ಚಳ್ಳಕೆರೆ ಆ.23ನಗರಸಭೆ ಸೇರಿದಂತೆ ಜಿಲ್ಲೆಯ ಎಲ್ಲ ಪುರಸಭೆ, ಪಟ್ಟಣ ಪಂಚಾಯಿತಿಗಳಿಗೆ ಚುನಾವಣೆ ನಡೆಸಲು ಚುನಾವಣೆ ದಿನಾಂಕ ಹೊರಬಿದ್ದಿದೆ.
ಚಳ್ಳಕೆರೆ ನಗರಸಭೆಗೆ ಅಧ್ಯಕ್ಷ ಸ್ಥಾನಕ್ಕೆ ಬಿಸಿಎಂ(ಬಿ)ಮಹಿಳೆಗೆ ಮೀಸಲಾತಿ ನೀಡಲಾಗಿದ್ದು ಕಾಂಗ್ರೆಸ್ ಪಕ್ಷದಲ್ಲೇ ಏಕೈಕ ಮಹಿಳೆ ಚುನಾವಣೆಯಲ್ಲಿ ಸಾಮಾನ್ಯ ಮಿಸಲಾಯಿಯಿಂದ ಗೆದ್ದ ಸಾವಿತ್ರಮ್ಮ ಒಬ್ಬರೇ ಇರುವುದರಿಂದ ಅಧ್ಯಕ್ಷ ಸ್ಥಾನ ಅವಿರೋಧವಾಗಿ ಆಯ್ಕೆ ಯಾಗುವುದು ಖಚಿತ ಅಧ್ಯಕ್ಷ ಸ್ಥಾನ ಒಲಿದ ಅದೃಷ್ಟ ಎಂಬ ಮಾತುಗಳು ಕೇಳಿಬಂದರೆ ಅಧ್ಯಕ್ಷೆಯಾಗುತ್ತೇನೆ ಎಂದು ಮಂದಹಾಸ ಬೀರಿದ್ದ ಬೆನ್ನಲ್ಲೇ ಸಾಮಾನ್ಯ ಕ್ಷೇತ್ರದಿಂದ ಗೆದ್ದ ಸಾವಿತ್ರಮ್ಮ ತೆರಿಗೆ ಪಾವತಿದಾರೆಯಾಗಿದ್ದು ಬಿಸಿಎಂ( ಬಿ) ಮೀಸಲಾತಿ ನಿಗಧಿತ ಆಧಾಯ ಹಾಗೂ ಜಿಎಸ್ಟಿ ಪಾವತಿದಾರಾಗಿದ್ದು ಅಧ್ಯಕ್ಷಸ್ಥಾನಕ್ಕೆ ಚುನಾವಣೆಗೆ ಸ್ಪರ್ಧಿಸಲು ಬಿಸಿಎಂ (ಬಿ), ಪ್ರಮಾಣ ಪತ್ರ ನೀಡಬಾರದು ಎಂದು ಜೆಡಿಎಸ್ ಹಾಗೂ ಬಿಜೆಪಿ ಪಕ್ಷದ ನಗರಸಭೆ ಸದಸ್ಯರು ಮುಖಂಡರು ತಹಶೀಲ್ದಾರ್ ಕಚೇರಿಗೆ ತಕರಾರು ಮನವಿ ನೀಡಿರುವುದರಿಂದ ಮನವಿ ಸ್ವೀಕರಿಸು ದಾಖಲೆ ಪರಿಶೀಲನೆಗೆ ಕಂದಾಯ ಅಧಿಕಾರಿ.ಗ್ರಾಮಲೆಕ್ಕಾಧಿಕಾರಿಗಳಿಗೆ ಹಾಗೂ ತೆರಿಗೆ ಇಲಾಖೆಗಳಿಗೆ ಪರಿಶೀಲನೆ ನಡೆಸಿ ವರದಿ ನೀಡುವಂತೆ ತಿಳಿಸಿದ್ದಾರೆ ಎನ್ನಲಾಗಿದೆ.
ಒಂದು ವೇಳೆ ತನಿಖೆ ವೇಳೆ ದೂರುದಾರ ಮಾಹಿತಿ ಬಹಿರಂಗವಾದರೆ ಬಿಸಿಎಂ(ಬಿ) ಪ್ರಮಾಣ ಪತ್ರ ನೀಡಲು ಬರುವುದಿಲ್ಲ ಎಂಬುದು ಜನರಿಂದ ಗುಸು ಗುಸು ಮಾತುಗಳು ಸಹ ಕೇಳಿಬರುತ್ತಿವೆ.
ಈಗಲೂ ಸಹ ಒತ್ತಡಕ್ಕೆ ಮಣಿದು ಅಧ್ಯಕ್ಷಚುನಾವಣೆಗೆ ಬಿಸಿಎಂ(ಬಿ)ಪ್ರಮಾಣ ಪತ್ರ ನೀಡಿದರೆ ಕಾನೂನು ಹೋರಾಟ ಮಾಡುವುದಾಗಿ ದೂರುದಾರರು ಹೇಳುತ್ತಾರೆ.
ಈಗ ಉಪಾಧ್ಯಕ್ಷ ಸ್ಥಾನಕ್ಕೆ ಎಸ್ಟಿ ಮಹಿಳಾ ಮೀಸಲು ಇರುವುದರಿಂದ ಕಾಂಗ್ರೆಸ್ ಪಕ್ಷದಲ್ಲೇ ನಾಲ್ಕು ಜನ ಮಹಿಳಾ ಸದಸ್ಯರಿದ್ದು ನಾಲ್ಕು ಜನ ಮಹಿಳಾ ಸದಸ್ಯರು ಉಪಾಧ್ಯಕ್ಷ ಸ್ಥಾನಕ್ಕೆ ಕಸರತ್ತು ನಡೆಸುತ್ತಿದ್ದಾರೆ ಎನ್ನಲಾಗಿದೆ.
ಅಧ್ಯಕ್ಷ ಸ್ಥಾನಕ್ಕೆ ಬಿಸಿಎಂ(ಬಿ),ಪ್ರಮಾಣ ಪತ್ರ ನೀಡದಿದ್ದರೆ ಆ29 ರಂದು ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆ ನಡೆಯಲಿದ್ದು ಅಧ್ಯಕ್ಷ ಸ್ಥಾನಕ್ಕೆ ಚುನಾವಣೆಗೆ ಮೀಸಲಾತಿ ಗೊಂದಲದಿಂದ ಏನಾದರೂ ರದ್ದಾದರೆ..? ಉಪಾಧ್ಯಕ್ಷ ಸ್ಥಾನಕ್ಕೆ ಮಾತ್ರ ಚುನಾವಣೆ ನಡೆಯಲಿದೆ ಯಾರು ಉಪಾಧ್ಯಕ್ಷರಾಗುತ್ತಾರೋ ಅವರೇ ಪ್ರಭಾರ ಅಧ್ಯಕ್ಷರಾಗಿ ಮುಂದುವರಿಯುವ ಸಾಧ್ಯತೆ ಇದೆ ಎಂಬ ಮಾತುಗಳು ಸಹ ಕೇಳಿ ಬರುತ್ತವೆ.
ಅಧ್ಯಕ್ಷ ಸ್ಥಾನಕ್ಕೆ ಬಿಸಿಎಂ(ಬಿ) ಮಹಿಳೆಗೆ ಇತಿಹಾಸದಲ್ಲೇ ಬಂದಿರಲಿಲ್ಲ ಆದರೆ ಆಧಾಯ ಮಿತಿ ಹೆಚ್ಚಿರುವುದರಿಂದ ಅಧ್ಯಕ್ಷ ಸ್ಥಾನಕ್ಕೆ ಬಯಸದೇ ಬಂದ ಭಾಗ್ಯ ಒಲಿಯುವುದೇ ಅಥವಾ ನಿರಾಸೆಯಾಗುವುದೇ ಎಂಬುದು ಆ.29 ರಂದು ಅಧ್ಯಕ್ಷ ಸ್ಥಾನದ ಕುತೂಹಲಕಾರಿ ಸಂಗತಿ ಬಯಲಾಗಲಿದೆ ಅಲ್ಲಿಯವರೆಗೆ ಕಾಯಬೇಕಿದೆ.
‘ಬಿ’ ಪ್ರವರ್ಗದಲ್ಲಿ ಬರುವ ಯಾವುದೇ ವ್ಯಕ್ತಿಯು, ಅವನು/ಅವಳು ಅಥವಾ ಅವನ/ಅವಳ ತಂದೆ ತಾಯಿ ಪೋಷಕರಲ್ಲಿಯಾರಾದರೊಬ್ಬರು ಸರ್ಕಾರಿ ಸೇವೆಯಲ್ಲಿ 1 ನೇ ವರ್ಗದ ಅಥವಾ 2ನೇ ವರ್ಗದಅಧಿಕಾರಿಯಾಗಿದ್ದರೆ ಅಥವಾ ಸರ್ಕಾರಿ ವಲಯ ಉದ್ಯಮದಲ್ಲಿ ತತ್ಸಮಾನದ ಹುದ್ದೆಯನ್ನು ಧಾರಣ ಮಾಡಿದ್ದರೆ ಅಥವಾ ಖಾಸಗಿ ನಿಯೋಜಕ ಆಡಿಯಲ್ಲಿ ಒಬ್ಬ ಉದ್ಯೋಗಿಯಾಗಿದ್ದು IIನೇ ವರ್ಗದ ಅಧಿಕಾರಿಯ ಸಂಬಳಕ್ಕಿಂತಲೂ (ಪ್ರಾರಂಭಿಕ ವೇತನ ಶ್ರೇಣಿ 2050 – 3950 ರೂ) ಕಡಿಮೆಯಿಲ್ಲದ ಸಂಬಳವನ್ನು ಪಡೆಯುತ್ತಿದ್ದರೆ; (ii) ಅವನು/ಅವಳು ಅಥವಾ ಅವನ ತಂದೆ ತಾಯಿ/ಪೋಷಕರಲ್ಲಿ ಯಾರಾದರೊಬ್ಬರುಆದಾಯ ತೆರಿಗೆ ಬಾರ/ಸಂಪತ್ತು ತೆರಿಗೆದಾರರಾಗಿದ್ದರೆ, (iii) ಅವನು/ಅವಳುಅಥವಾಅವನ/ಅವಳ ತಂದೆಯಾರಾದರೊಬ್ಬರು ಮಾರಾಟ ತೆರಿಗೆದಾರರಾಗಿದ್ದರೆ, (iv) ಅವನು/ಅವಳು ಅಥವಾ ಅವನ/ಅವಳತಂದೆತಾಯಿ/ಪೋಷಕರಲ್ಲಿ ತಾಯಿ/ಪೋಷಕರಲ್ಲಿ ಯಾರಾದರೊಬ್ಬರು ಅಥವಾ ಇಬ್ಬರೂ ಸೇರಿ ಮಳೆ ಆಧಾರಿತ ಭೂಮಿ ಅಥವಾಖುಷಿ ಭೂಮಿ ಅಥವಾ ಅದರ ತತ್ಸಮಾನವಾದ 8 ಹೆಕ್ಟೇರಿಗಿಂತಲೂ ಅಧಿಕ ಭೂಮಿಯನ್ನು ಹೊಂದಿದ್ದರೆ ಅಂತಹ ಪುರುಷ ಅಥವಾ ಮಹಿಳೆಗೆ ಬಿಸಿಎಂ(ಬಿ) ಪ್ರಮಾಣ ಪತ್ರ ಪಡೆಯಲು ಅರ್ಹರಾಗಿರುವುದಿಲ್ಲ ಎಂದ ನಿಮವಿದೆ ಎನ್ನಲಾಗಿದೆ
0 Comments