ಚಳ್ಳಕೆರೆ ನಗರಸಭೆ ಹಿರಿಯ ಆರೋಗ್ಯಾಧಿಕಾರಿ ಮಹಾಲಿಂಗಪ್ಪ ಸೇರಿ ಐದು ಜನರ ವರ್ಗಾವಣೆ ಆದೇಶ ಹೊರಡಿಸಿದ ಜಿಲ್ಲಾಧಿಕಾರಿ.

by | 01/11/23 | ಉದ್ಯೋಗ, ಸುದ್ದಿ


ಚಳ್ಳಕೆರೆ ಜನಧ್ವನಿ ವಾರ್ತೆ ನ.1. ಸುಮಾರು ವರ್ಷಗಳಿಂದ ಜಡ್ಡು ಕಟ್ಟಿ ಕುಳಿತಿದ್ದ ನಗರಸಭೆ ಸಿಬ್ಬಂದಿಗಳನ್ನು ವರ್ಗಾವಣೆ ಮಾಡಿರುವುದು ಬೆಳಕಿಗೆ ಬಂದಿದೆ.

ಹೌದು ಇದು ಚಳ್ಳಕೆರೆ ನಗರಸಭೆ ಕಚೇರಿಯಲ್ಲಿ ಶಾಸಕ ಟಿ.ರಘುಮೂರ್ತಿ ಅ.9 ರಂದು ಕುಂದು ಕೊರತೆ ಸಭೆಯಲ್ಲಿ ಸಾರ್ವಜನಿಕರಿಂದ ದೂರಿನ ಸುರಿಮಳೆ ಹಾಗೂ ಸುಗುಣ ಎಂಬ ಮಹಿಳೆ ನಮ್ಮ ಮನೆ, ನಲ್ಲಿ ಕಂದಾಯ ಕಟ್ಟಿಸಿಕೊಂಡು ಇ-ಸುತ್ತು ಕೊಡಲು ಸಿಬ್ಬಂದಿ ಮಂಜುನಾಥ್ 7.50 ಲಕ್ಷ ರೂ. ಹಣಕ್ಕೆ ಬೇಡಿಕೆಯಿಟ್ಟರು. ನಂತರ 3.50 ಲಕ್ಷ ಕೊಡಿ ಎಂದು ಬೇಡಿಕೆಯಿಟ್ಟು ನಮ್ಮ ಮನೆಯ ಇ-ಸತ್ತು ಮಾಡಿಕೊಡುತ್ತಿಲ್ಲವೆಂದು ಆರೋಪಿಸಿದಾಗ ಶಾಸಕರನ್ನು ಬೆಚ್ಚಿಬೀಳಿಸುವಂತೆ ಮಾಡಿತ್ತು. ಈ ಹಿನ್ನೆಲೆಯಲ್ಲಿ ಶಾಸಕ ಟಿ.ರಘುಮೂರ್ತಿ ಸಿಬ್ಬಂದಿಗಳ ವಿರುದ್ದ ಗರಂ ಆಗಿ ನೀವೇ ಸ್ವಯಂ ಪ್ರೇರಿತರಾಗಿ ವರ್ಗಾವಣೆ ಮಾಡಿಸಿಕೊಂಡು ಹೋಗಿ ಇಲ್ಲವೇ ನಾನೇ ವರ್ಗಾವಣೆ ಮಾಡಿಸುತ್ತೇವೆ ಎಂದು ಹೇಳಿ ಒಂದು ತಿಂಗಳು ಮುಗಿಯುವಷ್ಟರಲ್ಲೇ ಹಲವಾವರು ವರ್ಷಗಳಿಂದ ನೆಲೆಯೂರಿದ್ದ ಸಿಬ್ಬಂದಿಗಳಿಗೆ ದಿಢೀರ್ ವರ್ಗಾವಣೆಯಾಗಿರುವುದು ನಗರ ನಾಗರೀರಲ್ಲಿ ಸಂಚಲನೆ ಮೂಡಿಸಿದೆ.

ಹೆಸಳೇಲು ಇಚ್ಚಿಸದ ನಗರದ ಹಿರಿಯರೊಬ್ಬರು ಜನ ಧ್ವನಿ ಡಿಜಿಟಲ್ ಮೀಡಿಯಾ ದೊಂದಿಗೆ ಮಾತನಾಡಿ ಮಾತನಾಡಿ, ನಗರಸಭೆ ಕಚೇರಿಗೆ ದಕ್ಷ ಪೌರಾಯುಕ್ತರಿಲ್ಲದ ಸಿಬ್ಬಂದಿಗಳಲ್ಲಿ ಕರ್ತವ್ಯ ನಿಷ್ಠೆ ಹಾಗೂ ಅಧಿಕಾರಿಗಳ ಭಯವಿಲ್ಲದಂತಾಗಿದೆ .ನಗರಸಭೆ ಕಚೇರಿಯಲ್ಲಿ ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿದೆ. ಕಚೇರಿಯಲ್ಲಿ ಕೆಲವು ಸಿಬ್ಬಂದಿ ಗಳು ಈಗ ವರ್ಗಾವಣೆ ಮಾಡಲಾಗಿದೆ ನಗರಸಭೆ ಕಚೇರಿಯಲ್ಲಿ ಹತ್ತು ವರ್ಷಕ್ಕೂ ಹೆಚ್ಚು ಕಾಲ ಕರ್ತವ್ಯ ನಿರ್ವಹಿಸುತ್ತಿರುವ ಎಲ್ಲಾ ಸಿಬ್ಬಂದಿಗಳನ್ನು ವರ್ಗಾವಣೆ ಮಾಡಿದಾಗಲೇನಾದರೂ ನಗರಸಭೆ ಆಡಳಿತ ಯಂತ್ರ ಚುರುಕುಗೊಳ್ಳಬಹುದು ಎಂಬ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
ಮುಂದಿನ ದಿನಗಳಲ್ಲಾದರೂ ಹತ್ತು ವರ್ಷ ಮೇಲ್ಪಟ್ಟ ಸಿಬ್ಬಂದಿಗಳನ್ನು ಜಿಲ್ಲಾಡಳಿ ವರ್ಗಾವಣೆ ಮಾಡುವರೇ ಕಾದು ನೋಡ ಬೇಕಿದೆ.
ನಗರಸಭೆ ವರ್ಗಾವಣೆಯಾದ ಸಿಬ್ಬಂದಿಗಳು.

ಹೆಚ್.ಟಿ.ಮಹಾಲಿಂಗಪ್ಪ ಹಿರಿಯ ಆರೋಗ್ಯ ನಿರೀಕ್ಷಕರು,
ಓಬಳೇಶ್ ಪ್ರಥಮದರ್ಜೆ ಸಹಾಯಕ,
ತಿಪ್ಪೇಸ್ವಾಮಿ ದ್ವಿತೀಯ ದರ್ಜೆ ಸಹಾಯಕ,
ಕರವಸೂಲಿಗಾರಾದ ಕಣುಮಕ್ಕ, ಓ.ಮಂಜುನಾಥ, ಒಟ್ಟು ಐದು ಜನರು ಚಳ್ಳಕೆರೆ ನಗರಸಭೆ ಕಚೇರಿಯಿಂದ ವರ್ಗಾವಣೆ ಗೊಂಡಿರುವ ಸಿಬ್ಬಂದಿಗಳಾ ಗಿದ್ದಾರೆ.
ವರ್ಗಾವಣೆಯಾಗಿ ಬಂದವರು.
ಹೆಚ್.ಟಿ.ಸುನಿಲ್ ಕುಮಾರ್ ಹಿರಿಯ ಆರೋಗ್ಯ ನಿರೀಕ್ಷಕರು ಹಿರಿಯೂರು ನಗರಸಭೆಯಿಂದ,
ಕಿಸಾನ್ ಪ್ರಥಮದರ್ಜೆ ಸಹಾಯಕ ಮೊಳಕಾಲ್ಮೂರು ಪಟ್ಟಣ ಪಂಚಾಯಿತಿಯಿಂದ,
ವೆಂಕಟೇಶ್ ದ್ವಿತೀಯ ದರ್ಜೆ ಸಹಾಯಕ ಚಿತ್ರದುರ್ಗ ನಗರಸಭೆ ಕಚೇರಿಯಿಂದ,
ಮಣಿಕಂಠ ಕರವಸೂಲಿಗಾರ ನಗರಸಭೆ ಚಿತ್ರದುರ್ಗ,
ವಿನಯ್ ಕರವಸೂಲಿ ಗಾರ ಪುರಸಭೆ ಹೊಸದುರ್ಗ, ಹೊಸದಾಗಿ ಚಳ್ಳಕೆರೆ ನಗರಸಭೆ ಕಚೇರಿಗೆ ವರ್ಗಾವಣೆಯಾಗಿ ಬಂದಿದ್ದಾರೆ.
ಹಲವಾರು ವರ್ಷಗಳಿಂದ ನೆಲೆಯೂರಿದ್ದ ಸಿಬ್ಬಂದಿಗಳ ವರ್ಗಾವಣೆಯಿಂದ ನಗರಸಭೆ ಆಡಳೀತ ಯಂತ್ರ ಚುರುಕುಕೊಳ್ಳುವುದೇ ಕಾದು ನೋಡ ಬೇಕಿದೆ.

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *