ಹಿರಿಯೂರು:
ನಗರಸಭೆ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ 18 ತಿಂಗಳ ನಂತರ ಮೀಸಲಾತಿ ಪ್ರಕಟವಾಗಿದ್ದು, ಅಧ್ಯಕ್ಷ ಸ್ಥಾನ ಹಿಂದುಳಿದ ವರ್ಗ (ಎ) ಹಾಗೂ ಉಪಾಧ್ಯಕ್ಷ ಸ್ಥಾನ ಪರಿಶಿಷ್ಟಜಾತಿ ಮಹಿಳೆಗೆ ಮೀಸಲಾಗಿದ್ದು, ನಗರಸಭೆ ಅಧ್ಯಕ್ಷ ಸ್ಥಾನಕ್ಕೆ ತೀವ್ರ ಪೈಪೋಟಿ ಎದುರಾಗಿದೆ.
ನಗರಸಭೆಯ 31 ಸ್ಥಾನಗಳಿಗೆ ಮೊದಲ ಬಾರಿ ನಡೆದ ಚುನಾವಣೆಯಲ್ಲಿ 13 ಕಾಂಗ್ರೆಸ್, 6ಬಿಜೆಪಿ, 3ಜೆಡಿಎಸ್ ಹಾಗೂ 9ಪಕ್ಷೇತರರು ಕಾಂಗ್ರೆಸ್ ಜೊತೆ ಗುರುತಿಸಿಕೊಂಡಿದ್ದರು.
ಕ್ಷೇತ್ರದ ಮಾಜಿ ಶಾಸಕಿ ಪೂರ್ಣಿಮಾಶ್ರೀನಿವಾಸ್ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿರುವ ಕಾರಣ ಬಿಜೆಪಿಯ 6ಜನ ಸದಸ್ಯರಲ್ಲಿ ಪಕ್ಷದ ಜೊತೆ ಉಳಿಯುವವರು ಯಾರು ಎಂಬುದು ಯಕ್ಷ ಪ್ರಶ್ನೆಯಾಗಿದೆ.
ಹಿಂದುಳಿದ ವರ್ಗ (ಎ) ಗೆ ಮೀಸಲಾಗಿರುವ ಅಧ್ಯಕ್ಷ ಸ್ಥಾನಕ್ಕೆ 3ನೇ ವಾರ್ಡ್ ನ ಶ್ರೀಮತಿ ಶಿವರಂಜಿನಿ ಯಾದವ್, 4ನೇ ವಾರ್ಡ್ ನ ಚಿತ್ರಜಿತ್ ಯಾದವ್, 6ನೇ ವಾರ್ಡ್ ನ ಜಬೀವುಲ್ಲಾ, 8ನೇ ವಾರ್ಡ್ ನ ಆರ್.ಬಾಲಕೃಷ್ಣ (ಬಿಜೆಪಿ), 14ನೇ ವಾರ್ಡ್ ನ ಗೀತಾ ಗಂಗಾಧರ್, 15 ನೇ ವಾರ್ಡ್ ನ ಜಗದೀಶ್, 17 ನೇ ವಾರ್ಡ್ನ ಸಮೀವುಲ್ಲಾ, ಹಾಗೂ 19ನೇ ವಾರ್ಡ್ ನ ವೈ.ಪಿ.ಡಿ.ದಾದಾಪೀರ್ ಅರ್ಹ ಅಭ್ಯರ್ಥಿಗಳಾಗಿದ್ದಾರೆ.
ಈಗಾಗಲೇ ಶ್ರೀಮತಿ ಶಿವರಂಜಿನಿಯಾದವ್, ಶ್ರೀಮತಿ ಷಂಶುನ್ನೀಸಾ ಹಾಗೂ ಶ್ರೀಮತಿ ಗೀತಾಗಂಗಾಧರ್ ಮೊದಲ ಅವಧಿಯಲ್ಲಿ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದು, ಮತ್ತೊಮ್ಮೆ ಅಧ್ಯಕ್ಷ ಸ್ಥಾನಕ್ಕೆ ಪ್ರಯತ್ನ ನಡೆಸುವ ಸಂಭವವಿದೆ ಅಲ್ಲದೆ, ಯಾದವ ಜನಾಂಗದ ಒಬ್ಬರೂ ಪುರುಷರೂ ಇದುವರೆಗೆ ನಗರಸಭೆ ಅಧ್ಯಕ್ಷರಾಗಿಲ್ಲ. ಆದ್ದರಿಂದ ಚಿತ್ರಜಿತ್ ಯಾದವ್ ಗೆ ಅಧ್ಯಕ್ಷ ಸ್ಥಾನ ಕೊಡಬೇಕು ಎಂಬುದಾಗಿ ಹೆಚ್ಚಿನ ಒತ್ತಡ ಕೇಳಿಬರುತ್ತಿದೆ.
ಕಾಂಗ್ರೆಸ್ ನ ಹಿರಿಯ ಮುಖಂಡರಾದ ಜಬೀವುಲ್ಲಾ, ಸಮೀವುಲ್ಲಾ, ಜಗದೀಶ್, ಚಿತ್ರಜಿತ್ ಯಾದವ್ ಇವರೆಲ್ಲಾ ಸಚಿವ ಡಿ. ಸುಧಾಕರ್ ಅವರಿಗೆ ಆಪ್ತರಾಗಿದ್ದು, ಆರ್.ಬಾಲಾಕೃಷ್ಣ ಮತ್ತು ವೈ.ಡಿ.ಪಿ.ದಾದಾಪೀರ್ ಅವರು ವಿಧಾನಪರಿಷತ್ ಸದಸ್ಯರಾದ ಡಿ.ಟಿ. ಶ್ರೀನಿವಾಸ್ ಅವರಿಗೆ ಆತ್ಮೀಯರಾಗಿದ್ದಾರೆ.
ನಗರಸಭೆ ಉಪಾಧ್ಯಕ್ಷ ಸ್ಥಾನಕ್ಕೆ 25 ನೇ ವಾರ್ಡ್ ನ ಜಯವಾಣಿ (ಬಿಜೆಪಿ), 28ನೇ ವಾರ್ಡ್ ನ ಸಿ. ಅಂಬಿಕಾ ( ಬಿಜೆಪಿ), 30 ನೇ ವಾರ್ಡ್ ನ ದೇವಿರಮ್ಮ (ಪಕ್ಷೇತರ) ಹಾಗೂ 31 ನೇ ವಾರ್ಡ್ ನ ಎಚ್.ಮಂಜುಳಾ (ಪಕ್ಷೇತರ) ಸ್ಪರ್ಧಿಗಳಾಗಿದ್ದು
ಶ್ರೀಮತಿ ಸಿ.ಅಂಬಿಕಾ ಅವರು ಸಚಿವರು ಹಾಗೂ ಮಾಜಿ ಶಾಸಕರ ಎರಡೂ ಗುಂಪಿನಲ್ಲಿ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಅಧಿಕಾರ ಹಂಚಿಕೆ ವಿಚಾರ ಮುನ್ನಲೆಗೆ ಬಂದರೆ ಮೊದಲ ಅವಧಿಯ ಉಪಾಧ್ಯಕ್ಷ ಸ್ಥಾನ ಅಲಂಕರಿಸುವ ಎಲ್ಲಾ ಸಾದ್ಯತೆ ಇವರಿಗಿದೆ ಎನ್ನಲಾಗಿದೆ.
ಉಳಿದಂತೆ ಅಧ್ಯಕ್ಷ ಸ್ಥಾನ ಕ್ಷೇತ್ರದ ಸಚಿವರಾದ ಡಿ.ಸುಧಾಕರ್ ರವರು ಸೂಚಿಸುವ ಸದಸ್ಯರಿಗೆ ಸಿಗುವುದು ಗ್ಯಾರಂಟಿಯಾಗಿದ್ದು, ಅಧ್ಯಕ್ಷ ಸ್ಥಾನಕ್ಕೆ ತೀವ್ರ ಪೈಪೋಟಿ ಇರುವ ಕಾರಣಕ್ಕೆ ಅಧಿಕಾರ ಹಂಚಿಕೆ ಸೂತ್ರ ಜಾರಿ ಮಾಡುವುದು ಸಚಿವರಿಗೆ ಅನಿವಾರ್ಯ ಎಂಬ ಮಾತು ಕಾಂಗ್ರೆಸ್ ವಲಯದಲ್ಲಿ ವ್ಯಾಪಕವಾಗಿ ಕೇಳಿಬರುತ್ತಿದೆ.
ಜಿಪಂ ಸಿಇಒ ಸೋಮಶೇಖರ್ ಭೇಟಿ ನರೇಗಾ ಕಾಮಗಾರಿಪರಿಶೀಲನೆ.
ಚಳ್ಳಕೆರೆ ಸೆ.11. ಹೆಚ್ಚು ಕಾಮಗಾರಿಗಳನ್ನು ಅನುಷ್ಟಾನಗೊಳಿಸಿ ಗ್ರಾಮೀ ಣ ಭಾಗದ ಕೂಲಿಕಾರ್ಮಿಕರಿಗೆ ದುಡಿಯುವ ಕೈಗಳಿಗೆ ಕೆಲಸ ನೀಡುವಂತೆ...
0 Comments