ನಗರಸಭೆ ಅಧ್ಯದಕ್ಷರಾದ ಶ್ರೀಮತಿ ಗೀತಾ ಗಂಗಾಧರ್ ಅಧ್ಯಕ್ಷತೆಯಲ್ಲಿ ಕರೆಯಲಾಗಿದ್ದ ವಿಶೇಷಸಾಮಾನ್ಯಸಭೆ

by | 21/03/23 | ಸುದ್ದಿ


ಹಿರಿಯೂರು :
ನಗರದ ಕಂದಾಯ ವಸೂಲಿಗೆ ಸಂಬಂಧಿಸಿದಂತೆ ಕಳೆದ ಸಾಮಾನ್ಯ ಸಭೆಯಲ್ಲಿ ಚರ್ಚಿಸಿ, ಮಾರ್ಚ್ ತಿಂಗಳ ವರೆಗೂ ಗಡುವು ಪಡೆದು, ಕಂದಾಯ ವಸೂಲಾತಿಗೆ ಸಂಬಂಧಿಸಿದ ವಾರ್ಷಿಕ ಬಜೆಟ್ ನೀಡುವುದಾಗಿ ಭರವಸೆ ನೀಡಿದ್ದ ಅಧಿಕಾರಿಗಳು, ಮಾರ್ಚ್ ತಿಂಗಳ ಸಾಮಾನ್ಯ ಸಭೆಯಲ್ಲೂ ಯಾವುದೇ ಬಜೆಟ್ ಮಂಡನೆ ಮಾಡದೇ ಇರುವುದು ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆಯನ್ನು ಎತ್ತಿ ತೋರಿಸುತ್ತದೆ ಎಂಬುದಾಗಿ ನಗರಸಭೆ ಸದಸ್ಯರಾದ ಕೆ.ಟಿ.ತಿಪ್ಪೇಸ್ವಾಮಿ ಆರೋಪಿಸಿದರು.
ನಗರದ ನಗರಸಭೆ ಕೌನ್ಸಿಲ್ ಸಭಾಂಗಣದಲ್ಲಿ ನಗರಸಭೆ ಅಧ್ಯ ಕ್ಷರಾದ ಶ್ರೀಮತಿ ಗೀತಾ ಗಂಗಾಧರ್ ರವರ ಅಧ್ಯಕ್ಷತೆಯಲ್ಲಿ ಕರೆಯಲಾಗಿದ್ದ ವಿಶೇಷ ಸಾಮಾನ್ಯ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ನಗರದಲ್ಲಿ ಜನಸಂಖ್ಯೆ 70 ಸಾವಿರ ದಾಟಿರುವುದರಿಂದ ಅಭಿವೃದ್ಧಿ ವಿಚಾರದಲ್ಲಿ ನಾವು 2 ವರ್ಷದಲ್ಲಿ ಅಭಿವೃದ್ಧಿ ಮಾಡಲೇಬೇಕು, ಚುನಾವಣೆ ಹತ್ತಿರದಲ್ಲಿರುವುದರಿಂದ ನಮ್ಮ ಪಕ್ಷದ ವತಿಯಿಂದ ಮತಯಾಚನೆಗೆ ಹೋದರೆ ಸಾರ್ವಜನಿಕರು ಕುಡಿಯುವ ನೀರು, ಒಳಚರಂಡಿ, ಬೀದಿದೀಪಗಳ ದುರಸ್ಥಿಗಳ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂಬ ದೂರು ನೀಡುತ್ತಿದ್ದು, ಅಧಿಕಾರಿಗಳ ಬೇಜಾಬ್ದಾರಿಯಿಂದಾಗಿ ನಮ್ಮನ್ನು ಆಯ್ಕೆ ಮಾಡಿ ಕಳುಹಿಸಿರುವ ಜನತೆಗೆ ಋಣ ತೀರಿಸಲು ಸಾಧ್ಯವಾಗುತ್ತಿಲ್ಲ ಎಂಬುದಾಗಿ ದೂರಿದರು.
ಇದಕ್ಕೆ ಪ್ರತಿಕ್ರಿಯಿಸಿದ ನಗರಸಭೆ ಪೌರಾಯುಕ್ತರಾದ ಬಿ.ಸಿ.ಬಸವರಾಜ್ ರವರು ನಗರದ ಸ್ವಚ್ಛತೆ ಹಾಗೂ ನಿರ್ವಹಣೆಗೆ ಸಂಬಂಧಿಸಿದಂತೆ ಯಾವುದೇ ಅಧಿಕಾರಿಗಳು ಹಾಗೂ ಸಿಬ್ಬಂದಿವರ್ಗದವರು ಲೋಪದೋಷಗಳನ್ನ ಮಾಡಿರುವುದು ಕಂಡು ಬಂದಲ್ಲಿ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂಬುದಾಗಿ ಹೇಳಿದರು.
ನಗರಸಭೆ ಸದಸ್ಯರಾದ ಬಿ.ಎನ್.ಪ್ರಕಾಶ್ ಮಾತನಾಡಿ, ಸಾರ್ವಜನಿಕರು ನಗರಸಭೆ ವತಿಯಿಂದ ಇ-ಸ್ವತ್ತು ಮಾಡಿಸಿಕೊಳ್ಳಬೇಕಾದರೆ ಬ್ರೋಕರ್ ಗಳ ಮುಖಾಂತರವೇ ಹೋಗಿ ಅವರು ಕೇಳಿದಷ್ಟು ಹಣ ಕೊಟ್ಟು ಇ-ಸ್ವತ್ತು ಮಾಡಿಸಿಕೊಳ್ಳಬೇಕಾಗಿದ್ದು, ನಗರದ ಸಾರ್ವಜನಿಕರು ಸ್ವತಃ ತಾವೇ ಬಂದು ಇ-ಸ್ವತ್ತು ಮಾಡಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ, ನಗರಸಭೆ ಭ್ರಷ್ಟಾಚಾರದ ತಾಣವಾಗಿದೆ ಎಂಬುದಾಗಿ ಆಪಾದಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ನಗರಸಭೆ ಪೌರಾಯುಕ್ತರಾದ ಬಿ.ಸಿ.ಬಸವರಾಜ್ ರವರು ಸರ್ವರ್ ಬಿಜಿ ಎಂಬ ಕಾರಣ ಹೇಳಿ ಸಾರ್ವಜನಿಕರಿಗೆ ಇ-ಸ್ವತ್ತು ನೀಡುವುದನ್ನು ಮುಂದೂಡಬಾರದೆಂದು ಈಗಾಗಲೇ ನಗರಸಭೆ ಅಧಿಕಾರಿಗಳಿಗೆ ಖಡಕ್ಕಾಗಿ ಸೂಚನೆ ನೀಡಲಾಗಿದೆ, ಇದನ್ನು ಮೀರಿ ಇ-ಸ್ವತ್ತು ವಿಳಂಬ ಸರಿಪಡಿಸಿಕೊಳ್ಳದಿದ್ದರೆ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ದೂರು ನೀಡಬೇಕಾಗುತ್ತದೆ ಎಂಬುದಾಗಿ ಎಚ್ಚರಿಕೆ ನೀಡಲಾಗಿದೆ ಎಂದರು.
ಈ ಸಭೆಯಲ್ಲಿ ನಗರಸಭೆ ಅಧ್ಯಕ್ಷರಾದ ಶ್ರೀಮತಿ ಗೀತಾಗಂಗಾಧರ್, ಉಪಾಧ್ಯಕ್ಷರಾದ ಗುಂಡೇಶ್ ಕುಮಾರ್, ಸದಸ್ಯರುಗಳಾದ ಸಣ್ಣಪ್ಪ, ಮೊದಲ ಮರಿಯಾ, ಈರಲಿಂಗೇಗೌಡ, ವಿಠ್ಠಲ್ ಪಾಂಡುರಂಗ, ಅಂಬಿಕಾ ಆರಾಧ್ಯ, ಸುರೇಖಾ, ಶಿವರಂಜಿನಿ ಯಾದವ್, ಚಿತ್ರಜಿತ್ ಯಾದವ್, ಬಿ.ಎನ್.ಪ್ರಕಾಶ್, ಮಹೇಶ್ ಪಲ್ಲವ, ಅಜಿತ್ ಕುಮಾರ್, ಈ.ಮಂಜುನಾಥ್, ತಿಪ್ಪೇಸ್ವಾಮಿ ಸೇರಿದಂತೆ ನಗರಸಭೆ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *