ಹಿರಿಯೂರು:
ಮೈಸೂರು ವಿಶ್ವಾವಿದ್ಯಾನಿಲಯದ ಸ್ನಾತಕೋತ್ತರ ಪದವಿಯ ನಾಲ್ಕನೇ ಸೆಮಿಸ್ಟರ್ ನ ಪ್ರಶ್ನೆ ಪತ್ರಿಕೆಗಾಗಿ ಸಿದ್ಧಪಡಿಸಿದ ನಿಬಂಧ ಬ್ಲಾಕ್ ಕ್ಯಾಟ್ ಕಾದಂಬರಿಯು ಚಲನಚಿತ್ರವಾಗಿ ನಿರ್ಮಾಣವಾಗಲಿದ್ದು ನಗರದ ಎಂ.ಇ.ಎಸ್. ಕಾನ್ವೆಂಟ್ ನಲ್ಲಿ ಅದರ ಚಿತ್ರೀಕರಣದ ಮುಹೂರ್ತ ಸಡಗರ ಸಂಭ್ರಮದಿಂದ ನೆರವೇರಿತು.
ಕಾರ್ಯಕ್ರಮದ ಉದ್ಘಾಟನೆ ಮಾಡಿದ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ವಿ.ಎಂ.ನಾಗೇಶ್ ಮಾತನಾಡುತ್ತಾ, ” ವೈಧ್ಯತೆಯ ಕಾದಂಬರಿಗಳ ಕರ್ತೃ ಡಿ ಸಿ ಪಾಣಿಯವರ ಮೂರನೇ ಚಲನಚಿತ್ರ ಇದಾಗಿದ್ದು ಈ ನಿಟ್ಟಿನಲ್ಲಿ ಇನ್ನೂ ಹೆಚ್ಚಿನ ಕಾದಾಂಬರಿಗಳು ಹಾಗೂ ಚಲನಚಿತ್ರಗಳೂ ಇವರ ಬ್ಯಾನರ್ ನಲ್ಲಿ ಮೂಡಿಬರಲಿ ಎಂಬುದಾಗಿ ಅವರು ಶುಭಹಾರೈಸಿದರು.
ಚಲನಚಿತ್ರ ನಿರ್ದೇಶಕ ಶೈಲೇಶ್ ಕದ್ರಿ ಮಾತನಾಡಿ ಅತ್ಯಂತ ಕುತೂಹಲ ಭರಿತ ಕಾದಂಬರಿಗಳನ್ನು ಬರೆಯುವಲ್ಲಿ ಹೆಸರುವಾಸಿಯಾದ ಡಿ.ಸಿ.ಪಾಣಿಯವರ ಬ್ಯಾಕ್ ಕ್ಯಾಟ್ ಆಧಾರಿತ ಚಲನಚಿತ್ರ ಇದೊಂದು ಪಾನ್ ಇಂಡಿಯ ಚಲನಚಿತ್ರವಾಗಲಿದೆ ಎಂಬುದಾಗಿ ಅಭಿಪ್ರಾಯಪಟ್ಟರು.
ಚಿತ್ರದ ನಾಯಕ ನಟರಾದ ಚಿತ್ರದುರ್ಗದ ಖ್ಯಾತ ಉದ್ಯಮಿ ಜಾಕೀರ್ ಹುಸೇನ್ ಮಾತನಾಡಿ ಖ್ಯಾತ ಕಾದಂಬರಿಕಾರರಾದ ಡಿ.ಸಿ.ಪಾಣಿಯವರ ಬ್ಲಾಕ್ ಕ್ಯಾಟ್ ಚಲನಚಿತ್ರಕ್ಕೆ ತಾವು ಎಲ್ಲಾ ರೀತಿಯ ಸಹಾಯ ಹಾಗೂ ಸಹಕಾರಗಳನ್ನು ನೀಡುವ ಭರವಸೆ ನೀಡಿದರು.
ಖ್ಯಾತ ಚಲನಚಿತ್ರ ನಿರ್ದೇಶಕ ಹಾಗೂ ನಿರ್ಮಾಪಕರಾದ ಡಿ.ಸಿ. ಪಾಣಿ ಮಾತನಾಡಿ ನಮ್ಮ ಕಾದಾಂಬರಿ ಆಧಾರಿತ “ಬ್ಲಾಕ್ ಕ್ಯಾಟ್” ಚಲನಚಿತ್ರವನ್ನು ಐದು ಭಾಷೆಗಳಲ್ಲಿ ನಿರ್ಮಿಸುವ ಯೋಚನೆ ಇದೆ. ಚಿತ್ರೀಕರಣವನ್ನು ಮುಂದಿನ ಮೂರು ತಿಂಗಳಲ್ಲಿ ಮುಗಿಸುವ ಗುರಿ ಹೊಂದಲಾಗಿದೆ ಎಂಬುದಾಗಿ ಹೇಳಿದರು.
ತಾಲ್ಲೂಕು ಜೆ ಡಿ ಎಸ್ ಕಾರ್ಯದರ್ಶಿ ತಿಪ್ಪೇಸ್ವಾಮಿ ಮಾತನಾಡಿ“ಬ್ಲಾಕ್ ಕ್ಯಾಟ್” ಚಲನಚಿತ್ರದಲ್ಲಿ ನಿರ್ದೇಶಕ ಡಿ.ಸಿ.ಪಾಣಿಯವರು ಸ್ಥಳೀಯ ಪ್ರತಿಭೆಗಳಿಗೆ ಈ ಚಿತ್ರದಲ್ಲಿ ಅವಕಾಶ ನೀಡುವುದರ ಜೊತೆಗೆ ಜಿಲ್ಲೆಯಸುಂದರ ಸ್ಥಳಗಳಲ್ಲಿ ಚಿತ್ರೀಕರಣ ಮಾಡಲಿ ಎಂಬುದಾಗಿ ಮನವಿ ಮಾಡಿದರು.
ತಾಲ್ಲೂಕಿನ ಸೂರಗೊಂಡನ ಹಳ್ಳಿಯ ರಾಜು ಹಾಗೂ ಚಿಕ್ಕಮಗಳೂರಿನ ಯದ್ವಿಕಾಳನ್ನು ಬ್ಲಾಕ್ ಕ್ಯಾಟ್ ಚಿತ್ರದಲ್ಲಿ ಅಭಿನಯಿಸಲು ಅವಕಾಶ ನೀಡಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎ.ಪಿ.ಎಂ.ಸಿ. ಅಧ್ಯಕ್ಷರಾದ ಷಣ್ಮುಖಪ್ಪ ವಹಿಸಿದ್ದರು. ಕಾರ್ಯಕ್ರಮದ ನಿರೂಪಣೆಯನ್ನು ಖ್ಯಾತ ನೃತ್ಯ ನಿರ್ದೇಶಕ ಮಹೇಶ್ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಛಾಯಾಗ್ರಾಹಕರಾದ ಎ.ರಾಮಕೃಷ್ಣಪ್ಪ, ಮಾನವ ಹಕ್ಕುಗಳ ಮಾಹಿತಿ ಸಮಿತಿಯ ತಾಲ್ಲೂಕು ಘಟಕದ ಅಧ್ಯಕ್ಷರಾದ ಸಿ. ದೀಪಕ್, ಅಂಬರೀಷ್ ಧರ್ಮಪುರ ಉಪಸ್ಥಿತರಿದ್ದರು.
ಜಿಪಂ ಸಿಇಒ ಸೋಮಶೇಖರ್ ಭೇಟಿ ನರೇಗಾ ಕಾಮಗಾರಿಪರಿಶೀಲನೆ.
ಚಳ್ಳಕೆರೆ ಸೆ.11. ಹೆಚ್ಚು ಕಾಮಗಾರಿಗಳನ್ನು ಅನುಷ್ಟಾನಗೊಳಿಸಿ ಗ್ರಾಮೀ ಣ ಭಾಗದ ಕೂಲಿಕಾರ್ಮಿಕರಿಗೆ ದುಡಿಯುವ ಕೈಗಳಿಗೆ ಕೆಲಸ ನೀಡುವಂತೆ...
0 Comments