ನಿಧಿಗಳ್ಳರ ವಕ್ರದೃಷ್ಠಿಗೆ ಪುರಾತನ ದೇವಾಲಯಗಳು ಶಿಥಿಲ ಅರ್ಚಕ ತಿಪ್ಪೇಸ್ವಾಮಿ.

by | 26/02/24 | ಸುದ್ದಿ


ಚನ್ನಗಿರಿ ಫೆ.26 ನಿಧಿ ಹಾಗೂ ದೇವಾಲಯಆಸ್ತಿ ಗಾಗಿ ಪುರಾತನ ದೇವಾಲಗಳು ಶಿಥಿಲವಾಸ್ಥೆಗೆ ತಲುಪಿದರು ಸಂಬಂಧ ಪಟ್ಟ ಇಲಾಖೆ ಮೌನಕ್ಕೆ ಜಾರಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ.
ಹೌದು ಇದು ಚನ್ನಗಿರಿ ತಾಲೂಕಿನ ಕಸಬ ಹೋಬಳಿಯ ಲಕ್ಷ್ಮೀಸಾಗರ ಗ್ರಾಮದ ಸಮೀಪದ ಮಲ್ಲಿಹಳ್ಳಿ ಗ್ರಾಮದ ರಿ.ಸಂ 74 ರಲ್ಲಿ 800 ವರ್ಷಗಳ ಇತಿಹಾಸವಿರುವ ಮೈಲಾರಲಿಂಗ, ಆಂಜನೇಯಸ್ವಾಮಿ ಹಾಗೂ ಮಾಸ್ತಮ್ಮ ಮೂರು ದೇವಸ್ಥಾನಗಳಿದ್ದು ದೇವಸ್ಥಾನದ ಹೆಸರಿನಲ್ಲಿ ಜಮೀನು, ಒಡವೆ , ಆಸ್ತಿ ಹಾಗೂ ನಿಧಿಗಳ್ಳರ ಹಾವಳಿಗೆ ಸಿಲುಕಿ ದೇವಸ್ಥಾನಗಳು ನೆಲಸಮ ಹಾಗೂ ಶಿಥಿಲಾವಸ್ಥೆಗೆ ತಲುಪಿವೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಹಿಂದೂ ಪರಂಪರೆಯಲ್ಲಿ ದೇವಾಲಯಗಳಿಗೆ ಪೂಜನೀಯ ಸ್ಥಾನವಿದೆ. ದೇಗುಲಗಳು ಭಕ್ತರ ಶ್ರದ್ಧಾಭಕ್ತಿಯ ಕೇಂದ್ರವೂ ಹೌದು. ಆದರೆ, ಕೆಲವು ಕಿಡಿಗೇಡಿಗಳು ನಿಧಿ, ಆಸ್ತಿ ಆಸೆಗಾಗಿ ದೇವಾಲಯಗಳ ಮೇಲೆ ತಮ್ಮ ವಕ್ರದೃಷ್ಟಿ ಬಿರುತ್ತಿದ್ದಾರೆ.
ನಿಧಿಯ ಆಸೆಗಾಗಿ ಪ್ರಾಚೀನ ಕಾಲದ ಶಿವನ ದೇವಾಲಯದ ಮೂರ್ತಿಗಳನ್ನು ದ್ವಂಸ ಮಾಡಿದ ಘಟನೆ ನಡೆದಿದೆ. ಈ ದೇವಾಲಯವು ಪುರಾತನ ಕಾಲದ್ದಾಗಿದೆ. ಇಲ್ಲಿನ ಸುಂದರ ಕಲ್ಲಿನ ಕೆತ್ತನೆ, ಶಿವನ ಲಿಂಗ ಇಲ್ಲಿನ ಆಕರ್ಷಣೆಯ ಕೇಂದ್ರವಾಗಿತ್ತು. ಈ ಭಾಗದಲ್ಲಿ ಸಾರ್ವಜನಿಕರ ಓಡಾಟ ತುಂಬಾ ವಿರಳವಾಗಿತ್ತು. ಹೀಗಾಗಿ ಈ ಪುರಾತನ ದೇಗುಲದ ಮೇಲೆ ನಿಧಿಗಳ್ಳರ ಕಣ್ಣು ಬಿದ್ದಿದೆ. ಪುರಾತನ ದೇವಸ್ಥಾನವನ್ನು ಪುರಾತತ್ವ ಇಲಾಖೆ ರಕ್ಷಣೆ ಮಾಡಬೇಕಿದೆ ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ದೇವ ಸ್ಥಾನದ ಅರ್ಚಕ ಲಕ್ಷ್ಮಿಸಾಗ ತಿಪ್ಪೇಸ್ವಾಮಿ ಜನಧ್ವನಿ ನ್ಯೂನ್ ನೊಂದಿಗೆ ಮಾತನಾಡಿ ಶ್ರೀ ಆಂಜನೇಯ, ಮೈಲಾರಲಿಂಗಪ್ಪ ಹಾಗೂ ಮಾಸ್ತೆಮ್ಮ ೀ ಮೂರು ದೇವಸ್ಥಾನಗಳಿಗೆ ಸುರಂಗ ಮಾರ್ಗ ಸಂಪರ್ಕ, ಕೋಟೆಯೂ ಸಹ ಇದೆ ಈ ದೇವಸ್ತಾನಗಳಿಗೆ ಸಂಬಂಧಪಟ್ಟ ಆಸ್ತಿ ಒಡವೆ, ಹಾಗೂ ನಿಧಿ ಇತ್ತು ಎನ್ನಲಾಗಿದೆ, ಇಲ್ಲಿ ಸುಮಾರು 10 ಎರಿಂದ 15 ಮನೆಗಳಿದ್ದವು ಎನ್ನಲಾಗಿದ್ದು ಸುಮಾರು 1963 ರಲ್ಲಿ ಆಕಸ್ಮಿಕ ಬೆಂಕಿಗೆ ಸಿಲುಗೆ ಮನೆಗಳು ಸುಟ್ಟುಹೋಗಿದ್ದು ಮತ್ತೆ ಇಲ್ಲಿ ಯಾರು ಮನೆಗಳ ನಿರ್ಮಾಣಕ್ಕೆ ಮುಂಗಾಗದೆ ಇರುವುದರಿಂದ ಇಲ್ಲಿ ನಿರ್ಜನ ಪ್ರದೇಶವಾಗಿರುವುದನ್ನೇ ಬಂಡವಾಳ ಮಾಡಿಕೊಂಡು ದೇವಸ್ಥಾನಗಳನ್ನು ಜೀರ್ಣೋದ್ದರ ಮಾಡುವ ಬದಲು ನಿಧಿ, ಆಸ್ತಿ ಸಂಪತ್ತನ್ನು ಲೂಟಿ ಮಾಡಲು ಮುಂದಾಗಿರುವುದರಿಂದ ಪುರಾತನ ದೇವಾಲಯಗಳು ಮುಂದಿನ ಪೀಳಿಗೆಗೆ ಕಣ್ಮರೆಯಾಗುತ್ತಿರುವುದು ದುರಂತದ ಸಂಘತಿಯಾಗಿದೆ ಈ ಬಗ್ಗೆ ಸಂಬಧಪಟ್ಟ ಇಲಾಖೆಗೆ ಗಮನ ಸೆಳೆದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ದೇವಸ್ಥಾನದ ಅರ್ಚಕ ತಿಪ್ಪೇಸ್ವಾಮಿ ಅಳಲು ತೋಡಿಕೊಂಡಿದ್ದಾರೆ.
ಈಗಲಾದರೂ ಸಂಬಂಧಪಟ್ಟ ಇಲಾಖೆ ಪುರತಾನ ದೇವಸ್ಥಾನಗಳ ರಕ್ಷಣೆಗೆ ಮುಂದಾಗುವರೇ ಕಾದು ನೋಡ ಬೇಕಿದೆ.


ಚನ್ನಗಿರಿ ಬಯಲುಸೀಮೆ ಮತ್ತು ಮಲೆನಾಡಿನ ಅಪೂರ್ವ ಸಂಗಮದಿಂದ ಕೂಡಿದೆ . ತಾಲ್ಲೂಕಿನ ಮುಖ್ಯ ವಾಣಿಜ್ಯ ಬೆಳೆಯಾಗಿ ಅಡಿಕೆ ಯನ್ನೂ ಯಥೇಚ್ಛವಾಗಿ ಬೆಳೆಯುತ್ತಾರೆ ಅದಕ್ಕೆ,ಚನ್ನಗಿರಿ ಯನ್ನು ಅಡಿಕೆ ನಾಡು ಎಂದು ಖ್ಯಾತಿ ಪಡೆದಿರುವ ಜತೆಗೆ ಕೋಟೆ ಕೊತ್ತಲ, ಪುಸ್ಕರಣಿ, ಹೊಯ್ಸಳರ ಕಾಲದ ಸುಂದರ ಕೆತ್ತನೆ ದೇವಾಲಯಗಳನ್ನು ಸಹ ಹೊಂದಿದೆ.

Latest News >>

ಮಹಾವೀರರ ತತ್ವ ಆದರ್ಶಗಳು ಸರ್ವಕಾಲಕ್ಕೂ ಪ್ರಸ್ತುತ: ತಹಸಿಲ್ದಾರ್ ರೆಹಾನ್ ಪಾಷ

ಚಳ್ಳಕೆರೆ: ನಗರದ ತಾಲೂಕು ಕಚೇರಿಯ ಸಭಾಂಗಣದಲ್ಲಿ ತಾಲೂಕು ಆಡಳಿತ ಮತ್ತು ಜೈನ ಸಮುದಾಯ ವತಿಯಿಂದ ಇಂದು ಮಹಾವೀರ  ಜಯಂತಿಯನ್ನು ಲೋಕಸಭಾ ಚುನಾವಣೆ...

ಕುಡಿಯುವ ನೀರಿನ ಯೋಜನೆಯ ಜಾಕ್ ವೆಲ್ ನ ಸ್ಥಳಕ್ಕೆಮುಖ್ಯಕಾರ್ಯದರ್ಶಿಯಾದ ಅಂಜುಮ್ ಫರ್ವೇಜ್ ಭೇಟಿ

ಹಿರಿಯೂರು: ವಾಣಿವಿಲಾಸ ಸಾಗರದ ಐಮಂಗಲ ಹಾಗೂ ಹೊಳಲ್ಕೆರೆ ತಾಲ್ಲೂಕಿನ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಜಾಕ್ ವೆಲ್ ಸ್ಥಳಕ್ಕೆ...

ಸಡಗರ ಸಂಭ್ರಮದಿಂದ ಜರುಗಿದ ಶ್ರೀರಾಮನವಮಿ- ಶ್ರೀರಾಮ ಭಕ್ತರಿಂದ ಪಾನಕ. ಕೋಸಂಬರಿ ವಿತರಣೆ- ವಿಶೇಷ ಪೂಜೆ.

ಚಳ್ಳಕೆರೆ ಜನಧ್ವನಿ ವಾರ್ತೆ ಏ17. ಶ್ರೀರಾಮನವಮಿ ಅಂಗವಾಗಿ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಶ್ರೀರಾಮ ಜಪದೊಂದಿಗೆ ಸಡಗರ ಸಂಭ್ರಮದಿಂದ...

ವಾಣಿ ವಿಲಾಸ ಸಾಗರ ಜಲಾಶಯದ ನೀರನ್ನ ಖಾಲಿ ಮಾಡವಂತ ಹುನ್ನಾರ ನಡೆಸಲಾಗಿದೆ ಎಂಬುದಾಗಿ ರೈತ ಮುಖಂಡ :ಕಸವನಹಳ್ಳಿ ರಮೇಶ್ ಆರೋಪ

ಹಿರಿಯೂರು: ವಾಣಿವಿಲಾಸ ಸಾಗರ ಜಲಾಶಯದ ನೀರು ಖಾಲಿ ಮಾಡಲು ಹುನ್ನಾರ ನಡೆಸಲಾಗಿದೆ ಎಂಬುದಾಗಿ ರೈತ ಮುಖಂಡ ಹಾಗೂವಾಣಿವಿಲಾಸ ಸಾಗರ ಹಾಗೂ ಭದ್ರಾ...

ಬೆಳೆವಿಮೆ ಪರಿಹಾರದಲ್ಲಿ ರೈತರಿಗೆ ಅನ್ಯಾಯವಾಗಲು ಬಿಡುವುದಿಲ್ಲ.ಮರುಪರಿಶೀಲಿಸಿ ಹೆಚ್ಚುವರಿ ಪರಿಹಾರ ಕೊಡಿಸಲು ಪ್ರಯತ್ನ: ಎಚ್.ಎನ್.ಶಿವೇಗೌಡ

ಹಿರಿಯೂರು: ಬೆಳೆವಿಮೆ ಪರಿಹಾರದಲ್ಲಿ ರೈತರಿಗೆ ಯಾವುದೇ ಕಾರಣಕ್ಕೂ ಅನ್ಯಾಯವಾಗಲು ಬಿಡುವುದಿಲ್ಲ. ಮರುಪರಿಶೀಲಿಸಿ ಹೆಚ್ಚುವರಿ ಪರಿಹಾರ ಕೊಡಿಸಲು...

ಯುಗಾದಿ ಹಬ್ಬಕ್ಕೆ ಬಂದವರಿಗೆ ಬೆಂಗಳೂರಿಗೆ ತೆರಳಲು ಬಸ್ಸಿಗಾಗಿ ಸಾರಿಗೆ ಬಸ್ಸು ನಿಲ್ದಾಣದಲ್ಲಿ ಕಾಯುತ್ತಿರುವ ಪ್ರಯಾಣಿಕರು.

ಚಳ್ಳಕೆರೆ ಏ11 ಯುಗಾದಿ ಹಬ್ಬ ಮುಗಿಸಿಕೊಂಡು ಮತ್ತೆ ಬೆಂಗಳೂರಿಗೆ ತೆರಳಲು ಸಾರಿಗೆ ಬಸ್ಸುಗಳ ವ್ಯವಸ್ಥೆಯಿಲ್ಲದೆ ಪ್ರಯಾಣಿಕರು ಪರದಾಡುವಂತಾಗಿದೆ....

ರಂಜಾನ್ ಹಾಗೂ ಯುಗಾದಿ ಹಬ್ಬದ ಪ್ರಯುಕ್ತ ಅಗತ್ಯವಸ್ತುಗಳ ಖರೀದಿ ಬಲು ಜೋರು..

ಚಳ್ಳಕೆರೆ ಚಳ್ಳಕೆರೆ ಏ.8 ಅಗತ್ಯ ವಸ್ತುಗಳ ಬೆಳೆ ಏರಿಕೆ , ಬಿಸಿಲಿನ ತಾಪ ಹಾಗೂ ಬರಗಾಲದ ನಡುವೆಯೂ ರಂಜಾನ್ ಹಾಗೂ ಯುಗಾದಿ ಹಬ್ಬದ ಖರೀದಿ ಭರಾಟೆ...

ಯುಗಾದಿ ಹಾಗೂ ರಂಜಾನ್ ಹಬ್ಬಗಳನ್ನು‌ ಶಾಂತಿ‌ಸೌಹಾರ್ಧತೆಯಿಂದ ಆಚರಿಸಿ ಠಾಣಾಧಿಕಾರಿ ಕೆ.ಕುಮಾರ್.

ಚಳ್ಳಕೆರೆ ಏ.8 ಈ ಬಾರಿ ರಂಜಾನ್ ಹಾಗೂ ಯುಗಾದಿ ಹಬ್ಬಗಳು ಒಟ್ಟಾಗಿ ಬಂದಿದ್ದು, ಸೌಹಾರ್ದಯುತವಾಗಿ ಹಬ್ಬಗಳನ್ನು ಆಚರಿಸಬೇಕು ಎಂದು ಠಾಣಾಧಿಕಾರಿ...

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *

You cannot copy content of this page