ನು ಅನುಷ್ಟಾನಗೊಳಿಸಿ ಗ್ರಾಮೀ ಣ ಭಾಗದ ಕೂಲಿಕಾರ್ಮಿಕರಿಗೆ ದುಡಿಯುವ ಕೈಗಳಿಗೆ ಕೆಲಸ ನೀಡುವಂತೆ...
0 Comments