ನಗರದಲ್ಲಿ ವಿಜಯದಶಮಿ ಅಂಬಿನೋತ್ಸವದ ಸಂಭ್ರಮ ಬನ್ನಿಪತ್ರೆ ಪರಸ್ಪರ ಹಂಚಿ ಶುಭಕೋರಿದ ಡಿ.ಸುಧಾಕರ್

by | 25/10/23 | ಸುದ್ದಿ


ಹಿರಿಯೂರು :
ನಗರದ ಸಂತೆ ಮೈದಾನದಲ್ಲಿರುವ ಬನ್ನಿಮಂಟಪದ ಬಳಿ ಮಂಗಳವಾರ ಸಂಜೆ ತಾಲ್ಲೂಕು ತಹಶೀಲ್ದಾರ್ ರಾಜೇಶ್ ಕುಮಾರ್ ರವರು ಸಾಂಪ್ರದಾಯಿಕ ಉಡುಗೆ ಉಟ್ಟು ಬಿಲ್ಲಿನ ಹೆದೆಗೆ ಬಾಣ ಹೂಡಿ ಹೊಡೆಯುವ ಮೂಲಕ ಅಂಬಿನೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಬನ್ನಿ ಮರದ ಕೆಳಗೆ ಇರುವ ಆಂಜನೇಯ ಸ್ವಾಮಿ ದೇಗುಲದಲ್ಲಿ ಸಂಜೆ 6 ಗಂಟೆಗೆ ತಹಶೀಲ್ದಾರರು ಪೂಜೆ ಸಲ್ಲಿಸಿ, ಪಲ್ಲಕ್ಕಿಯಲ್ಲಿಟ್ಟುಕೊಂಡು ಮೆರವಣಿಗೆಯಲ್ಲಿ ತಂದಿದ್ದ ಬಿಲ್ಲು ಬಾಣವನ್ನು ಕೈಯಲ್ಲಿ ಹಿಡಿದು ಬಿಲ್ಲಿಗೆ ಬಾಣ ಹೊಡಿ ಹೊಡೆದರು.
ಅಂಬಿನೋತ್ಸವದಲ್ಲಿ ಬನ್ನಿ ಮುಡಿಯುವ ಆಚರಣೆಗೆ ಈ ಭಾಗದಲ್ಲಿ ತುಂಬಾ ವಿಶೇಷತೆ ಇದ್ದು, ಈ ಪದ್ದತಿಯಂತೆ ಹಿರಿಯರು ಕಿರಿಯರು ಎನ್ನದೆ, ಧರ್ಮ ಜಾತಿಗಳ ವ್ಯತ್ಯಾಸ ನೋಡದೆ, ಬನ್ನಿ ಪತ್ರೆಯನ್ನು ಪರಸ್ಪರ ಹಂಚುವ ಮೂಲಕ ಶುಭಕೋರುವುದರ ಜೊತೆಗೆ ಮನೆಯಲ್ಲಿನ ಹಿರಿಯರಿಗೆ ಕಿರಿಯರು ಬನ್ನಿ ಅರ್ಪಿಸಿ ನಮಸ್ಕರಿಸಿ ಆಶೀರ್ವಾದ ಪಡೆಯುವುದು ಇಲ್ಲಿನ ಸಂಪ್ರದಾಯವಾಗಿದೆ.
ಈ ಅಂಬಿನೋತ್ಸವದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಡಿ.ಸುಧಾಕರ್ ಪಾಲ್ಗೊಂಡು ಕ್ಷೇತ್ರದ ಜನತೆಗೆ ವಿಜಯದಶಮಿ ಹಬ್ಬದ ಶುಭಕೋರಿದರಲ್ಲದೆ, ಅಲ್ಲಿ ಸೇರಿದ್ದ ಸಾರ್ವಜನಿಕರೊಂದಿಗೆ ಪರಸ್ಪರ ಬನ್ನಿ ವಿನಿಮಯ ಮಾಡಿಕೊಂಡು ಪ್ರಸಾದ ಹಂಚಿದರು. ಈ ಸಂದರ್ಭದಲ್ಲಿ ಬನ್ನಿಮಂಟಪ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ರಾಜಪ್ಪ, ಸ್ಥಳೀಯ ಜನಪ್ರತಿನಿಧಿಗಳು ಸೇರಿದಂತೆ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು.

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *