ಹಿರಿಯೂರು :
ಇದು ನಮ್ಮ ದೇಶ ಎಂಬ ಭಾವನೆ, ಈ ದೇಶಕ್ಕಾಗಿ ಸೇವೆ ಮಾಡಬೇಕೆಂಬ ಹಂಬಲ, ದೇಶದ ರಕ್ಷಣೆಗಾಗಿ ಹೋರಾಡುವ ಮನೋಭಾವವನ್ನು ದೇಶದ ಪ್ರತಿಯೊಬ್ಬ ಪ್ರಜೆಯೂ ಬೆಳೆಸಿಕೊಂಡಾಗ ಮಾತ್ರ ದೇಶ ಅಭಿವೃದ್ಧಿ ಹೊಂದಲು ಹಾಗೂ ಬಲಾಢ್ಯ ರಾಷ್ಟ್ರವಾಗಿ ಹೊರಹೊಮ್ಮಲು ಸಾಧ್ಯವಾಗುತ್ತದೆ ಎಂಬುದಾಗಿ ನಿವೃತ್ತ ಯೋಧರಾದ ರಂಗಸ್ವಾಮಿ ಹೇಳಿದರು.
ನಗರದ ವಾಣಿ ಸಕ್ಕರೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಆವರಣದಲ್ಲಿ ಮಂಗಳವಾರದಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಶಿಕ್ಷಣ ಇಲಾಖೆ, ನಗರಸಭೆ, ವಿಶ್ವ ಅಭಿವೃದ್ಧಿ ಇಲಾಖೆ, ನೆಹರು ಯುವಕೇಂದ್ರ ಹಾಗೂ ತಾಲ್ಲೂಕು ಆಡಳಿತದ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ “ನನ್ನ ದೇಶ ನನ್ನ ಮಣ್ಣು” ಅಮೃತ ಕಲಶ ಯಾತ್ರೆ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಈ ದೇಶವನ್ನು ಬ್ರಿಟೀಷರ ದಾಸ್ಯದಿಂದ ಮುಕ್ತಗೊಳಿಸಲು ನಂತರ ನೆರೆ ರಾಷ್ಟ್ರಗಳ ಹಾವಳಿಯಿಂದ ದೇಶವನ್ನು ಸಂರಕ್ಷಿಸಲು ಸಾಕಷ್ಟು ಬಲಿದಾನಗಳಾಗಿವೆ, ಈಗಲೂ ಆಗುತ್ತಲೇ ಇವೆ, ಗಡಿಗಳಲ್ಲಿ ದೇಶವನ್ನು ಕಾಯುತ್ತಿರುವ ಯೋಧರ ತ್ಯಾಗ, ಬಲಿದಾನದಿಂದ ದೇಶದ ಒಳಗಿರುವ ನಾಗರೀಕರು ನೆಮ್ಮದಿಯ ಜೀವನ ಸಾಧಿಸಲು ಸಾಧ್ಯವಾಗಿದೆ, ವಿದ್ಯಾರ್ಥಿಗಳು ರಾಷ್ಟ್ರಪ್ರೇಮವನ್ನು ಬೆಳೆಸಿಕೊಳ್ಳಬೇಕು ಎಂಬುದಾಗಿ ಅವರು ಸಲಹೆ ನೀಡಿದರು.
ನಗರಸಭೆ ಪೌರಾಯುಕ್ತರಾದ ಹೆಚ್.ಮಹಂತೇಶ್ ಮಾತನಾಡಿ, ದೇಶಕ್ಕಾಗಿ ಜೀವನವನ್ನು ಬಲಿದಾನ ಮಾಡಿದ ವೀರಯೋಧರ ಗೌರವಾರ್ಥ ನಿರ್ಮಿಸಲಿರುವ ಉದ್ಯಾನವನಕ್ಕೆ ಪವಿತ್ರ ಮಣ್ಣು ಸಂಗ್ರಹಿಸುವ ಉದ್ದೇಶದಿಂದ “ನನ್ನ ದೇಶ ನನ್ನ ಮಣ್ಣು” ಕಲಶ ಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದರಲ್ಲದೆ,
ಈ ದೇಶದ ಪ್ರತಿಯೊಬ್ಬ ಭಾರತೀಯ ಈ ಅಭಿಯಾನದಲ್ಲಿ ಭಾಗವಹಿಸಬೇಕು ಇಂದಿನ ಯುವಜನತೆ ಮೊಬೈಲ್ ಟಿವಿ ಫೇಸ್ ಬುಕ್ ಬಳಕೆಗೆ ನಿಯಂತ್ರಣ ಹಾಕಿ ಉಜ್ವಲ ಭವಿಷ್ಯ ಕಟ್ಟಿಕೊಳ್ಳುವಲ್ಲಿ ಚಿತ್ತಹರಿಸಬೇಕು ದೇಶದ ಭವಿಷ್ಯ ಸಂಸ್ಕೃತಿ ಇತಿಹಾಸ ತತ್ವ ದೇಶದ ಸಂವಿಧಾನ, ಸ್ವಾತಂತ್ರ್ಯ ಹೋರಾಟಗಾರರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂಬುದಾಗಿ ಹೇಳಿದರು.
ವಾಣಿ ಕಾಲೇಜಿನ ಪ್ರಾಂಶುಪಾಲರಾದ ಪ್ರೋ.ಮಹೇಶ್ ಮಾತಮಾಡಿ, ಪ್ರಧಾನಮಂತ್ರಿ ನರೇಂದ್ರಮೋದಿ ಅವರ ಆಶಯದಂತೆ ತಾಲ್ಲೂಕು ಮಟ್ಟದಲ್ಲಿ “ಅಜಾದಿ ಕಾ ಅಮೃತ ಮಹೋತ್ಸವ”ದ ಅಂಗವಾಗಿ ”ನನ್ನ ಮಣ್ಣು ನನ್ನ ದೇಶ” ಅಮೃತ ಕಲಶ ಯಾತ್ರೆಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ದೇಶದ ಮಣ್ಣಿನ ಮಹತ್ವವನ್ನು ಸಾರಲು ತಾಲ್ಲೂಕು ಮಟ್ಟದಲ್ಲಿ ಈ ಕಾರ್ಯಕ್ರಮ ನಡೆಸಲಾಗುತ್ತಿದೆ ಎಂಬುದಾಗಿ ಹೇಳಿದರು.
ಇದೇ ಸಂದರ್ಭದಲ್ಲಿ ನಿವೃತ್ತ ಯೋಧರಾದ ಹೆಚ್.ರಂಗಸ್ವಾಮಿ, ವಿ.ಪ್ರಸನ್ನಕುಮಾರ್, ಪಿ.ಆರ್.ಪ್ರಭಾಕರ್, ಸಿ.ವಿ.ನಟರಾಜ್, ಹೆಚ್.ಮಹಾಂತೇಶ್ ಇವರುಗಳನ್ನು ಸನ್ಮಾನಿಸಲಾಯಿತು. ಅಮೃತ ಕಳಶಕ್ಕೆ ತಾಲ್ಲೂಕಿನ 33 ಗ್ರಾಮ ಪಂಚಾಯಿತಿಗಳ ಮಣ್ಣನ್ನು ಸಂಗ್ರಹಿಸಿ ರಾಷ್ಟ್ರದ ರಾಜಧಾನಿಗೆ ಕಳುಹಿಸಲು ನೆಹರು ಯುವ ಕೇಂದ್ರದ ಸ್ವಯಂಸೇವಕ ಕರಿಯಣ್ಣ ಅವರಿಗೆ ಹಸ್ತಾಂತರಿಸಲಾಯಿತು.
ಈ ಕಾರ್ಯಕ್ರಮದಲ್ಲಿ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಶಿವಪ್ರಕಾಶ್, ಸಹಾಯಕ ನಿರ್ದೇಶಕ ಎನ್.ಆರ್.ತಿಪ್ಪೇಸ್ವಾಮಿ ಪೌರಾಯುಕ್ತ ಎಚ್.ಮಹಾಂತೇಶ್, ಬಿ.ಆರ್.ಸಿ ತಿಪ್ಪೇರುದ್ರಪ್ಪ, ನರೇಗ ಅಧಿಕಾರಿ ತಿಮ್ಮಾನಾಯ್ಕ, ನೆಹರು ಯುವಕೇಂದ್ರದ ಸ್ವಯಂಸೇವಕ ಕರಿಯಣ್ಣ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಪಾಲ್ಗೊಂಡಿದ್ದರು.
ದೇಶದ ರಕ್ಷಣೆಗಾಗಿ ಹೋರಾಡುವ ಮನೋಭಾವವನ್ನು ದೇಶದ ಪ್ರತಿಯೊಬ್ಬಪ್ರಜೆಯೂ ಸಹ ಬೆಳೆಸಿಕೊಳ್ಳಬೇಕು ನಿವೃತ್ತ ಯೋಧರಾದ ರಂಗಸ್ವಾಮಿ ರವರಿಂದ ಸೂಚನೆ
ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ
0 Comments