ದೂರದ ಶಾಸರೊಬ್ಬರು ಹಟ್ಟಿ ಗಣಿ ಅಧ್ಯಕ್ಷರಾಗಿ ಬಂದು ಏನೂ ಮಾಡುತ್ತಾರೆ .?ಎಂದು ವ್ಯಂಗ್ಯ ಮಾಡಿದವರಿಗೆ 6 ತಿಂಗಳಲ್ಲೇ ಕಾರ್ಮಿಕರ ನೆರವಿಗೆ ಬಂದ ಏಕೈಕ ಅಧ್ಯಕ್ಷ ಎಂಬ ಹೆಗ್ಗಳಿಕೆಗೆ ಪಾತ್ರರಾದ ಶಾಸಕ ಟಿ.ರಘುಮೂರ್ತಿ..

by | 15/05/23 | ಚುನಾವಣೆ-2023

ಚಳ್ಳಕೆರೆ ಜನಧ್ವನಿ ವಾರ್ತೆ ಮೇ15.
ಹಟ್ಟಿ ಚಿನ್ನದಗಣಿ ಅಧ್ಯಕ್ಷರಾಗಿ ಆರುತಿಂಗಳಲ್ಲೇ ಕಾರ್ಮಿಕರ ಸಮ್ಯೆಗಳನ್ನು ಬಗೆಹರಿಸಿ ಬಾಕಿ ಇದ್ದ ವೇತನ ಹಾಗೂ ಇತರೆ ಸೌಲಭ್ಯಗಳನ್ನು ಒದಗಿಸಿದ ಏಕೈಕ ಹಟ್ಟಿಗಣಿ ಅಧ್ಯಕ್ಷ ಹಾಗೂ ಶಾಸಕ ಟಿ.ರಘುಮೂರ್ತಿಗೆ ಸಲ್ಲುತ್ತದೆ ಎಂಬ ಹೆಗ್ಗಳಿಗೆ ಪಾತ್ರರಾಗಿದ್ದ ಶಾಸಕ ಟಿ.ರಘುಮೂರ್ತಿಗೆ ಸಚಿವ ಸ್ಥಾನ ನೀಡುವಂತೆ ಕ್ಷೇತ್ರದ ಜನತೆ ಒತ್ತಾಯಿಸಿದೆ.
ಶಾಸಕ ಟಿ.ರಘುಮೂರ್ತಿ ಕಾಂಗ್ರೆಸ್ ಸರಕಾರದ ಅವಧಿಯಲ್ಲಿ 2019 ರ ಜನವರಿ 11 ರಂದು ಹಟ್ಟಿಚಿನ್ನದ ಗಣಿ ಅಧ್ಯಕ್ಷರಾಗಿ ಅಧಿಕಾರಿ ಸ್ವೀಕರಿಸಿ ಜೂನ್ 11 ಕ್ಕೆ ಅಧಿಕಾರ ಇದ್ದಾಗಲೆ ಸರಕಾರ ಬೀಳುವ ಸೂಚನೆ ಸಿಕ್ಕಾಗ ಸರಕಾರಿ ವಾಹನ ಮರಳಿಸಿದ್ದರು. ಆದರೆ ಸರಕಾರ ಜೂನ್ 27 ಕ್ಕೆ ಬಿದ್ದು ಹೋಯಿತು. ಹಟ್ಟಿಗಣಿ ಅಧ್ಯಕ್ಷರಾಗಿ 6 ತಿಂಗಳ ಅವಧಿಯಲ್ಲಿ ಗಣಿ ಕಾರ್ಮಿಕರೊಂದಿಗೆ ಹಾಗೂ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಕಾರ್ಮಿಕರ ಸಮಸ್ಯೆ ಹಾಗೂ ಗಣಿಗಳ ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆದು, ಇಂಗಳದಾಳ್, ಕೋಲಾರ ಸೇರಿದಂತೆ ವಿವಿಧ ಚಿನ್ನದ ಗಣಿಗಳ ಅಭಿವೃದ್ಧಿ ಪಡಿಸುವ ಕನಸು ಬಗ್ನವಾದರೂ ಸಹ ಪಕ್ಷ ನಿಷ್ಟೆಯಿಂದ ಕಾಂಗ್ರೆಸ್ ತೊರೆದು ಅಧಿಕಾರದ ಆಸೆಗೆ ಹೋಗದೆ ಪಕ್ಷದಲ್ಲೇ ಉಳಿದಿದ್ದವರು.
ಆರು ತಿಂಗಳು ಕಾಲ ಹಟ್ಟಿಚಿನ್ನದ ಗಣಿ ಅಧ್ಯಕ್ಷರಾದರೂ ಸಹ ಗಣಿ ಕಾರ್ಮಿಕರಿಗೆ ಮೆಚ್ಚಿಗೆ ಪಡುವಂತಹ ಹಾಗೂ ಜೀವನ ಪರಿಯಂತಹ ಕೆಲಸ ಮಾಡಿರುವುದನ್ನು ಇಂದಿಗೂ ಸಹ ಹಟ್ಟಿ ಗಣಿ ಕಾರ್ಮಿಕರು ಶಾಸಕ ಟಿ.ರಘುಮುರ್ತಿಯವರನ್ನು ನೆನೆದು ಕೊಳ್ಳುತ್ತಾರೆ. ಸರಕಾರ ಬಿದ್ದುಹೋದಾಗ ಹಟ್ಟಿಗಣಿ ಅಧ್ಯಕ್ಷ ಸ್ಥಾನ ಹೋದಾರು ಸಹ ಹಟ್ಟಿ ಕಾರ್ಮಿಕರ ಮನದಲ್ಲಿ ಉಳಿಯುವಂತೆ ಕೆಲಸ ಮಾಡಿದ್ದಾರೆ ಅದೇ ರೀತಿ ಚಳ್ಳಕೆರೆ ವಿಧಾನ ಸಭೆ ಕ್ಷೇತ್ರದಲ್ಲೂ ಸಹ ಅಭಿವೃದ್ಧಿ ಮಾಡಿರುವುದರಿಂದ ಇಲ್ಲಿನ ಜನರು ಕೈಇಡಿಯುವ ಮೂಲಕ ಹ್ಯಾಟ್ರಿಕ್ ಗೆಲುವ ನೀಡಿದ್ದಾರೆ ಇಂಹತ ಶಾಸಕ ಟಿ.ರಘಮೂರ್ತಿಗೆ ಶಾಸಕ ಸ್ಥಾನ ನೀಡುವಂತೆ ಒತ್ತಾಯ.

ಹಟ್ಟಿ ಗಣಿ ಕಾರ್ಮಿಕರಿಂದ ಸನ್ಮಾನ
ನಗರದ ಶಾಸಕರ ಭವನದಲ್ಲಿ ಸುಮಾರು 270 ಕಿ.ಮೀ ದೂರದ ರಾಯಚೂರಿನ ಹಟ್ಟಿಚಿನ್ನದ ಗಣಿಯ ಸುಮಾರು 40 ಕ್ಕೂ ಹೆಚ್ಚು ಕಾರ್ಮಿಕರು 27-2-2021 ರಂದು ಬಂದು ಸನ್ಮಾನಿಸಿ ಗೌರವಿಸಿದ್ದರು.
ರಾಜ್ಯ ಸರಕಾರದ ಲಾಭದಾಯಕ ಉದ್ಯಮವಾದ ಹಟ್ಟಿ ಚಿನ್ನದ ಗಣಿಯಲ್ಲಿ 4056 ಕಾರ್ಮಿಕರು ಹಾಗೂ ಸಿಬ್ಬಂದಿಗಳ ವೇತನ ಹಾಗೂ ವಿವಿಧ ಸೌಲಭ್ಯಗಳನ್ನು ಕಲ್ಪಿಸಿಸ ಏಕೈಕ ಹಟ್ಟಿ ಚಿನ್ನದ ಗಣಿ ಅಧ್ಯಕ್ಷರೆಂದರೆ ಅದು ಚಳ್ಳಕೆರೆ ಶಾಸಕ ಟಿ.ತಘುಮೂರ್ತಿಗೆ ಸಲ್ಲುತ್ತದೆ ಎಂದು ಹಟ್ಟಿಚಿನ್ನದ ಗಣಿಯ ಕಾರ್ಮಿಕ ಸಂಘಟನೆಯ ಅಂದಿನ ಪ್ರಧಾನ ಕಾರ್ಯದರ್ಶಿ ಎಂ.ಡಿ. ಅಮೀರ ಅಲಿ ಕೊಂಡಾಡಿರುವುದು ನೆನೆಪಿಗೆ ಬರುತತದೆ.
ಚಳ್ಳಕೆರೆ ಕ್ಷೇತ್ರದ ಶಾಸಕ ಟಿ.ರಘುಮೂರ್ತಿಯವರನ್ನು ಹಟ್ಟಿ ಚಿನ್ನದಗಣಿಯ ನೂತನ ಅಧ್ಯಕ್ಷರನ್ನಾಗಿ ಮಾಡಿದಾಗ ಈ ಭಾಗದ ಸಚಿವರು, ಶಾಸಕರು ಎಷ್ಟೋ ಜನರು ಅಧ್ಯಕ್ಷರಾದರೂ ಕಾರ್ಮಿಕರ ಸಮಸ್ಯೆಗಳಿಗೆ ಸ್ಪಂದಿಸಿಲ್ಲ ಅದೂ ದೂರದ ಶಾಸಕರೊಬ್ಬರು ಬಂದು ಇಲ್ಲೇನು ಅಭಿವೃದ್ದಿ ಮಾಡುತ್ತಾರೆ ಎಂದು ವಿರೋಧವ್ಯಕ್ತಪಡಿಸಿ ವ್ಯಗ್ಯವಾಗಿ ಮಾತನಾಡಿದ್ದರು.
ಶಾಸಕ ಟಿ.ರಘುಮೂರ್ತಿ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿದಾಗ ಕಾರ್ಮಿಕರ ಸಂಘಟನೆಗಳು ವೇತನ ಸೇರಿದಂತೆ ವಿವಿಧ ಬೇಡಿಕೆಗಳ ಬಗ್ಗೆ ಮನವಿ ಮಾಡಿಕೊಂಡಾಗ ನಾನು ಭರವಸೆ ಕೊಡುವುದಿಲ್ಲ ಪ್ರಯತ್ನ ಮಾಡುತ್ತೇನೆ ಎಂದು ಹೇಳಿದ್ದರು ಕಾರ್ಮಿಕರ ಕಳೆದ 2016 ನೇ ಸಾಲಿನಿಂದ ಸುಮಾರು 5 ವರ್ಷಗಳ ವೇತನ ಬಾಕಿ ಇದ್ದ ವೇತನ ಅಧ್ಯಕ್ಷರಾಗಿ 6 ತಿಂಗಳ ಅವಧಿಯಲ್ಲಿ ಹಿರಿಯ ಐಎಎಸ್ ಅಧಿಕಾರಿಗಳ ಹಾಗೂ ಆಡಳಿತ ಮಂಡಳಿ ಸಭೆ ಕರೆದು ಕಾರ್ಮಿಕರ ವೇತನ ಒಬ್ಬಂದ ಜಾರಿಗೆ ತಂದು 2.24 ಕೋಟಿ ರೂ ವೇತನ ಬಿಡುಗಡೆಗೊಳಿಸಿದರು. ಗಣಿಯಲ್ಲಿ ಸುಮಾರು 300ಅಡಿಗಳ ಸುರುಂಗ ಮಾರ್ಗದಲ್ಲಿ ಕೆಲಸ ಮಾಡುವ 55 ವರ್ಷದಾಟಿದ ಕಾರ್ಮಿಕರ ಆರೋಗ್ಯ ಹದಗೆಡುತ್ತದೆ ಪರಿಹಾರ ನೀಡಿ ಮನೆಗೆ ಕಳಿಸುತ್ತಿದ್ದರು. ಇದರಿಂದ ಸುಮಾರು 4 ಸಾವಿರ ಕುಟುಂಬಗಳು ಬೀದಿಗೆ ಬೀಳುತ್ತವು ಇವರು ಅಧ್ಯಕ್ಷರಾದ ಮೇಲೆ ಕಾರ್ಮಿಕರ ಕುಟುಂಬದ ಒಬ್ಬರಿಗೆ ಕೆಲಸ ನೀಡುವಂತೆ ಸರಕಾರ ಹಾಗೂ ಅಧಿಕಾರಿಗಳ ಗಮನಕ್ಕೆ ತಂದು ಕಾರ್ಮಿಕರ ಅನೇಕ ಸಮಸ್ಯೆಗಳನ್ನು ಬಗೆಹರಿಸಿ ಅಭವೃದ್ಶಿಗೆ ಮುಂದಾಗಿದ್ದರು ಅದರ ನೆನಪಿಗಾರಿ ಇಂದು ಬಂದು ಸನ್ಮಾನ ಮಾಡುವ ಭಾಗ್ಯ ನಮಗೆ ಲಿಭಿಸಿದೆ ಎಂದು ಹರ್ಷ ವ್ಯಕ್ತಪಡಿಸಿದ್ದರು.
ಸತತವಾಗಿ ಹತ್ತುವರ್ಷಗಳ ಕಾಲ ಕ್ಷೇತ್ರದ ಶಾಸಕರಾಗಿ ಹಲವು ಅಭಿವೃದ್ಧಿ ಕಾಮಗಾರಿಗಳನ್ನು ಮಾಡಿದ್ದು ಈಗ ಮತ್ತೆ ಹ್ಯಾಟ್ರಿಕ್ ಗೆಲುವು ಸಾಧಿಸಿರುವ ಶಾಸಕ ಟಿ.ರಘುಮೂರ್ತಿಗೆ ಸಚಿವ ಸ್ಥಾನ ನೀಡುವಂತೆ ಕ್ಷೇತ್ರದ ಜನತೆ ಒತ್ತಾಯಿಸಿದ್ದಾರೆ.


ಅಧ್ಯಕ್ಷರಾಗಿ ಆರು ತಿಂಗಳಲ್ಲಿ ಗಣಿ ಕಾರ್ಮಿಕರ ಬಾಕಿ ಇದ್ದ ವೇತನ ಸೇರಿದಂತೆ ಇತರೆ ಸ್ಔಲಭ್ಯಗಳನ್ನು ಕಲ್ಪಿಸಿಕೊಟ್ಟದ್ದ ಶಾಸಕ ಟಿ.ರಘುಮೂರ್ತಿಗೆ ಶಾಸಕರ ಭವನದಲ್ಲಿ 27/2/2021 ಹಟ್ಟಿಗಣಿ ಕಾರ್ಮಿಕರು ಸನ್ಮಾನ ಮಾಡಿದ ಸಂದರ್ಭ

Latest News >>

ಡಿ.ಸಿ.ಸಿ. ಬ್ಯಾಂಕ್ ನಿರ್ದೇಶಕರಾಗಿ ಓ.ಮಂಜುನಾಥ್ ಮಾಳಿಗೆ ಅವರು ಅವಿರೋಧ ಆಯ್ಕೆಯಾಗಿದ್ದಾರೆ.

ಚಿತ್ರದುರ್ಗ: ಚಿತ್ರದುರ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿಯಮಿತ, ಚಿತ್ರದುರ್ಗ ಇದರ ಆಡಳಿತ ಮಂಡಳಿ ನಿರ್ದೇಶಕರ ಸ್ಥಾನಕ್ಕೆ ಹಿರಿಯೂರು...

ಚಿತ್ರದುರ್ಗದಲ್ಲಿ ನಡೆಯಲಿರುವ ಪತ್ರಿಕಾ ವಿತರಕರ ಹಂಚಿಕೆದಾರರ 4ನೇರಾಜ್ಯಸಮ್ಮೇಳನ ಕಾರ್ಯಕ್ರಮ ಯಶಸ್ವಿಯಾಗಲಿ : ಆಲೂರು ಹನುಮಂತರಾಯಪ್ಪ

ಹಿರಿಯೂರು: ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟ ಹಾಗೂ ಚಿತ್ರದುರ್ಗ ಜಿಲ್ಲಾ ಪತ್ರಿಕೆ ಹಂಚಿಕೆದಾರರ ಹಾಗೂ ವಿತರಕರ ಸಂಘ (ರಿ) ಇವರುಗಳ...

ಎಸ್.ಸಿ.ಎಸ್.ಪಿ ಹಾಗೂ ಟಿ.ಎಸ್.ಪಿ ಅನುಷ್ಟಾನ ಮೌಲ್ಯಮಾಪನ ಸಭೆಜಿಲ್ಲಾ ಮೇಲ್ವಿಚಾರಣಾ ಸಮಿತಿಯಿಂದ ಕ್ರಿಯಾಯೋಜನೆ ಅನುಮೋದನೆ ಕ್ರಮಕ್ಕೆ ಶಿಫಾರಸ್ಸು

ಚಿತ್ರದುರ್ಗ ಸೆ.06: ಪರಿಶಿಷ್ಟ ಜಾತಿ ಹಾಗೂ ಗಿರಿಜನ ಉಪಯೋಜನೆಯಡಿ (ಎಸ್.ಸಿ.ಎಸ್.ಪಿ ಹಾಗೂ ಟಿ.ಎಸ್.ಪಿ) ಜಿಲ್ಲೆಯಲ್ಲಿ ಕೈಗೊಳ್ಳುವ ಎಲ್ಲಾ...

ಪೋಷಣ್ ಮಾಸಾಚರಣೆ ಕಾರ್ಯಕ್ರಮದಲ್ಲಿ ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿ ಡಾ.ಡಿ.ಎಂ.ಅಭಿನವ್ ಪೌಷ್ಠಿಕಾಂಶಯುಕ್ತ ಆಹಾರ ಪದಾರ್ಥ ಸೇವಿಸುವುದು ಅಭ್ಯಾಸಿಸಿ

ಚಿತ್ರದುರ್ಗ ಸೆ.6: ಪೋಷಣ್ ಮಾಸಾಚರಣೆ ಕಾರ್ಯಕ್ರಮ ಮಕ್ಕಳ ಹಾಗೂ ಗರ್ಭಿಣಿಯರ, ಬಾಣಂತಿಯರ ಆರೋಗ್ಯ ಪೋಷಣ ಮಾಸಾಚರಣೆ ಆಗಬೇಕು. ಮಕ್ಕಳಲ್ಲಿ...

ಎಚ್‌ಐವಿ/ಏಡ್ಸ್ ಜಾಗೃತಿಗಾಗಿ ಮ್ಯಾರಥಾನ್ ಸ್ಪರ್ಧೆ

ಚಿತ್ರದುರ್ಗ ಸೆ.6: ಯುವ ಜನೋತ್ಸವ ಅಂಗವಾಗಿ ಎಚ್‌ಐವಿ/ ಏಡ್ಸ್ ಜಾಗೃತಿಗಾಗಿ ಮ್ಯಾರಥಾನ್ ಸ್ಪರ್ಧೆಯು ಚಿತ್ರದುರ್ಗ ನಗರದಲ್ಲಿ ಗುರುವಾರ...

ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಕಾಮಗಾರಿ ಪರಿಶೀಲನೆ

ಚಿತ್ರದುರ್ಗ ಸೆ.06: ನಬಾರ್ಡ್ ಸಂಸ್ಥೆಯ ಡಿಜಿಎಂ ಸಂಜೀವ್ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಈಚೆಗೆ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ವಾಣಿವಿಲಾಸ...

ಮೊಳಕಾಲ್ಮುರು : ಫಲಾನುಭವಿಗಳ ಮನೆ ಬಾಗಿಲಿಗೆ ಹೋಗಿ ಸಮಸ್ಯೆ ಆಲಿಸಿ ಶಾಸಕ ಎನ್ ವೈ ಗೋಪಾಲಕೃಷ್ಣ.

ಮೊಳಕಾಲ್ಮೂರು :-ಪಟ್ಟಣದ ತಾಲೂಕು ಪಂಚಾಯಿತಿಯಲ್ಲಿ ಗ್ಯಾರೆಂಟಿ ಅನುಷ್ಠಾನ ಸಮಿತಿ ನೂತನ ಕಾರ್ಯಾಲಯವನ್ನು ಉದ್ಘಾಟಿಸಿ ಮಾತನಾಡಿದ ಶಾಸಕ ಎನ್ ವೈ....

ಬೆಂಬಲಬೆಲೆಯಲ್ಲಿ ಸೂರ್ಯಕಾಂತಿ ಖರೀದಿ ಕೇಂದ್ರಗಳ ಸ್ಥಾಪನೆ

ಚಿತ್ರದುರ್ಗ ಸೆ.04: 2024-25ನೇ ಸಾಲಿಗೆ ಕೇಂದ್ರ ಸರ್ಕಾರದ ಬೆಂಬಲಬೆಲೆ ಯೋಜನೆಯಡಿ ನಿಗದಿಪಡಿಸಿರುವ ರೂ.7,280/- (ಪ್ರತಿ ಕ್ವಿಂಟಾಲ್‌ಗೆ)...

ಮಹಾತ್ಮ ಗಾಂಧೀ ಸೇವಾ ಪ್ರಶಸ್ತಿ – ಕರ್ನಾಟಕ’ ಆಯ್ಕೆಗೆ ನಾಮನಿರ್ದೇಶನ ಆಹ್ವಾನ

ಚಿತ್ರದುರ್ಗ ಸೆ.04: ರಾಜ್ಯ ಸರ್ಕಾರವು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ಸ್ಥಾಪಿಸಿರುವ ಐದು ಲಕ್ಷ ರೂಪಾಯಿ ನಗದನ್ನು ಒಳಗೊಂಡ...

ಶ್ರೀ ಅಹೋಬಲ ಟಿವಿಎಸ್ ನಲ್ಲಿ ಇಂದು ನೂನವಾಗಿ ಮಾರುಕಟ್ಟೆಗೆ ಆಗಮಿಸಿರುವ ಜುಪಿಟರ್ 110 ಸಿಸಿ ಯ ಆಕರ್ಷಕ ಸ್ಕೂಟಿ ಮಾರುಕಟ್ಟೆಗೆ ಬಿಡುಗಡೆ.

ಚಿತ್ರದುರ್ಗ: ಚಿತ್ರದುರ್ಗ ನಗರದ ತುರುವನೂರು ರಸ್ತೆಯಲ್ಲಿನ ಶ್ರೀ ಅಹೋಬಲ ಟಿವಿಎಸ್ ನಲ್ಲಿ ಇಂದು ನೂನವಾಗಿ ಮಾರುಕಟ್ಟೆಗೆ ಆಗಮಿಸಿರುವ ಜುಪಿಟರ್...

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *

You cannot copy content of this page