ನಗರಸಭೆಗೆ ನೂತನ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಎಂ.ಜೆ.ರಾಘವೇಂದ್ರ ಅಧಿಕಾರ ಸ್ವೀಕಾರ

by | 23/01/23 | ರಾಜಕೀಯ

ಚಳ್ಳಕೆರೆ ಜನಧ್ವನಿ ವಾರ್ತೆ ಜ.23 ಚಳ್ಳಕೆರೆ ನಗರಸಭೆಗೆ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಕೆ.ಎಸ್.ರಾಘವೇಂದ್ರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ನಗರಸಭೆ ವ್ಯಾಪ್ತಿಯ 18 ನೇ ವಾರ್ಡ್. ಸ್ಲಂ ಪ್ರದೇಶವಾಗಿದ್ದು. ಇಲ್ಲಿ ಅತಿ ಹೆಚ್ಚು ಕಡು ಬಡತನ .ಕೂಲಿ ಕಾರ್ಮಿಕರು ಹೆಚ್ಚಾಗಿ ವಾಸವಾಗಿರುವ ತಳ ಸಮುದಾಯದ ಕುಟುಂಬಸ್ಥರು ವಾಸವಾಗಿರುವ ಈ ಪ್ರದೇಶದಲ್ಲಿ ಹಣ್ಣಿನ ವ್ಯಾಪಾರಿ .ಕಾಂಗ್ರೆಸ್ ಸದಸ್ಯ ಎಂ.ಜೆ.ರಾಘವೇಂದ್ರ ನಗರಸಭೆಗೆ ಸದಸ್ಯರಾಗಿ ಆಯ್ಕೆಯಾದಗಿನಿಂದ ವಾರ್ಡ್ ಜನರೊಂದಿಗೆ ಸಂಪರ್ಕ ಹೊಂದಿದ್ದು. ವಾರ್ಡ್ ವ್ಯಾಪ್ತಿಯ ನಿವಾಸಿಗಳ. ಯುವಕರ ವಾಟ್ಸ್ ಆಫ್ ಗ್ರೂಪ್ ರಚಿಸಿಕೊಂಡು ಕುಡಿಯುವ ನೀರಿನ ಸಮಸ್ಯೆ. ಬೀದಿ ದೀಪ. ಸ್ವಚ್ಚತೆ ಸೇರಿದಂತೆ ವಾರ್ಡ್ ಸಮಸ್ಯೆಗಳನ್ನು ಗ್ರಾಪ್ ಗೆ ಬಂದ ತಕ್ಷಣ ಸ್ಪಂದಿಸಿ ಸಮಸ್ಯೆಗೆ ಪರಿಹಾರ ಕೊಡಿಸುವ ಜತೆಗೆ ವಾರ್ಡ್ ವ್ಯಾಪ್ತಿಯ ಪ್ರತಿ ಕುಟುಂಬಗಳ ಸಂಖ್ಯೆ ಮಾಹಿತಿ ಸಂಗ್ರಹಿಸಿ ಯಾರು ಸಕಾರಿ ಸೌಲಭ್ಯ ಪಡೆದಿದ್ದಾರೆ. ಯಾರು ಪಡೆದಿಲ್ಲ ಎಂಬ ಮಾಹಿತಿ ಸಂಗ್ರಹಿಸಿದ್ದಾರೆ. ವಾರ್ಡ್ ವಾಪ್ತಿಯಲ್ಲಿ ಯಾರಾದರೂ ಬಡಕುಟುಂಬದ ಸದಸ್ಮೃರು ಮೃತ ಪಟ್ಟರೆ ಅವರ ಮನೆಗೆ ಭೇಟಿ ಸಾಂತ್ವನ ಹೇಳಿ ಅಂತ್ಯ ಸಂಸ್ಕಾರಕ್ಕೆ ವೈಯುಕ್ತ ಧನಸಹಾಯ ಮಾಡುವ ಜತೆಗೆ ಶುಭ ಕಾರ್ಯಗಳಿಗೆ ಅಕ್ಕಿಕೊಡಿಸುವುದು. ಕೋವಿಡ್ ಸೋಂಕಿನ ಮೊದಲ ಹಂತದಲ್ಲಿ ಮಾಸ್ಕ್ ಕೊರತೆಯಿದ್ದು ಮಾಸ್ಕ್ ಬೇಕೆಂದರೂ ಸಿಗುತ್ತಿರಲ್ಲಿ ಅಂತಹ ಸಂದರ್ಭದಲ್ಲಿ ಮಾಸ್ಕ್ ತಯಾರಿಸಿ ವಾರ್ಡ್ ನ ಪ್ರತಿ ಕುಟುಂಬದ ಸದಸ್ಯರಿಗೆ ಕೊರೊನಾ ಸೈನಿಕರಿಗೆ ಉಚಿತವಾಗಿ ಮಾಸ್ಕ್ ವಿತರಿಸಿದ ಸದಸ್ಯ ಎಂದು ಜನರ ಮೆಚ್ಚಿಗೆ ಪಾತ್ರರಾಗಿದ್ದರು. ನಗರಸಭೆ ಕಚೇರಿಯಲ್ಲಿ ಶಾಸಕ ಟಿ.ರಘುಮೂರ್ತಿ ಮಾರ್ಗದರ್ಶನದಂತೆ ಸೋಮವಾರ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಎಂ.ಜೆ.ರಾಘವೇಂದ್ರ ಸ್ಥಾಯಿ ಸಮಿತಿ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮದಲ್ಲಿ 18 ನೇವಾರ್ಡ್ ನ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು
ಸ್ಥಾಯಿ ಸಮಿತಿ ಕಚೇರಿಯಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್. ಬುದ್ದ.ಬದವ .ಕನಕದಾಸರ ಭಾವ ಚಿತ್ರಗಳಿಗೆ ಪುಸ್ಪನಮನ ಸಲ್ಲಿಸುವ ಮೂಲಕ ಅಧಿಕಾರ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಶಾಸಕ ಟಿ.ರಘುಮೂರ್ತಿ ಮಾತನಾಡಿ ಚುನಾವಣೆ ಯಲ್ಲಿ ಸ್ಪರ್ಧಿಸಲು ಪಕ್ಷ ಇರಲಿ ಗೆದ್ದ ನಂತರ ಪಕ್ಷಬೇದ ಮರೆತು ನಗರದ ಅಭಿವೃದ್ಧಿ ಗೆ ಎಲ್ಲಾ ಸದಸ್ಯರು ಮುಂದಾಗ ಬೇಕು ಎಂದು ತಿಳಿಸಿದರು. ನಗರಸಭೆ ಅಧ್ಯಕ್ಷೆ ಸುಮಕ್ಜ.ಉಪಾಧ್ಯಕ್ಷೆ ಮಂಜುಳ. ಪೌರಾಯುಕ್ತ ಚಂದ್ರಪ್ಪ. ನಾಯಕನಹಟ್ಟಿ ಪಟ್ಟಣ ಪಂಚಾಯತ್ ಪೌರಾಯುಕ್ತೆ ಲೀಲಾವತಿ ನಗರಸಭೆ ಸದಸ್ಯರು. ಕುರುಬ ಸಮಾಸದ ಮುಖಂಡರು ನಗರಸಭೆ ಸಿಬ್ಬಂದಿಗಳು ಉಪಸ್ಥೊತರಿದ್ದರು.

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *