ನಗರದ ತಿರುವಳ್ಳುವರ್ ರಸ್ತೆಯಲ್ಲಿ ಮೊಬೈಲ್ ನ ಟವರ್ ತೆರವುಗೊಳಿಸುವಂತೆ ಒತ್ತಾಯಿಸಿ ಪ್ರತಿಭಟನೆ.

by | 20/11/23 | ಪ್ರತಿಭಟನೆ

ಹಿರಿಯೂರು :
ನಗರದ ಹುಳಿಯಾರುರಸ್ತೆಯ ತಿರುವಳ್ಳುವರ್ ರಸ್ತೆಯಲ್ಲಿ ಮೊಬೈಲ್ ನ ದೊಡ್ಡ ಟವರ್ ಇದ್ದು, ಇದನ್ನು ತೆರವುಗೊಳಿಸಬೇಕೆಂದು ಹಲವಾರು ಬಾರಿ ನಗರಸಭೆ ಪೌರಾಯುಕ್ತರಿಗೆ ಮತ್ತು ಜಿಲ್ಲಾಧಿಕಾರಿಗಳಿಗೆ ಸಂಬಂಧಪಟ್ಟ ಇಲಾಖೆಗೆ ಮನವಿ ಅರ್ಪಿಸಿದರೂ ತೆರವು ಮಾಡದಿರುವುದನ್ನು ಪ್ರತಿಭಟಿಸಿ, ಸ್ಥಳೀಯ ನಿವಾಸಿಗಳು ನವೆಂಬರ್ 17ರಂದು ಮೊಬೈಲ್ ಟವರ್ ಗೇಟ್ ಹಾಕಿ ಪ್ರತಿಭಟಿಸಿದರು.
ಮೊಬೈಲ್ ಟವರ್ ತೆರವುಗೊಳಿಸಿ, ಇದರಿಂದ ಆಗುವ ಅನಾಹುತಗಳನ್ನು ತಪ್ಪಿಸಬೇಕು, ಈ ಟವರ್ ನಲ್ಲಿ ಕೋತಿಗಳ ಕಾಟ ಹೆಚ್ಚಾಗಿದ್ದು, ಇದನ್ನೇ ಗೂಡು ಮಾಡಿಕೊಂಡಿವೆ, ಈ ಟವರ್ ಜಾಗವನ್ನು ಸ್ವಚ್ಛ ಮಾಡದೇ ಇರುವುದರಿಂದ ಸಾಂಕ್ರಾಮಿಕ ರೋಗಗಳು ಹರಡುತ್ತಿವೆ ಎಂದರಲ್ಲದೆ,
ಟವರ್ ಸುತ್ತಮುತ್ತ ಮತ್ತು ಪಕ್ಕದಲ್ಲೇ ಮನೆಗಳಿದ್ದು ಮಕ್ಕಳಿಗೆ ವೃದ್ಧರಿಗೆ ತೊಂದರೆಯಾಗಿ ನೋವು ಅನುಭವಿಸುತ್ತಿದ್ದಾರೆ, ಇದರಿಂದ ಆದಷ್ಟು ಬೇಗ ಈ ಮೊಬೈಲ್ ಟವರ್ ಅನ್ನು ತೆರವುಗೊಳಿಸಲು ಆಗ್ರಹಿಸಿ, ಪ್ರತಿಭಟನೆ ನಡೆಸಿದರು. ನಂತರ ಪೊಲೀಸ್ ಇಲಾಖೆಯ ಮನವಿಯ ಮೇರೆಗೆ ಪ್ರತಿಭಟನೆಯನ್ನು ನಿಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಸ್ಥಳೀಯ ನಿವಾಸಿಗಳಾದ ಎಸ್.ಎಲ್.ಕುಮಾರ್, ಸತಿವೇಲು, ಮುಜಾಮಿಲ್, ಲೋಕೇಶ್ವರಿ, ವೀರೇಶ್, ಇಂದಿರಾ, ಪಾಪಕ್ಕ, ಸತ್ಯ, ಸುಮ, ತಿಲಗಮ್ಮ ಸೇರಿದಂತೆ ಬಡಾವಣೆ ಜನರು ಉಪಸ್ಥಿತರಿದ್ದರು.

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *