ಚಳ್ಳಕೆರೆ ಜನಧ್ವನಿ ವಾರ್ತೆ ಆ10 ನಕಲಿ ಬಿತ್ತನೆ ಬೀಜ ವಿತರಣೆ ಕಡಿವಾಣ ಹಾಕುವ ಇಲಾಖೆಯಿಂದಲೇ ರೈತರಿಗೆ ನಕಲಿ ಬೀಜ ವಿತರಣೆ ಮಾಡಿರುವುದು ಬೆಳಕಿಗೆ ಬಂದಿದೆ.
ಹೌದು ಇದು ಚಳ್ಳಕೆರೆ ತಾಲೂಕಿನ ಬಾಲೇನಹಳ್ಳಿ ಗ್ರಾಮದ ಕಪ್ಪು ಭೂಮಿಯಲ್ಲಿ ಬಿತ್ತನೆ ಮಾಡಿದ ಸೂರ್ಯಕಾಂತಿ ಬೆಳೆ ತನೆ ಬಿಡದೆ ಮುಟರು ರೋಗ ಆವರಿಸಿ ಬೆಳೆ ಕಾಳು ಕಟ್ಟದೆ ಸಂಪೂರ್ಣ ನಷ್ಟಸಂಭವಿಸಿರುವುದು ಕಂಡು ಬಂದಿದೆ.
ಚಳ್ಳಕೆರೆ ಕೃಷಿ ಇಲಾಖೆಯಿಂದ ಕೆಬಿ ಎಸ್ ಎಚ್ 41 ತಳಿಯ ಸೂರ್ಯಕಾಂತಿ ಬೀಜ ಖರೀದುಸಿ ಬಿತ್ತನೆ ಮಾಡಲಾಗಿದ್ದು.ತೆನೆ ಬಿಟ್ಟು ಕಾಳು ಕಟ್ಟದೆ ಮುಟರು ರೋಗ ಕಾಣಿಸಿಕೊಂಡದ್ದು ಬೆಳೆ ನಾಶವಾಗಿದೆ. ಇದರಿಂದ ರೈತರು ಬಿತ್ತನೆ ಬೀಜ.ಗೊಬ್ಬರ ಹಾಕಿದ ಶ್ರಮಕ್ಕೆ ಫಲ ಸಿಗದೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೃಷಿ ಇಲಾಖೆ ಕೊಟ್ಟಿರುವ ಸೂರ್ಯಕಾಂತಿ ಬೀಜ ಸಂಪೂರ್ಣ ಕಳಪೆಯಾಗಿದೆ.
ಸಕಾಲಕ್ಕೆ ಮಳೆ ಬಾರದ ಬರಗಾಲದ ಛಾಯೆ ಆವರಿಸುದ್ದು ಈಗಾಗಲೆ ರೈತರು ಅತಿವೃಷ್ಠಿ ಅನಾವೃಷ್ಠಿಗೆ ತುತ್ತಾಗಿ ಸಾಲದ ಸುಳಿಗೆ ಸಿಲುಕಿ ಸಂಕಷ್ಟಕ್ಕೆ ಸಿಲುಕಿದ್ದು ಕೃಷಿ ಇಕಾಖೆಯಿಂದಲೇ ನಕಲಿ ಬಿತ್ತನೆ ಬೀಜ ಖರೀದಿಸಿ ಬೆಳೆ ಕಳೆದುಕೊಂಡ ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.
ಕೃಷಿ ಇಲಾಖೆಯಿಂದಲೇ ನಕಲಿ ಬಿತ್ತನೆ ಬೀಜ ವಿತರಣೆ ಮಾಡಿದರೆ ಇನ್ನು ನಕಲಿ ಬೀಜ ಗೊಬ್ಬರ ಮಾರಾಟಗಾರರ ಮೇಲೆ ಕೃಷಿ ಇಲಾಖೆ ಕಡಿವಾಣ ಹಾಕಲು ಸಾಧ್ಯವೇ ಎಂಬ ಪ್ರಶ್ನೆ ರೈತರಲ್ಲಿ ಕಾಡುತ್ತಿದೆ.
ಕೂಡಲೆ ಬೆಳೆ ನಷ್ಟವಾದ ರೈತರಿಗೆ ಪರಿಹಾರ ನೀಡುವಂತೆ ರೈತರಾದ ಓ.ಟಿ ತಿಪ್ಪೇಸ್ವಾಮಿ, ಚಿಂದಾನಂದಪ್ಪ ಗೋವಿಂದಪ್ಪ ಅಳಲು ತೋಡಿಕೊಂಡಿದ್ದಾರೆ.
0 Comments