ನವಂಬರ್ 27 ರಿಂದ ದೊಡ್ಡ ಉಳ್ಳಾರ್ತಿ ಗೌರಿ ದೇವಿ ಜಾತ್ರೆ ಆರಂಭ.

by | 11/11/23 | Uncategorized


ಚಳ್ಳಕೆರೆ ಜನಧ್ವನಿ ವಾರ್ತೆ ನ.11
ತಾಲೂಕಿನ ದೊಡ್ಡ ಉಳ್ಳಾರ್ತಿಯಲ್ಲಿ ಗೌರಿ ದೇವಿ ಜಾತ್ರೆ ಪ್ರತಿ ವರ್ಷ ನಂವಬರ್ ತಿಂಗಳನಲ್ಲಿ ನಡೆಯುವುದು ವಾಡಿಕೆ ಇದರಂತೆ ನ.27 ರಿಂದ ಡಿಸೆಂಬರ್ 3 ರವರೆಗೆ ಒಂದು ವಾರಗಳ ವಾರಗಳ ಕಾಲ ಈ ಜಾತ್ರೆ ನಡೆಯುತ್ತದೆ.
ಜಾತ್ರೆಯ ವಿಶೇಷ :ಗೌರಿದೇವಿ ಜಾತ್ರೆ ಮೂಲತಃ ಹೆಣ್ಣು ಮಕ್ಕಳ ಹಬ್ಬ. ದೇವಿ ಪೂಜೆ ಕೈಂಕರ್ಯ ನಡೆಸುವವರೆಲ್ಲ ಒಪ್ಪತ್ತು ಮಾತ್ರ ಊಟ ಮಾಡಬೇಕು.

ಮೋಗಲಹಳ್ಳಿ ಗ್ರಾಮದ ಪೂಜರಿಗಳು ತಣ್ಣೀರಿನಲ್ಲಿ ಸ್ನಾನ ಮಾಡಿ ಉಪವಾಸವಿದ್ದು, ಗೋಧಿ, ಉದ್ದು, ಕಡಲೆಹಿಟ್ಟು ಹಾಗೂ ಅರಿಸಿಣ ಪುಡಿಯನ್ನು ಹಾಲಿನೊಂದಿಗೆ ಬೇರಸಿ ಆ ಮಿಶ್ರಣವನ್ನು ನೋಡದೆ ಬೆನ್ನ ಹಿಂದೆ ಕೈ ಇಟ್ಟುಕೊಂಡು ಸುಮಾರು ಒಂದೂವರೆ ಅಡಿ ಎತ್ತರದ ಗೌರಿದೇವಿ ಮೂರ್ತಿಯನ್ನು ತಯಾರಿಸಿ ಹೊಸ ಮೊರದ ಮೇಲೆ ಹಂಲಕರಿಸುತ್ತಾರೆ. ಗ್ರಾಮದ ಪ್ರತಿ ಮನೆಯಲ್ಲೂ ಭಕ್ತರು ದೇವಿಗೆ ವಿಶೇಷ ಹರಕೆಗಳನ್ನು ಅರ್ಪಿಸುತ್ತಾರೆ.
ತಮ್ಮ ಬೇಡಿಕೆಗಳ ಸಿದ್ದಿಗಾಗಿ ವಿಶೇಷ ಹರಕೆಗಳು: ಕಂಕಣ ಭಾಗ್ಯ ಕೂಡಿ ಬರಲು, ಉತ್ತಮ ವರ ಸಿಗಲಿಲೆಂದು ಯುವತಿಯರು ದಿಂಡಿರುಳು ಹಾಗೂ ಆರತಿ ಹಿಡಿಯುವ ಹರಕೆ ಅರ್ಪಿಸುತ್ತಾರೆ. ಮಕ್ಕಳಿಲ್ಲದವರು ಮಕ್ಕಳ ಫಲ ದೊರೆಯಲಿ ಎಂದು ಹೂವಿನ ತೊಟ್ಟಿಲು ಹರಕೆ ತೀರಿಸುತ್ತಾರೆ. ದೇವಿಗೆ ಹರಕೆ ಮತ್ತು ಆರತಿ ಹಿಡಿಯುವ ಮಹಿಳೆಯರೆಲ್ಲರೂ ಉಪವಾಸ ರೊತ ಮಾಡುತ್ತಾರೆ.
ಗ್ರಾಮದ ಹೆಣ್ಣು ಮಕ್ಕಳು ವಿವಿಧ ಬಣ್ಣದ ಸೀರೆಗಳನ್ನುಟ್ಟು, ತಟ್ಟೆಯಲ್ಲಿ ಎಲೆ,ಅಡಕೆ,ಲವಂಗ ಇಟ್ಟುಕೊಂಡು ಗೌರಿದೇವಿಯ ಜಾನಪದ ಹಾಡು ಹೇಳುತ್ತಾ, ಜಾತ್ರೆಗೆ ಬಂದ ನೆಂಟರು ಹಾಗೂ ಬೇರೆ ಊರಿಗೆ ಹೋಗುವ ಅತಿಥಿಗಳನ್ನು ರಸ್ತೆಯಲ್ಲಿ ಅಡ್ಡಗಟ್ಟಿ ಗೌರಿದೇವಿಗೆ ಚಂದ ವಸೂಲಿ ಮಾಡುತ್ತಾರೆ.
ಗೌರಿದೇವಿ ಉತ್ಸವಮೂರ್ತಿಯನ್ನು ಗ್ರಾಮದ ಪ್ರಮುಖ ಬೀದಿಗಳಲ್ಲಿ ನಂದಿಕೋಲು, ಕೋಲಾಟ,ಭಜನೆ ಜಾನಪದ ವಾದ್ಯಗಳೊಂದಿಗೆ ಮೆರವಣಿಗೆ ನಡೆಸಿ ಕೆರೆಗೆ ಬಿಡುತ್ತಾರೆ.
ಈ ಜಾತ್ರೆಯ ಮತ್ತೊಂದು ವಿಶೇಷವೆಣದರೆ ಹೆಣ್ಣು ದೇವತೆಯ ಜಾತ್ರೆಯಾದರು ಸಹ ಇಲ್ಲಿ ಯಾವುದೇ ಪ್ರಾಣಿಗಳನ್ನು ಬಲಿನೀಡುವುದಿಲ್ಲ, ಬದಲಿಗೆ ಹಣ್ಣು, ತರಕಾರಿ, ಮುಂತಾದ ಪದರ್ಥಗಳನ್ನು ದೇವಿಗೆ ಅರ್ಪಿಸುವುದು ವಾಡಿಕೆಯಾಗಿದೆ.
ಎಲ್ಲಾ ಊರುಗಳಲ್ಲಿ ಗೌರಿದೇವಿ ಪ್ರತಿಷ್ಠಪನೆ ಮಾಡಿ ಪೂಜಿಸುವುದು ಸಾಮಾನ್ಯ. ಆದರೆ ಜಿಲ್ಲೆಯ ಯಾವ ಭಾಗದಲ್ಲೂ ಇಷ್ಟು ದೊಡ್ಡದ ಜಾತ್ರೆಯಂತೆ ಆಚರಣೆ ಮಾಡುವುದಿಲ್ಲ. ಇಂತಹ ವಿಶಿಷ್ಠವಾದ ಗೌರಿ ಜಾತ್ರೆಯನ್ನು ದೊಡ್ಡಉಳ್ಳಾರ್ತಿ ಗ್ರಾಮದಲ್ಲಿ ಕಾಣಲು ಸಾದ್ಯ. ಅಲುವು ಕಟ್ಟುನಿಟ್ಟಿನ ಆಚರಣೆಯೊಂದಿಗೆ ತುಂಬ ಅದ್ದುರಿಯಾಗಿ ನಡೆಸುತ್ತಾರೆ. ಈ ಜಾತ್ರೆ ನೋಡಲು ವಿವಿಧ ಭಾಗಗಳಿಂದ ಸಾವಿರಾರು ಭಕ್ತರು ಆಗಮಿಸುತ್ತರೆಹೆಣ್ಣು ಮಕ್ಕಳು ನೋಡಲೆಬೇಕಾದ ಜಾತ್ರೆ ಆಸಕ್ತಿ ಉಳ್ಳವರು ಈ ಗ್ರಾಮಕ್ಕೆ ಆಗಮಿಸಿ ಗೌರಿದೇವಿಯ ಜಾತ್ರೆಯ ಸವಿಯನ್ನು ಸವಿಯಾಬಹುದು. ಗೌರಿ ಹಬ್ಬದಲ್ಲಿ ಹೆಣ್ಣು ತರಲು ಹೋಗಬಾದರು, ಎತ್ತಿನ ಹಬ್ಬದಲ್ಲಿ ಎತ್ತುಗಳನ್ನು ತರಲು . ಹೋಗಬಾರದು ಎಂಬ ಗಾದೆ ಮಾತಿದೆ. ಏಕೆಂದರೆ ಎಂತಹ ಬಡಕಲಾದ ಹಾಗೂ ರೋಗಗಳಿಂದ ನರಳುವ ದನ ಮತ್ತು ಕೂರೂಪಿ ಹೆಣ್ಣು ಮಕ್ಕಳೂ ಈ ಸಮಯದಲ್ಲಿ ಶೃಂಗಾರಿಸಿಕೊAಡು ಗಮನ ಸೆಳೆಯುತ್ತಾರೆ ಇಂತಹ ವಿಶೇಷ ಜಾತ್ರೆಗೆ ಸಾವಿರಾರು ಭಕ್ತರು ನೆರೆದಿರುತ್ತಾರೆ.
ಈ ಗ್ರಾಮದಲ್ಲಿ ಗೌರಿ ಜಾತ್ರೆ ಮುಗಿದ ನಂತರ ತಾಲೂಕಿನಾದ್ಯಂತ ಎಲ್ಲಾ ಗ್ರಾಮಗಳಲ್ಲೂ ಭಯ ಭಕ್ತಿಯಿಂದ ಗೌರಿ ಹಬ್ಬವನ್ನು ಆಚರಣೆ ಮಾಡುತ್ತಾರೆ.
ನ. 27 ರಂದು ಕಳಸ ಪ್ರತಿಷ್ಠಾಪನೆಯಿಂದ ಪ್ರಾರಂಭವಾಗಿ ದಿನನಿತ್ಯ ವಿವಿಧ ಕಾರ್ಯಕ್ರಮಗಳೊಂದಿಗೆ ಡಿಸೆಂಬರ್ 3 ರಂದು ಎತ್ತಿನ ಹಬ್ಬ ಆಚರಣೆ ಮೂಲಕ ಗೌರಿಜಾತ್ರೆಗೆ ತೆರೆಬೀಳಲಿದೆ.

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *