ಚಳ್ಳಕೆರೆ ಆ.12. ನಿವೇಶ ಹಾಗೂ ವಸತಿ ರಹಿತರ ಕುಟುಂಬದ ಸದಸ್ಯರಿಗೆ ಮೀಸಲಿಟ್ಟ ಭೂಮಿಯಲ್ಲಿ ನಿವೇಶನ ಕೊಡುವುದಾಗಿ ಶಾಸಕ ಟಿ.ರಘುಮೂರ್ತಿ ಭರವಸೆ ನೀಡಿದರು.
ತಾಲೂಕು ಕಚೇರಿ ಆವರಣದಲ್ಲಿ ಗಂಜಿಗುಂಟೆ ಗ್ರಾಮದ ದಲಿತ ಸಮುದಾಯ ನಿವೇಶನಕ್ಕಾಗಿ ಐದನೇ ದಿನಕ್ಕೆ ಕಾಲಿಟ್ಟ ಪ್ರತಿಭಟನಾ ಸ್ಥಳಕ್ಕೇ ಭೇಟಿ ನೀಡಿ ಮಾತನಾಡಿದರು.
ನಾನು ಮೂರನೇ ಬಾರಿಗೆ ಶಾಸಕನಾಗಿನಿಂದ ನಿವೇಶನಕ್ಕಾಗಿ ಇದೇ ಮೊದಲು ಪ್ರತಿಭಟನೆ ಮಾಡುತ್ತಿರುವುದು .
ಈಗಾಗಲೆ ಜಿಲ್ಲಾಧಿಕಾರಿ ಜಿಪಂ ಸಿಇಒ ಗೆ ಸೂಚನೆ ನೀಡಿ ಸಮಸ್ಯೆ ಬಗೆಹರಿಸುವಂತೆ ಸೂಚನೆ ನೀಡಲಾಗಿತ್ತು
ಅದರಂತೆ ಅಧಿಕಾರಿಗಳು ಕಳೆದ ಮೂರು ದಿನಗಳಿಂದ ನಿವೇಶನಕ್ಕೆ ಮೀಸಲಿಟ್ಟ ಭೂಮಿಯಲ್ಲಿನ ಸ್ವಚ್ಚತೆಗೆ ಮುಂದಾಗಿದ್ದಾರೆ.
ನಿವೇಶನ ವಂಚಿತರಿಗೆ ನಿವೇಶನ ಸಿಗುವುದು ಗ್ಯಾರೆಂಟಿ ನೀವು ಗಾಳಿ ಮಾತಿಗೆ ಕಿವಿಗೊಡದೆ ಗ್ರಾಮದಲ್ಲಿ ಸಹೋದರಂತೆ ಬಾಳ ಬೇಕು ನಮಗೆ ಅಧಿಕಾರ ಇರುತ್ತೆ ಹೋಗುತ್ತೆ ಈಗ ಅಧಿಕಾರಿಗಳು ಎಲ್ಲಾ ಸಿದ್ದತೆ ಮಾಡಿಕೊಂಡಿದ್ದಾರೆ ನೀವು ಪ್ರತಿ ಭಟನೆಯನ್ನು ಹಿಂಪಡೆದು ಗ್ರಾಮದಲ್ಲಿ ನೆಮ್ಮದಿಯ ಜೀವನ ಸಾಗಿಸಿ ಎಂದು ಪ್ರತಿಭಟನಾ ಕಾರರಿಗೆ ಅಭಯ ನೀಡಿದರು.
ಪ್ರಿಭಟನೆಯ ಮುಖಂಡ ರಂಗಸ್ವಾಮಿ ಮಾತನಾಡಿ ನಮಗೆ ದಲಿತ ಸಮುದಾಯಕ್ಕೆ ಪ್ರತ್ಯೇಕವಾಗಿ ಒಂದು ಕಡೆ ನೀವೇಶನ ನೀಡುವಂತೆ ಮನವಿ ನೀಡಿದರು.
ಇದಕ್ಕೆ ಶಾಸಕ ಟಿ.ರಘುಮೂರ್ತಿ ಪ್ರತಿಕ್ರಿಯಿಸಿ ಒಟ್ಟು ಎಚ್ಟು ಎಕರೆ ಸರಕಾರಿ ಭೂಮಿ ಇದೆ ಎಂದು ತಹಶೀಲ್ದಾರ್ ಗೆ ಮಾಹಿತಿ ಕೇಳಿದರು ಎಂಟು ಎಕರೆ ಇದೆ ಅದರಲ್ಲಿ ಐದು ಎಕರೆ ಈಗಾಗಲೆ ಆಶ್ರಯ ನಿವೇಶನಕ್ಕೆ ಮಂಜುರಾತಿ ನೀಡಿದೆ ಎಂದರು.
ಇದಕ್ಕೆ ಶಾಸಕ ಟಿ.ರಘುಮೂರ್ತಿ ಮಾತನಾಡಿ ದಲಿತ ಸಮುದಾಯಕ್ಕೆ ಎರಡು ಎಕರೆ ಮೀಸಲಿಡಿ ಅದರಲ್ಲಿ ಶಾಲೆ.ಸಮುದಾಯ ಭವನ ಮಾಡಲು ಅನುಕೂಲವಾಗುತ್ತದೆ ಒಂದು ವಾರದೊಳಗೆ ನಿವೇಶನ ಪ್ರಕ್ರಿಯೆ ಪೂರ್ಣಗೊಳಿಸುವಂತೆ ಸೂಚನೆ ನೀಡಿದರು.
ತಾಪಂ ಇಒಶಶಿಧರ್.ನಗರಸಭೆ ಸದಸ್ಯರಾದ ವೀರಭದ್ರಪ್ಪ.ರಾಘವೇಂದ್ರ. ವಕೀಲರಾದ ಶಶಿಕುಮಾರ್. ಶಿವಮೂರ್ತಿ ಇತರರಿದ್ದರು.
0 Comments