ಹಿರಿಯೂರು :
ನಗರದ ಪ್ರವಾಸಿ ಮಂದಿರದಲ್ಲಿ ವಂದೇ ಮಾತರಂ ರಾಜ್ಯ ಸಂಘಟನೆ ಅಧ್ಯಕ್ಷರಾದ ಶಂಕರ್ ಮಹಾದೇವ ಬಿದರಿಯವರ ಆದೇಶದ ಮೇರೆಗೆ ಹಾಗೂ ರಾಜ್ಯ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಅರುಣ್ ಕುಮಾರ್ ರವರ ಸೂಚನೆ ಮೇರೆಗೆ ತಾಲ್ಲೂಕು ರೈತಘಟಕಕ್ಕೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ತಾಲೂಕು ಗೌರವಾಧ್ಯಕ್ಷರಾಗಿ ಎಂ.ಟಿ.ಸುರೇಶ್, ಅಧ್ಯಕ್ಷರಾಗಿ ಟಿ.ಸಂತೋಷ್, ಉಪಾಧ್ಯಕ್ಷರಾಗಿ ಯು.ವಿನಯ್ ಕುಮಾರ್, ಪ್ರಧಾನ ಕಾರ್ಯದರ್ಶಿಯಾಗಿ ಶಿವಲಿಂಗಯ್ಯ, ಖಜಾಂಚಿಯಾಗಿ ಜಿತೇಂದ್ರ ಕುಮಾರ್, ಸಂಘಟನಾ ಕಾರ್ಯದರ್ಶಿಗಳಾಗಿ ಅಮಿತ್, ಅಜಯ್ ಕುಮಾರ್, ಹನುಮಂತಪ್ಪ, ನಿರ್ದೇಶಕರುಗಳಾಗಿ ಸಾಧಿಕ್ ಸಮೀವುಲ್ಲಾ, ಪ್ರಭು, ಗೌರವ ಸಲಹೆಗಾರರಾಗಿ ಸಿದ್ದರಾಮಯ್ಯ, ಪಿ.ತಿಪ್ಪೇಸ್ವಾಮಿ ಇವರುಗಳನ್ನು ಆಯ್ಕೆ ಮಾಡಲಾಗಿದೆ ಎಂಬುದಾಗಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ರಾಜ್ಯ ಯುವ ಘಟಕದ ಅಧ್ಯಕ್ಷ ಪಿ.ಕೃಷ್ಣಮೂರ್ತಿ, ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಎನ್.ದೇವರಾಜ್, ತಾಲ್ಲೂಕು ಅಧ್ಯಕ್ಷ ಎಂ.ಎಲ್.ಗಿರಿಧರ್, ಜಿಲ್ಲಾ ರಾಮಚಂದ್ರ ಕಸವನಹಳ್ಳಿ, ವೈ.ನಾಗರಾಜ್ ಮಸ್ಕಲ್, ಉಪಾಧ್ಯಕ್ಷ ಮಸ್ಕಲ್ ಪರಮೇಶ್ ಇತರರು ಹಾಜರಿದ್ದರು.
ನಗರದಲ್ಲಿನ ಪ್ರವಾಸಿ ಮಂದಿರದಲ್ಲಿ ರಾಜ್ಯಸಂಘಟನೆ ತಾಲ್ಲೂಕು ರೈತಘಟಕಕ್ಕೆ ಪದಾಧಿಕಾರಿಗಳನ್ನು ಆಯ್ಕೆ
ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ
0 Comments