ನಗರಸಭೆ ಅಧ್ಯಕ್ಷೆ ಸ್ಥಾನಕ್ಕೆ ಹೆಚ್ಚಿದ ಕುತೂಹಲ..ಬಿಸಿಎಂ(ಬಿ) ಬದಲು … ಬಿಸಿಎಂ(ಎ) ಮಹಿಳೆಗೆ ಅಧ್ಯಕ್ಷಸ್ಥಾನ ಹೊಲಿಯುವ ಸಾಧ್ಯತೆ…?

by | 27/08/24 | ಸುದ್ದಿ


ಚಳ್ಳಕೆರೆ ಆ.27 ಚಳ್ಳಕೆರೆ ನಗರಸಭೆಗೆ ಅಧ್ಯಕ್ಷ ಸ್ಥಾನಕ್ಕೆ ಬಿಸಿಎಂ(ಬಿ)ಮಹಿಳೆಗೆ ಮೀಸಲಾತಿ ಏಕೈಕ ಮಹಿಳೆಯಿದ್ದರೂ ಹೊಲಿಯದ ಬಂದ ಅದೃಷ್ಟ ಬಿಸಿಎಂ ಎ ಮಹಿಳೆಯರಿಗೆ.
ಹೌದು ಇದು ಚಳ್ಳಕೆರೆ ನಗರಸಭೆ ಎರಡನೇ ಅವಧಿಗೆ ಬಿಸಿಎಂ(ಬಿ) ಮಹಿಳೆಗೆ ನಿಗಧಿಯಾಗಿತ್ತು ಕಾಂಗ್ರೆಸ್ ಪಕ್ಷದಲ್ಲೇ ಏಕೈಕ ಮಹಿಳೆ ಸಾವಿತ್ರಮ್ಮ ಇದ್ದ ಕಾರಣ ಅವರೇ ಅವಿರೋಧವಾಗಿ ಆಯ್ಕೆಯಾಗಲಿದ್ದಾರೆ ಎಂಬುದು ಗ್ಯಾರಂಟಿಯಾಗಿತ್ತು.
ಬಿಜೆಪಿ ಪಕ್ಷದ ಸಾಕಮ್ಮ ಬಿಸಿಎಂ(ಎ)
ಬಿಸಿಎಂ ಬಿ ಮೀಸಲಾತಿಗೆ ಚುನಾವಣೆ ಸ್ಪರ್ಧೆಗೆ ಸ್ಪರ್ಧೆ ಮಾಡುವ ಅಥವಾ ಅವರ ಕುಟುಂಬ ಆಧಾಯ ತೆರಿಗೆ ಪಾವತಿ ದಾರರಾಗಿರ ಬಾರದು ಎಂಬ ನಿಯಮ ಇರುವುದರಿಂದ ಬಿಸಿಎಂ (ಬಿ) ಮಹಿಳೆ ಸಾವಿತ್ರಮ್ಮ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ವಂಚಿತರಾಗುವಂತಾಗಿದ್ದು .ಅಧ್ಯಕ್ಷ ಉಪಾಧ್ಯಕ್ಷ ಸ್ಥಾನದ ಚುನಾವಣೆ ಎರಡು ದಿನಗಳು ಮಾತ್ರ ಬಾಕಿದ್ದು ಇನ್ನು ತಾಲೂಕು ಕಚೇರಿಯಲ್ಲೂ ಸಹ ಬಿಸಿಎಂ (ಬಿ) ಪ್ರಮಾಣ ಪತ್ರ ನೀಡದ ಕಾರಣ ಬಿಸಿಎಂ (ಬಿ) ಮಹಿಳೆ ಬದಲಾಗಿ ಬಿಸಿಎಂ(ಎ) ಮಹಿಳೆಗೆ ಅವಕಾಶ ಇರುವುದರಿಂದ ಬಿಜೆಪಿ ಪಕ್ಷದಿಂದ 1 ನೇ ವಾರ್ಡ್ ನಿಂದ ಬಿಸಿಎಂ ಎ ಮೀಸಲಾತಿಯಿಂದ ಗೆದ್ದ ಸಾಕಮ್ಮ, ಕಾಂಗ್ರೆಸ್ ಪಕ್ಷದ 24 ನೇ ವಾರ್ಡ್ ನ ಮಂಜುಳ ಪ್ರಸನ್ನಕುಮಾರ್, 31 ನೇವಾರ್ಡ್ ನ ಜೈತುನ್ ಬಿ ಬಿಜೆಪಿ 1. ಕಾಂಗ್ರೆಸ್ ನಲ್ಲಿ ಇಬ್ಬರು ಒಟ್ಟು ಬಿಸಿಎಂ (ಎ) ಮೀಸಲಾತಿ ಹೊಂದಿದ 3 ಜನ ಮಹಿಳೆಯರಿದ್ದಾರೆ.


ಕಾಂಗ್ರೆಸ್ ಪಕ್ಷದ ಬಿಸಿಎಂ(ಎ) ಮಂಜುಳ.ಜೈತುನ್ ಬಿ.
ನಗರಸಭೆಯ ಒಟ್ಟು 31 ಸದಸ್ಯರಲ್ಲಿ ಜೆಡಿಎಸ್ ಪಕ್ಷದಿಂದ ಗೆದ್ದ ಕೆ.ಸಿ.ನಾಗರಾಜ್ ಸದಸ್ಯತ್ವಕ್ಕೆ ರಾಜಿನಾಮೆ ನೀಡಿದ್ದು ಕಾಂಗ್ರೆಸ್ 16. ಬಿಜೆಪಿ 4, ಜೆಡಿಎಸ್ 9, ಇತರೆ 1, ಒಟ್ಟು 30 ಸದಸ್ಯರಿದ್ದಾರೆ.
ಬಿಜೆಪಿ ಪಕ್ಷದಿಂದ ಅಧ್ಯಕ್ಷ ಸ್ಥಾನಕ್ಕೆ ಸಾಕಮ್ಮ ಸ್ಪರ್ಧೆ ಮಾಡಲು ಮೀಸಲಾತಿ ಪ್ರಮಾಣ ಪತ್ರ ಸಿದ್ದತೆ ಮಾಡಿಕೊಳ್ಳಲು ತಯಾರಿಯಲ್ಲಿದ್ದಾರೆ. ಬಿಜೆಪಿ ಪಕ್ಷದ ಸದಸ್ಯರ ಸಂಖ್ಯಾಬಲ ಕಡಿಮೆಯಿರುವುದರಿಂದ ಕಾಂಗ್ರೆಸ್ ಪಕ್ಷದ ಮಂಜುಳ ಹಾಗೂ ಜೈತುಂಬಿ ಇಬ್ಬರಿದ್ದು ಇವರಿಬ್ಬರಲ್ಲಿ ಯಾರು ಸ್ಪರ್ಧೆ ಮಾಡಲಿದ್ದಾರೆ…? ನಗರಸಭೆ ಗದ್ದುಗೆ ಜೈತುನ್ ಬಿ ಗೋ…? ಮಂಜುಳ ಇಬ್ಬರಲ್ಲಿ ಯಾರಕೊರಳಿಗೆ ಜಯಮಾಲೆ .. ಅಧಿಕಾರದ ಗದ್ದಿಗೆ ಯಾರಿಗೆ ಹೊಲಿಯಲಿದೆ ಎಂಬುದು ಆ.29 ರಂದು ಹೊರ ಬೀಳಲಿದೆ.
ಬಿಸಿಎಂ(ಬಿ) ಮಹಿಳೆ ಬದಲು ಬಿಸಿಎಂ(ಎ) ಮಹಿಳೆಗೆ ಕರ್ನಾಟಕ ಪೌರಸಭೆಗಳ ಅಧಿನಿಯಮ 1964 ಏನೇಳುತ್ತದೆ,

ಜನಸಂಖ್ಯೆಯು ರಾಜ್ಯದ ಒಟ್ಟು ಜನಸಂಖ್ಯೆಯಲ್ಲಿ ಯಾವ ಅನುಪಾತದಲ್ಲಿರುವುದೋ, ರಾಜ್ಯದಲ್ಲಿನ ಒಟ್ಟು ಹುದ್ದೆಗಳ ಸಂಖ್ಯೆಗೆ ಸರಿಸುಮಾರು ಅದೇ ಪ್ರಮಾಣದಲ್ಲಿರತಕ್ಕುದು; (ಬಿ) ರಾಜ್ಯದಲ್ಲಿನ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಹುದ್ದೆಗಳ ಒಟ್ಟು ಸಂಖ್ಯೆಯಲ್ಲಿ ಸರಿ ಸುಮಾರು ಮೂರನೇ ಒಂದು ಭಾಗದಷ್ಟು ಸಂಖ್ಯೆಯ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಹುದ್ದೆಗಳನ್ನು ಹಿಂದುಳಿದ ವರ್ಗಗಳಿಗೆ ಸೇರಿದ ವ್ಯಕ್ತಿಗಳಿಗೆ ಮೀಸಲಿರಿಸತಕ್ಕುದು; ಈ ಉಪ-ಪ್ರಕರಣದಡಿಯಲ್ಲಿ ಮೀಸಲಿರಿಸಿದ ಹುದ್ದೆಗಳ ಪೈಕಿ ಅಂಥ ಹುದ್ದೆಗಳ ಒಟ್ಟು ಸಂಖ್ಯೆಯಲ್ಲಿ ಶೇಕಡಾ ಎಂಬತ್ತರಷ್ಟು ಹುದ್ದೆಗಳನ್ನು ‘ಎ’ ಪ್ರವರ್ಗಕ್ಕೆ ಸೇರಿದ ವ್ಯಕ್ತಿಗಳಿಗೆ ಮೀಸಲಿರಿಸತಕ್ಕದ್ದು ಮತ್ತು ಉಳಿದ ಶೇಕಡ ಇಪ್ಪತ್ತರಷ್ಟು ಹುದ್ದೆಗಳನ್ನು ‘ಬಿ’ ಪ್ರವರ್ಗಕ್ಕೆ ಸೇರಿದ ವ್ಯಕ್ತಿಗಳಿಗೆ ಮೀಸಲಿರಿಸತಕ್ಕದ್ದು: ಮತ್ತು ಪರಂತು ‘ಎ’ ಪ್ರವರ್ಗಕ್ಕೆ ಸೇರಿದ ವ್ಯಕ್ತಿಗಳು ಲಭ್ಯವಿಲ್ಲದಿದ್ದಲ್ಲಿ, ಆ ಪ್ರವರ್ಗಕ್ಕೆ ಮೀಸಲಿರಿಸಿದ ಹುದ್ದೆಗಳನ್ನು ‘ಬಿ’ ಪ್ರವರ್ಗಕ್ಕೆ ಸೇರಿದ ವ್ಯಕ್ತಿಗಳಿಂದ ಭರ್ತಿ ಮಾಡಿಕೊಳ್ಳತಕ್ಕದ್ದು ಮತ್ತು ‘ಬಿ’ ಪ್ರವರ್ಗಕ್ಕೆ ಸೇರಿದ ವ್ಯಕ್ತಿಗಳು ಲಭ್ಯವಿಲ್ಲದಿದ್ದಲ್ಲಿ ಆ ಪ್ರವರ್ಗಕ್ಕೆ ಮೀಸಲಿರಿಸಿದ ಹುದ್ದೆಗಳನ್ನು ‘ಎ’ ಪ್ರವರ್ಗಕ್ಕೆ ಸೇರಿದ ವ್ಯಕ್ತಿಗಳಿಂದ ಭರ್ತಿ ಮಾಡಿಕೊಳ್ಳತಕ್ಕದ್ದು (ಸಿ) ರಾಜ್ಯದಲ್ಲಿನ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಹುದ್ದೆಗಳ ಒಟ್ಟು ಸಂಖ್ಯೆಯಲ್ಲಿ ಅನುಸೂಚಿತ ಜಾತಿಗಳು, ಅನುಸೂಚಿತ ಪಂಗಡಗಳು ಮತ್ತು ಹಿಂದುಳಿದ ವರ್ಗಗಳಿಗೆ ಸೇರಿದ ವ್ಯಕ್ತಿಗಳ ಪ್ರತಿಯೊಂದು ಪ್ರವರ್ಗಕ್ಕೂ ಮೀಸಲಿಟ್ಟಿರುವ ಮತ್ತು ಮೀಸಲಿಟ್ಟಿರದ ಹುದ್ದೆಗಳಲ್ಲಿ ಮೂರನೇ ಒಂದು ಭಾಗದಷ್ಟು ಹುದ್ದೆಗಳನ್ನು ಮಹಿಳೆಯರಿಗೆ ಮೀಸಲಿರಿಸತಕ್ಕುದು: ಪರಂತು, ಈ ಉಪ-ಪ್ರಕರಣದಡಿ ಮೀಸಲಿರಿಸಲಾದ ಹುದ್ದೆಗಳನ್ನು ಬೇರೆ ಬೇರೆ ಮುನಿಸಿಪಲ್ ಕೌನ್ಸಿಲ್ಲುಗಳಿಗೆ ಸರದಿ ಮೂಲಕ ನಿಯಮಿಸಬಹುದಾದ ಹಂಚಿಕೆ ಮಾಡತಕ್ಕುದು. ಈ ಉಪ-ಪ್ರಕರಣದ ಅಡಿಯಲ್ಲಿ ಹುದ್ದೆಗಳ ವಿವರಣೆ. ಸಂದೇಹಗಳ ನಿವಾರಣೆಗಾಗಿ, ಮೀಸಲಾತಿಯ ಉದ್ದೇಶಕ್ಕಾಗಿನ ಸರದಿಯ ನಿಯಮವು, 1994ರ ಜೂನ್ ಒಂದನೇ ದಿನಾಂಕದ ನಂತರ ನಡೆಸಬೇಕಾದ ಮೊದಲ ಸಾಮಾನ್ಯ ಚುನಾವಣೆಯಿಂದ ಪ್ರಾರಂಭವಾಗತಕ್ಕುದು]; (3) ಅಧ್ಯಕ್ಷ ಮತ್ತು ಉಪಾಧ್ಯಕ್ಷ ಚುನಾವಣೆ ಮತ್ತು ಸದರಿ ಪದಗಳಲ್ಲಿನ ಖಾಲಿ ಸ್ಥಾನಗಳನ್ನು ಭರ್ತಿಮಾಡುವುದು ಮತ್ತು ಅಂಥ ಚುನಾವಣೆಗೆ ಸಂಬಂಧಪಟ್ಟ ವಿವಾದಗಳ ನಿರ್ಧಾರಣೆಯು [xxx x x] ನಿಯಮಿಸಬಹುದಾದಂಥ ನಿಯಮಗಳಿಗನುಸಾರವಾಗಿರತಕ್ಕದ್ದು: ಪರಂತು, ಅಂಥ ಚುನಾವಣಾ ವಿವಾದಗಳನ್ನು ನಿರ್ಧರಿಸುವ ನಿಯಮಿಸಬಹುದಾದಂಥ ನ್ಯಾಯಿಕ ಅಧಿಕಾರಿಯಾಗಿರತಕ್ಕದ್ದು. [(4) xxxx]: ಪ್ರಾಧಿಕಾರವು (5) ಮುನ್ಸಿಪಲ್ ಕೌನ್ಸಿಲ್ನ ಅಧ್ಯಕ್ಷನ ಪದವು ಖಾಲಿಯಿರುವ ಅವಧಿಯಲ್ಲಿ ಮತ್ತು ಅವನ ಸ್ಥಾನವನ್ನು ವಹಿಸಿಕೊಳ್ಳಲು ಉಪಾಧ್ಯಕ್ಷನು ಇಲ್ಲದಿರುವಾಗ ಅಥವಾ 44ನೇ ಪ್ರಕರಣದ (2)ನೇ ಉಪ-ಪ್ರಕರಣದ ಮೂಲಕ ಅಗತ್ಯಪಡಿಸಿದಂತೆ ಖಾಲಿ ಆಗಿರುವಂಥ ಅಧ್ಯಕ್ಷ ಪದದ ಪ್ರಭಾರವನ್ನು ವಹಿಸಿಕೊಳ್ಳಲು ಉಪಾಧ್ಯಕ್ಷನು ತಪ್ಪಿದರೆ, ಆಗ (10)ನೇ ಉಪ-ಪ್ರಕರಣದ ಮೇರೆಗಿನ ಯಾವುದೇ ಕ್ರಮಕ್ಕೆ ಬಾಧಕವಾಗದಂತೆ ಈ ಅಧಿನಿಯಮದಲ್ಲಿ ಅಥವಾ ಅದರ ಮೇರೆಗೆ ಹೊರಡಿಸಿದ

Latest News >>

ಜಿಪಂ ಸಿಇಒ ಸೋಮಶೇಖರ್ ಭೇಟಿ ನರೇಗಾ ಕಾಮಗಾರಿ‌ಪರಿಶೀಲನೆ.

ಚಳ್ಳಕೆರೆ ಸೆ.11. ಹೆಚ್ಚು ಕಾಮಗಾರಿಗಳನ್ನು ಅನುಷ್ಟಾನಗೊಳಿಸಿ ಗ್ರಾಮೀ ಣ ಭಾಗದ ಕೂಲಿಕಾರ್ಮಿಕರಿಗೆ ದುಡಿಯುವ ಕೈಗಳಿಗೆ ಕೆಲಸ ನೀಡುವಂತೆ...

ಅಂತರಾಷ್ಟಿçÃಯ ಪ್ರಜಾಪ್ರಭುತ್ವ ದಿನಾಚರಣೆಗೆ ಸಿದ್ದತೆ ಸೆ.12 ರಂದು ಎನ್.ಜಿ.ಓ ಹಾಗೂ ಸಂಘ ಸಂಸ್ಥೆಗಳ ಪದಾಧಿಕಾರಿಗಳ ಸಭೆ

ಚಿತ್ರದುರ್ಗ ಸೆ.10: ರಾಜ್ಯದ ಉತ್ತರ ತುದಿಯಿಂದ ದಕ್ಷಿಣ ತುದಿಯವರೆಗೆ ಮಾನವ ಸರಪಳಿ ರಚಿಸುವ ಮೂಲಕ ಸೆ.15 ರಂದು ಅಂತರಾಷ್ಟಿçÃಯ ಪ್ರಜಾಪ್ರಭುತ್ವ...

ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಸೂಚನೆ ಸೆ.14 ರಿಂದ ಸ್ವಚ್ಛತಾ ಹೀ ಸೇವಾ ಪಾಕ್ಷಿಕ: ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿ

ಚಿತ್ರದುರ್ಗ. ಸೆ.10: ಸ್ವಚ್ಛತಾ ಹೀ ಸೇವಾ ಪಾಕ್ಷಿಕ ವಿಶೇಷ ಆಂದೋಲನವನ್ನು ಜಿಲ್ಲೆಯಾದ್ಯಂತ ಇದೇ ಸೆ.14 ರಿಂದ ಅಕ್ಟೋಬರ್ 2 ರವರೆಗೆ...

ಮಲ್ಲೂರಹಳ್ಳಿ ಗ್ರಾಮದ .ಅಂಗವಾಡಿ ಬಿ. ಕೇಂದ್ರದಲ್ಲಿ ಪೂರಕ ಪೌಷ್ಟಿಕ ಆಹಾರ ಶಿಬಿರಕ್ಕೆ ಚಾಲನೆ ನೀಡಿದ ಮುಖ್ಯ ಶಿಕ್ಷಕ ನಾರಾಯಣ ನಾಯ್ಕ.

ನಾಯಕನಹಟ್ಟಿ:: ತಾಯಿ ಮಗುವಿನ ಆರೋಗ್ಯಕ್ಕ ಪೌಷ್ಟಿಕ ಆಹಾರ ಅವಶ್ಯಕ ಎಂದು ಮಲ್ಲೂರಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ...

ಸರ್ಕಾರ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳು ನಿಲ್ಲುವುದಿಲ್ಲ ಸಾರ್ವಜನಿಕರಿಗೆ ಆತಂಕ ಬೇಡ: ಹೆಚ್ಎಂ ರೇವಣ್ಣ ಭರವಸೆ 

ಚಳ್ಳಕೆರೆ: ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರ ಯಶಸ್ವಿಯಾಗಿ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುತ್ತದೆ...

ಸೆ.. 15 ರಂದು ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನ ರಾಜ್ಯಾದ್ಯಂತ ಏಕಕಾಲಕ್ಕೆ ಮಾನವಸರಪಳಿ ನಿರ್ಮಾಣ ಜಿಲ್ಲೆಯಲ್ಲಿ 110 ಕಿ.ಮೀ. ಮಾನವ ಸರಪಳಿ ಯಶಸ್ವಿಗೊಳಿಸಲು ಸಿದ್ಧತೆ- ಡಿ. ಸುಧಾಕರ್ ಸೂಚನೆ

ಚಳ್ಳಕೆರೆ ಸೆ. 9 ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯನ್ನು ಇದೇ ಸೆ. 15 ರಂದು ರಾಜ್ಯಾದ್ಯಂತ ಬೀದರ್‍ ನಿಂದ ಚಾಮರಾಜನಗರ ವರೆಗೆ...

ಡಿ.ಸಿ.ಸಿ. ಬ್ಯಾಂಕ್ ನಿರ್ದೇಶಕರಾಗಿ ಓ.ಮಂಜುನಾಥ್ ಮಾಳಿಗೆ ಅವರು ಅವಿರೋಧ ಆಯ್ಕೆಯಾಗಿದ್ದಾರೆ.

ಚಿತ್ರದುರ್ಗ: ಚಿತ್ರದುರ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿಯಮಿತ, ಚಿತ್ರದುರ್ಗ ಇದರ ಆಡಳಿತ ಮಂಡಳಿ ನಿರ್ದೇಶಕರ ಸ್ಥಾನಕ್ಕೆ ಹಿರಿಯೂರು...

ಚಿತ್ರದುರ್ಗದಲ್ಲಿ ನಡೆಯಲಿರುವ ಪತ್ರಿಕಾ ವಿತರಕರ ಹಂಚಿಕೆದಾರರ 4ನೇರಾಜ್ಯಸಮ್ಮೇಳನ ಕಾರ್ಯಕ್ರಮ ಯಶಸ್ವಿಯಾಗಲಿ : ಆಲೂರು ಹನುಮಂತರಾಯಪ್ಪ

ಹಿರಿಯೂರು: ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟ ಹಾಗೂ ಚಿತ್ರದುರ್ಗ ಜಿಲ್ಲಾ ಪತ್ರಿಕೆ ಹಂಚಿಕೆದಾರರ ಹಾಗೂ ವಿತರಕರ ಸಂಘ (ರಿ) ಇವರುಗಳ...

ಎಸ್.ಸಿ.ಎಸ್.ಪಿ ಹಾಗೂ ಟಿ.ಎಸ್.ಪಿ ಅನುಷ್ಟಾನ ಮೌಲ್ಯಮಾಪನ ಸಭೆಜಿಲ್ಲಾ ಮೇಲ್ವಿಚಾರಣಾ ಸಮಿತಿಯಿಂದ ಕ್ರಿಯಾಯೋಜನೆ ಅನುಮೋದನೆ ಕ್ರಮಕ್ಕೆ ಶಿಫಾರಸ್ಸು

ಚಿತ್ರದುರ್ಗ ಸೆ.06: ಪರಿಶಿಷ್ಟ ಜಾತಿ ಹಾಗೂ ಗಿರಿಜನ ಉಪಯೋಜನೆಯಡಿ (ಎಸ್.ಸಿ.ಎಸ್.ಪಿ ಹಾಗೂ ಟಿ.ಎಸ್.ಪಿ) ಜಿಲ್ಲೆಯಲ್ಲಿ ಕೈಗೊಳ್ಳುವ ಎಲ್ಲಾ...

ಪೋಷಣ್ ಮಾಸಾಚರಣೆ ಕಾರ್ಯಕ್ರಮದಲ್ಲಿ ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿ ಡಾ.ಡಿ.ಎಂ.ಅಭಿನವ್ ಪೌಷ್ಠಿಕಾಂಶಯುಕ್ತ ಆಹಾರ ಪದಾರ್ಥ ಸೇವಿಸುವುದು ಅಭ್ಯಾಸಿಸಿ

ಚಿತ್ರದುರ್ಗ ಸೆ.6: ಪೋಷಣ್ ಮಾಸಾಚರಣೆ ಕಾರ್ಯಕ್ರಮ ಮಕ್ಕಳ ಹಾಗೂ ಗರ್ಭಿಣಿಯರ, ಬಾಣಂತಿಯರ ಆರೋಗ್ಯ ಪೋಷಣ ಮಾಸಾಚರಣೆ ಆಗಬೇಕು. ಮಕ್ಕಳಲ್ಲಿ...

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *

You cannot copy content of this page