ಚಳ್ಳಕೆರೆ ಸೆ.8ತೆರೆದಬಾವಿಗಿಲ್ಲ ತಡೆಗೋಡೆ: ಜನರಲ್ಲಿ ಆತಂಕ ಅಪಘಾತಕ್ಕೆ ಕೈ ಬೀಸಿ ಕರೆಯುವಂತಿದೆ. ಹೌದು ಇದು ಚಳ್ಳಕೆರೆ ತಾಲೂಕಿನ ಮೊಳಕಾಲ್ಮೂರು ವಿಧಾನ ಸಭಾ ಕ್ಷೇತ್ರವ್ಯಾಪ್ತಿಯ ಗೌರಸಮುದ್ರ ಮಾರಮ್ಮ ನೆಲೆಸಿರುವ ಪುಣ್ಯ ಕೇತ್ರಕ್ಕೆ ಹೋಗುವ ದಾರಿ ಪಕ್ಕದಲ್ಲೇ ಬೃಹತ್ ತೆರದ ಬಾವಿಯಿದ್ದು ಮಳೆ ನೀರಿನ ರಭಸಕ್ಕೆ ಕೊರೆದು ಡಾಂಬರ್ ರಸ್ತೆಯವರೆಗೆ ಕೊರೆದಿರುವುದರಿಂದ
ರಸ್ತೆ ಪಕ್ಕದಲ್ಲಿರುವ ತೆರೆದ ಬಾವಿಗೆ ತಡೆಗೋಡೆ ಇಲ್ಲದ ಪರಿಣಾಮವಾಗಿ ವಾಹನ ಸವಾರರ ಜೀವ ಕೈಯಲ್ಲಿ ಹಿಡಿದು ಸಂಚರಿಸ ಬೇಕಾಗಿದೆ ವಾಹನ ಸವಾರರು ಸ್ವಲ್ಪ ಯ್ಯಾಮಾರಿದರೂ ಸಹ ಯಮಲೋಕಕ್ಕೆ ಹೋಗುವುದು ಖಚಿತವಾಗಿದ್ದು ಇಲ್ಲಿ ವಾಹನ ಸವಾರರು ಪ್ರಾಣ ಪಕ್ಷಿಯನ್ನು ಕೈಯಲ್ಲಿಡಿದುಕೊಂಡು ಸಂಚರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.

ಗೌರಸಮುದ್ರ ಗ್ರಾಮಕ್ಕೆ ಹೊಂದಿಕೊಂಡಿರುವ ರಸ್ತೆ ಪಕ್ಕದಲ್ಲಿರುವ ತೆರದ ಬಾವಿಗೆ ತಡೆಗೋಡೆ ನಿರ್ಮಿಸುವಂತೆ ಹಲವು ವರ್ಷಗಳಿಂದ ಸಂಬಂಧ ಪಟ್ಟ ಅಧಿಕಾರಿಗಳ ಗಮನ ಸೆಳೆದರೂ ಯಾವುದೇ ಪ್ರಯೋಜನವಾಗಿಲ್ಲ ಇನ್ನೇನು ದೇವಿಯ ಜಾತ್ರೆ ಒಂದು ವಾರ ಬಾಕಿಬಿದ್ದು ಜಾತ್ರೆಗೆ ವಿವಿಧ ರಾಜ್ಯ ಜಿಲ್ಲೆಗಳಿಂದ ಭಕ್ತರ ದಂಢೇ ಬರುತ್ತದೆ ಲಕ್ಷಾಂತರ ಜನರ ಸೇರುವ ಜಾತ್ರೆ ನಡೆಯುವ ಗ್ರಾಮದ ರಸ್ತೆ ಬದಿ ತೆರದ ಬಾವಿಗೆ ತಡೆಗೋಡೆ ಕಟ್ಟಲು ಮಾತ್ರ ಇಚ್ಚಾಶಕ್ತಿ ತೋರುತ್ತಿಲ್ಲ ಗೌರಸಮುದ್ರ ಗ್ರಾಮದ ಮಾರಮ್ಮ ದೇವಿಯ ಪುಣ್ಯ ಕ್ಷೇತ್ರಕ್ಕೆ ಹೋಗುವ ಮುಖ್ಯ ರಸ್ತೆ ಬದಿಯಲ್ಲಿರುವ ತೆರೆದ ಬಾವಿಗೆ ದುಸ್ಥಿತಿ ಇದಾಗಿದೆ. ಸಂಬಂಧಪಟ್ಟ ಇಲಾಖೆ ಅಧಿಕಾರಿಗಳ ಜವಾಬ್ದಾರಿ ಆಗಿದೆ.
ಆದರೆ ಇದಕ್ಕೂ ತಮಗೂ ಯಾವುದೇ ರೀತಿಯಿಂದ ಸಂಬಂಧವಿಲ್ಲ ಎಂಬಂತಾಗಿದ್ದು ಅವಘಡಗಳು ಸಂಭವಿಸುವ ಮುನ್ನವೇ ಈಗಲಾದರೂ ಸಂಬಂಧ ಪಟ್ಟ ಅಧಿಕಾರಿಗಳು ತೆರೆದ ಬಾವಿಗೆ ತಡೆಗೋಡೆ ನಿರ್ಮಿಸುವರೇ ಕಾದು ನೋಡ ಬೇಕಿದೆ.


0 Comments