ಚಳ್ಳಕೆರೆ ಮುಖ್ಯ ರಸ್ತೆಗಳನ್ನು ನೋಡಿದರೆ ನೋಡುರನಗನ್ಮು ಹುಬ್ಬೇರಿಸುವಂತೆ ಮಾಡಿದರೆ ನಗರ ಪ್ರವೇಶ ರಸ್ತೆಗಳನ್ನು ನೋಡಿದರೆ ಗೊಬ್ಬೆದ್ದು ಹೋಗಿವೆ. ಹೌದು ಚಳ್ಳಕೆರೆ ನಗರದ ಮುಖ್ಯ ರಸ್ತೆಯ ಡಾಂಬರ್ ಮೇಲೆ ಪದೇ ಪದೇ ಡಾಂಬರ್ ಹಾಕಿ ರಸ್ತೆ ದುರಸ್ಥಿ ಮಾಡಿದರೆ ಇತ್ತ ನಗರದ ವಿವಿಧ ವಾರ್ಡ್ ಗಳಿಗೆ ಪ್ರವೇಶ ಮಾಡಿವ ಸಂಗೊಳ್ಳಿ ರಾಯಣ್ಣ ರಸ್ತೆಯ ರೋಟರಿ ಕ್ಲಬ್. ಎಸ್ ಆರ್ ರಸ್ತೆಯಿಂದ ಬೆಂಗಳೂರು ಮುಖ್ಯ ರಸ್ತೆಗೆ ಸೇರುವ ರಸ್ತೆ ಅರ್ಧ ಸೀಮೆಂಟ್ ರಸ್ತೆಯಾದರೆ ಇನ್ನುಳಿದ ಅರ್ಧ ರಸ್ತೆಯಲ್ಲಿ ಗುಂಡಿಗಳು ಬಿದ್ದು ಜಲ್ಲಿ ಕಲ್ಲುಗಳಿಂದ ಕೂಡಿದ್ದು ಬೈಕ್ ಸವಾರರು ಪ್ರಮ ಕೈಯಲ್ಲಿಡಿಸು ವಾಹನ ಸಾವರಿ ಮಾಡ ಬೇಕಾಗುತ್ತದೆ ಎಚ್ಚರ ತಪ್ಪಿದರ ಬಿದ್ದು ಕೈಕಾಲು ಮುರಿದು ಕೊಳ್ಳುವುದು ಗ್ಯಾರಂಟಿ ಇದೇ ರೀತಿ ಶಾಂತಿನಗರ.ಅಂಬೇಡ್ಕರ್ ನಗರದ ಗಾಂಧಿ ನಗರ. ಖಾಸಗಿ ಬಸ್ ನಿಲ್ದಾಣದ ರಸ್ತೆಗಳು ಅಕ್ರಮ ಒತ್ತುವರಿಯಿಂದ ರಸ್ತೆಗಳು ಕಿರಿದಾಗಿದ್ದು ಮಳೆಯಿಂದಾಗಿ ಗುಂಡಿಗಳು ಬಿದ್ದಿವೆ. ಸವಾರರು ಹೈರಾಣ: ನಗರದ ವಾರ್ಡ್ ಸಂಪರ್ಕ ರಸ್ತೆ ಹದಗೆಟ್ಟ ಹಲವು ವರ್ಷಗಳೇ ಹಾಗಿವೆ. ಮಳೆಗಾಲದಲ್ಲಿ ಈ ರಸ್ತೆ ಕೊಚ್ಚೆಗುಂಡಿ ಪರಿವರ್ತನೆಯಾಗುತ್ತದೆ. ಈ ರಸ್ತೆ ಮಾರ್ಗವಾಗಿ ನಿತ್ಯ ವಾಹನ ಸವಾರರು ಹದಗೆಟ್ಟ ರಸ್ತೆಗಳಿಂದ ಹೈರಾಣಾಗಿಧದಾರೆ.
ನಗರದ ಹಲವು ರಸ್ತೆಗಳು ಮಳೆಯಿಂದ ಹಾನಿಗೊಂಡಿವೆ. ಇಲ್ಲಿನ ಅನೇಕ ರಸ್ತೆಗಳು ಕಿರಿದಾಗಿದ್ದು, ವಾಹನ ದಟ್ಟಣೆ ಹೆಚ್ಚಾಗಿದೆ. ನಗರೋತ್ಥಾನ ಯೋಜನೆಯಡಿ ಹಲವು ರಸ್ತೆಗಳು ವಿಸ್ತರಣೆ ಕಾಮಗಾರಿ ಆರಂಭವಾಗಬೇಕಿದೆ. ಕೂಡಲೇ ಈ ಕಾಮಗಾರಿಗಳನ್ನು ಶೀಘ್ರ ಆರಂಭಿಸಿ ನಗರದ ರಸ್ತೆಗಳನ್ನು ದುರಸ್ಥಿ ಪಡಿಸಿ ವಾಹನ ಸವಾರರಿಗೆ ಕಿರಿಕಿರಿ ತಪ್ಪಿಸಬೇಕಿದೆ. ನಗರದ ಮುಖ ರಸ್ತೆಯನ್ನು ವರ್ಷದಲ್ಲಿ ಎರಡರಿಂದ ಮೂರು ಬಾರಿ ದುರಸ್ಥಿ ಪಡಿಸುತ್ತಾರೆ ಆದರೆ ನಗರದ ಒಳಗಿನ ರಸ್ತೆಗಳನ್ನು ಮಾತ್ರ ದುರಸ್ಥಿ ಪಡಿಸುತ್ತಿಲ್ಲ ಎಂದು ನಗರದ ನಾಗರೀಕರು ನಗರಭೆ ಆಡಳೀತಕ್ಕೆ ಇಡಿಶಾಪ ಹಾಕುತ್ತಿದ್ದಾರೆ. ಈಗಲಾದರೂ ನಗರದ ವಿವಿಧ ವಾರ್ಡ್ ಗಲ್ಲಿ ಕಿತ್ತು ಹೋದ ರಸ್ತೆಗಳ ದುರಸ್ಥಿಗೆ ಮುಂದಾಗುವರೇ ಕಾದು ನೋಡ ಬೇಕಿದೆ.
ನಗರ ವಿವಿಧ ವಾರ್ಡ್ ಸಂಪರ್ಕ ರಸ್ತೆಗಳ ದುರಸ್ಥಿ ಯಾವಗ …?
ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ
0 Comments