ದೇವಾಲಯಗಳು-ಭವನಗಳು ದೇಶದ ಭವ್ಯ ಸಂಸ್ಕೃತಿ ಸಂಸ್ಕಾರ,ಪರಂಪರೆ ಪರಿಚಯಿಸುವ ಕೇಂದ್ರವಾಗಬೇಕು ಆದಿಚುಂಚನಗಿರಿಯಮಠದ ಶ್ರೀಸೌಮ್ಯನಾಥಸ್ವಾಮೀಜಿ

by | 15/02/24 | ಸುದ್ದಿ


ಹಿರಿಯೂರು:
ಯಾವುದೇ ಧಾರ್ಮಿಕತೆಯನ್ನು ಬಿಂಬಿಸುವ ದೇವಾಲಯಗಳು, ಮಂದಿರಗಳು ಮತ್ತು ಸಮುದಾಯ ಭವನಗಳು ಈ ದೇಶದ ಭವ್ಯ ಸಂಸ್ಕೃತಿ, ಸಂಸ್ಕಾರ, ಪರಂಪರೆಯನ್ನು ಪರಿಚಯಿಸುವ ಕೇಂದ್ರಗಳಾಗಬೇಕು ಎಂಬುದಾಗಿ ಆದಿಚುಂಚನಗಿರಿ ಮಠದ ಶ್ರೀಸೌಮ್ಯನಾಥಸ್ವಾಮೀಜಿ ಹೇಳಿದರು.
ನಗರದ ಹೊರವಲಯದಲ್ಲಿ ಯೋಗಿನಾರಾಯಣ ತಾಲೂಕು ಬಲಿಜ ಸಂಘ ನಿರ್ಮಿಸಿರುವ ದೇಗುಲ-ಬಲಿಜ ಶ್ರೇಯ ಭವನ ಲೋಕಾರ್ಪಣೆ ಸಮಾರಂಭದ ದಿವ್ಯಸಾನ್ನಿಧ್ಯವನ್ನು ವಹಿಸಿ, ಅವರು ಮಾತನಾಡಿದರು.
ಈ ದೇಶದ ಬಲಿಜ ಸಮುದಾಯ ಅತ್ಯಂತ ಶ್ರಮಿಕ ಸಮುದಾಯವಾಗಿದ್ದು, ಈ ಸಮುದಾಯದ ಜನರು ಉತ್ತಮ ಸಂಸ್ಕಾರ, ಭವ್ಯ ಪರಂಪರೆ, ಸೇವಾ ಮನೋಭಾವ, ಶ್ರಮ ಸಂಸ್ಕೃತಿಯ ಪ್ರತೀಕವಾಗಿದ್ದು, ಸಮುದಾಯದ ಪ್ರತಿಯೊಬ್ಬರೂ ಸಮಾಜದ ಪ್ರಗತಿ ಜೊತೆ ಮಾನವೀಯಮೌಲ್ಯ ಬೆಳವಣಿಗೆಗೆ ಒತ್ತು ನೀಡಬೇಕು ಎಂದರಲ್ಲದೆ,
ಈ ಬಲಿಜ ಸಮುದಾಯ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ, ರಾಜಕೀಯವಾಗಿ ಮುಂದುವರೆಯಲು ಮಕ್ಕಳಿಗೆ ಬಾಲ್ಯದಿಂದಲೇ ಉತ್ತಮ ಸಂಸ್ಕಾರ, ಅಕ್ಷರ ಜ್ಞಾನದ ಜೊತೆಗೆ ಸಮಾಜಮುಖಿ ಚಿಂತನೆಗಳನ್ನು ಬೆಳೆಸಬೇಕು. ಇದರಿಂದ ಭವಿಷ್ಯದಲ್ಲಿ ಸರಿಯಾದ ಮಾರ್ಗ ಅನುಸರಿಸುತ್ತಾರೆ ಎಂಬುದಾಗಿ ಹೇಳಿದರು.
ಜಿಲ್ಲಾ ಉಸ್ತುವಾರಿ ಸಚಿವರಾದ ಡಿ.ಸುಧಾಕರ್ ಮಾತನಾಡಿ, ಪ್ರೀತಿ ವಿಶ್ವಾಸ, ನಂಬಿಕೆ, ಸಮಾಜಮುಖಿ ಚಿಂತನೆ ಸೇವಾಮನೋಭಾವಕ್ಕೆ ಮತ್ತೊಂದು ಹೆಸರೇ ಬಲಿಜ ಸಮಾಜ, ಈ ಸಮಾಜ ತಾಲೂಕಿನಲ್ಲಿ ದೊಡ್ಡಸಮುದಾಯಗಳ ಜೊತೆ ಅವಿನಾಭಾವ ಸಂಬಂಧ ಹೊಂದುವ ಮೂಲಕ ಸೌಹಾರ್ದತೆಯ ಬದುಕು ಕಟ್ಟಿಕೊಂಡಿದ್ದು, ಶ್ರಮಸಂಘಟನೆಯಿಂದ ಬಲಿಜ ಶ್ರೇಯಭವನ ನಿರ್ಮಿಸಿರುವುದು ಮಾದರಿ ಕಾರ್ಯ ಎಂಬುದಾಗಿ ಹೇಳಿದರು.
ಶ್ರೀಬಸವಮೂರ್ತಿ ಮಾದಾರ ಚನ್ನಯ್ಯ ಮಾತನಾಡಿ, ಯೋಗಿನಾರಾಯಣ ಸ್ವಾಮಿಯವರನ್ನು ಯಾವುದೇ ಒಂದು ಜಾತಿಜನಾಂಗಕ್ಕೆ ಸೀಮಿತವಾದವರಲ್ಲ, ಸಮಾಜಮುಖಿ ಚಿಂತನೆಗಳ ಮೂಲಕ ಸಮಾಜದ ಎಲ್ಲಾ ವರ್ಗದ ಜನರಲ್ಲಿ ಜಾಗೃತಿ ಮೂಡಿಸುವ ಮೂಲಕ ಸಮಾಜ ಪರಿವರ್ತನೆಗಾಗಿ ಶ್ರಮಿಸಿದ ಮಹಾನ್ ಚೇತನ ಎಂಬುದಾಗಿ ಹೇಳಿದರು.
ಗೌರಿಗದ್ದೆ ಶ್ರೀವಿನಯಗುರೂಜಿ ಮಾತನಾಡಿ, ಗ್ರಾಮೀಣ ಭಾಗದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣದ ಜೊತೆಗೆ ಆ ಮಕ್ಕಳಲ್ಲಿ ದೇಶಭಕ್ತಿ, ದೇಶಪ್ರೇಮ ಬೆಳೆಸಲು ಅವಿರತವಾಗಿ ಶ್ರಮಿಸುತ್ತಿರುವ ಶಿಕ್ಷಣಪ್ರೇಮಿ ನಾ.ತಿಪ್ಪೇಸ್ವಾಮಿ ಅವರ ಸಮಾಜಮುಖಿ ಚಿಂತನೆ ಮಾದರಿಯಾಗಿದೆ. ಸಮಾಜದ ಕೆಲಸದ ಜೊತೆ ಸಮುದಾಯದ ಶ್ರೇಯೋಭಿವೃದ್ಧಿಗೆ ಸಂಕಲ್ಪ ಮಾಡಿರುವುದು ನಿಜಕ್ಕೂ ಶ್ಲಾಘನೀಯ ಎಂದರು.
ರಾಷ್ಟ್ರೀಯ ಸ್ವಯಂಸೇವಕ ಸಂಘದ ದಕ್ಷಿಣ ಮಧ್ಯ ಕ್ಷೇತ್ರೀಯ ಕಾರ್ಯನಿರ್ವಾಹಕ ನಾ.ತಿಪ್ಪೇಸ್ವಾಮಿ ಮಾತನಾಡಿ, ರಾಜ್ಯದ ಪ್ರಮುಖ ಧಾರ್ಮಿಕ-ಸಾಂಸ್ಕೃತಿಕ ಕೇಂದ್ರವಾಗಿ ಸಮಾಜದಲ್ಲಿ ಹೆಜ್ಜೆ ಗುರುತು ಮೂಡಿಸಿರುವ ಆದಿಚುಂಚನಗಿರಿಮಠ, ಆರೋಗ್ಯ,ಶಿಕ್ಷಣ, ಪರಿಸರ ಕಾಳಜಿ, ಪರಂಪರೆ ಮಕ್ಕಳಲ್ಲಿ ಸಂಸ್ಕಾರ ಜ್ಞಾನ ಬೆಳೆಸಿ ಸಮಾಜಕ್ಕೆ ನೀಡಿದ ಕೊಡುಗೆ ಅನನ್ಯ ಎಂದರು.
ಇದೇ ಸಂದರ್ಭದಲ್ಲಿ ಲಕ್ಷ್ಮಿವೆಂಕಟೇಶ್ವರ, ಮಹಾಗಣಪತಿ ಹಾಗೂ ಯೋಗಿನಾರಾಯಣಸ್ವಾಮಿ ದೇವರಬಿಂಬ ಪ್ರತಿಷ್ಟಾಪನಾ ಮಹೋತ್ಸವ ಹಾಗೂ ಹೋಮ-ಹವನ, ಬಿಂಬ ಪ್ರತಿಷ್ಠಾಪನಾ ಧಾರ್ಮಿಕ ಕಾರ್ಯಕ್ರಮಗಳು ನಡೆಸಲಾಯಿತು.
ಈ ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ, ಮಾಜಿ ಸಂಸದ ಜನಾರ್ದನಸ್ವಾಮಿ, ಬಿಜೆಪಿ ರಾಜ್ಯ ಕಾರ್ಯದರ್ಶಿ ಸಿ.ಮುನಿರಾಜ್, ಧರ್ಮಾಧಿಕಾರಿ ಡಾ.ಎಂ.ಆರ್.ಜಯರಾಮ್, ಡಾ.ವೇಣುಗೋಪಾಲ್, ಬಲಿಜ ಸಂಘದ ಜಿಲ್ಲಾಧ್ಯಕ್ಷ ಎಂ.ಎ ಸೇತೂರಾಂ, ತಾಲೂಕಾಧ್ಯಕ್ಷ ಎನ್.ತಿಮ್ಮಾಶ್ರೇಷ್ಠಿ, ಚಿದಾನಂದ್, ವಿ.ಸೂರ್ಯನಾರಾಯಣ, ಎಚ್.ವಿ.ವೆಂಕಟೇಶ್, ಎಂ.ಬಿ.ನರೇಂದ್ರಬಾಬು, ಅಶೋಕ್, ಬಿ.ಎನ್.ಪ್ರಕಾಶ್, ಎಂ.ಜಯಣ್ಣ, ಆನಂದ ಶ್ರೇಷ್ಠಿ, ನಗರಸಭೆ ಮಾಜಿ ಅಧ್ಯಕ್ಷ ಟಿ.ಚಂದ್ರಶೇಖರ್ ಇತರರು ಉಪಸ್ಥಿತರಿದ್ದರು.

Latest News >>

ಮಹಾವೀರರ ತತ್ವ ಆದರ್ಶಗಳು ಸರ್ವಕಾಲಕ್ಕೂ ಪ್ರಸ್ತುತ: ತಹಸಿಲ್ದಾರ್ ರೆಹಾನ್ ಪಾಷ

ಚಳ್ಳಕೆರೆ: ನಗರದ ತಾಲೂಕು ಕಚೇರಿಯ ಸಭಾಂಗಣದಲ್ಲಿ ತಾಲೂಕು ಆಡಳಿತ ಮತ್ತು ಜೈನ ಸಮುದಾಯ ವತಿಯಿಂದ ಇಂದು ಮಹಾವೀರ  ಜಯಂತಿಯನ್ನು ಲೋಕಸಭಾ ಚುನಾವಣೆ...

ಕುಡಿಯುವ ನೀರಿನ ಯೋಜನೆಯ ಜಾಕ್ ವೆಲ್ ನ ಸ್ಥಳಕ್ಕೆಮುಖ್ಯಕಾರ್ಯದರ್ಶಿಯಾದ ಅಂಜುಮ್ ಫರ್ವೇಜ್ ಭೇಟಿ

ಹಿರಿಯೂರು: ವಾಣಿವಿಲಾಸ ಸಾಗರದ ಐಮಂಗಲ ಹಾಗೂ ಹೊಳಲ್ಕೆರೆ ತಾಲ್ಲೂಕಿನ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಜಾಕ್ ವೆಲ್ ಸ್ಥಳಕ್ಕೆ...

ಸಡಗರ ಸಂಭ್ರಮದಿಂದ ಜರುಗಿದ ಶ್ರೀರಾಮನವಮಿ- ಶ್ರೀರಾಮ ಭಕ್ತರಿಂದ ಪಾನಕ. ಕೋಸಂಬರಿ ವಿತರಣೆ- ವಿಶೇಷ ಪೂಜೆ.

ಚಳ್ಳಕೆರೆ ಜನಧ್ವನಿ ವಾರ್ತೆ ಏ17. ಶ್ರೀರಾಮನವಮಿ ಅಂಗವಾಗಿ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಶ್ರೀರಾಮ ಜಪದೊಂದಿಗೆ ಸಡಗರ ಸಂಭ್ರಮದಿಂದ...

ವಾಣಿ ವಿಲಾಸ ಸಾಗರ ಜಲಾಶಯದ ನೀರನ್ನ ಖಾಲಿ ಮಾಡವಂತ ಹುನ್ನಾರ ನಡೆಸಲಾಗಿದೆ ಎಂಬುದಾಗಿ ರೈತ ಮುಖಂಡ :ಕಸವನಹಳ್ಳಿ ರಮೇಶ್ ಆರೋಪ

ಹಿರಿಯೂರು: ವಾಣಿವಿಲಾಸ ಸಾಗರ ಜಲಾಶಯದ ನೀರು ಖಾಲಿ ಮಾಡಲು ಹುನ್ನಾರ ನಡೆಸಲಾಗಿದೆ ಎಂಬುದಾಗಿ ರೈತ ಮುಖಂಡ ಹಾಗೂವಾಣಿವಿಲಾಸ ಸಾಗರ ಹಾಗೂ ಭದ್ರಾ...

ಬೆಳೆವಿಮೆ ಪರಿಹಾರದಲ್ಲಿ ರೈತರಿಗೆ ಅನ್ಯಾಯವಾಗಲು ಬಿಡುವುದಿಲ್ಲ.ಮರುಪರಿಶೀಲಿಸಿ ಹೆಚ್ಚುವರಿ ಪರಿಹಾರ ಕೊಡಿಸಲು ಪ್ರಯತ್ನ: ಎಚ್.ಎನ್.ಶಿವೇಗೌಡ

ಹಿರಿಯೂರು: ಬೆಳೆವಿಮೆ ಪರಿಹಾರದಲ್ಲಿ ರೈತರಿಗೆ ಯಾವುದೇ ಕಾರಣಕ್ಕೂ ಅನ್ಯಾಯವಾಗಲು ಬಿಡುವುದಿಲ್ಲ. ಮರುಪರಿಶೀಲಿಸಿ ಹೆಚ್ಚುವರಿ ಪರಿಹಾರ ಕೊಡಿಸಲು...

ಯುಗಾದಿ ಹಬ್ಬಕ್ಕೆ ಬಂದವರಿಗೆ ಬೆಂಗಳೂರಿಗೆ ತೆರಳಲು ಬಸ್ಸಿಗಾಗಿ ಸಾರಿಗೆ ಬಸ್ಸು ನಿಲ್ದಾಣದಲ್ಲಿ ಕಾಯುತ್ತಿರುವ ಪ್ರಯಾಣಿಕರು.

ಚಳ್ಳಕೆರೆ ಏ11 ಯುಗಾದಿ ಹಬ್ಬ ಮುಗಿಸಿಕೊಂಡು ಮತ್ತೆ ಬೆಂಗಳೂರಿಗೆ ತೆರಳಲು ಸಾರಿಗೆ ಬಸ್ಸುಗಳ ವ್ಯವಸ್ಥೆಯಿಲ್ಲದೆ ಪ್ರಯಾಣಿಕರು ಪರದಾಡುವಂತಾಗಿದೆ....

ರಂಜಾನ್ ಹಾಗೂ ಯುಗಾದಿ ಹಬ್ಬದ ಪ್ರಯುಕ್ತ ಅಗತ್ಯವಸ್ತುಗಳ ಖರೀದಿ ಬಲು ಜೋರು..

ಚಳ್ಳಕೆರೆ ಚಳ್ಳಕೆರೆ ಏ.8 ಅಗತ್ಯ ವಸ್ತುಗಳ ಬೆಳೆ ಏರಿಕೆ , ಬಿಸಿಲಿನ ತಾಪ ಹಾಗೂ ಬರಗಾಲದ ನಡುವೆಯೂ ರಂಜಾನ್ ಹಾಗೂ ಯುಗಾದಿ ಹಬ್ಬದ ಖರೀದಿ ಭರಾಟೆ...

ಯುಗಾದಿ ಹಾಗೂ ರಂಜಾನ್ ಹಬ್ಬಗಳನ್ನು‌ ಶಾಂತಿ‌ಸೌಹಾರ್ಧತೆಯಿಂದ ಆಚರಿಸಿ ಠಾಣಾಧಿಕಾರಿ ಕೆ.ಕುಮಾರ್.

ಚಳ್ಳಕೆರೆ ಏ.8 ಈ ಬಾರಿ ರಂಜಾನ್ ಹಾಗೂ ಯುಗಾದಿ ಹಬ್ಬಗಳು ಒಟ್ಟಾಗಿ ಬಂದಿದ್ದು, ಸೌಹಾರ್ದಯುತವಾಗಿ ಹಬ್ಬಗಳನ್ನು ಆಚರಿಸಬೇಕು ಎಂದು ಠಾಣಾಧಿಕಾರಿ...

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *

You cannot copy content of this page