ಚಿತ್ರದುರ್ಗ, ನವೆಂಬರ್ 13 :ಅನಾರೋಗ್ಯ ಹಾಗೂ ಹೊಟ್ಟೆ ನೋವು ತಾಳಲಾರದೆ
ವಿದ್ಯಾರ್ಥಿಯೋರ್ವ ನೇಣಿಗೆ ಶರಣಾದ ಘಟನೆ ಚಿತ್ರದುರ್ಗ ನಗರ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಚಿತ್ರದುರ್ಗ ನಗರದ ಅರಣ್ಯ ಕಚೇರಿ ಹತ್ತಿರ ಜೆ.ಸಿ.ಆರ್ ಬಡಾವಣೆ ರಸ್ತೆ, ಉಮಾಪತಿ
ಕಲ್ಯಾಣ ಮಂಟಪದ ಬಳಿ ವಾಸಿ ಇರುವ ಸಿದ್ದೇಶ(15) ನು ದಿನಾಂಕ: 13.11.2023 ರಂದು ಬೆಳಿಗ್ಗೆ ಸುಮಾರು
07.00 ಸಮಯದಲ್ಲಿ ಈ ವಿದ್ಯಾರ್ಥಿಯು ಎಸ್.ಎಸ್.ಎಲ್.ಸಿ ವಿದ್ಯಾಭ್ಯಾಸ ಮಾಡುತ್ತಿದ್ದು, ಕೆಲವು
ತಿಂಗಳುಗಳಿಂದ ಮಾನಸಿಕ ಅಸ್ವಸ್ಥನಂತೆ ವರ್ತಿಸುತ್ತಿದ್ದು, ಶಾಲೆಗೆ ಗೈರು ಹಾಜರಾಗುವುದು. ಶಾಲೆಯ ಮೇಲೆ
ಮಲಗುವುದು. ಮನೆ ಬಿಟ್ಟು ಹೋಗುವುದು ಈ ರೀತಿ ವರ್ತಿಸುತ್ತಿದ್ದನು. ಹಲವಾರು ಕಡೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ
ಕೊಡಿಸಿದರೂ ವಾಸಿಯಾಗಿರುವುದಿಲ್ಲ. ಹೀಗಿರುವಾಗ ಮಾನಸಿಕ ಅಸ್ವಸ್ಥನಾಗಿ ಪ್ಯಾನಿಗೆ ಸೀರೆಯಿಂದ ನೇಣು
ಹಾಕಿಕೊಂಡು ಮೃತಪಟ್ಟಿರುತ್ತಾನೆ. ಈ ಬಗ್ಗೆ ಚಿತ್ರದುರ್ಗ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನೇಣು ಹಾಕಿಕೊಂಡು ವಿದ್ಯಾರ್ಥಿ ಸಾವು
ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ
0 Comments