ನಾಯಕನಹಟ್ಟಿ:: ತೊರೆಕೋಲಮ್ಮನಹಳ್ಳಿ ಗ್ರಾಮಸ್ಥರು ಪ್ರತಿ ವರ್ಷ ಸಂಪ್ರದಾಯದಂತೆ ಎಡಿಗೆ ಜಾತ್ರೆ ಸಂಭ್ರಮಾಚರಣೆ.
ಹೌದು ಇದು ನಾಯಕನಹಟ್ಟಿ ಹೋಬಳಿ ಅಬ್ಬೇನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ತೊರೆಕೋಲಮ್ಮನಹಳ್ಳಿ ಗ್ರಾಮದಲ್ಲಿ ಪ್ರತಿ ವರ್ಷ ಶ್ರಾವಣ ಮಾಸದ ಮೂರನೇ ಮಂಗಳವಾರ ಗ್ರಾಮದ ಪ್ರತಿಯೊಂದು ಮನೆಯಿಂದ ಕಡುಬು ತೊಗೆ ಹಾಗೂ ಅನ್ನ ಸಾಂಬಾರ್ ಊಟ ಮನೆಯಿಂದ ತೆಗೆದುಕೊಂಡು ಹೋಗಿ ಊರವರೆಗಿನ ಮಾರಮ್ಮ ದೇವಿಯ ಮರಕ್ಕೆ ವಿಶೇಷ ಪೂಜೆ ಸಲ್ಲಿಸಿ.
ನಂತರ ಮನೆಯಿಂದ ಬುತ್ತಿರೂಪದಲ್ಲಿ ತೆಗೆದುಕೊಂಡು ಹೋಗಿದ್ದ ಊಟವನ್ನು ಸೇವಿಸಿ ಗ್ರಾಮಕ್ಕೆ ಹಿಂತಿರುಗಿ ಬರುವುದು ವಾಡಿಕೆ,
ಇದೇ ವೇಳೆ ಅಬ್ಬೇನಹಳ್ಳಿ ಗ್ರಾ. ಪಂ. ಸದಸ್ಯ ಕೆ.ಜಿ.ತಿಪ್ಪೇಸ್ವಾಮಿ ಮಾತನಾಡಿದ ಅವರು ಗ್ರಾಮದಲ್ಲಿ ಮಾರಮ್ಮ ದೇವಿ ತೊರೆಕೋಲಮ್ಮನಹಳ್ಳಿಯಲ್ಲಿ ಶಾಶ್ವತವಾಗಿ ನೆಲೆಸಿದ್ದಾಳೆ.
ಇದು ನಮ್ಮ ಸನಾತನ ಧರ್ಮ ಪೂರ್ವಿಕರ ಕಾಲದಿಂದಲೂ ತಾಯಿ ಮಾರಮ್ಮ ಪಾರ್ವತಿ ದೇವಿ ಸಾಮಾನ್ಯವಾಗಿ ಊರಲ್ಲಿ ನೆಲೆಸಿರಲ್ಲ ಗಂಡನ ಮನೆಗೆ ಹೋಗಿರುತ್ತಾಳೆ.
ಅಂತಹ ಸಂದರ್ಭದಲ್ಲಿ ನಾವು ವರ್ಷಕ್ಕೆ ಒಮ್ಮೆ ತೊರೆಕೋಲಮ್ಮನಹಳ್ಳಿ ಗ್ರಾಮಸ್ಥರು ಎಡಿಗೆ ಜಾತ್ರೆ ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಣೆ ಮಾಡುತ್ತೇವೆ.
ಗ್ರಾಮದ ಪ್ರತಿ ಮನೆಯಿಂದ ಬುತ್ತಿ ಹೊತ್ತುಕೊಂಡು ಬಂದು ಶ್ರೀ ಮಾರಮ್ಮ ದೇವಿಗೆ ವಿಶೇಷ ಪೂಜೆ ಸಲ್ಲಿಸಿ ಊಟ ಮಾಡಿಕೊಂಡು ತಾಯಿ ಮಾರಮ್ಮನ ಗಂಡನ ಮನೆಯಿಂದ ತವರು ಮನೆಗೆ ಕರೆದುಕೊಂಡು ಹೋಗುತ್ತೇವೆ ಮುಂದಿನ ಭಾದ್ರಪದ ಮಾಸದಲ್ಲಿ ಮಾರಮ್ಮ ದೇವಿ ಜಾತ್ರೆ ಮಾಡಿಬಿಟ್ಟು ಜಾತ್ರೆ ಆದ ನಂತರ ವಾಪಸ್ ಗಂಡನ ಮನೆಗೆ ಕರೆತಂದು ಬಿಡುವುದು ಸಂಪ್ರದಾಯವಾಗಿದೆ ಇಂದಿನ ಯುವ ಪೀಳಿಗೆ ಇಂತಹ ಧಾರ್ಮಿಕ ಕಾರ್ಯಗಳಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಲು ಮುಂಚೂಣಿಯಲ್ಲಿರಬೇಕು ಎಂದರು.
ಇದೇ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಸದಸ್ಯರುಗಳಾದ ಗಾದ್ರಪ್ಪ, ಮಾರಕ್ಕ ಚೌಡಪ್ಪ, ಸುಮಿತ್ರಮ್ಮ,
ಗ್ರಾಮಸ್ಥರಾದ ಜವಳಿ ಗಂಗಣ್ಣ, ಗೌಡರ ನಾಗಪ್ಪ, ಆರ್ ಬಸವರಾಜು, ಜಿ.ಪಿ. ಪಾಲಯ್ಯ, ಮಾಜಿ ಗ್ರಾ. ಪಂ. ಸದಸ್ಯ ಕೆ ಟಿ ಮಂಜಣ್ಣ, ಇನ್ನೂ ತೊರೆಕೊಲಮ್ಮನಹಳ್ಳಿ ಸಮಸ್ತ ಊರಿನ ಗ್ರಾಮಸ್ಥರು ಭಾಗವಹಿಸಿದರು
0 Comments