ನಾಯಕನಹಟ್ಟಿ ಅ23: ಆಯುಧ ಪೂಜೆಯನ್ನು ನವರಾತ್ರಿ ಹಬ್ಬದ ಒಂಬತ್ತು ದಿನ ಅಂದರೆ ಮಹನವಮಿ ಎಂದು ಆಚರಿಸಲಾಗುತ್ತದೆ ಎಂದು ಸಹಾಯಕ ಕಾರ್ಯಪಾಲಕ ಇಂಜಿನಿಯರ್ ತಿಮ್ಮರಾಜ್ ಹೇಳಿದ್ದಾರೆ.
ಅವರು ಸೋಮವಾರ ಪಟ್ಟಣದ ಬೆಸ್ಕಾಂ ಕಛೇರಿಯಲ್ಲಿ ಆಯುಧಪೂಜೆಯಲ್ಲಿ ಭಾಗವಹಿಸಿ ವಿಶೇಷ ಸಲ್ಲಿಸಿದರು.
ಈ ವೇಳೆ ಮಾಧ್ಯಮದೊಂದಿಗೆ ಮಾತನಾಡಿದರು ಆಯುಧ ಪೂಜೆಯನ್ನು ಶಸ್ತ್ರಪೂಜೆ ಮತ್ತು ಅಸ್ತ್ರ ಪೂಜೆ ಎಂದು ಕರೆಯುತ್ತಾರೆ. ಐತಿಹಾಸಿಕವಾಗಿ ಆಯುಧ ಪೂಜೆಯು ರಾಜ ಮಹಾರಾಜರ ಕಾಲದಿಂದಲೂ ಆಯುಧಗಳನ್ನು ಪೂಜಿಸುವ ಮೀಸಲಾಗಿರುವ ದಿನವಾಗಿದೆ ಎಂದರು.
ಬೆಸ್ಕಾಂ ಕಚೇರಿಯ ಶಾಖಾಧಿಕಾರಿ ಎನ್ ಬಿ ಬೋರಣ್ಣ ಮಾತನಾಡಿ ವಿಜಯದಶಮಿ ಹಬ್ಬದ ಅಂಗವಾಗಿ ನಮ್ಮ ಕಚೇರಿಯಲ್ಲಿ ಆಯುಧ ಪೂಜೆಯನ್ನು ಆಚರಿಸಲಾಗಿದೆ ಎಂದು ಶಾಖಾಧಿಕಾರಿ ಎನ್ ಬಿ ಬೋರಣ್ಣ ತಿಳಿಸಿದ್ದಾರೆ.
ಇದೇ ಸಂದರ್ಭದಲ್ಲಿ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ತಿಮ್ಮರಾಜ್, ಶಾಖಾಧಿಕಾರಿ ಎನ್. ಬಿ. ಬೋರಣ್ಣ, ಇಲಾಖೆಯ ಸಿಬ್ಬಂದಿಗಳಾದ ಗೋವಿಂದ್ ರಾಜ್, ರುದ್ರಮನಿ, ಬಸವರಾಜ್, ಜಾಕೀರ್, ಪಾಲಯ್ಯ, ಶಿವರಾಜ್ ಅಜಯ್ ಸಮಿವುಲ್ಲ, ಸುಲ್ತಾನ್,ಓಂ ಪ್ರಕಾಶ್, ಬಸವರಾಜ್, ದಿನೇಶ್, ಅಭಿಷೇಕ್, ಇರ್ಫಾನ್, ಚಂದ್ರಶೇಖರ್, ಸೇರಿದಂತೆ ಇನ್ನು ಮುಂತಾದವರು ಇದ್ದರು
0 Comments