ಚಳ್ಳಕೆರೆ ಜನಧ್ವನಿ ವಾರ್ತೆ ಜ.7 ಮಳೆ ನೀರು ವ್ಯರ್ಥವಾಗದೆ ಕೆರೆ ಹಾಗೂ ಗೋಕಟ್ಟೆಗೆ ನೀರು ಸರಾಗವಾಗಿ ಹರಿಯುವಂತೆ ಮಾಡಲು ನರೇಗಾ ಯೋಜನೆಯಡಿ ಹಳ್ಳು ಹೂಳೆತ್ತಲಾಗುವುದು ಎಂದು ಗ್ರಾಪಂ ಪಿಡಿಒ ಓಬಣ್ಣ ಹೇಳಿದರು. ತಾಲೂಕಿನ ಜಾಜೂರು ಗ್ರಾಪಂ ವ್ಯಾಪ್ತಿಯ ಕಾಮಸಮುದ್ರ ಕಾಮದಲ್ಲಿ ಹಳ್ಳ ಹೂಳೆತ್ತುವ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು. ನರೇಗಾ ಯೋಜನೆಯಡಿಯಲ್ಲಿ ಹೆಣ್ಣು ಗಂಡು ಎಂಬ ಬೇದವಿಲ್ಲದೆ ಸನಾನ ಕೂಲಿ ನೀಡಕಾಗುವುದು . ನರೇಗಾಯೋಜನೆಯಡಿಯಲ್ಲಿ ರೈತರ ಜಮೀನಿನಲ್ಲಿ ಬದು .ಬಾಳೆ.ಪಪ್ಪಾಯಿ.ರೇಷ್ಮೆ ಜಾನುವಾರು ಶೆಡ್ ನಿರ್ಮಾಣ ಮಾಡಿಕೊಳ್ಳಲು ಅವಕಾಶವಿದೆ. ಕೂಲಿ ಕಾರ್ಮಿಕರು ಕೂಲಿಗಾಗಿ ವಿವಿಧ ನಗರಗಳಿಗೆ ವಲಸೆ ಹೋಗುವುದನ್ನು ತಡೆಯಲು ನರೇಗಾ ಯೋಜನೆ ಜಾರಿಯಲ್ಲಿದ್ದು ನಮ್ಮ ಗ್ರಾಮದಲ್ಲೇ ಚರಂಡಿ.ರಸ್ತೆ.ಕೆರೆ ಕಾಲುವೆ.ಗೋಕಟ್ಟೆ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳಲ್ಲಿ ಕೂಲಿ ಕೆಲಸದಲಸಕ್ಕೆ ಭಾಗವಹಿಸಿ ಆರ್ಥಿಕವಾಗಿ ಸದೃಢರಾಗುವಂತೆ ತಿಳಿಸಿದರು. ಮಳೆ ನೀರು ಸಂಗ್ರಹಿಸಲು ಹಳ್ಳ ತಡೆದು ಭೂಮಿಯಲ್ಲಿ ಹಿಂಗುವಂತೆ ಮಾಡಲು ಮಹಾತ್ಮ ಗಾಂ ನರೇಗಾ ಯೋಜನೆಯಲ್ಲಿ ಜಲ ಸಂರಕ್ಷಣೆ ಕಾಮಗಾರಿಗಳಿಗೆ ಆದ್ಯತೆ ನೀಡಲು ಮಳೆ ನೀರು ತಡೆಹಿಡಿಯುವ (ಕ್ಯಾಾಚ್ ದಿ ರೇನ್) ಅಭಿಯಾನದಡಿ ಗ್ರಾಾಮೀಣ ಅಕುಶಲ ಕೃಷಿ ಕೂಲಿ ಕಾರ್ಮಿಕರಿಗೆ ಕೆಲಸ ನೀಡುವ ಮೂಲಕ ಮಳೆ ನೀರು ಸಂರಕ್ಷಿಸಿ, ಅಂತರ್ಜಲ ಹೆಚ್ಚಿಿಸಲು ಕೆರೆ ಹೂಳೆತ್ತುವ ಕಾಮಗಾರಿ ಕೈಗೊಂಡಿದೆ ಎಂದು ತಿಳಿಸಿದರು .
0 Comments