ಚಳ್ಳಕೆರೆ ಸೆ.2. ಕೃಷಿಯಲ್ಲಿ ಹಲವು ಬಾರಿ ಹೊಸ ಪ್ರಯೋಗಗಳು ಫಲ ಕೊಡುತ್ತವೆ ಎಂಬುದಕ್ಕೆ ರೈತನೊಬ್ಬ ನರೇಗಾ ಸಹಾಯ ಪಡೆದು ಬಾಳೆ ಬೆಳೆ ಬೆಳೆದು ಬಂಪರ್ ಲಾಭ ಪಡೆದು ಮಾದರಿಯಾಗಿದ್ದಾನೆ.
ಹೌದು ಇದು ತಾಲೂಕಿನ ವಿಡುಪನಕುಂಟೆ ಗ್ರಾಮದ ರೈತ ಅಶೋಕ್ 2023-24 ನೇ ಸಾಲಿನಲ್ಲಿ ಉದ್ಯೋಗ ಖಾತರಿ ಯೊಜನೆಯಲ್ಲಿ ತೋಟಗಾರಿಕೆ ಇಲಾಖೆಯಿಂದ ನೆರವು ಪಡೆದು ಮಾಡಿದ ಬಾಳೆ ಬೆಳೆ ಸದ್ಯ ಬಂಪರ್ ಬೆಳೆಯಾಗಿ ಬಂದಿರುವುದು ಕಂಡು ಬಂದಿದ್ದು ರೈತ ನಗೆ ಬೀರಿದ್ದಾನೆ.
ಖಾತರಿ ಯೋಜನೆಗೆ ಅನುದಾನ ಪಡೆದು ಪಂಗನಾಮ ಹಾಕಿರುವವರ ನಡುವೆ ರೈತ ಅಶೋಕ್ ಮಾದರಿಯಾಗಿ ನಿಂತಿದ್ದಾರೆ. ತೋಟಗಾರಿಕೆ ಇಲಾಖೆ ಬಾಳೆ ಸಸಿಗಳನ್ನು ಹಾಗೂ ಗುಂಡಿ ತೋಡಿಸಲು ನೆರವು ಹಾಗೂ ಹನಿ ನೀರಾವರಿಯ ಸೌಲಭ್ಯ ಪಡೆದು ಎರಡು ಎಕರೆ ಪ್ರದೇಶದಲ್ಲಿ ಬಾಳೆ ಬೇಸಾಯ ಮಾಡಿ ತೋಟಗಾರಿಕೆ ಇಲಾಖೆ ಅಧಿಕಾರಿಗಳ ಸಲಹೆಯಂತೆ ಸಸಿಗಳನ್ನು ನಾಟಿ ಮಾಡಿ ಕೊಟ್ಟಿಗೆ ಗೊಬ್ಬರ, ಹಸಿರೆಲೆ ಗೊಬ್ಬರ ನೀಡುವುದರ ಜೊತೆಗೆ ರೈತನ ಶ್ರಮವಹಿಸಿದ್ದರ ಪರಿಣಾಮವಾಗಿ ಎರಡು ಕಟಾವು ಬೆಳೆ ಕೆ.ಜಿ 18 ರೂ ನಂತೆ ಮಾರಾಟ ಮಾಡಿ 40 ಸಾವಿರ ರೂ ಕೈ ಸೇರಿದ್ದು .ಒಂದು ಗೊನೆ ಸುಮಾರು 30 ರಿಂದ40 ಕೆ.ಜಿ ತೂಕದ ಗೊನೆ ಇನ್ನು ಹಲವು ಕಟಾವು ಬೆಳೆ ಸಿಗಲಿದ್ದು ಬೆಳೆ ಹೆಚ್ಚು ಇಳುವರಿ ಬಂದಿರುವುದು ಹೆಚ್ಚು ಲಾಭದ ನಿರೀಕ್ಷೆ ಹೊಂದಿದ್ದಾನೆ ರೈತ.
ತೋಟಗಾರಿಕೆ ಹಿರಿಯ ಸಹಾಯಕ ನಿರ್ದೇಶಕ ಡಾ.ವಿರುಪಾಕ್ಷಪ್ಪ ಸೋಮವಾರ ರೈತ ವಿರುಪಾಪಕ್ಷಪ್ಪ ತೋಟಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದಾಗ
ಉದ್ಯೋಗ ಖಾತರಿ ಯೋಜನೆಯಲ್ಲಿ ತಾಲ್ಲೂಕಿನ ಹಲವು ರೈತರು ದಾಳಿಂಬೆ.ಪಪ್ಪಾಯಿ.ಪೇರಲ.ಗುಲಾಬಿ.ಬಾಳೆ ಬೆಳೆ ಬೆಳೆಯಲು ಸೂಚಿಸಲಾಗಿತ್ತು, ಬಹುತೇಕ ಬೆಳೆಗಳು ಉತ್ತಮವಾಗಿಯೇ ಬಂದಿವೆ.
ಆದರೆ ಅಶೋಕ್ ಬೆಳೆದಿರುವ ಬಾಳೆ ಮಾತ್ರ ಆಶ್ಚರ‌್ಯ ರೀತಿಯಲ್ಲಿ ಬೆಳೆ ಬಂದಿದ್ದು ಅದರಲ್ಲಿ ಅವರ ಪರಿಶ್ರಮ ಎದ್ದು ಕಾಣುತ್ತದೆ ಎಂದು ಹೇಳಿದರು.
0 Comments