ನಗರದ ಸ್ಲಂಬೋರ್ಡ್ ಮನೆನಿರ್ಮಾಣದಲ್ಲಿ ಭಾರಿ ಅಕ್ರಮ
ಆಡಳಿತರೂಢಸರ್ಕಾರದವಿರುದ್ದ ಸಾರ್ವಜನಿಕರ ಆಕ್ರೋಶ

by | 03/11/22 | ಜನಧ್ವನಿ

ಹಿರಿಯೂರು ನ3.
ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಕೊಳಚೆ ಪ್ರದೇಶ ನಿರ್ಮೂಲನೆ ಮಂಡಳಿ ವತಿಯಿಂದ ನಿರ್ಮಾಣಗೊಳ್ಳುತ್ತಿರುವ ಸ್ಲಂಬೋರ್ಡ್ ಮನೆಗಳ ಕಾಮಗಾರಿ ಕಾರ್ಯಗಳು ಅತ್ಯಂತ ಕಳಪೆ ಮಟ್ಟದ ಕಾಮಗಾರಿಯಾಗಿದ್ದು , ಮನೆ ನಿರ್ಮಾಣದಲ್ಲಿ ಭಾರಿ ಅಕ್ರಮ ನಡೆದಿದೆ ಎಂಬುದಾಗಿ ಸ್ಥಳೀಯ ಸಾರ್ವಜನಿಕರು ಹಾಗೂ ಮನೆ ನಿರ್ಮಾಣದಲ್ಲಿ ಮೋಸ ಹೋದ ಫಲಾನುಭವಿಗಳು ಆಡಳಿತರೂಢ ರಾಜ್ಯ ಸರ್ಕಾರದ ವಿರುದ್ದ ತೀವ್ರಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಸ್ಲಂ ಬೋರ್ಡ್ ಮನೆಗಳು ಮಂಜೂರು ಆಗಿ ಈಗಾಗಲೇ ನಾಲ್ಕುವರೆ ವರ್ಷಗಳೇ ಕಳೆದಿದ್ದರೂ ಸಮೇತ ಇನ್ನೂ ಕಾಮಗಾರಿ ಕೆಲಸವನ್ನು ಸಹ ಪೂರ್ಣಗೊಳಿಸದೆ, ಅಕ್ರಮ ಎಸಗಲಾಗಿದ್ದು, ಈ ಘಟನೆಯಿಂದ ರಾಜ್ಯಸರ್ಕಾರ ಮತ್ತೆ 40% ಕಮಿಷನ್ ಸರ್ಕಾರ ಎಂಬುದನ್ನು ಸಾಬೀತು ಪಡಿಸುತ್ತಲೇ ಇದೆ ಎಂಬುದಾಗಿ ಫಲಾನುಭವಿಗಳು ಆಡಳಿತ ಸರ್ಕಾರದ ವಿರುದ್ಧ ತೀವ್ರ ಬೇಸರವನ್ನು ವ್ಯಕ್ತಪಡಿಸುತ್ತಿದ್ದಾರೆ.
ಈ ಮನೆಗಳಿಗೆ ದುರ್ಬಲತಳಪಾಯ ಹಾಕಲಾಗಿದ್ದು, ಮನೆ ನಿರ್ಮಾಣಕ್ಕೆ ಕಳಪೆ ಇಟ್ಟಿಗೆಗಳನ್ನು, ಕಳಪೆ ಕಬ್ಬಿಣಗಳನ್ನೇ ಬಳಸಲಾಗಿದೆ. ಸರ್ಕಾರದ ಆದೇಶದಂತೆ ಐದು ಇಂಚು ಆರ್ ಸಿ ಸಿ ಹಾಕುವ ಬದಲು ಕೇವಲ ಎರಡುವರೆ ಇಂಚು ಆರ್.ಸಿಸಿ ಹಾಕಲಾಗಿದೆ ಇದರಿಂದಾಗಿ ಈಗಾಗಲೇ ನಿರ್ಮಾಣಗೊಂಡಿರುವ ಮನೆಗಳ ಮೇಲ್ಛಾವಣಿಗಳು ಈ ಮಳೆಯಿಂದಾಗಿ ಸಂಪೂರ್ಣವಾಗಿ ಸೋರಿಕೆಯಾಗುತ್ತಿದೆ.
ಈ ಮನೆಗಳಿಗೆ ಹೊಸದಾಗಿ ಗೋಡೆಗಳು ನಿರ್ಮಾಣಗೊಂಡಿದ್ದರೂ ಮನೆ ನಿರ್ಮಾಣ ಪೂರ್ಣಗೊಳ್ಳುವ ಮೊದಲೇ ಗೋಡೆಗಳು ಬಿರುಕು ಬಿಟ್ಟಿದೆ. ಈ ಸಮಸ್ಯೆಗಳ ಬಗ್ಗೆ ಸ್ಥಳೀಯರು ಹಾಗೂ ಫಲಾನುಭವಿಗಳು ಸಂಬಂಧಪಟ್ಟ ಸ್ಲಂಬೋರ್ಡ್ ಇಲಾಖೆಯ ಅಧಿಕಾರಿಯವರ ಬಳಿ ಹಾಗೂ ನಗರಸಭೆ ಆಡಳಿತ ಅಧಿಕಾರಿಗಳ ಬಳಿ ಮಾಹಿತಿ ಕೇಳಿದರೆ ಸರಿಯಾದ ಮಾಹಿತಿ ನೀಡದೇ ಫಲಾನುಭವಿಗಳನ್ನು ಕಡೆಗಾಣಿಸುತ್ತಿದ್ದಾರೆ ಎನ್ನಲಾಗಿದೆ.
ಈ ಮನೆಗಳನ್ನು ನಗರದಲ್ಲಿನ ಸ್ಥಳೀಯ ಖಾಯಂವಾಸಿಗಳಿಗೆ ನೀಡದೆ ನಗರ ಮತ್ತು ಗ್ರಾಮದಲ್ಲಿ ಎರಡು ಕಡೆಗಳಲ್ಲಿಯೂ ವಾಸವಿರುವ ಅಭ್ಯರ್ಥಿಗಳಿಗೆ ನೀಡಲಾಗಿದೆ, ಇದಕ್ಕೆ ಸಂಬಂಧಪಟ್ಟಂತೆ ಇಲಾಖೆಯ ಅಧಿಕಾರಿಗಳು ಶಾಮೀಲಾಗಿ ಸರ್ಕಾರದ ಆದೇಶದಪಟ್ಟಿಯಲ್ಲಿ ಬಂದಂತಹ ನಿಜವಾದ ಫಲಾನುಭವಿಗಳ ಹೆಸರು ಪಟ್ಟಿಯಿಂದ ತೆಗೆದುಹಾಕಿ ಅನ್ಯಾಯವೆಸಗಲಾಗಿದೆ,
ಇದಕ್ಕೆ ಸಂಬಂಧ ಪಟ್ಟಂತೆ ನಗರಸಭೆ ಆಡಳಿತ ಮಂಡಳಿಯ ಅಧಿಕಾರಿಗಳು ಹಾಗೂ ತಮ್ಮ ವಾರ್ಡಿನ ಜನಪ್ರತಿನಿಧಿಗಳೆಂದು ಕರೆಯಿಸಿಕೊಳ್ಳುತ್ತಿರುವ ನಗರಸಭೆ ಸದಸ್ಯರುಗಳನ್ನು ಹಾಗೂ ನಗರಸಭೆ ಅಧ್ಯಕ್ಷರುಗಳು, ನಗರಸಭೆ ಆಡಳಿತ ಅಧಿಕಾರಿಗಳನ್ನು ಸಮೇತ ವಿಚಾರಿಸಿದರೆ, ಬೇಜಾವ್ದಾರಿತನದಿಂದ ಉತ್ತರ ನೀಡುವುದಾಗಿ ಫಲಾನುಭವಿಗಳು ತೀವ್ರ ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ಈ ಕಳಪೆ ಕಾಮಗಾರಿಗೆ ಸಂಬಂಧ ಪಟ್ಟಂತೆ ಇದೀಗ ಚಿತ್ರದುರ್ಗ ಜಿಲ್ಲೆಗೆ ನೂತನವಾಗಿ ಜಿಲ್ಲಾಧಿಕಾರಿಯಾಗಿ ಆಗಮಿಸಿರುವ ಶ್ರೀಮತಿ ದಿವ್ಯಪ್ರಭುರವರು ಈ ಸ್ಲಲಂಬೋರ್ಡ್ ನ ಕೊಳಚೆ ಪ್ರದೇಶಗಳ ನಿರ್ಮೂಲನೆ ಮಂಡಳಿ ವತಿಯಿಂದ ಮೋಸ ಹೋಗಿರುವ ಫಲಾನುಭವಿಗಳಿಗೆ ನ್ಯಾಯದೊರಕಿಸಿಕೊಡುತ್ತಾರೆಯೇ ಎಂಬುದಾಗಿ ಕಾದು ನೋಡಬೇಕಾಗಿದೆ.
ಈ ವಿಚಾರಕ್ಕೆ ಸಂಬಂಧಪಟ್ಟಂತೆ ಜಿಲ್ಲಾ ಆಡಳಿತ ಹಾಗೂ ಸರ್ಕಾರ ತಕ್ಷಣವೇ ಕ್ರಮಕೈಗೊಳ್ಳಬೇಕು. ನೊಂದಜನರಿಗೆ ನ್ಯಾಯಒದಗಿಸಬೇಕು ಎಂಬುದಾಗಿ ಮೋಸಹೋದ ಫಲಾನುಭವಿಗಳು ಮನವಿ ಮಾಡಿದ್ದಾರಲ್ಲದೆ, ಈ ವಿಚಾರದಲ್ಲಿ ಸರ್ಕಾರ ಎಚ್ಚೆತ್ತುಕೊಳ್ಳದೆ ಹೋದರೆ ಆಡಳಿತರೂಢ ಸರ್ಕಾರದ ವಿರುದ್ದ ಉಗ್ರಹೋರಾಟ ನಡೆಸಲಾಗುವುದು ಎಂಬುದಾಗಿ ಫಲಾನುಭವಿಗಳು ಎಚ್ಚರಿಸಿದ್ದಾರೆ.

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *