ನಗರದ ಪಿ ಡಬ್ಲ್ಯು ಕಚೇರಿಗೆ ಹೊಂದಿಕೊಂಡಿರುವಂತಹ ಬಸ್ ಸ್ಟ್ಯಾಂಡ್ ಅವ್ಯವಸ್ಥೆಸರಿಪಡಿಸಲು ಜನರಒತ್ತಾಯ

by | 13/01/24 | ಜನಧ್ವನಿ


ಹಿರಿಯೂರು :
ನಗರದ ಪಿ ಡಬ್ಲ್ಯು ಕಚೇರಿಗೆ ಹೊಂದಿಕೊಂಡಿರುವ ಬಸ್ ಸ್ಟ್ಯಾಂಡ್ ಯಾವುದೇ ಸ್ವಚ್ಛತೆ ಹಾಗೂ ಶುಚಿತ್ವವಿಲ್ಲದೆ ಹಾಳಾಗಿದ್ದು, ಇಲ್ಲ ಬಸ್ಸಿಗಾಗಿ ಜನರು ಕಾದು ಕುಳಿತುಕೊಳ್ಳಲು ಸಾಧ್ಯವಾಗದ ರೀತಿಯಲ್ಲಿ ಕೊಳಚೆಯಿಂದ ತುಂಬಿದ್ದು, ಇದು ನಗರಸಭೆಯವರ ಕಣ್ಣಿಗೆ ಬೀಳದೇ ಇರುವುದು ಅತ್ಯಂತ ಶೋಚನೀಯ ಸಂಗತಿಯಾಗಿದೆ ಎಂಬುದಾಗಿ ಸಾರ್ವಜನಿಕರು ಈ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.

ಈ ಬಸ್ ನಿಲ್ದಾಣ ಒಂದು ಕಾಲದಲ್ಲಿ ಸುಂದರವಾದ ಬಸ್ ನಿಲ್ದಾಣವಾಗಿದ್ದು, ಈಗ ಇದಕ್ಕೆ ಹೊದಿಸಿರುವ ಶೀಟ್ ಗಳಿಗೆ ಗಾಳಿ-ಮಳೆಯಿಂದ ತುಂಬಾ ಹಾನಿಯಾಗಿದ್ದು, ಈ ಬಸ್ ನಿಲ್ದಾಣ ಉಪಯೋಗಕ್ಕೆ ಬರದಂತಾಗಿದೆ, ಇದರಿಂದ ನಗರಕ್ಕೆ ಬೇರೆಬೇರೆ ಊರುಗಳಿಂದ ಬಂದು ಈ ಬಸ್ ನಿಲ್ದಾಣದಲ್ಲಿ ಬಸ್ಸು ಇಳಿಯುವ ಜನರಿಗೆ ಮಳೆ-ಗಾಳಿಗೆ ಯಾವುದೇ ರಕ್ಷಣೆ ಇಲ್ಲದೆ ತೀವ್ರ ತೊಂದರೆಯಾಗಿದೆ.
ನಗರಸಭೆಯಲ್ಲಿ ಅತ್ಯಂತ ದಕ್ಷರು, ಹಾಗೂ ಕ್ರಿಯಾಶೀಲ ಅಧಿಕಾರಿಗಳು ಆಗಿರುವ ಮಹಂತೇಶ್ ರಂತಹ ಆಯುಕ್ತರಿದ್ದು, ನಗರದ ಪಿ ಡಬ್ಲ್ಯು ಕಚೇರಿಗೆ ಹೊಂದಿಕೊಂಡಿರುವ ಬಸ್ ಸ್ಟ್ಯಾಂಟ್ ಜಾಗವನ್ನು ಶುಚಿತ್ವ ಹಾಗೂ ಸೌಂದರ್ಯವನ್ನು ಹೆಚ್ಚಿಸುವ ಮೂಲಕ ನಿಲ್ದಾಣದ ಅಭಿವೃದ್ಧಿಯನ್ನು ಮಾಡಿ, ಸಾರ್ವಜನಿಕರ ಸಮಸ್ಯೆಗೆ ಸ್ಪಂದಿಸುವ ಮೂಲಕ ನಗರದ ನಾಗರೀಕರ ಮೆಚ್ಚುಗೆಗೆ ಪಾತ್ರರಾಗಬೇಕು ಎಂಬುದಾಗಿ “ಹಿರಿಯೂರುನ್ಯೂಸ್” ತಂಡ ಆಯುಕ್ತರಲ್ಲಿ ಮನವಿ ಮಾಡಿದೆ.

Latest News >>

ಚಳ್ಳಕೆರೆಯಲ್ಲಿ 700 ಮನೆಗಳ ಲೋಕಾರ್ಪಣೆ ಮನೆ ಹಂಚಿಕೆ, ಹಕ್ಕುಪತ್ರಗಳ ವಿತರಣಾ ಸಮಾರಂಭ

ಚಿತ್ರದುರ್ಗ ಮಾ.01: ವಸತಿ ಇಲಾಖೆ, ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ವತಿಯಿಂದ ಪ್ರಧಾನಮಂತ್ರಿ ಆವಾಸ್ ಯೋಜನೆ ‘ಸರ್ವರಿಗೂ ಸೂರು’...

ಸಹಕಾರ ಸಂಘಗಳು ಲೆಕ್ಕಪರಿಶೋಧಕರ ನೇಮಕ ಮಾಹಿತಿ ಸಲ್ಲಿಸಲು ಸೂಚನೆ

ಚಿತ್ರದುರ್ಗ ಫೆ.29: ಕರ್ನಾಟಕ ಸಹಕಾರ ಸಂಘಗಳ ನಿಯಮಗಳು 1960 ನಿಯಮ 29-ಬಿ(8)ರನ್ವಯ ಯಾವುದೇ ಸಹಕಾರ ಸಂಘದ ಮುಖ್ಯಕಾರ್ಯನಿರ್ವಾಹಕರು ಹಾಗೂ...

ಬಾಲನಟರ ಪಾತ್ರಕ್ಕಾಗಿ ಮಕ್ಕಳ ಬಳಕೆ: ಜಿಲ್ಲಾಧಿಕಾರಿ ಅನುಮತಿ ಕಡ್ಡಾಯ

ಚಿತ್ರದುರ್ಗ ಫೆ.28: ಬಾಲ ಹಾಗೂ ಕಿಶೋರ ಕಾರ್ಮಿಕ (ನಿಷೇಧ ಮತ್ತು ನಿಯಂತ್ರಣ) ಕಾಯ್ದೆ, 1986ರ ತಿದ್ದುಪಡಿ ಕಾಯ್ದೆ, 2016ರನ್ವಯ ಕರ್ನಾಟಕ...

ಪೊನ್ನಂಪೇಟೆ ಗ್ರಾಮ ಪಂಚಾಯ್ತಿ ಸಾಮಾನ್ಯ ಸಭೆಗೆ 4 ಬಾರಿ ಗೈರು ಹಾಜರಾದ ಸದಸ್ಯೆಯನ್ನು ಅನರ್ಹಗೊಳಿಸಿ ಆದೇಶ ಹೊರಡಿಸಿದ ರಾಜ್ಯ ಸರಕಾರ

ಪೊನ್ನಂಪೇಟೆ ಗ್ರಾಮ ಪಂಚಾಯ್ತಿ ಸಾಮಾನ್ಯ ಸಭೆಗೆ 4 ಬಾರಿ ಗೈರು ಹಾಜರಾದ ಸದಸ್ಯೆಯನ್ನು ಅನರ್ಹಗೊಳಿಸಲಾಗಿದೆ. ಈ ಸಂಬಂಧ ಗ್ರಾಮೀಣಾಭಿವೃದ್ಧಿ...

ಇ-ಆಸ್ತಿ ಆಂದೋಲನ ಸದುಪಯೋಗ ಪಡಿಸಿಕೊಳ್ಳುವಂತೆ ಪೌರಾಯುಕ್ತ ಚಂದ್ರಪ್ಪ.

ಸರಕಾರದ ನಿರ್ದೇಶನ ಹಾಗೂ ಜಿಲ್ಲಾಧಿಕಾರಿಗಳ ಸುತ್ತೋಲೆಯಂತೆ ಚಳ್ಳಕೆರೆ ನಗರಸಭೆ ವ್ಯಾಪ್ತಿಯಲ್ಲಿ ಇ -ಆಸ್ತಿ ಸೇವೆ ಆಂದೋಲನ ಪ್ರಾರಂಭ ಮಾಡಿದ್ದೆವೆ...

ನೀರಿನ ಅಸಮರ್ಪಕ ಬಳಕೆಯಿಂದ ಬರ ಪ್ರತಿಯೊಬ್ಬರು ಜಲಸಂರಕ್ಷಣೆಗೆ ಒತ್ತು ನೀಡಿ

ಚಿತ್ರದುರ್ಗ ಫೆ.23: ನೀರಿನ ಅಸಮರ್ಪಕ ಬಳಕೆಯಿಂದ ನೀರಿನ ಸಮಸ್ಯೆ ಹಾಗೂ ಬರ ಹೆಚ್ಚಾಗುತ್ತಿದೆ. ಪ್ರತಿಯೊಬ್ಬರು ಜಲರಕ್ಷಕರಾಗಿ ಎಚ್ಚೆತ್ತುಕೊಂಡಾಗ...

ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಭರವಸೆ ಜೂನ್ ವೇಳೆಗೆ ರೈಲ್ವೇ ಸೇತುವೆ ನಿರ್ಮಾಣ ಕಾಮಗಾರಿಗೆ ಚಾಲನೆ: ವರ್ಷಾಂತ್ಯಕ್ಕೆ ನೇರ ರೈಲು ಕಾಮಗಾರಿ ಆರಂಭ

ಚಿತ್ರದುರ್ಗ. ಫೆ.26: ದಾವಣಗೆರೆ ರಸ್ತೆ ಹಾಗೂ ಕವಾಡಿಗರಹಟ್ಟಿ ಹತ್ತಿರದ ಹೊಳಲ್ಕೆರೆ ರಸ್ತೆಯಲ್ಲಿ ರೈಲ್ವೇ ಸೇತುವೆ ನಿರ್ಮಾಣಕ್ಕೆ ಯೋಜನೆ...

ಗೊರವಯ್ಯನ ಕಾರ್ಣಿಕ ನುಡಿ ಸಂಪಾದಿತಲೇ ಪರಾಕ್ ಎಂಬುದನ್ನು ವಿಶ್ಲೇಷಿಸಿ ಹೇಳಿರುವಂತ ಜನರು ಈ ಸಲ ಭಾರೀ ಮಳೆ, ಬೆಳೆ ಚೆನ್ನಾಗಿ ಆಗಿ, ರೈತರ ಬಾಳು ಹಸನಾಗಲಿದೆ ಎಂಬುದಾಗಿ ತಿಳಿಸಿದ್ದಾರೆ.

ವಿಜಯನಗರ: ಜಿಲ್ಲೆಯ ಪ್ರಸಿದ್ಧ ಸುಕ್ಷೇತ್ರ ಶ್ರೀಮೈಲಾರ ಲಿಂಗೇಶ್ವರ ಸಾವಿರಾರು ಭಕ್ತರ ಸಮ್ಮುಖದಲ್ಲಿ ಕಾರ್ಮಿಕ ನುಡಿ ಹೊರ ಬಿದ್ದಿದೆ....

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *

You cannot copy content of this page